ಟಿಕ್‌ಟಾಕ್‌ ಫಾಲೋವರ್ಸ್‌ ಹೆಚ್ಚಿಸಿಕೊಳ್ಳಬೇಕೆ?..ಹಾಗಿದ್ರೆ ಈ ಟಿಪ್ಸ್ ಮರೆಯದೆ ಬಳಸಿ!

|

ಸದ್ಯ ದೇಶದಲ್ಲಿ ಟಿಕ್‌ಟಾಕ್‌ ಆಪ್‌ ಜನಪ್ರಿಯತೆ ಎಷ್ಷರ ಮಟ್ಟಿಗೆ ಜನಪ್ರಿಯತೆಗಳಿಸಿದೆ ಎನ್ನುವುದು ನಿಮಗೆ ತಿಳಿದಿರುವ ಸಂಗತಿಯೇ ಆಗಿದೆ. ದಿನೇ ದಿನೇ ಟಿಕ್‌ಟಾಕ್‌ ಆಪ್‌ನಲ್ಲಿ ಬಳಕೆದಾರರ ಸಂಖ್ಯೆಯು ಏರಿಕೆ ಆಗುತ್ತ ಸಾಗಿದ್ದು, ಹಾಗೆಯೇ ವಿಡಿಯೊ ಕ್ರಿಯೆಟ್ ಮಾಡುವವರ ಸಂಖ್ಯೆಯು ಹೆಚ್ಚುತ್ತಲಿದೆ. ಈಗಾಗಲೇ ಟಿಕ್‌ಟಾಕ್‌ನಲ್ಲಿ ಅನೇಕರು ಸೆಲೆಬ್ರಿಟಿಗಳಾಗಿ ಮಿಂಚುತ್ತಿದ್ದಾರೆ, ಮಿನಿಯನ್‌ಷ್ಟು ಫಾಲೋವರ್ಸ್‌ ಗಳಿಸಿದ್ದಾರೆ. ಇನ್ನು ಕೆಲವರು ಹೊಸ ವಿಡಿಯೊ ಮಾಡಿ ಅಪ್‌ಲೋಡ್ ಮಾಡಿದರೂ ಸಹ ಅವರ ಫಾಲೋವರ್ಸ್‌ಗಳ ಸಂಖ್ಯೆ ಮಾತ್ರ ಏರುವುದಿಲ್ಲ.

ಟ್ಯಾಂಲೆಂಟ್‌ಗೆ ಓಪೆನ್ ವೇದಿಕೆ

ಹೌದು, ಟ್ಯಾಂಲೆಂಟ್‌ಗೆ ಓಪೆನ್ ವೇದಿಕೆಯಂತಿರುವ ಟಿಕ್‌ಟಾಕ್‌ನಲ್ಲಿ ಅನೇಕರು ಮಿಲಿಯಗಟ್ಟಲೆ ಫಾಲೋವರ್ಸ್‌ಗಳನ್ನು, ಲೈಕ್ಸ್‌ಗಳನ್ನು ಪಡೆದಿದ್ದಾರೆ. ಅದೇ ರೀತಿ ಹೊಸಬರು ಸಹ ಹೆಚ್ಚಿನ ಫಾಲೋವರ್ಸ್‌ ಪಡೆಯಬೇಕು ಅಧಿಕ ಲೈಕ್ ಹೊಂದಬೇಕು ಎಂದು ಬಯಸುತ್ತಾರೆ. ಆದರೆ ಕೆಲವರಿಗೆ ಫಾಲೋವರ್ಸ್‌ಗಳ ಸಂಖ್ಯೆ ಏರಿಕೆ ಆಗುವುದೇ ಇಲ್ಲ. ಹಾಗಾಂತ ಬೇಸರಗೊಂಡು ವಿಡಿಯೊ ಮಾಡುವುದನ್ನು ನಿಲ್ಲಿಸುವುದು ಸೂಕ್ತವಲ್ಲ. ಫಾಲೋವರ್ಸ್‌ ಸಂಖ್ಯೆ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಟಿಕ್‌ಟಾಕ್‌ನಲ್ಲಿ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳಲು ಕೆಲವು ಟಿಪ್ಸ್‌ಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಒಮ್ಮೆ ಪ್ರಯತ್ನಿಸಿ ನೋಡಿ.

ಆಕರ್ಷಕ ಬಯೋ ಬರೆಯಿರಿ

ಆಕರ್ಷಕ ಬಯೋ ಬರೆಯಿರಿ

ಟಿಕ್‌ಟಾಕ್‌ ಖಾತೆಯಲ್ಲಿ ನಿಮ್ಮ ಬಗ್ಗೆ ಇತರರಿಗೆ ತಿಳಿಸುವುದಕ್ಕಾಗಿ ಬಯೋ ಆಯ್ಕೆ ನೀಡಿದ್ದಾರೆ. ಈ ಆಯ್ಕೆಯಲ್ಲಿ ನಿಮ್ಮ ಬಗ್ಗೆ, ನಿಮ್ಮ ಹವ್ಯಾಸ, ಇಷ್ಟ, ಆಸಕ್ತಿ, ಅಭಿರುಚಿ, ಕ್ರೀಡೆ, ಕೌಶಲ್ಯ, ವೃತ್ತಿ, ನಂತಹ ಅಂಶಗಳನ್ನು ಬರೆಯಿರಿ. ನಿಮ್ಮ ಬಗ್ಗೆ ನೀವು ಭಿನ್ನವಾಗಿ, ಆಕರ್ಷಕವಾಗಿ ಪರಿಚಯಿಸಿಕೊಳ್ಳಿರಿ. ಇದು ನೋಡುಗರಿಗೆ ಕ್ಯಾಚಿ ಅನಿಸಬೇಕು, ನಿಮ್ಮ ಹೊಸ ವಿಡಿಯೊಗಳನ್ನು ನೋಡಲು ಅವರು ಫಾಲೋ ಮಾಡುಚ ಸಾಧ್ಯತೆಗಳಿರುತ್ತವೆ.

ಪ್ರೊಫೈಲ್‌ ಫೋಟೊ

ಪ್ರೊಫೈಲ್‌ ಫೋಟೊ

ಟಿಕ್‌ಟಾಕ್‌ನಲ್ಲಿ ಪ್ರೊಫೈಲ್‌ ಫೋಟೊ ಅಪ್‌ಲೋಡ್ ಮಾಡಲು ಅವಕಾಶ ಇದೆ. ನಿಮ್ಮ ಖಾತೆಗೆ ನಿಮ್ಮ ಫೋಟೊವನ್ನೇ ಹಾಕಿರಿ. ನೀವು ಹಾಕುವ ಪ್ರೊಫೈಲ್‌ ಫೋಟೊ ನೋಡುಗರನ್ನು ಹಿಡಿದಿಡುವಂತಿರಲಿ. ಫೋಟೊ ಗುಣಮಟ್ಟ ಹೆಚ್ಚಿಸುವ ಅಗತ್ಯವಿದ್ದರೇ, ಫೋಟೊ ಅಪ್‌ಲೋಡ್ ಮಾಡುವ ಮೊದಲು ಫೋಟೊ ಎಡಿಟ್ ಆಪ್‌ನಲ್ಲಿ ಫಿಲ್ಟರ್, ಬ್ರೈಟ್ನೆಸ್ ನಂತಹ ಆಯ್ಕೆಗಳನ್ನು ಬಳಸಿಕೊಳ್ಳಿ. ಒಟ್ನಲ್ಲಿ ಔಟ್‌ಪುಟ್ ಉತ್ತಮವಾಗಿರಲಿ.

ಹ್ಯಾಶ್‌ಟ್ಯಾಗ್‌ ಬಳಸಿ

ಹ್ಯಾಶ್‌ಟ್ಯಾಗ್‌ ಬಳಸಿ

ಟಿಕ್‌ಟಾಕ್‌ ಆಪ್‌ಗೆ ಎಂಟ್ರ ಆಗುವ ಅನೇಕ ಹೊಸಬರು ಉತ್ತಮ ವಿಡಿಯೊಗಳನ್ನು ಮಾಡಿರುತ್ತಾರೆ ಆದ್ರೆ ಫೋಸ್ಟ್ ಮಾಡುವಾಗ ಅಗತ್ಯ ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವುದೇ ಇಲ್ಲ. ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳಲು ಹ್ಯಾಶ್‌ಟ್ಯಾಗ್ ಬಳಕೆಯು ಸಹ ನೆರವಾಗುತ್ತವೆ ಎನ್ನುವುದು ನಿಮಗೆ ತಿಳಿದಿರಲಿ. ಹೀಗಾಗಾ ಹೊಸ ವಿಡಿಯೊಗಳನ್ನು ಅಪ್‌ಲೋಡ್ ಮಾಡುವಾಗ ಅಗತ್ಯ ಮತ್ತು ಸಂಬಂಧಪಟ್ಟ/ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ಗಳನ್ನು ಬಳಕೆ ಮಾಡಿರಿ.

ನೀವು ಫಾಲೋ ಮಾಡಿ

ನೀವು ಫಾಲೋ ಮಾಡಿ

ಟಿಕ್‌ಟಾಕ್‌ನಲ್ಲಿ ಈಗಾಗಲೇ ಅನೇಕ ಪ್ರತಿಭೆಗಳು ಮಿಂಚುತ್ತಿದ್ದಾರೆ. ಇನ್ನು ಹಲವರು ಅತ್ಯುತ್ತಮ ವಿಚಾರಗಳನ್ನು ವಿಡಿಯೊಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಹಾಸ್ಯ ಭರಿತ ಮಾತುಗಳ ಮೂಲಕ ಮೆಚ್ಚುಗೆ ಪಡೆದಿದ್ದಾರೆ. ಹೀಗೆ ನಿಮಗೆ ಇಷ್ಟವಾಗುವ ಟಿಕ್‌ಟಾಕ್ ಪ್ರತಿಭೆಗಳನ್ನು ನೀವು ಫಾಲೋ ಮಾಡುವ ಮೂಲಕ ಪ್ರೊತ್ಸಾಹಿಸಿ. ಅದರ ಪರಿಣಾಮವಾಗಿ ನಿಮಗೂ ಅವರು ಮರಳಿ ಫಾಲೋ ಮಾಡುವರು ಹಾಗೂ ನಿಮ್ಮ ಪ್ರೊಫೈಲ್‌ ಹೆಚ್ಚು ಜನರನ್ನು ತಲುಪಲು ಸಹಕಾರಿ ಆಗಲಿದೆ.

ವಿಡಿಯೊಗಳಲ್ಲಿ ಭಿನ್ನತೆ ಇರಲಿ

ವಿಡಿಯೊಗಳಲ್ಲಿ ಭಿನ್ನತೆ ಇರಲಿ

ಟಿಕ್‌ಟಾಕ್‌ಗೆ ಅಪ್‌ಲೋಡ್ ಮಾಡಲು ನೀವು ಕ್ರಿಯೆಟ್ ಮಾಡುವ ವಿಡಿಯೊಗಳು ಸಾಧ್ಯವಾಗಷ್ಟು ಭಿನ್ನ ಭಿನ್ನ ಸ್ಥಳಗಳಲ್ಲಿರಲಿ. ಪದೇ ಪದೇ ಒಂದೇ ಸ್ಥಳದಲ್ಲಿ/ಬ್ಯಾಕ್‌ಗ್ರೌಂಡ್‌ನಲ್ಲಿ ವಿಡಿಯೊ ಮಾಡುವುದು ಆಕರ್ಷಣೆ ಕುಗ್ಗಿಸುವ ಸಾಧ್ಯತೆಗಳಿರುತ್ತವೆ. ಹಾಗಂತ ನೀವೆಲ್ಲೂ ದೂರ ಹೋಗಬೇಕಿಲ್ಲ ನೀವಿರುವ ನಿಮ್ಮ ಸುತ್ತಮುತ್ತಲಿನಲ್ಲಿಯೇ ಅದೆಷ್ಟು ಸುಂದರ ವಾತಾವರಣ ಇರುತ್ತವೆ. ನಿಮ್ಮ ಜೊತೆಗೆ ನಿಮ್ಮ ಊರು, ನಿಮ್ಮ ಸ್ಥಳ ಸಹ ಫೇಮಸ್‌ ಆಗುವ ಸಾಧ್ಯತೆಗಳಿರುತ್ತವೆ.

Most Read Articles
Best Mobiles in India

English summary
Follow these tips and tricks in order to gain more followers as well as more likes on your TikTok posts. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X