ಗೂಗಲ್‌ ಮ್ಯಾಪ್‌ನಲ್ಲಿ ಡಾರ್ಕ್ ಮೋಡ್ ಅನ್ನು ಆನ್ ಮಾಡುವುದು ಹೇಗೆ ?

|

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್‌ ಬಳಕೆದಾರರು ಡಾರ್ಕ್‌ಮೋಡ್ ಫೀಚರ್ಸ್‌ ಅನ್ನು ಬಳಸುತ್ತಿದ್ದಾರೆ. ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಬೆಳಕಿನ ಬ್ರೈಟ್‌ನೆಸ್‌ ಅನ್ನು ಕಡಿಮೆ ಮಾಡುವ ಮೂಲಕ ಕಣ್ಣುಗಳ ಮೇಲೆ ಬೀರುವ ದುಷ್ಪರಿಣಾಮ ತಪ್ಪಿಸಲು ಇದು ಸಹಾಕಾರಿಯಾಗಿದೆ. ಇದೇ ಕಾರಣಕ್ಕೆ ಡಾರ್ಕ್‌ಮೋಡ್‌ ಫೀಚರ್ಸ್‌ ಅನ್ನು ಎಲ್ಲಾ ಪ್ರಮುಖ ಅಪ್ಲಿಕೇಶನ್‌ಗಳು ಅಳವಡಿಸಿಕೊಳ್ಳುತ್ತಿವೆ. ಆ ಪೈಕಿ ಇದೀಗ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ನ ಸೇವೆಯಾದ ಗೂಗಲ್‌ ಮ್ಯಾಪ್‌ ಕೂಡ ಸಹ ಡಾರ್ಕ್‌ ಮೋಡ್ ಅಳವಡಿಸಿಕೊಂಡಿದ್ದು, ಇನ್ಮುಂದೆ ಡಾರ್ಕ್‌ಮೋಡ್‌ನಲ್ಲಿ ಲಭ್ಯವಾಗಲಿದೆ.

ಡಾರ್ಕ್‌ಮೋಡ್‌

ಹೌದು, ಇತ್ತೀಚಿಗೆ ಎಲ್ಲಾ ಅಪ್ಲಿಕೇಶನ್‌ಗಳು ಡಾರ್ಕ್‌ಮೋಡ್‌ ಅನ್ನು ಅಳವಡಿಸಿಕೊಳ್ಳುತ್ತಿದೆ. ಇದೀಗ ಗೂಗಲ್‌ ಮ್ಯಾಪ್‌ನಲ್ಲಿಯೂ ಸಹ ಡಾರ್ಕ್‌ಮೋಡ್‌ ಫೀಚರ್ಸ್‌ ಲಭ್ಯವಾಗಲಿದೆ. ಗೂಗಲ್‌ ತನ್ನ ಸೇವೆಯಾದ ಗೂಗಲ್‌ ಮ್ಯಾಪ್‌ನಲ್ಲಿ ಡಾರ್ಕ್‌ಮೋಡ್ ರೋಲ್ ಔಟ್ ಮಾಡಿದೆ. ಸದ್ಯ ಆಂಡ್ರಾಯ್ಡ್‌ನಲ್ಲಿ ಗೂಗಲ್ ಮ್ಯಾಪ್‌ ಡಾರ್ಕ್ ಮೋಡ್ ಅನ್ನು ಹೊರತರುತ್ತಿದೆ ಎಂದು ಗೂಗಲ್ ಇಂದು ಪ್ರಕಟಿಸಿದೆ. ಇದೀಗ ಕೆಲವು ಆಯ್ದ ಬಳಕೆದಾರರು ಈ ಫೀಚರ್ಸ್‌ ಅನ್ನು ಸ್ವೀಕರಿಸಿದ್ದಾರೆ. ಡಾರ್ಕ್ ಮೋಡ್ ಶೀಘ್ರದಲ್ಲೇ ಜಾಗತಿಕವಾಗಿ ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ. ಹಾಗಾದರೇ ಗೂಗಲ್‌ ಮ್ಯಾಪ್‌ನಲ್ಲಿ ಡಾರ್ಕ್‌ ಮೋಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಅಪ್ಲಿಕೇಶನ್‌

ಇದು ಗೂಗಲ್ ಮ್ಯಾಪ್‌ನ ಅಧಿಕೃತ ಡಾರ್ಕ್ ಮೋಡ್ ಆಗಿದ್ದು ಇದು ಅಪ್ಲಿಕೇಶನ್‌ನ ಥೀಮ್ ಅನ್ನು ಬೆಳಕಿನಿಂದ ಕತ್ತಲಿಗೆ ತಿರುಗಿಸುತ್ತದೆ. ಗೂಗಲ್ ಮ್ಯಾಪ್‌ ಈಗಾಗಲೇ ಸ್ವಲ್ಪ ಗಾಡವಾದ ಮೋಡ್ ಅನ್ನು ಹೊಂದಿದ್ದು ಅದು ರಾತ್ರಿಯಲ್ಲಿ ಮತ್ತು ಕಡಿಮೆ-ಬೆಳಕಿನ ಪ್ರದೇಶಗಳಲ್ಲಿ ಸಂಚರಿಸುವ ಸಮಯದಲ್ಲಿ ಆನ್ ಆಗುತ್ತದೆ. ಗೂಗಲ್ ಮ್ಯಾಪ್‌ನಲ್ಲಿನ ಡಾರ್ಕ್ ಮೋಡ್ ಅಪ್ಲಿಕೇಶನ್‌ನಲ್ಲಿನ ವಿಭಿನ್ನ ಅಂಶಗಳನ್ನು ಬೂದುಬಣ್ಣದ ವಿವಿಧ ಛಾಯೆಗಳಿಗೆ ತಿರುಗಿಸುತ್ತದೆ. ಅಲ್ಲದೆ ಬೂದು ಬಣ್ಣದ ಹಗುರವಾದ ನೆರಳಿನಲ್ಲಿ ರಸ್ತೆ ಹೆಸರುಗಳನ್ನು ಸಹ ಹೈಲೈಟ್ ಮಾಡಲಾಗಿದೆ.

ಡಾರ್ಕ್ ಮೋಡ್

ಗೂಗಲ್‌ಮ್ಯಾಪ್‌ನಲ್ಲಿ ಡಾರ್ಕ್ ಮೋಡ್ ಅನ್ನು ಆನ್ ಮಾಡುವುದು ಹೇಗೆ ?

ಹಂತ:1 ಗೂಗಲ್‌ಮ್ಯಾಪ್‌ನಲ್ಲಿ ಸೆಟ್ಟಿಂಗ್ಸ್‌ ಮೆನು ತೆರೆಯಿರಿ ಮತ್ತು ‘ಥೀಮ್' ಆಯ್ಕೆ ಮಾಡಲು ಕೆಳಗೆ ಸ್ಕ್ರಾಲ್ ಮಾಡಿ

ಹಂತ:2 ಇಲ್ಲಿ, ಡಾರ್ಕ್ ಮೋಡ್‌ಗೆ ಬದಲಾಯಿಸಲು "Always in Dark Theme" ಆಯ್ಕೆಮಾಡಿ.

ಹಂತ:3 ನೀವು ಪೂರ್ಣಗೊಳಿಸಿದಾಗ ಹಿಂತಿರುಗಲು "Always in Light Theme" ಆಯ್ಕೆ ಮಾಡಬಹುದು.

ಡಾರ್ಕ್ ಮೋಡ್

ಇನ್ನು ನಿಮ್ಮ ಡಿವೈಸ್‌ನ ಥೀಮ್‌ನಂತೆಯೇ ಡಾರ್ಕ್ ಮೋಡ್ ಅನ್ನು ಹೊಂದಿಸುವ ಆಯ್ಕೆಯೂ ಇದೆ. ನೀವು ಈ ಆಯ್ಕೆಯನ್ನು ಆರಿಸಿದರೆ ನಿಮ್ಮ ಡಿವೈಸ್‌ನ ಸಿಸ್ಟಮ್ ಥೀಮ್ ಅನ್ನು ಡಾರ್ಕ್‌ ಆಗಿ ಹೊಂದಿಸಿದಾಗಲೆಲ್ಲಾ Google ಮ್ಯಾಪ್‌ಗಳಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಲಾಗುತ್ತದೆ. ನಿಮ್ಮ ಸಾಧನವು ಬೆಳಕಿನ ಥೀಮ್‌ಗೆ ಹಿಂತಿರುಗಿದಾಗ ಅದು ಸ್ವಯಂಚಾಲಿತವಾಗಿ ಲೈಟ್ ಮೋಡ್‌ಗೆ ಬದಲಾಗುತ್ತದೆ. ಇದಲ್ಲದೆ ಡಾರ್ಕ್ ಮೋಡ್ ಜೊತೆಗೆ, ಗೂಗಲ್ ಆಂಡ್ರಾಯ್ಡ್‌ಗಾಗಿ ಇನ್ನೂ ಐದು ಫೀಚರ್ಸ್‌ಗಳನ್ನು ಸಹ ಗೂಗಲ್‌ ಘೋಷಿಸಿದೆ. ಸಂದೇಶಗಳಲ್ಲಿ ವೇಳಾಪಟ್ಟಿಯ ವ್ಯಾಪಕ ರೋಲ್ ಔಟ್, ಟಾಕ್‌ಬ್ಯಾಕ್‌ನ ಹೊಸ ಆವೃತ್ತಿ, ಪಾಸ್‌ವರ್ಡ್ ಚೆಕಪ್ ಫೀಚರ್ಸ್‌, ಅಸಿಸ್ಟೆಂಟ್‌ ಅಪ್ಡೇಟ್‌ ಮತ್ತು ಆಂಡ್ರಾಯ್ಡ್ ಆಟೋಗಾಗಿ ಹೊಸ ಫೀಚರ್ಸ್‌ಗಳನ್ನು ಸಹ ಪರಿಚಯಿಸಿದೆ.

Most Read Articles
Best Mobiles in India

English summary
Google Maps Now Offers Dark Mode On Android.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X