ಕನ್ನಡದಲ್ಲಿ ಗೂಗಲ್ ವಾಯ್ಸ್ ಸರ್ಚ್ ಮಾಡುವುದು ಹೇಗೆ?..ಏಕೆ ಉಪಯೋಗಿಸಲೇಬೇಕು?

ಕನ್ನಡದಲ್ಲಿಯೇ ಗೂಗಲ್ ವಾಯಿಸ್‌ ಸರ್ಚ್ ಮಾಡಬಹುದಾಗಿದ್ದು, ಇಂಟರ್‌ನೆಟ್‌ನಲ್ಲಿ ಪ್ರಾದೇಶಿಕ ಬಳಕೆಗೆ ಬಹು ಉಪಯೋಗಕಾರಿಯಾಗಿದೆ.!!

|

ಇಂಟರ್‌ನೆಟ್ ಪ್ರಪಂಚದ ದಿಗ್ಗಜ ಗೂಗಲ್ ತರುವಷ್ಟು ಹೊಸತನಗಳನ್ನು ಇನ್ನಾವ ಕಂಪೆನಿಯೂ ಸಹ ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ ಎನ್ನಬಹುದು.! ಪ್ರತಿದಿನವೂ ಹೊಸ ಹೊಸ ಅಪ್‌ಡೇಟ್ಸ್‌ಗಳನ್ನು ಹೊರತರುವ ಗೂಗಲ್ ಇದೀಗ, ಪ್ರಾದೇಶಿಕ ಭಾಷೆಗಳಲ್ಲಿಯೂ ವಾಯಿಸ್ ಸರ್ಚ್ ಮಾಡಬಹುದಾದ ಆಯ್ಕೆ ನೀಡಿದೆ.!!

ಹಾಗಾಗಿ, ನಾವು ಇನ್ನು ಕನ್ನಡದಲ್ಲಿಯೇ ಗೂಗಲ್ ವಾಯಿಸ್‌ ಸರ್ಚ್ ಮಾಡಬಹುದಾಗಿದ್ದು, ಇಂಟರ್‌ನೆಟ್‌ನಲ್ಲಿ ಪ್ರಾದೇಶಿಕ ಬಳಕೆಗೆ ಬಹು ಉಪಯೋಗಕಾರಿಯಾಗಿದೆ.!! ಹಾಗಾದರೆ, ಕನ್ನಡದಲ್ಲಿಯೇ ಗೂಗಲ್ ವಾಯಿಸ್ ಸರ್ಚ್ ಆಯ್ಕೆ ಮಾಡುವುದು ಹೇಗೆ? ಯಾವ ಯಾವ ಭಾಷೆಗಳಿಗೆ ಈ ಆಯ್ಕೆ ಲಭ್ಯ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

30 ಭಾಷೆಗಳಲ್ಲಿ  ಗೂಗಲ್ ವಾಯಿಸ್ ಲಭ್ಯ.!!

30 ಭಾಷೆಗಳಲ್ಲಿ ಗೂಗಲ್ ವಾಯಿಸ್ ಲಭ್ಯ.!!

ಗೂಗಲ್ ವಾಯಿಸ್ ಸರ್ಚ್ ಭಾರತದ 30 ಪ್ರಾತೀಯ ಭಾಷೆಗಳಲ್ಲಿ ಲಭ್ಯವಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ ಉತ್ತರ ಭಾರತದ ಹಲವು ಭಾಷೆಗಳಿಗೆ ಈ ಆಯ್ಕೆ ನೀಡಲಾಗಿದೆ. ಈ ಮೊದಲು ಇಂಗ್ಲೀಷ್ ಮತ್ತು ಹಿಂದೆಗೆ ಮಾತ್ರ ಈ ಸೇವೆ ಲಭ್ಯವಿತ್ತು.!!

ಇಂಟರ್‌ನೆಟ್‌ನಲ್ಲಿ ಇನ್ನು ನಮ್ಮ ಭಾಷೆ!!

ಇಂಟರ್‌ನೆಟ್‌ನಲ್ಲಿ ಇನ್ನು ನಮ್ಮ ಭಾಷೆ!!

ಕನ್ನಡದಲ್ಲಿ ಅಂತರ್ಜಾಲ ವಿಷಯಗಳನ್ನು ತಿಳಿದುಕೊಳ್ಳಲು ಇಂಗ್ಲೀಷ್ ಅಡ್ಡಿಯಾಗಿಯೇ ಇತ್ತು. ಆದರೆ, ಇನ್ಮುಂದೆ ವಾಯಿಸ್ ಸರ್ಚ್ ಸೇವೆಯ ಮೂಲಕ ಕನ್ನಡ ವಿಷಯಗಳನ್ನು ಇಂಟರ್‌ನೆಟ್‌ನಲ್ಲಿಬಹಳ ಸುಲಭವಾಗಿ ಹುಡುಕಬಹುದು.! ಇದರಿಂದ ಇಂಟರ್‌ನೆಟ್‌ನಲ್ಲಿ ಇನ್ನು ನಮ್ಮ ಭಾಷೆ ವಿಜೃಂಬಿಸುತ್ತದೆ.!!

ವಾಯಿಸ್ ಸರ್ಚ್ ಆಯ್ಕೆ ಹೇಗೆ?

ವಾಯಿಸ್ ಸರ್ಚ್ ಆಯ್ಕೆ ಹೇಗೆ?

ಗೂಗಲ್ ವಾಯಿಸ್ ಸರ್ಚ್ ಬಳಸಲು ಗೂಗಲ್ ಸೆಟ್ಟಿಂಗ್ಸ್ ತೆರೆದು ವಾಯಿಸ್ ಮೆನ್ಯೂವಿನಲ್ಲಿ ಕನ್ನಡ ಭಾಷೆಗೆ ಆಯ್ಕೆ ಬದಲಾಯಿಸಿಕೊಳ್ಳಬಹುದು. ಆಯ್ಕೆ ಬದಲಾಯಿಸಿಕೊಂಡ ನಂತರ ಗೂಗಲ್‌ನಲ್ಲಿ ಯಾವುದೇ ಕನ್ನಡ ಪದವನ್ನು ಹುಡುಕಿದರೂ ಸಹ ಆ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.!!

ಆಂಡ್ರಾಯ್ಡ್ ಮತ್ತು ಜೀ ಬೋರ್ಡ್‌ನಲ್ಲಿ ಲಭ್ಯ.!!

ಆಂಡ್ರಾಯ್ಡ್ ಮತ್ತು ಜೀ ಬೋರ್ಡ್‌ನಲ್ಲಿ ಲಭ್ಯ.!!

ಗೂಗಲ್ ವಾಯಿಸ್ ಸರ್ಚ್ ಸೇವೆಯೂ ಎಲ್ಲಾ ಆಂಡ್ರಾಯ್ಡ್ ಹಾಗೂ ಜೀ ಬೋರ್ಡ್ ಆಪ್‌ನಲ್ಲಿಯೂ ಕಾರ್ಯ ನಿರ್ವಹಿಸಲಿದೆ. ಹಾಗಾಗಿ, ಇನ್ನು ಕನ್ನಡದಲ್ಲಿ ಗೂಗಲ್ ವಾಯಿಸ್ ಸರ್ಚ್ ಬಳಸಿ ಇಂಟರ್‌ನೆಟ್‌ನಲ್ಲಿ ನಮ್ಮ ಭಾಷೆಯನ್ನು ಉಳಿಸಿ.!!

ರಹಸ್ಯ ಬಯಲು!!.ಭೂಮಿಯ ಮೇಲೆ ಜೀವಿಗಳ ಉಗಮ ಹೇಗಾಯಿತು ಗೊತ್ತಾ?!ರಹಸ್ಯ ಬಯಲು!!.ಭೂಮಿಯ ಮೇಲೆ ಜೀವಿಗಳ ಉಗಮ ಹೇಗಾಯಿತು ಗೊತ್ತಾ?!

Best Mobiles in India

English summary
Google’s new feature is available for both Gboard on Android as well as in Search through the Google App.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X