ನಿಮ್ಮ Facebook ಖಾತೆ ಸೇಫ್‌ ಆಗಿರಬೇಕೆ?..ಹಾಗಿದ್ರೆ ತಪ್ಪದೇ ಈ ಕೆಲಸ ಮಾಡಿ!

|

ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳ ದೊಡ್ಡಣ್ಣ ಎಂದೆ ಗುರುತಿಸಿಕೊಂಡಿರುವ ಫೇಸ್‌ಬುಕ್ (Facebook) ತಮ್ಮ ಬಳಕೆದಾರರಿಗಾಗಿ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಹಾಗೆಯೇ ಮಾಹಿತಿ ಸುರಕ್ಷತೆಗೂ ಹೆಚ್ಚಿನ ಆಯ್ಕೆಗಳನ್ನು ನೀಡಿದೆ. ಇತ್ತೀಚಿಗೆ ಸೋಶಿಯಲ ಮೀಡಿಯಾ ಸೈಟ್‌ಗಳಲ್ಲಿ ಡೇಟಾ ಸುರಕ್ಷತೆಯ ಸಮಸ್ಯೆ ಬಗ್ಗೆ ತೀಳಿರುತ್ತಿರಿ. ಇದಕ್ಕೆ ಫೇಸ್‌ಬುಕ್ ಇದಕ್ಕೆ ಹೊರತಾಗಿಲ್ಲ. ಆದರೆ ಫೇಸ್‌ಬುಕ್‌ನಲ್ಲಿ ನಿಮ್ಮ ಖಾತೆ ಸುರಕ್ಷಿತವಾಗಿಡಲು ಕೆಲವು ಮಾರ್ಗಗಳು ಇವೆ.

ಬಳಕೆದಾರರು

ಹೌದು, ಜನಪ್ರಿಯ ಜಾಲತಾಣ ಫೇಸ್‌ಬುಕ್‌ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿದೆ. ಆಪ್‌ ನಲ್ಲಿ ಬಳಕೆದಾರರ ಮಾಹಿತಿ ಸುರಕ್ಷತೆಯು ಅಷ್ಟೆ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬಳಕೆದಾರರು ಕೆಲವು ಅಗತ್ಯ ಕ್ರಮಗಳನ್ನು ಅನುಸರಿಸುವ ಮೂಲಕ ಫೇಸ್‌ಬುಕ್ ಖಾತೆಯನ್ನು ಸುರಕ್ಷಿತವಾಗಿ ಇಡಬಹುದಾಗಿದೆ. ಹಾಗಾದರೇ ಫೇಸ್‌ಬುಕ್ (Facebook) ಖಾತೆಯನ್ನು ಸುರಕ್ಷಿತವಾಗಿ ಇಡಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಥರ್ಡ್‌ ಪಾರ್ಟಿ ಆಪ್ಸ್‌ ಲಾಗಿನ್ ಅನ್ನು ನಿಯಂತ್ರಿಸಿ:

ಥರ್ಡ್‌ ಪಾರ್ಟಿ ಆಪ್ಸ್‌ ಲಾಗಿನ್ ಅನ್ನು ನಿಯಂತ್ರಿಸಿ:

ಅನೇಕ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ಮೊದಲಿನಿಂದ ಹೊಸ ಖಾತೆಯನ್ನು ರಚಿಸುವ ಬದಲು ನಿಮ್ಮ ಫೇಸ್‌ಬುಕ್ ಖಾತೆಯನ್ನು ಬಳಸಿಕೊಂಡು ಲಾಗ್ ಇನ್ ಮಾಡುವ ಆಯ್ಕೆಯನ್ನು ನೀಡುತ್ತವೆ. ಇದು ಆ ಆಪ್‌ ಬಳಕೆ/ಲಾಗ್‌ಇನ್ ಸುಲಭವಾಗಿಸುತ್ತದೆ ಆದರೂ, ಬಳಿಕ ಥರ್ಡ್‌ ಪಾರ್ಟಿ ಆಪ್ಸ್ ಮತ್ತು ವೆಬ್‌ಸೈಟ್‌ ಗಳನ್ನು ಬಳಸುವುದನ್ನು ನಿಲ್ಲಿಸಿದಾಗ ಅವುಗಳ ಫೇಸ್‌ಬುಕ್ ಎಂಟ್ರಿ ಕ್ಲೋಸ್ ಮಾಡಲು ಕೆಲವೊಮ್ಮೆ ಮರೆತು ಬಿಟ್ಟಿರುತ್ತಾರೆ. ಅದಕ್ಕಾಗಿ ಫೇಸ್‌ಬುಕ್ ಸೆಟ್ಟಿಂಗ್‌ಗಳು > ಅಪ್ಲಿಕೇಶನ್‌ ಗಳು ಮತ್ತು ವೆಬ್‌ಸೈಟ್‌ಗಳಿಗೆ ಹೋಗಿ. ನಿಮ್ಮ ಫೇಸ್‌ಬುಕ್ ಖಾತೆಗೆ ಪ್ರವೇಶವನ್ನು ಹೊಂದಿರುವ ಎಲ್ಲಾ ಸಕ್ರಿಯ ಅಪ್ಲಿಕೇಶನ್‌ ಗಳು ಮತ್ತು ವೆಬ್‌ಸೈಟ್‌ಗಳ ಪಟ್ಟಿಯನ್ನು ನೀವು ನೋಡುತ್ತೀರಿ. ನೀವು ಬಳಸುವ ಅಪ್ಲಿಕೇಶನ್‌ ಗಳನ್ನು ನೀವು ಆಯ್ಕೆ ಮಾಡಬಹುದು.

Facebook ಪ್ರೊಫೈಲ್ ಅನ್ನು ಈ ಕ್ರಮ ಫಾಲೋ ಮಾಡಿ ಲಾಕ್ ಮಾಡಿರಿ:

Facebook ಪ್ರೊಫೈಲ್ ಅನ್ನು ಈ ಕ್ರಮ ಫಾಲೋ ಮಾಡಿ ಲಾಕ್ ಮಾಡಿರಿ:

* ಫೇಸ್‌ಬುಕ್ ಆಪ್‌ಗೆ ಲಾಗ್ ಇನ್ ಮಾಡಿ.
* ನಿಮ್ಮ ಪ್ರೊಫೈಲ್ ಚಿತ್ರ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಪ್ರೊಫೈಲ್ ತೆರೆಯಿರಿ.
* ನಿಮ್ಮ ಪ್ರೊಫೈಲ್ ಚಿತ್ರದ ಕೆಳಗಿನ ಮೂರು ಚುಕ್ಕೆ ಗಳ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡಿ ಮೇಲೆ ಕ್ಲಿಕ್ ಮಾಡಿ.

Facebook ಆಕ್ಟಿವಿಟಿ ಬಂದ್ ಮಾಡಿರಿ: ಅದಕ್ಕಾಗಿ ಈ ಕ್ರಮ ಅನುಸರಿಸಿ:

Facebook ಆಕ್ಟಿವಿಟಿ ಬಂದ್ ಮಾಡಿರಿ: ಅದಕ್ಕಾಗಿ ಈ ಕ್ರಮ ಅನುಸರಿಸಿ:

ಹಂತ 1: ಫೇಸ್‌ಬುಕ್ ಗೆ ಲಾಗ್ ಇನ್ ಮಾಡಿ
ಹಂತ 2: ಅಪ್ಲಿಕೇಶನಿನ ಬಲ ಮೆನುಗೆ ಹೋಗಿ ಮತ್ತು ಸೆಟ್ಟಿಂಗ್ ಮತ್ತು ಗೌಪ್ಯತೆ ಮೇಲೆ ಕ್ಲಿಕ್ ಮಾಡಲು ಕೆಳಗೆ ಸ್ಕ್ರಾಲ್ ಮಾಡಿ.
ಹಂತ 3: ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಫೇಸ್‌ಬುಕ್ ಮಾಹಿತಿಗೆ ಕೆಳಗೆ ಸ್ಕ್ರಾಲ್ ಮಾಡಿ. ಬಳಿಕ OFF - FACEBOOK ACTIVITY ಮೇಲೆ ಕ್ಲಿಕ್ ಮಾಡಿ.
ಹಂತ 4: ನಿಮ್ಮ OFF - FACEBOOK ACTIVITY ಯನ್ನು ನಿರ್ವಹಿಸಿ
ಹಂತ 5: ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಪಾಸ್‌ವರ್ಡ್ ನಮೂದಿಸಿ
ಹಂತ 6: ನಿಮ್ಮ ಬಗ್ಗೆ ಸಂಗ್ರಹಿಸಲಾದ ಮಾಹಿತಿಯನ್ನು ಡಿಲೀಟ್ ಮಾಡಲು ಮೇಲೆ ಟ್ಯಾಪ್ ಮಾಡಿ.

Facebook ಹಿಸ್ಟರಿ ಕ್ಲಿಯರ್ ಮಾಡಲು ಈ ಕ್ರಮ ಅನುಸರಿಸಿ:

Facebook ಹಿಸ್ಟರಿ ಕ್ಲಿಯರ್ ಮಾಡಲು ಈ ಕ್ರಮ ಅನುಸರಿಸಿ:

* ಫೇಸ್‌ಬುಕ್ ಖಾತೆ ತೆರೆದು, ಬಲ ಭಾಗದಲ್ಲಿ ಕಾಣಿಸುವ ಮೂರು ಗೆರೆಗಳಿರುವ ಮೆನು ಆಯ್ಕೆ ಮಾಡಿರಿ.
* ಸೆಟ್ಟಿಂಗ್ಸ್ ಮತ್ತು ಪ್ರೈವೆಸಿ ಆಯ್ಕೆ ಸೆಲೆಕ್ಟ್ ಮಾಡಿರಿ.
* ನಂತರ ಸೆಟ್ಟಿಂಗ್ಸ್‌ ಆಯ್ಕೆ ಯನ್ನು ಒತ್ತಿರಿ.
* ನಂತರ ಪೇಜ್ ತೆರೆದುಕೊಳ್ಳುತ್ತದೆ, ಸ್ಕ್ರಾಲ್ ಮಾಡಿ > ಆಫ್‌ ಫೇಸ್‌ಬುಕ್ ಆಕ್ಟಿವಿಟಿ ಕಾಣಿಸುತ್ತದೆ.
* ಆಗ ಆಫ್‌ ಫೇಸ್‌ಬುಕ್ ಆಕ್ಟಿವಿಟಿ ಆಯ್ಕೆಯನ್ನು ಕ್ಲಿಕ್ಕಿಸಿ, ಆಗ ನೀವು ಭೇಟಿ ನೀಡಿದ ತಾಣಗಳ ಮಾಹಿತಿ ಕಾಣಿಸುತ್ತದೆ.
* ಹಾಗೆಯೇ ಅಲ್ಲಿಯೇ ಕ್ಲಿಯರ್ ಹಿಸ್ಟರಿ ಆಯ್ಕೆಯು ಸಹ ಕಾಣಿಸುತ್ತದೆ.
* ಆಗ ವಿಂಡೊ ಒಂದು ತೆರೆದು ಕೊಳ್ಳುತ್ತದೆ, ಅಲ್ಲಿ ಕ್ಲಿಯರ್ ಹಿಸ್ಟರಿ ಬಟನ್ ಒತ್ತಿರಿ.

Best Mobiles in India

English summary
To Keep Your Facebook Account Safe You Must Follow These Safety Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X