ನಿಮ್ಮ ಮೊಬೈಲ್‌ನಿಂದ ನಿಮ್ಮ ಮಕ್ಕಳ ಮೊಬೈಲ್‌ ನಿಯಂತ್ರಿಸಬಹುದು!!..ಹೇಗೆ ಗೊತ್ತಾ?

Written By:

ಮಕ್ಕಳು ಇಂಟರ್‌ನೆಟ್‌ ಬಳಕೆ ಮಾಡಬೇಕೆ? ಅಥವಾ ಮಾಡಬಾರದೇ? ಎನ್ನುವ ಜಿಜ್ನಾಸೆ ಎಲ್ಲಾ ಪೋಷಕರಿಗೂ ಇದ್ದೇ ಇದೆ.!! ಆದರೆ, ಇಂಟರ್‌ನೆಟ್ ಅನ್ನು ಮಕ್ಕಳು ಹೇಗೆಲ್ಲಾ ಬಳಕೆ ಮಾಡುತ್ತಾರೆ ಎಂಬುದರ ಮೇಲೆ ಪೋಷಕರ ಜಿಜ್ನಾಸೆಗೂ ಉತ್ತರ ಇದೆ.!!

ಹೌದು, ಮಕ್ಕಳು ಒಳ್ಳೆಯ ವಿಷಯಗಳಿಗೆ ಇಂಟರ್‌ನೆಟ್ ಬಳಕೆ ಮಾಡಿದರೆ ಅದು ಅವರ ಭವಿಷ್ಯದ ಬೆಳವಣಿಗೆಗೆ ಸಹಕಾರಿ. ಹಾಗೆಯೇ, ಅದನ್ನು ಕೆಟ್ಟದಕ್ಕೆ ಬಳಕೆ ಮಾಡಿದರೆ ಅವರ ಭವಿಷ್ಯಕ್ಕೆ ಮಾರಕ.! ಹಾಗಾಗಿ, ಮಕ್ಕಳು ಒಳ್ಳೆಯದಕ್ಕೆ ಇಂಟರ್‌ನೆಟ್ ಬಳಕೆ ಮಾಡುವಂತೆ ನಾವು ನೋಡಿಕೊಳ್ಳಬೇಕು.!!

ಹಾಗಾದರೆ, ಮಕ್ಕಳು ಯಾವ ವಿಷಯದ ಬಗ್ಗೆ ಇಂಟರ್‌ನೆಟ್ ಬಳಕೆ ಮಾಡುತ್ತಿದ್ದಾರೆ ಎಂಬುದನ್ನು ಹೇಗೆ ತಿಳಿಯುವುದು?. ಕಷ್ಟ ಅಲ್ಲವೇ?..ಆದರೆ, ಚಿಂತೆ ಬಿಡಿ. ನಿಮ್ಮ ಮಕ್ಕಳು ಅವರ ಮೊಬೈಲ್‌ನಲ್ಲಿ ಹೇಗೆಲ್ಲಾ ಇಂಟರ್‌ನೆಟ್ ಬಳಕೆ ಮಾಡುತ್ತಾರೆ ಎಂಬುದನ್ನು ನಿಮ್ಮ ಮೊಬೈಲ್‌ನಲ್ಲಿ ನೋಡಬಹುದು.!

ನಿಮ್ಮ ಮಕ್ಕಳು ಅವರ ಮೊಬೈಲ್‌ನಲ್ಲಿ ಹೇಗೆಲ್ಲಾ ಇಂಟರ್‌ನೆಟ್ ಬಳಕೆ ಮಾಡುತ್ತಾರೆ ಎಂಬುದನ್ನು ನೋಡುವುದಕ್ಕಾಗಿಯೇ ಆಪ್‌ ಇದ್ದು, ಅದು ಯಾವ ಆಪ್? ಹೇಗೆ ಕಾರ್ಯನಿರ್ವಹಣೆ ನೀಡುತ್ತದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಯಾಮಿಲಿ ಲಿಂಕ್‌ ಆಪ್!! (familylink)

ಫ್ಯಾಮಿಲಿ ಲಿಂಕ್‌ ಆಪ್!! (familylink)

ಮಕ್ಕಳು ಅವರ ಮೊಬೈಲ್‌ನಲ್ಲಿ ಹೇಗೆಲ್ಲಾ ಇಂಟರ್‌ನೆಟ್ ಬಳಕೆ ಮಾಡುತ್ತಾರೆ ಎಂಬುದನ್ನು ಪೋಷಕರು ತಿಳಿಯುದಕ್ಕಾಗಿ ಫ್ಯಾಮಿಲಿ ಲಿಂಕ್‌ ಎನ್ನುವ ಆಪ್ ಅಭಿವೃದ್ದಿಯಾಗಿದೆ. ಆಪ್‌ನಲ್ಲಿ ಮಕ್ಕಳ ಮೇಲೆ ನಿಗಾವಹಿಸಲು ಹಲವು ಸೌಲಭ್ಯಗಳನ್ನು ಇದರಲ್ಲಿ ಕಲ್ಪಿಸಲಾಗಿದ್ದು, ನಿಮ್ಮ ಮೊಬೈಲ್‌ನಿಂದಲೇ ಮಕ್ಕಳ ಮೊಬೈಲ್ ನಿಯಂತ್ರಿಸಬಹುದು.!!

ಹೇಗೆ ಕಾರ್ಯನಿರ್ವಹಿಸುತ್ತದೆ ಆಪ್?

ಹೇಗೆ ಕಾರ್ಯನಿರ್ವಹಿಸುತ್ತದೆ ಆಪ್?

ಮಕ್ಕಳು ಮೊಬೈಲ್‌ನಲ್ಲಿ ಯಾವುದಾದರೂ ವಿಡಿಯೋ ನೋಡುತ್ತಿದ್ದರೆ, ಅಥವಾ ಆನ್‌ಲೈನ್‌ ಗೇಮ್‌ಗಳಲ್ಲಿಯೇ ಕಾಲ ಕಳೆಯುತ್ತಿದ್ದರೆ ನೀವೆ ಅವುಗಳನ್ನು ನಿಮ್ಮ ಮೊಬೈಲ್‌ನಿಂದಲೇ ಸ್ಥಗಿತಗೊಳಿಸಬಹುದು.!!ಮಕ್ಕಳು ಮಲಗುವ ಮತ್ತು ಓದುವ ವೇಳೆಯಲ್ಲಿ ಅವರ ಬಳಿ ಇರುವ ಸ್ಮಾರ್ಟ್‌ಫೋನ್‌ ಅನ್ನು ನೀವೆ ಸ್ವಿಚ್‌ಆಫ್‌ ಮಾಡಬಹುದು!!

ಆಪ್ ಬಳಕೆ ಹೇಗೆ?

ಆಪ್ ಬಳಕೆ ಹೇಗೆ?

ಫ್ಯಾಮಿಲಿ ಲಿಂಕ್‌ ಆಪ್ ತೆರೆದು ಮಕ್ಕಳಿಗಾಗಿ ಗೂಗಲ್‌ ಅಕೌಂಟ್ ರಚಿಸಿಕೊಳ್ಳಬೇಕು. ಅಂದರೆ, ಅವರ ಹೆಸರು ಮತ್ತು ಜನ್ಮದಿನಾಂಕ ದಾಖಲಿಸಿ ಖಾತೆ ತೆರೆಯಬೇಕು. ನಂತರ ಮಕ್ಕಳು ಆಂಡ್ರಾಯ್ಡ್ ಡಿವೈಸ್‌ನಲ್ಲಿ ಲಾಗಿನ್ ಆದ ಕೂಡಲೇ, ಅದರ ಮಾಹಿತಿ ಪೋಷಕರ ಇ-ಮೇಲ್‌ಗೆ ಬರುತ್ತದೆ.!!

ಸಂಪೂರ್ಣ ಮಾಹಿತಿ ಲಭಿಸುತ್ತದೆ!!

ಸಂಪೂರ್ಣ ಮಾಹಿತಿ ಲಭಿಸುತ್ತದೆ!!

ಲಾಗಿನ್ ಆದ ನಂತರ ನಿಮ್ಮ ಮಗುವಿನ ಪ್ರೊಪೈಲ್ ಮೇಲೆ ಕ್ಲಿಕ್‌ ಮಾಡಿದರೆ, ನಿಮ್ಮ ಮಕ್ಕಳು ಇಂಟರ್‌ನೆಟ್‌ನಲ್ಲಿ ಏನು ಮಾಡುತ್ತಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ನಿಮಗೆ ದೊರೆಯುತ್ತದೆ. ಯಾವ ಚಿತ್ರ, ವಿಡಿಯೊ ಡೌನ್‌ಲೋಡ್‌ ಮಾಡುತ್ತಿದ್ದಾರೆ ಮತ್ತು ಅವರು ಪ್ರಸ್ತುತ ಎಲ್ಲಿದ್ದಾರೆ ಎಂಬುದನ್ನು ನೋಡಬಹುದು.!!

ಕನಿಷ್ಠ 13 ವರ್ಷ ಆಗಿರಬೇಕು!!

ಕನಿಷ್ಠ 13 ವರ್ಷ ಆಗಿರಬೇಕು!!

ಫ್ಯಾಮಿಲಿ ಲಿಂಕ್‌ಗೆ ಮಕ್ಕಳನ್ನು ಸೇರ್ಪಡೆ ಮಾಡಬೇಕಾದರೆ ಮಕ್ಕಳಿಗೆ ಕನಿಷ್ಠ 13 ವರ್ಷ ಆಗಿರಬೇಕು. ಮಕ್ಕಳ ಆನ್‌ಲೈನ್‌ ಖಾಸಗೀತನ ರಕ್ಷಣೆ ಕಾಯ್ದೆ ಅನುಸಾರ 13 ವರ್ಷದೊಳಗಿನ ಮಕ್ಕಳ ಮಾಹಿತಿಯನ್ನು ಅಥವಾ ದತ್ತಾಂಶವನ್ನು ಒಪ್ಪಿಗೆ ಇಲ್ಲದೆಯೇ ಸಂಗ್ರಹಿಸುವಂತಿಲ್ಲ.

Nokia 3, 5, 6 Android Smartphones !! ನೋಕಿಯಾ ಆಂಡ್ರಾಯ್ಡ್ ಫೋನ್‌ ಬಗೆಗೆ ಪೂರ್ಣ ಮಾಹಿತಿ..ಒಂದೇ ವಿಡಿಯೋದಲ್ಲಿ!!
ಡೌನ್‌ಲೋಡ್ ಮಾಡುವುದು ಹೇಗೆ?

ಡೌನ್‌ಲೋಡ್ ಮಾಡುವುದು ಹೇಗೆ?

ಈ ಆಪ್‌ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು ಸ್ವಲ್ಪ ಕಿರಿಕಿರಿಯಾಗಲಿದ್ದು, https://families.google.com/familylink ಲಿಂಕ್‌ನಿಂದ ಗೂಗಲ್‌ ವೆಬ್‌ಪೇಜ್‌ನಿಂದ ಇದಕ್ಕೆ ಸಂಬಂಧಿಸಿದ ಇ-ಮೇಲ್‌ ಲಿಂಕ್‌ ಬಳಕೆದಾರನಿಗೆ ಬರಬೇಕು. ನಂತರವೇ ಆಪ್‌ ಅನ್ನು ಡೌನ್‌ಲೋಡ್ ಮಾಬಹುದು.

ಓದಿರಿ:ಟೆಲಿಕಾಂಗೆ ಆದ ನಷ್ಟಕ್ಕೆ ಜನರಿಗೂ, ಜಿಯೋಗೂ ಚುಚ್ಚಿದ ಸರ್ಕಾರ!!..ಮೊಬೈಲ್ ಬಿಲ್ ಏರಿಕೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
After launching last month for Android users, Google new Family Link app today.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot