YONO ಆಪ್‌ ಪಾಸ್‌ವರ್ಡ್‌ ಮರೆತಿದ್ದೀರಾ?..ಹಾಗಿದ್ರೆ, ಈ ಕ್ರಮ ಅನುಸರಿಸಿ!

|

ಪ್ರಸ್ತುತ ಡಿಜಿಟಲ್ ಬ್ಯಾಂಕಿಂಗ್ ಹೆಚ್ಚು ಮುನ್ನಲೆಯಲ್ಲಿ ಕಾಣಿಸಿಕೊಂಡಿದೆ. ಬಹುತೇಕ ಎಲ್ಲ ಬ್ಯಾಂಕ್‌ಗಳು ಪ್ರತ್ಯೇಕ ಮೊಬೈಲ್‌ ಅಪ್ಲಿಕೇಶನ್ ಹೊಂದಿದ್ದು, ಆಪ್‌ ಮೂಲಕ ಗ್ರಾಹಕರು ಬ್ಯಾಲೆನ್ಸ್‌ ಚೆಕ್, ಹಣ ವರ್ಗಾವಣೆ ಹಾಗೂ ಇತರೆ ವಹಿವಾಟು ನಡೆಸಬಹುದಾಗಿದೆ. ಅದೇ ರೀತಿ ಎಸ್‌ಬಿಐ (SBI-ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ) ತನ್ನ ಖಾತೆದಾರರಿಗಾಗಿ ಯೊನೊ (YONO) ಅಪ್ಲಿಕೇಶನ್ ಅನ್ನು ನೀಡಿದ್ದು, ಹಲವಯ ಅಗತ್ಯ ಸೇವೆಗಳನ್ನು ಲಭ್ಯ ಮಾಡಿದೆ.

ಪಾಸ್‌ವರ್ಡ್‌

ಇನ್ನು ಈಗಾಗಲೇ ಅನೇಕ ಎಸ್‌ಬಿಐ ಖಾತೆದಾರರು ಯೊನೊ (YONO) ಆಪ್‌ ಬಳಕೆ ಮಾಡುತ್ತಿದ್ದಾರೆ. ಸುರಕ್ಷತೆಯ ದೃಷ್ಠಿಯಿಂದ ಖಾತೆದಾರರಿಗೆ ಪ್ರತ್ಯೇಕ ಯೂಸರ್ ಐಡಿ ಹಾಗೂ ಪಾಸ್‌ವರ್ಡ್‌ ನೀಡುತ್ತದೆ. ಯಾವುದೇ ಸಮಯದಲ್ಲಿ ಯೂಸರ್ ನೇಮ್‌ (ಬಳಕೆದಾರ ಹೆಸರು) ಹಾಗೂ ಪಾಸ್‌ವರ್ಡ್‌ ಬದಲಾಯಿಸುವ ಆಯ್ಕೆ ಸಹ ಇದೆ. ಒಂದು ವೇಳೆ ಪಾಸ್‌ವರ್ಡ್‌ ಅಥವಾ ಯೂಸರ್‌ ಐಡಿ ಮರೆತರೆ ಏನು ಮಾಡುವುದು? ಮತ್ತೆ ಹೇಗೆ ಅಪ್ಲಿಕೇಶನ್ ತರೆಯುವುದು ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಯೊನೊ (YONO) ಅಪ್ಲಿಕೇಶನ್

ಯೊನೊ (YONO) ಅಪ್ಲಿಕೇಶನ್

ಖಾತೆದಾರರು ಯೊನೊ ಆಪ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಬಹುತೇಕ ಎಲ್ಲಾ ಬ್ಯಾಂಕಿಂಗ್ ಸಂಬಂಧಿತ ಸೇವೆಗಳನ್ನು ಮಾಡಬಹುದಾಗಿದೆ. ಖಾತೆದಾರರು ಆನ್‌ಲೈನ್ ಎಸ್‌ಬಿಐ ಲಾಗಿನ್ ಕ್ರೆಡೆನ್ಷಿಯಲ್‌ ಅಥವಾ ಎಟಿಎಮ್‌ ಕಾರ್ಡ್ ಸೇರಿದಂತೆ ಖಾತೆ ವಿವರಗಳೊಂದಿಗೆ ಯೊನೊ ಆಪ್‌ ಅಥವಾ ಪೋರ್ಟಲ್‌ಗೆ ಲಾಗ್ ಇನ್ ಮಾಡಬಹುದು. ಹಾಗೆಯೇ ಮೊಬೈಲ್‌ನಲ್ಲಿ ಯೊನೊ ಆಪ್‌ ಬಳಸಲು ಹಾಗೂ ತ್ವರಿತ ಲಾಗ್‌ಇನ್‌ಗಾಗಿ, 6-ಅಂಕಿಯ MPIN ಅನ್ನು ಸಹ ಸೆಟ್‌ ಮಾಡಬಹುದು.

ಖಾತೆದಾರರು username ರೀಸೆಟ್‌ ಮಾಡಲು ಹೀಗೆ ಮಾಡಿ:

ಖಾತೆದಾರರು username ರೀಸೆಟ್‌ ಮಾಡಲು ಹೀಗೆ ಮಾಡಿ:

* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ತೆರೆಯಲು onlinesbi.com ಗೆ ಭೇಟಿ ನೀಡಿ.
* ಪರ್ಸನಲ್ ಬ್ಯಾಂಕಿಂಗ್ ನಲ್ಲಿ, ಲಾಗಿನ್ ಅನ್ನು ಆಯ್ಕೆ ಮಾಡಿ.
* ಮುಂದೆ, ಖಾತೆ ವಿವರಗಳ ವಿಭಾಗದಲ್ಲಿ 'ಬಳಕೆದಾರ ಹೆಸರು/ಲಾಗಿನ್ ಪಾಸ್‌ವರ್ಡ್‌ ಮರೆತುಹೋಗಿದೆ' ಮೇಲೆ ಕ್ಲಿಕ್ ಮಾಡಿ.
* ಡ್ರಾಪ್-ಡೌನ್ ಮೆನುವಿನಿಂದ, forgot my username ಆಯ್ಕೆ ಕ್ಲಿಕ್ ಮಾಡಿ.
* ಪಾಪ್ ವಿಂಡೋದಲ್ಲಿ next ಕ್ಲಿಕ್ ಮಾಡಿ.

ನೋಂದಾಯಿತ

* ನಂತರ, CIF ಸಂಖ್ಯೆ, ದೇಶ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಸೇರಿದಂತೆ ಅಗತ್ಯವಿರುವ ಕ್ಷೇತ್ರಗಳನ್ನು ಭರ್ತಿ ಮಾಡಿ.
* Submit ಬಟನ್ ಮೇಲೆ ಟ್ಯಾಪ್ ಮಾಡಿ.
* ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು ದೃಢೀಕರಿಸು ಕ್ಲಿಕ್ ಮಾಡಿ.
* ಎಸ್‌ಬಿಐ ಪೋರ್ಟಲ್ ನಿಮಗೆ ನಿಮ್ಮ ಹೊಸ ಯೊನೊ ಎಸ್‌ಬಿಐ ಲಾಗಿನ್ ಬಳಕೆದಾರ ಹೆಸರನ್ನು ಸ್ಕ್ರೀನ್‌ ಮೇಲೆ ನೀಡುತ್ತದೆ. ಹಾಗೆಯೇ ನೋಂದಾಯಿತ ಮೊಬೈಲ್ ಸಂಖ್ಯೆಗೆ ಟೆಕ್ಸ್ಟ್‌ ಮೆಸೆಜ್‌ ಬರುತ್ತದೆ.

ಖಾತೆದಾರರು ಪಾಸ್‌ವರ್ಡ್‌ ರೀಸೆಟ್‌ ಮಾಡಲು ಈ ಕ್ರಮ ಅನುಸರಿಸಿ:

ಖಾತೆದಾರರು ಪಾಸ್‌ವರ್ಡ್‌ ರೀಸೆಟ್‌ ಮಾಡಲು ಈ ಕ್ರಮ ಅನುಸರಿಸಿ:

* onlinesbi.com ಗೆ ಭೇಟಿ ನೀಡಿ. ನಂತರ ಖಾತೆ ವಿವರಗಳ ವಿಭಾಗದಲ್ಲಿ Forgot login password ಮೇಲೆ ಕ್ಲಿಕ್ ಮಾಡಿ.
* ಈಗ ಡ್ರಾಪ್-ಡೌನ್ ಮೆನುವಿನಿಂದ Forgot my Login Password ಆಯ್ಕೆ ಮಾಡಿ
* ಈಗ ಪಾಪ್ ವಿಂಡೋದಲ್ಲಿ next ಕ್ಲಿಕ್ ಮಾಡಿ.
* ಬಳಿಕ ಬಳಕೆದಾರ ಹೆಸರು, ಖಾತೆ ಸಂಖ್ಯೆ, ದೇಶ, ನೋಂದಾಯಿತ ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ಸೇರಿದಂತೆ ಅಗತ್ಯವಿರುವ ಕ್ಷೇತ್ರಗಳನ್ನು ಭರ್ತಿ ಮಾಡಿ.
ವಿವರಗಳನ್ನು ಸಲ್ಲಿಸಿ.
* ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು ಸ್ವೀಕರಿಸಿದ OTP ಅನ್ನು ನಮೂದಿಸುವ ಮೂಲಕ ಪರಿಶೀಲಿಸಿ.
* ಬಳಿಕ ಪಾಸ್‌ವರ್ಡ್ ಅನ್ನು ರೀಸೆಟ್‌ ಮಾಡಿ ಮತ್ತು Submit ಬಟನ್ ಒತ್ತಿರಿ

Best Mobiles in India

English summary
SBI YONO is a digital platform offering integrated banking features. know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X