ಬ್ರೌಸರ್ ಸುರಕ್ಷತೆಗೆ ವಿಶ್ವದಲ್ಲಿ ಅತಿ ಹೆಚ್ಚು ಇನ್‌ಸ್ಟಾಲ್ ಆಗಿರುವ ಉಚಿತ ಎಕ್ಸ್‌ಟೆನ್ಷನ್ ಇದು!!

|

ಸೈಬರ್ ದಾಳಿಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಆನ್‌ಲೈನ್‌ ವಹಿವಾಟಿನ ಮೇಲೆ ಸದಾ ನಿಗಾ ವಹಿಸುತ್ತಾ, ವೈರಸ್‌ ಮತ್ತು ಇತರೆ ಸೈಬರ್ ದಾಳಿಗಳಿಂದ ರಕ್ಷಣೆ ನೀಡುವ ಉಚಿತ ಮಾಲ್‌ವೇರ್ ಬಳಕೆ ಮಾಡುತ್ತಿರುವವರ ಪ್ರಮಾಣ ಭಾರತದಲ್ಲಿಯೇ ಕಡಿಮೆ ಇದೆ ಎಂದು ವರದಿಗಳು ಹೇಳುತ್ತಿರುವುದು ಇಂದು ಆತಂಕಕ್ಕೆ ಕಾರಣವಾಗಿದೆ.

ವಿಶ್ವದಲ್ಲಿ ಅತಿ ಹೆಚ್ಚು ಮಂದಿ ಬ್ರೌಸರ್ ಸುರಕ್ಷತೆಗಾಗಿ ಇನ್‌ಸ್ಟಾಲ್ ಮಾಡಿಕೊಂಡಿರುವ ಟೂಲ್‌ಬಾರ್‌ ಎಕ್ಸ್‌ಟೆನ್ಷನ್ಸ್ ಮಾಲ್‌ವೇರ್‌ ಬೈಟ್ಸ್ (Malwarebytes Anti-Exploit)ವೈರಸ್‌ ಮತ್ತು ಇತರೆ ಸೈಬರ್‌ ದಾಳಿಗಳಿಂದ ರಕ್ಷಣೆ ಒದಗಿಸುತ್ತಿದೆ. ಆದರೆ, ಟ್ರಯಲ್ ವರ್ಷನ್‌ನಲ್ಲಿರುವ ಪಾಪ್‌-ಅಪ್ ಬ್ಲಾಕರ್‌ಗಳು ಅನಿಮೇಟೆಡ್ ಮತ್ತು ಫ್ಲೋಟಿಂಗ್‌ ಆಡ್‌ಗಳನ್ನು ತಡೆಯಲಾರವು.

ವಿಶ್ವದಲ್ಲಿ ಅತಿ ಹೆಚ್ಚು ಇನ್‌ಸ್ಟಾಲ್ ಆಗಿರುವ ಉಚಿತ ಎಕ್ಸ್‌ಟೆನ್ಷನ್ ಇದು!!

ಫೈರ್‌ಫಾಕ್ಸ್‌, ಕ್ರೋಮ್‌, ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌, ಸಫಾರಿ ಹೀಗೆ ಪ್ರತಿಯೊಂದು ಬ್ರೌಸರ್‌ಗಳಿಗೂ ಬೇರೆ ಬೇರೆ ಎಕ್ಸ್‌ಟೆನ್ಷನ್‌ಗಳಿವೆ. ಫ್ಲ್ಯಾಶ್‌ ಆಡ್‌, ಟೈಮರ್‌ ಆಡ್‌, ಡೈಲಾಗ್‌ ಬಾಕ್ಸ್‌ ಆಡ್‌ ಮತ್ತು ಮೆಸೇಜ್‌ ಬಾಕ್ಸ್ ಆಡ್‌ಗಳನ್ನೂ ತಡೆಯಲು ಪರಿಣಾಮಕಾರಿಯಾದ ಟೂಲ್‌ಬಾರ್‌ ಬೇಕಿದ್ದು, ಬ್ರೌಸರ್‌ಗಳ ವೇಗವರ್ಧನೆಗೆ ಹಲವು ವೆಬ್‌ ಬೇಸ್ಡ್ ಟೂಲ್‌ಗಳಿವೆ.

ಅಡ್ ಮ್ಯೂಚರ್ (Ad Muncher)

ಅಡ್ ಮ್ಯೂಚರ್ (Ad Muncher)

ಪ್ರಸ್ತುತ ಅತ್ಯುತ್ತಮ ಪರಿಣಾಮಕಾರಿಯಾದ ಪಾಪ್‌-ಅಪ್‌ ಬ್ಲಾಕರ್ ಎಂದರೆ ಅದು 'ಆಡ್ ಮ್ಯೂಚರ್' .ಶೇ 98ರಷ್ಟು ಫ್ಲ್ಯಾಶ್, ಫ್ಲೋಟಿಂಗ್‌, ಆನ್‌ಲೈನ್‌ ಪಾಪ್‌ಅಪ್‌, ಟೆಕ್ಸ್ಟ್‌ ಆಡ್‌ಗಳನ್ನು ತಡೆಯುವ ಈ ಪಾಪ್‌-ಅಪ್‌ ಬ್ಲಾಕರ್30 ದಿನಗಳ ಉಚಿತ ಟ್ರಯಲ್ ವರ್ಷನ್ ಲಭ್ಯವಿದೆ. ನಂತರ ಬೇಕಿದ್ದರೆ ವರ್ಷಕ್ಕೆ 30 ಡಾಲರ್‌ ಪಾವತಿಸಬೇಕು.

ಗೂಗಲ್ ಕ್ಯಾಲೆಂಡರ್ ಎಕ್ಸೆಟೆನ್ಷನ್ (Calendar extension)

ಗೂಗಲ್ ಕ್ಯಾಲೆಂಡರ್ ಎಕ್ಸೆಟೆನ್ಷನ್ (Calendar extension)

ಗೂಗಲ್‌ನ ಈ ಆಡ್‌-ಆನ್‌ ಇನ್‌ಸ್ಟಾಲ್ ಮಾಡಿಕೊಂಡು ಯಾವುದೇ ಕಾರ್ಯಕ್ರಮಗಳ ವೇಳಾಪಟ್ಟಿ ಸಿದ್ಧಪಡಿಸಿ ಇಟ್ಟುಕೊಳ್ಳಬಹುದು. ಉದಾಹರಣೆಗೆ ನೀವು ಆನ್‌ಲೈನ್‌ನಲ್ಲಿ ಯಾವುದೋ ಕಾರ್ಯಕ್ರಮದ ದಿನಾಂಕ ನೋಡುತ್ತೀರಿ ಎಂದರೆ, ಅದರ ಮೇಲೆ ರೈಟ್ ಕ್ಲಿಕ್‌ ಮಾಡಿ ಆಡ್‌ ಟು ಕ್ಯಾಲೆಂಡರ್‌ ಎಂದರೆ, ಆ ದಿನಾಂಕ ಕ್ಯಾಲೆಂಡರ್‌ಗೆ ಸೇರ್ಪಡೆಯಾಗುತ್ತದೆ.

How to use WhatsApp in Kannada - GIZBOT KANNADA
ಗೂಗಲ್ ಡ್ರೈವ್ ಕ್ರೋಮ್ ಎಕ್ಸೆಟೆನ್ಷನ್ ( Google Drive)

ಗೂಗಲ್ ಡ್ರೈವ್ ಕ್ರೋಮ್ ಎಕ್ಸೆಟೆನ್ಷನ್ ( Google Drive)

ಹಾರ್ಡ್‌ ಡ್ರೈವ್‌ನಲ್ಲಿ ಚಿತ್ರಗಳನ್ನು ಸೇವ್ ಮಾಡಿ ನಂತರ ಪ್ರತ್ಯೇಕವಾಗಿ ಗೂಗಲ್‌ ಡ್ರೈವ್‌ಗೆ ಅಪ್‌ಲೋಡ್‌ ಮಾಡುವ ಬದಲು, ಗೂಗಲ್ ಡ್ರೈವ್ ಕ್ರೋಮ್ ಎಕ್ಸೆಟೆನ್ಷನ್ ಇದ್ದರೆ ನೇರವಾಗಿ ಇದಕ್ಕೆ ಸೇವ್‌ ಮಾಡಬಹುದು. ಇದರಲ್ಲಿ ಪ್ರತ್ಯೇಕ ಫೋಲ್ಡರ್‌ಗಳನ್ನು ಮಾಡಿಕೊಳ್ಳುವ ಅವಕಾಶವೂ ಇದೆ. ಎಚ್‌ಟಿಎಂಲ್ ಫೈಲ್‌ಗಳನ್ನೂ ಸೇವ್ ಮಾಡಿಕೊಳ್ಳಬಹುದಾದ ಆಯ್ಕೆ ಇರುತ್ತದೆ.

ಸ್ನ್ಯಾಗಿಟ್ ಕ್ರೋಮ್ ಎಕ್ಸೆಟೆನ್ಷನ್(Snagit)

ಸ್ನ್ಯಾಗಿಟ್ ಕ್ರೋಮ್ ಎಕ್ಸೆಟೆನ್ಷನ್(Snagit)

ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ಅಥವಾ ಚಿಕ್ಕ ವಿಡಿಯೊ ಕ್ಲಿಪಿಂಗ್‌ಗಳನ್ನು ತೆಗೆದು ಗೂಗಲ್‌ ಡ್ರೈವ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳಲು ಸ್ನ್ಯಾಗಿಟ್ ಕ್ರೋಮ್ ಎಕ್ಸೆಟೆನ್ಷನ್ ಸಹಕಾರಿ. ಬುಕ್‌ ಮಾರ್ಕ್‌ ಬ್ರೌಸಿಂಗ್ ಹಿಸ್ಟರಿ ಎಲ್ಲವನ್ನೂ ಸಿಂಕ್‌ ಮಾಡಿಕೊಳ್ಳಬಹುದಾದ ಅತ್ಯುತ್ತಮ ಆಯ್ಕೆ ಈ ಎಕ್ಸೆಟೆನ್ಷನ್‌ನಲ್ಲಿದೆ.

Best Mobiles in India

English summary
Advanced algorithm identifies the correct ad block for each unique popup for industry-leading accuracy in adblocking pop ups in both new tabs and new windows. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X