Subscribe to Gizbot

ಮೊಬೈಲ್ ಕಳೆದರೆ ತಕ್ಷಣವೇ ಗೂಗಲ್ ಬ್ಯಾಕಪ್ ಡೇಟಾ ತೆರೆಯಿರಿ!!..ಇಲ್ಲಾಂದ್ರೆ?

Written By:

ಇದು ಹೊಸದಾಗಿ ಬಂದಿರುವ ಮಾಹಿತಿ ಅಲ್ಲದಿರಬಹುದು. ಆದರೆ, ಬಹುತೇಕರಿಗೆ ಗೂಗಲ್ ಆಂಡ್ರಾಯ್ಡ್ ಬಳಕೆದಾರರ ಬ್ಯಾಕಪ್ ಡೇಟಾವನ್ನು ಆಟೋ ಡಿಲೀಟ್ ಮಾಡುವ ಆಯ್ಕೆಯನ್ನು ಹೊಂದಿದೆ.! ಹೌದು, ನಿಮ್ಮ ಫೋನ್ ಹೆಚ್ಚು ದಿನಗಳ ಕಾಲ ಇನ್‌ಆಕ್ಟಿವ್ ಆಗಿದ್ದರೆ, ನಿಮ್ಮ ಎಲ್ಲಾ ಡೇಟಾ ಡಿಲೀಟ್ ಆಗಲಿದೆ.!!

ಆಂಡ್ರಾಯ್ಡ್ ಪೊಲೀಸ್ ಸೂಚಿಸುವಂತೆ ನಿಮ್ಮೆಲ್ಲಾ ಬ್ಯಾಕಪ್‌ಗಳು ಗೂಗಲ್ ಡ್ರೈವ್‌ನಲ್ಲಿ ಸೇವ್ ಆಗಲಿದ್ದು, ಡ್ರೈವ್‌ನಲ್ಲಿ ಸೇವ್ ಆದ ಎಲ್ಲಾ ಬ್ಯಾಕಪ್‌ಗಳು ಕೂಡ ಸಮಯದ ಮಿತಿ ಹೊಂದಿದೆ.!! ಹಾಗಾದರೆ, ಫೋನ್ ಬಳಕೆ ಮಾಡದಿದ್ದರೆ ಎಷ್ಟು ದಿನಗಳಲ್ಲಿ ಬ್ಯಾಕಪ್ ಡೇಟಾ ಡಿಲೀಟ್ ಆಗಲಿದೆ?. ಒಮ್ಮೆ ಡಿಲೀಟ್ ಆದ ಡೇಟಾವನ್ನು ಮತ್ತೆ ಪಡೆಯಲು ಸಾಧ್ಯವೇ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎರಡು ತಿಂಗಳು ಮಾತ್ರ!!

ಎರಡು ತಿಂಗಳು ಮಾತ್ರ!!

ನಿಮ್ಮ ಫೋನ್ ಎರಡು ತಿಂಗಳಿಗಿಂತ ಹೆಚ್ಚು ಕಾಲ ಇನ್‌ಆಕ್ಟಿವ್ ಆಗಿದ್ದರೆ ನಿಮ್ಮ ಎಲ್ಲಾ ಬ್ಯಾಕಪ್ ಡೇಟಾ ಡಿಲೀಟ್ ಆಗಲಿದೆ.! ಈ ಬಗ್ಗೆ ನಿಮಗೆ ಯಾವುದೇ ಎಚ್ಚರಿಕೆ ಸಹ ಗೂಗಲ್‌ನಿಂದ ದೊರೆಯದೇ ಇರುವುದರಿಂದ ಹೆಚ್ಚು ಜನರಿಗೆ ಈ ಬಗ್ಗೆ ಮಾಹಿತಿ ತಿಳಿದಿಲ್ಲ.!!

ಕೌಂಟ್‌ಡೌನ್ ತೋರಿಸುತ್ತದೆ.!!

ಕೌಂಟ್‌ಡೌನ್ ತೋರಿಸುತ್ತದೆ.!!

ಎರಡು ತಿಂಗಳಿಗೆ ಡಿಲೀಟ್ ಆಗುವ ಡೇಟಾ ಬಗ್ಗೆ ಗೂಗಲ್ ಎರಡು ವಾರಗಳ ನಂತರ ಗೂಗಲ್ ಡ್ರೈವ್ ಬ್ಯಾಕಪ್ ಕೆಳಗೆ ಕೌಂಟ್‌ಡೌನ್ ತೋರಿಸುತ್ತದೆ.! ಅಂದರೆ, ನಿಮ್ಮ ಡೇಟಾ ಅಳಿಸಿಹೊಗುವ ದಿನಾಂಕವನ್ನು ತೋರಿಸುತ್ತದೆ.! ಈ ಸಮಯದಲ್ಲಿ ಆಂಡ್ರಾಯ್ಡ್ ಬಳಸಿದರೆ, ಆ ಮುಕ್ತಾಯ ದಿನಾಂಕವು ದೂರವಾಗುತ್ತದೆ.!!

ಶಾಶ್ವತವಾಗಿ ಅಳಿಸಹೋಗುತ್ತದೆ.!!!

ಶಾಶ್ವತವಾಗಿ ಅಳಿಸಹೋಗುತ್ತದೆ.!!!

ಸ್ಮಾರ್ಟ್‌ಪೋನ್ ಎರಡು ತಿಂಗಳಿಗಿಂತ ಹೆಚ್ಚು ಕಾಲ ಇನ್‌ಆಕ್ಟಿವ್ ಆದ ತಕ್ಷಣವೇ ಗೂಗಲ್ ಡ್ರೈವ್‌ನಲ್ಲಿ ಸೇವ್ ಆದ ತನ್ನಿಂತಾನಾಗೆಯೇ ಅಳಿಸಿಹೋಗುತ್ತದೆ.! ಒಮ್ಮೆ ಅಳಿಸಿಹೋದ ಡೇಟಾವನ್ನು ಯಾವುದೇ ಕಾರಣಕ್ಕೂ ಸಹ ವಾಪಸ್ ಪಡೆಯಲು ಸಾಧ್ಯವಿಲ್ಲ.!

ಮೊಬೈಲ್ ಕಳೆದಾಗ ಎಚ್ಚರಿಕೆಯಲ್ಲಿರಿ!!

ಮೊಬೈಲ್ ಕಳೆದಾಗ ಎಚ್ಚರಿಕೆಯಲ್ಲಿರಿ!!

ನಿಮ್ಮ ಮೊಬೈಲ್ ಅನ್ನು ನಿಮ್ಮ ಗೂಗಲ್ ಅಕೌಂಟ್‌ ಮೂಲಕ ಲಾಕ್ ಮಾಡಿ ಅವರಿಗೆ ಯಾವುದೇ ಡೇಟಾ ಸಿಗದಂತೆ ಎಚ್ಚರಿಗೆ ವಹಿಸಬಹುದು.!! ಆದರೆ, ಕೂಡಲೇ ನಿಮ್ಮೆಲ್ಲಾ ಡೇಟಾವನ್ನು ವಾಪಸ್ ತೆಗೆದುಕೊಳ್ಳುವುದನ್ನು ಮರೆಯಬೇಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The countdown begins after two weeks of inactivity.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot