Subscribe to Gizbot

ಗೂಗಲ್ ಮ್ಯಾಪ್ಸ್ ಆಫ್‌ಲೈನ್ ಬಳಕೆ ಹೇಗೆ?

Written By:

ಗೂಗಲ್ ತನ್ನ ಹೊಸ ಫೀಚರ್ ಆದ ಆಫ್‌ಲೈನ್ ಮೋಡ್‌ನೊಂದಿಗೆ ಬಂದಿದ್ದು ಇದು ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು ಬಳಸಬಹುದಾದ ಪ್ರಯೋಜನ ಎಂದೆನಿಸಿದೆ. ಆಫ್‌ಲೈನ್ ಬ್ರೌಸಿಂಗ್‌ನಲ್ಲೂ ನಕ್ಷೆಯನ್ನು ಉಳಿಸಬಹುದಾದ ಸೌಲಭ್ಯವನ್ನು ಇದು ಒದಗಿಸುತ್ತಿದ್ದು ಯಾವುದೇ ಸೆಲ್ಯುಲಾರ್ ಸಿಗ್ನಲ್ ಇಲ್ಲದ ಸಂದರ್ಭದಲ್ಲಿ ವೈಫೈ ಕನೆಕ್ಶನ್ ದೊರಕದೇ ಇರುವಾಗ ಗೂಗಲ್ ಮ್ಯಾಪ್ಸ್ ಮೂಲಕ ನಿಮಗೆ ಪ್ರಯೋಜವನ್ನು ಪಡೆದುಕೊಳ್ಳಬಹುದಾಗಿದೆ.

ಓದಿರಿ: ಹಣ ಸಂಪಾದನೆಗಾಗಿ ಆನ್‌ಲೈನ್‌; 10 ವಿಧಾನಗಳು

ಇಂಟರ್ನೆಟ್‌ಗೆ ಸಂಪರ್ಕ ಹೊಂದದೇ ಇರುವಾಗ ಕೂಡ ಲೊಕೇಶನ್ ಡೌನ್‌ಲೋಡ್ ಮಾಡಿಕೊಂಡು ಅದನ್ನು ಉಳಿಸಿಕೊಳ್ಳಬಹುದಾಗಿದೆ. ಆಫ್‌ಲೈನ್ ಬ್ರೌಸಿಂಗ್‌ನಲ್ಲಿ ಆಯ್ಕೆಮಾಡಿದ ಸ್ಥಳದ ನಕ್ಷೆಯನ್ನು ಉಳಿಸಿಕೊಳ್ಳುವುದು ಹೆಚ್ಚು ಸುಲಭವಾಗಿದೆ. ಇದನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ಕುರಿತು ನಾವು ಇಂದಿನ ಲೇಖನದಲ್ಲಿ ವಿವರ ಮಾಹಿತಿಯನ್ನು ನೀಡಲಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೆಟ್‌ವರ್ಕ್‌ಗೆ ಸಂಪರ್ಕ ಪಡೆದುಕೊಳ್ಳಿ

#1

ಮೊಬೈಲ್ ಡೇಟಾ ಅಥವಾ ವೈಫೈಯನ್ನು ಬಳಸಿಕೊಂಡು ನಿಮ್ಮ ಗೂಗಲ್ ಖಾತೆಗೆ ಸೈನ್ ಇನ್ ಆಗಿ ಆಗ ನೀವು ಇಂಟರ್ನೆಟ್ ಸಂಪರ್ಕದಲ್ಲಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಗೂಗಲ್ ಮ್ಯಾಪ್ಸ್ ತೆರೆಯಿರಿ

#2

ಇಂಟರ್ನೆಟ್‌ಗೆ ಒಮ್ಮೆ ನೀವು ಸಂಪರ್ಕವನ್ನು ಪಡೆದುಕೊಂಡ ನಂತರ ಗೂಗಲ್ ಖಾತೆಗೆ ಸೈನ್ ಇನ್ ಮಾಡಿ, ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಮ್ಯಾಪ್ಸ್ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿ.

ಲೊಕೇಶನ್ ಹುಡುಕಾಡಿ

#3

ಸ್ಯಾನ್ ಫ್ರಾನ್ಸಿಸ್ಕೊ ಮೊದಲಾದ ಸ್ಥಳವನ್ನು ಇದೀಗ ಹುಡುಕಾಡಿ ಹಾಗೂ ಸ್ಥಳವನ್ನು ಜೂಮ್ ಮತ್ತು ಪಿಂಚ್ ಮಾಡಿ ಆ ಪ್ರದೇಶವನ್ನು ಉಳಿಸಿ.

ಮೆನು ಆಯ್ಕೆಮಾಡಿ

#4

ವಲಯವನ್ನು ಆಯ್ಕೆಮಾಡಿದ ನಂತರ, ನಕ್ಷೆಯನ್ನು ಉಳಿಸಲು ಮೆನು ಸ್ಪರ್ಶಿಸಿ.

ಆಫ್‌ಲೈನ್ ಮ್ಯಾಪ್ಸ್ ಡೌನ್‌ಲೋಡ್ ಮಾಡಿ

#5

ಕೆಳಕ್ಕೆ ಸ್ಕ್ರಾಲ್ ಡೌನ್ ಮಾಡಿ ಮತ್ತು ಆಫ್‌ಲೈನ್ ಮ್ಯಾಪ್ ಆಪ್ಶನ್ ಅನ್ನು ಸೇವ್ ಮಾಡಿ ಹಾಗೂ ಆನ್‌ ಸ್ಕ್ರೀನ್ ವರದಿಗಳನ್ನು ಪಾಲಿಸಿ.

ಆಫ್‌ಲೈನ್ ಮ್ಯಾಪ್ ವೀಕ್ಷಿಸಿ

#6

ನಿಮ್ಮ ಆಫ್‌ಲೈನ್ ಮ್ಯಾಪ್ ಅನ್ನು ವೀಕ್ಷಿಸಲು, ಗೂಗಲ್ ಮ್ಯಾಪ್ಸ್ ಅಪ್ಲಿಕೇಶನ್ ಲಾಂಚ್ ಮಾಡಿ > ಮೆನು ಸ್ಪರ್ಶಿಸಿ ಮತ್ತು ಸ್ಥಳಗಳನ್ನು ಆಯ್ಕೆಮಾಡಿ. ''ಆಫ್‌ಲೈನ್ ಮ್ಯಾಪ್ಸ್'' ಗೆ ಸ್ಕ್ರಾಲ್ ಡೌನ್ ಮಾಡಿ ಮತ್ತು ಎಲ್ಲವನ್ನೂ ವೀಕ್ಷಿಸಲು ಸ್ಪರ್ಶಿಸಿ.

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡುತ್ತಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We came up with a detailed guild that helps you to save map for offline browsing. Take a look at the slider below to know more.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot