ಗೂಗಲ್‌ ಪೇ. ಪೇಟಿಎಂನಿಂದ ವಂಚಕರು ಹೇಗೆ ಮೋಸ ಮಾಡ್ತಾರೆ ಗೊತ್ತಾ..?

By Gizbot Bureau
|

ಡಿಜಿಟಲ್ ಹಣದ ವಹಿವಾಟು ಹೆಚ್ಚಾದಂತೆ ಆನ್‌ಲೈನ್ ಬ್ಯಾಂಕಿಂಗ್ ವಂಚನೆಯ ಪ್ರಕರಣಗಳೂ ಹೆಚ್ಚಾಗುತ್ತಿವೆ. ವಂಚಕರು ವ್ಯಕ್ತಿಗಳನ್ನು ಮೋಸಗೊಳಿಸಲು ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. Paytm ಅಥವಾ Google Pay ಮೂಲಕ ಹಣ ವಿನಂತಿಸುವುದು ಈಗ ಹೆಚ್ಚಾಗಿದೆ. ಗ್ರಾಹಕರು ಹಣವನ್ನು ಕಳೆದುಕೊಳ್ಳುವ ಸಾಮಾನ್ಯ ಜಾಗವಾಗಿ ಯುಪಿಐ ಆಧಾರಿತ ಪೇಮೆಂಟ್‌ ಪ್ಲಾಟ್‌ಫಾರ್ಮ್‌ ಮಾರ್ಪಟ್ಟಿದೆ.

ಗೂಗಲ್‌ ಪೇ. ಪೇಟಿಎಂನಿಂದ ವಂಚಕರು ಹೇಗೆ ಮೋಸ ಮಾಡ್ತಾರೆ ಗೊತ್ತಾ..?

ಯುಪಿಐ ವಂಚನೆ ಮಾಡುವ ಸಂದರ್ಭದಲ್ಲಿ ವಂಚಕರು ಬೇರೆಯವರ ಮೊಬೈಲ್ ಸಾಧನಕ್ಕೆ ರಿಮೋಟ್‌ ಅಕ್ಸೆಸ್‌ ಪಡೆಯಲು ಪ್ರಯತ್ನಿಸುತ್ತಾರೆ. ಇದರಿಂದ ಅವರು ಬ್ಯಾಂಕ್ ವ್ಯವಹಾರಗಳನ್ನು ದೂರಲ್ಲಿಯೇ ಕುಳಿತು ಮಾಡಬಹುದು. ವಂಚಕರು ಹೇಗೆ ಕಾರ್ಯನಿರ್ವಹಿಸುತ್ತಾರೆ ಮತ್ತು ಜನರನ್ನು ಹೇಗೆ ಮೋಸಗೊಳಿಸುತ್ತಾರೆ ಎಂಬ ಕಾರ್ಯಾಚರಣೆ ತಿಳಿದುಕೊಳ್ಳುವುದರಿಂದ ವಂಚನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಡೆಯಬಹುದು.

ಯುಪಿಐ ಆಧಾರಿತ ವಂಚನೆಗಳು ಹೇಗೆ ನಡೆಯುತ್ತವೆ ಎಂಬುದರ ಸಂಕ್ಷಿಪ್ತ ವಿವರಣೆ ಕೆಳಗೆ ನೀಡಲಾಗಿದೆ. ಮೋಡಸ್ ಆಪರೇಷನ್‌ ಸಹಾಯದಿಂದ ವಂಚಕ ಯುಪಿಐ ಸೇರಿ ಯಾವುದೇ ಮೊಬೈಲ್ ಬ್ಯಾಂಕಿಂಗ್ ಮತ್ತು ಪಾವತಿ ಸಂಬಂಧಿ ಅಪ್ಲಿಕೇಶನ್‌ಗಳ ಮೂಲಕ ವಹಿವಾಟು ನಡೆಸಬಹುದು.

* ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್‌ಸ್ಟೋರ್‌ನಿಂದ ಎನಿಡೆಸ್ಕ್ ಅಥವಾ ಟೀಮ್‌ವೀವರ್‌ನಂತಹ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡುವಂತೆ ವಂಚಕರು ಗ್ರಾಹಕರಿಗೆ ಕೇಳುತ್ತಾರೆ. ಇತರ ಬಳಕೆದಾರರ ಮೊಬೈಲ್‌ಗೆ ರಿಮೋಟ್‌ ಅಕ್ಸೆಸ್‌ ಪಡೆಯಲು ಈ ಅಪ್ಲಿಕೇಶನ್‌ಗಳು ಸಹಾಯ ಮಾಡುತ್ತವೆ.

* ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ರಿಮೋಟ್‌ ಅಕ್ಸೆಸ್‌ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ ನಂತರ, ಗ್ರಾಹಕರ ಮೊಬೈಲ್‌ನಲ್ಲಿ 9-ಅಂಕಿಯ ಅಪ್ಲಿಕೇಶನ್ ಕೋಡ್ ಸೃಷ್ಟಿಯಾಗುತ್ತದೆ. ವಂಚಕನು ಈ ಕೋಡ್‌ನ್ನು ಹಂಚಿಕೊಳ್ಳಲು ಗ್ರಾಹಕರನ್ನು ಕೇಳುತ್ತಾನೆ.

* ಈ 9 ಅಂಕಿಯ ಸಂಖ್ಯೆಯನ್ನು ವಂಚಕನು ತನ್ನ ಮೊಬೈಲ್‌ನಲ್ಲಿರುವ ಅಪ್ಲಿಕೇಷನ್‌ನಲ್ಲಿ ಹಾಕುತ್ತಾನೆ. ನಂತರ ಇತರ ಅಪ್ಲಿಕೇಶನ್‌ಗಳನ್ನು ಬಳಸುವಾಗ ಅಗತ್ಯವಿರುವ ಕೆಲವು ಅನುಮತಿಗಳನ್ನು ನೀಡುವಂತೆ ಗ್ರಾಹಕರನ್ನು ಕೇಳುತ್ತಾರೆ.

* ಬಳಕೆದಾರರು ಅನುಮತಿ ನೀಡುತ್ತಿದ್ದಂತೆ ವಂಚಕ ಗ್ರಾಹಕರ ಸಾಧನಕ್ಕೆ ಪ್ರವೇಶ ಪಡೆಯುತ್ತಾನೆ.

* ಈ ರೀತಿಯಾಗಿ ಗ್ರಾಹಕರಿಂದ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ರುಜುವಾತುಗಳನ್ನು ವಂಚಕ ಪಡೆಯುತ್ತಾನೆ. ಮತ್ತು ಗ್ರಾಹಕರ ಸಾಧನದಲ್ಲಿ ಈಗಾಗಲೇ ಸ್ಥಾಪಿಸಲಾದ ಮೊಬೈಲ್ ಅಪ್ಲಿಕೇಶನ್ ಮೂಲಕ ವ್ಯವಹಾರ ಪ್ರಾರಂಭಿಸುತ್ತಾನೆ.

Most Read Articles
Best Mobiles in India

English summary
Google Pay, Paytm Hacks: Here's How They Do It

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X