ನಿಮ್ಮ ಏರ್‌ಟೆಲ್ ಇಂಟರ್ನೆಟ್ ಪ್ಲಾನ್‌ಗೆ ಹೆಚ್ಚುವರಿ 250 ಎಮ್‌ಬಿ ಪಡೆದುಕೊಳ್ಳುವುದು ಹೇಗೆ?

By Shwetha
|

ಜಿಯೋದೊಂದಿಗೆ ಸರಿ ಸಮಾನಾಗಿ ಸ್ಪರ್ಧಿಸುವ ನಿಟ್ಟಿನಲ್ಲಿ ಏರ್‌ಟೆಲ್ ಸಾಕಷ್ಟು ಆರಂಭ ಯೋಜನೆಗಳು ಮತ್ತು ಟಾರಿಫ್ ಯೋಜನೆಗಳೊಂದಿಗೆ ಬಂದಿವೆ. ನಿಮ್ಮ ಏರ್‌ಟೆಲ್ ಸಂಖ್ಯೆಯಲ್ಲಿ ಹೆಚ್ಚುವರಿ ಡೇಟಾ ಗಳಿಸುವ ಯೋಜನೆಯೊಂದಿಗೆ ಇದೀಗ ಏರ್‌ಟೆಲ್ ಬಂದಿದೆ. ಏರ್‌ಟೆಲ್ ಸಾಕಷ್ಟು ಹೊಸ ಆಫರ್‌ಗಳು ಮತ್ತು ಡಿಸ್ಕೌಂಟ್ ಕೂಪನ್‌ಗಳೊಂದಿಗೆ ಬಂದಿದ್ದು ಜಿಯೋದ ಅನ್‌ಲಿಮಿಟೆಡ್ ಯೋಜನೆಗೆ ಸರಿಸಮಾನಗಿ ಕಂಪೆನಿ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ.

ಓದಿರಿ: ಹೆಚ್ಚು ವೇಗದಲ್ಲಿ ಜಿಯೋ 4ಜಿ ಡೇಟಾ ಪಡೆದುಕೊಳ್ಳುವುದು ಹೇಗೆ?

ಇಂದಿನ ಲೇಖನದಲ್ಲಿ ನಿಮ್ಮ ಏರ್‌ಟೆಲ್ ಸಂಖ್ಯೆಗೆ ಹೆಚ್ಚುವರಿ 250 ಎಮ್‌ಬಿ ಡೇಟಾವನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಲಿದ್ದೇವೆ.

ಓದಿರಿ: ಜಿಯೋದಿಂದ ಉಚಿತ ಕಾಲರ್ ಟ್ಯೂನ್ ಪಡೆದುಕೊಳ್ಳುವುದು ಹೇಗೆ?

ಎಲ್ಲಾ ಡೇಟಾ ರಿಚಾರ್ಜ್‌ಗಳಿಗೆ ಏರ್‌ಟೆಲ್ ನೀಡಲಿದೆ 250 ಎಮ್‌ಬಿ ಡೇಟಾ

ಎಲ್ಲಾ ಡೇಟಾ ರಿಚಾರ್ಜ್‌ಗಳಿಗೆ ಏರ್‌ಟೆಲ್ ನೀಡಲಿದೆ 250 ಎಮ್‌ಬಿ ಡೇಟಾ

1ಜಿಬಿ, 2ಜಿಬಿ, 3ಜಿಬಿ ಅಥವಾ ಯಾವುದೇ ಏರ್‌ಟೆಲ್ ಡೇಟಾ ಪ್ಲಾನ್ ಆಗಿರಲಿ, ತನ್ನೆಲ್ಲಾ ಬಳಕೆದಾರರಿಗೆ ಏರ್‌ಟೆಲ್ ಹೆಚ್ಚುವರಿ 250 ಎಮ್‌ಬಿ ಡೇಟಾವನ್ನು ಒದಗಿಸಲಿದೆ. ಈ ಆಫರ್ ಅನ್ನು ಏರ್‌ಟೆಲ್ ಸಂಖ್ಯೆಗೆ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಮೈಏರ್‌ಟೆಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಮೈಏರ್‌ಟೆಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಎಲ್ಲಾ ಬಳಕೆದಾರರು ಮೈ ಏರ್‌ಟೆಲ್ ಅಪ್ಲಿಕೇಶನ್ ಅನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಬೇಕು ಮತ್ತು ನಿಮ್ಮ ಮೇಲ್ ಐಡಿ ಹಾಗೂ ಪಾಸ್‌ವರ್ಡ್‌ನೊಂದಿಗೆ ಖಾತೆಯನ್ನು ರಚಿಸಿಕೊಳ್ಳಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

'ರಿಚಾರ್ಜ್ ಎಕ್ಸ್‌ಕ್ಲೂಸೀವ್ ಆಫರ್ಸ್' ಮೇಲೆ ಕ್ಲಿಕ್ ಮಾಡಿ ಮತ್ತು ಆಫರ್ ಬಗ್ಗೆ ತಿಳಿದುಕೊಳ್ಳಿ

'ರಿಚಾರ್ಜ್ ಎಕ್ಸ್‌ಕ್ಲೂಸೀವ್ ಆಫರ್ಸ್' ಮೇಲೆ ಕ್ಲಿಕ್ ಮಾಡಿ ಮತ್ತು ಆಫರ್ ಬಗ್ಗೆ ತಿಳಿದುಕೊಳ್ಳಿ

ನಿಮ್ಮ ವಿವರಗಳೊಂದಿಗೆ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿದ ನಂತರ ಮೈ ಏರ್‌ಟೆಲ್ ಅಪ್ಲಿಕೇಶನ್‌ನ ಹೋಮ್ ಪೇಜ್‌ನಲ್ಲಿ ಸಾಕಷ್ಟು ಆಪ್ಶನ್‌ಗಳು ದೊರೆಯುತ್ತದೆ. 'ರಿಚಾರ್ಜ್ ಎಕ್ಸ್‌ಕ್ಲೂಸೀವ್ ಆಫರ್ಸ್' ಆಪ್ಶನ್ ಮೇಲೆ ಬಳಕೆದಾರರು ಕ್ಲಿಕ್ಕಿಸಬೇಕು. ಈಗ ಬಳಕೆದಾರರಿಗೆ 'ರಿಚಾರ್ಜ್ ಎಕ್ಸ್‌ಕ್ಲೂಸೀವ್ ಆಫರ್ಸ್' ಅನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಮತ್ತು ಹೆಚ್ಚುವರಿ 250 ಎಮ್‌ಬಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

ಲಭ್ಯ ಇದರ ಮೇಲೆ ಕ್ಲಿಕ್ ಮಾಡಿ ಮತ್ತು ಸಂಪರ್ಕ ಸಂಖ್ಯೆಯನ್ನು ನಮೂದಿಸಿ

ಲಭ್ಯ ಇದರ ಮೇಲೆ ಕ್ಲಿಕ್ ಮಾಡಿ ಮತ್ತು ಸಂಪರ್ಕ ಸಂಖ್ಯೆಯನ್ನು ನಮೂದಿಸಿ

ಆಫರ್‌ಗಳ ಪಟ್ಟಿಯನ್ನು ಪಡೆದುಕೊಂಡ ನಂತರ, ಲಭಿಸುವಿಕೆ ಮೇಲೆ ಕ್ಲಿಕ್ಕಿಸಿದ ಮೇಲೆ ಬಳಕೆದಾರರು ತಮ್ಮ ಏರ್‌ಟೆಲ್ ಸಂಖ್ಯೆ ಮತ್ತು ಪ್ರೊಮೋ ಕೋಡ್ APP250MB ಎಂದಾಗಿರುತ್ತದೆ ಇದನ್ನು ನಮೂದಿಸಬೇಕು ಮತ್ತು ವ್ಯೂ ಪ್ಲಾನ್ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು.

ಯೋಜನೆಗಳನ್ನು ವೀಕ್ಷಿಸಿ ಮತ್ತು ರಿಚಾರ್ಜ್ ಮಾಡಲು ಮುಂದುವರಿಯಿರಿ

ಯೋಜನೆಗಳನ್ನು ವೀಕ್ಷಿಸಿ ಮತ್ತು ರಿಚಾರ್ಜ್ ಮಾಡಲು ಮುಂದುವರಿಯಿರಿ

ವ್ಯೂ ಪ್ಲಾನ್ಸ್ ಆಪ್ಶನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ, ಯೋಜನೆಗಳ ದೊಡ್ಡ ಪಟ್ಟಿಯನ್ನೇ ನೀವು ಕಾಣುತ್ತೀರಿ ಇದು ಹೆಚ್ಚುವರಿ 250 ಎಮ್‌ಬಿ ಡೇಟಾವನ್ನು ಒದಗಿಸುತ್ತದೆ. ಬಳಕೆದಾರರು ಪ್ಲಾನ್ ಮೇಲೆ ಕ್ಲಿಕ್ ಮಾಡಿ ರಿಚಾರ್ಜ್ ಮಾಡಿಕೊಂಡರೆ ಸಾಕು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The telecom operator now has something new for its users. Well, the talk is not about a new tariff plan, but Airtel's extra 250 MB data offer on recharging your number with your favorite data plan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X