ವಾಟ್ಸಾಪ್‌ನಲ್ಲಿ ಹಣ ಸೆಂಡ್ ಮಾಡುವುದು ಹೇಗೆ?

ವಾಟ್ಸಾಪ್‌ ಬಳಸಿಕೊಂಡು ಹಣ ಶೇರ್‌ ಮಾಡುವುದು, ಸ್ವೀಕರಿಸುವುದು, ವಿನಂತಿಸುವುದು ಹೇಗೆ ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

By Suneel
|

ಫ್ರೀಚಾರ್ಜ್(FreeCharge), ಇತ್ತೀಚಿನ ಪ್ರಖ್ಯಾತ ಮೊಬೈಲ್‌ನಲ್ಲಿ ಹಣ ಪಾವತಿ(Mobile Payments) ಮಾಡುವ ಅಪ್ಲಿಕೇಶನ್‌ ಆಗಿದೆ. ಅತಿ ಸರಳವಾಗಿ ಮೊಬೈಲ್‌ಗೆ ಆನ್‌ಲೈನ್‌ ರಿಚಾರ್ಜ್‌ ಮಾಡಿಕೊಳ್ಳುವ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಸಹ ಆಗಿದೆ. ಅಲ್ಲದೇ ಫ್ರೀಚಾರ್ಜ್(FreeCharge) ಇತ್ತೀಚೆಗೆ ವಾಟ್ಸಾಪ್‌ ಬಳಸಿಕೊಂಡು ಹಣ ಸೆಂಡ್ ಮಾಡುವ, ಸ್ವೀಕರಿಸುವ ಮತ್ತು ರಿಚಾರ್ಜ್‌ ಹಣ ವಿನಂತಿಸುವ ಫೀಚರ್ ಅನ್ನು ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಅಭಿವೃದ್ದಿಪಡಿಸಿದೆ.

'ವಾಟ್ಸಾಪ್'ನಲ್ಲಿ, ಫ್ರೀಚಾರ್ಜ್(FreeCharge) ಒಂದು ವಿಶೇಷ ಫೀಚರ್ ಆಗಿದ್ದು "ಫ್ರೀಚಾರ್ಜ್(FreeCharge)" ಆಂಡ್ರಾಯ್ಡ್‌ ಅಪ್ಲಿಕೇಶನ್‌ ಮತ್ತು ವಾಟ್ಸಾಪ್‌ ಬಳಸುವ ಬಳಕೆದಾರರು ಪ್ರಾಥಮಿಕವಾಗಿ ತಮ್ಮ ವಾಟ್ಸಾಪ್‌ ಸಂಪರ್ಕಗಳಿಗೆ ಹಣ ಶೇರ್‌ ಮಾಡಬಹುದಾಗಿದೆ. ವಾಟ್ಸಾಪ್‌ ಬಳಸಿಕೊಂಡು ಹಣ ಶೇರ್‌ ಮಾಡುವುದು, ಸ್ವೀಕರಿಸುವುದು, ವಿನಂತಿಸುವುದು ಹೇಗೆ ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

#1

#1

ಮೊದಲಿಗೆ ವಾಟ್ಸಾಪ್‌ ಮೂಲಕ ಹಣ ಶೇರ್‌ ಮಾಡುವ, ಸ್ವೀಕರಿಸುವ ಸೇವೆ ಹೊಂದಲು ಫ್ರೀಚಾರ್ಜ್ ಅಪ್ಲಿಕೇಶನ್‌ ಹೊಂದಿರಬೇಕು ಮತ್ತು ವಾಟ್ಸಾಪ್‌ ಬಳಸುತ್ತಿರಬೇಕು. ಅಲ್ಲದೇ ಫ್ರೀಚಾರ್ಜ್‌ ತನ್ನ ಅಧಿಕೃತ ವೈಬ್‌ಸೈಟ್‌ನಲ್ಲಿ " ಫ್ರೀಚಾರ್ಜ್‌ ಬಳಕೆದಾರರು ಅಕ್ಸೆಸಿಬಿಲಿಟಿ ಸೆಟ್ಟಿಂಗ್‌ನಲ್ಲಿ ಹಣಕಾಸಿನ ವರ್ಗಾವಣೆಯ ಟೆಕ್ಸ್ಟ್‌ ಅನ್ನು ಪತ್ತೆ ಮಾಡುವ ಫೀಚರ್‌ ಎನೇಬಲ್‌ ಮಾಡಿರಬೇಕು" ಎಂದು ಹೇಳಿದೆ. ಈ ಫೀಚರ್‌ ಅನ್ನು "Chat n Pay" ಎನ್ನಲಾಗಿದೆ. (Users need to enable FreeCharge in accessibility settings for the device, allowing it to detect texts involving financial exchange requests.)

#2

#2

ಮೊಬೈಲ್‌ನಲ್ಲಿ ಫ್ರೀಚಾರ್ಜ್ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಓಪನ್‌ ಮಾಡಿ " ಫ್ರೀಚಾರ್ಜ್‌ ಆನ್‌ ವಾಟ್ಸಾಪ್‌" (FreeeCharge on WhatsApp) ಆಯ್ಕೆಗೆ ಹೋಗಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#3

#3

ಎನೇಬಲ್‌ (Enable) ಮೇಲೆ ಕ್ಲಿಕ್‌ ಮಾಡಿ

#4

#4

ವಾಟ್ಸಾಪ್‌ ಓಪನ್‌ ಮಾಡಿ

#5

#5

ಫ್ರೀಚಾರ್ಜ್‌ ಮೂಲಕ ನೀವು ಸೆಂಡ್‌ ಮಾಡಬೇಕು ಎಂದುಕೊಂಡಿರುವ ಹಣವನ್ನು ಟೈಪ್‌ ಮಾಡಿ ನಂತರ ನೀವು ಸೆಂಡ್‌ ಮಾಡಬೇಕೋ, ಸ್ವೀಕರಿಸಬೇಕೋ, ವಿನಂತಿಸಬೇಕೋ ಎಂಬ ಫೀಚರ್‌ ಅನ್ನು ಆಯ್ಕೆ ಮಾಡಿ. ಉದಾಹರಣೆಗೆ: ವಾಟ್ಸಾಪ್‌ ಮೂಲಕ ಯಾರಿಗಾದರೂ ರೂ. 500 ರೀಚಾರ್ಜ್ ಹಣ ಕಳುಹಿಸಬೇಕು ಎಂದರೆ ವಾಟ್ಸಾಪ್‌ನಲ್ಲಿ ಅವರ ಕಾಂಟ್ಯಾಕ್ಟ್‌ ಚಾಟ್‌ ಓಪನ್‌ ಮಾಡಿ 500FC ಎಂದು ಟೈಪಿಸಿ ಟೆಕ್ಸ್ಟ್‌ ಅನ್ನು ಸೆಂಡ್‌ ಮಾಡಿ. ತಕ್ಷಣ ಫ್ರೀಚಾರ್ಜ್‌ ಆಪ್‌ ನಿಮಗೆ Send, reguest or recharge ಆಯ್ಕೆಗಳನ್ನು ತೋರಿಸುತ್ತದೆ. ಆಗ Send ಅನ್ನು ಟ್ಯಾಪ್‌ ಮಾಡಿ ಹಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

#6

#6

"ಫ್ರೀಚಾರ್ಜ್‌ 25 ದಶಲಕ್ಷ ಬಳಕೆದಾರರನ್ನು ಹೊಂದಿದ್ದು, ಪ್ರತಿದಿನ 1 ದಶಲಕ್ಷ ಬಳಕೆದಾರರು ಹಣ ವರ್ಗಾವಣೆಗಾಗಿ ಬಳಸುತ್ತಿದ್ದಾರೆ" ಎಂದು ಫ್ರೀಚಾರ್ಜ್ ಹೇಳಿದೆ. ಅಲ್ಲದೇ ಕಂಪನಿ 2016 ಅಂತ್ಯದ ವೇಳೆಗೆ 7 ಪಟ್ಟು ಅಭಿವೃದ್ದಿಯನ್ನು ಮಾಡುವ ಉದ್ದೇಶ ಹೊಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here is how to send money on whatsapp. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X