ಯೂಟ್ಯೂಬ್‌ನಲ್ಲಿ ಬೇಡದ ವಿಡಿಯೋ ಬರುತ್ತಿವಿಯೇ ಚಿಂತೆ ಬೇಡ..! ಹೇಗೆ ಅಂತೀರಾ..?

By Gizbot Bureau
|

ನೀವು ಏನೋ ನೋಡಲು ಯೂಟ್ಯೂಬ್‌ ಆಪ್‌ ಒಪನ್ ಮಾಡುತ್ತೀರಿ. ಆಗ, ನೀವು ಗಮನಿಸಿರಬಹುದು ನಿಮಗೆ ಯೂಟ್ಯೂಬ್‌ ಪ್ರಾಣಿಗಳು, ಸವಾಲುಗಳಂಥ ಒಂದಿಷ್ಟು ವಿಡಿಯೋಗಳನ್ನು ನೀಡುತ್ತಿತ್ತು. ಇದು ಹೇಗಿರುತ್ತೆ ಎಂದರೆ ನೀವು ಯಾವತ್ತೂ ಅಂತಹ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಹುಡುಕಿರಲ್ಲ. ಆದರೂ, ನಿಮಗೆ ವಿಡಿಯೋಗಳು ಕಾಣುತ್ತಿದ್ದವು. ಸದ್ಯ, ಯೂಟ್ಯೂಬ್‌ ಒಂದಿಷ್ಟು ಅಪ್‌ಡೇಟ್‌ಗಳ ಮೂಲಕ ಹೊಸ ಫೀಚರ್‌ ಪಡೆದಿದ್ದು, ಬಳಕೆದಾರರು ತಮ್ಮ ಯೂಟ್ಯೂಬ್‌ ಹೋಮ್‌ ಪೇಜ್‌ ಮತ್ತು ವಿಡಿಯೋಸ್‌ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಬಹುದಾಗಿದೆ. ಇದಕ್ಕಂತಾನೇ ಯೂಟ್ಯೂಬ್‌ ಆಪ್‌ನ ಸೆಟ್ಟಿಂಗ್ಸ್‌ನಲ್ಲಿ ಫೀಚರ್‌ ಸೇರಿಸಿದ್ದು, ನಿಮ್ಮ ಅಗತ್ಯಕ್ಕೆ ತಕ್ಕಂತೆ ಯೂಟ್ಯೂಬ್‌ನ್ನು ವೈಯಕ್ತಿಕರಿಸಬಹುದಾಗಿದೆ.

ಯೂಟ್ಯೂಬ್‌ನಲ್ಲಿ ಬೇಡದ ವಿಡಿಯೋ ಬರುತ್ತಿವಿಯೇ ಚಿಂತೆ ಬೇಡ..! ಹೇಗೆ ಅಂತೀರಾ..?

ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ..! ಮುಂದೆ ನಾವು ತಿಳಿಸಿದ ಹಂತಗಳನ್ನು ಅನುಸರಿಸಿದ್ರೆ ಸಾಕು, ಅದಕ್ಕಿಂತ ಮೊದಲು ನಿಮ್ಮ ಬಳಿ ಇತ್ತೀಚಿನ ಯೂಟ್ಯೂಬ್‌ ಆಪ್‌ನ ಆವೃತ್ತಿ ಮತ್ತು ಉತ್ತಮವಾದ ಇಂಟರ್‌ನೆಟ್‌ ಸಂಪರ್ಕವಿರಬೇಕು. ಆಗಿದ್ರೆ.. ಅಗತ್ಯವಿಲ್ಲದ ವಿಡಿಯೋ ಶಿಫಾರಸುಗಳನ್ನು ನಿಲ್ಲಿಸಲು ಏನು ಮಾಡಬೇಕು ಅಂತೀರಾ. ಮುಂದೆ ನೋಡಿ..

ಹೇಗೆ ಅಂತೀರಾ..?

ಹೇಗೆ ಅಂತೀರಾ..?

ಅಗತ್ಯವಿಲ್ಲದ ವಿಡಿಯೋ ಶಿಫಾರಸುಗಳನ್ನು ನಿಲ್ಲಿಸಲು ನಿಮಗೆ ಎರಡು ದಾರಿಗಳು ಕಾಣುತ್ತವೆ. ಮೊದಲನೆಯದಾಗಿ ಸೆಟ್ಟಿಂಗ್ಸ್‌ನ್ನು ಬದಲಾಯಿಸುವ ಮೂಲಕ ನಿರ್ದಿಷ್ಟ ಚಾನಲ್‌ನ ವಿಡಿಯೋ ಶಿಫಾರಸುಗಳನ್ನು ನಿಲ್ಲಿಸಬಹುದು. ಅಥವಾ ಯೂಟ್ಯೂಬ್‌ಗೆ ನೀವು ಆ ವಿಡಿಯೋದಲ್ಲಿ ಆಸಕ್ತಿ ಹೊಂದಿಲ್ಲ ಎಂಬುದನ್ನು ಗೊತ್ತು ಮಾಡಿಸಬೇಕು. ಇದರಿಂದ ಮುಂದೆ ಆ ನಿರ್ದಿಷ್ಟ ಚಾನೆಲ್‌ನಿಂದ ಯಾವುದೇ ವಿಡಿಯೋ ಶಿಫಾರಸು ಬರಲ್ಲ ಎಂಬುದನ್ನು ಗಮನಿಸಬೇಕು.

 ವಿಧಾನ 1

ವಿಧಾನ 1

1. ಯೂಟ್ಯೂಬ್‌ ಆಪ್‌ ತೆರೆಯರಿ. ನಂತರ ನೀವು ವೀಕ್ಷಿಸಲು ಇಚ್ಛೆಪಡದ ಶಿಫಾರಸ್ಸು ವಿಡಿಯೋಗೆ ಸ್ಕ್ರಾಲ್‌ ಮಾಡಿ.

2. ನಂತರ ವಿಡಿಯೋ ಮುಂದೆ ಇರುವ 3 ಡಾಟ್‌ ಮೆನುವನ್ನು ಆಯ್ಕೆ ಮಾಡಿ.

3. ಅಲ್ಲಿ, ಚಾನಲ್‌ ಶಿಫಾರಸು ಮಾಡಬೇಡಿ (Don't recommend channel) ಎಂಬ ಆಯ್ಕೆ ಕ್ಲಿಕ್ ಮಾಡಿ

4. ನಂತರ, ಈ ಚಾನಲ್‌ನಿಂದ ಮತ್ತೆ ಯಾವ್‌ ವಿಡಿಯೋಗಳನ್ನು ಶಿಫಾರಸು ಮಾಡಲ್ಲ (We won't recommend videos from this channel to you again) ಎಂಬ ಪಾಪ್‌ಅಪ್‌ ನಿಮಗೆ ಕಾಣಿಸುತ್ತದೆ.

ಸೆಟ್ಟಿಂಗ್ಸ್‌ ಬದಲಾಯಿಸಿದ ನಂತರ 'ಅನ್‌ಡೂ' ಆಯ್ಕೆಯನ್ನು ಆಯ್ದುಕೊಳ್ಳುವ ಮೂಲಕ ಮರು ಸಂಯೋಜಿಸಬಹುದು.

ವಿಧಾನ 2

ವಿಧಾನ 2

1. ಯೂಟ್ಯೂಬ್‌ ಆಪ್‌ ತೆರೆಯಿರಿ. ನಂತರ, ನೀವು ನೋಡಲು ಇಚ್ಛೆಪಡದ ಶಿಫಾರಸು ವಿಡಿಯೋಗೆ ಸ್ಕ್ರಾಲ್‌ ಮಾಡಿ.

2. ನಂತರ, 3 ಡಾಟ್‌ ಮೆನು ಮುಂದಿರುವ ವಿಡಿಯೋ ಶಿಫಾರಸು ಆಯ್ಕೆಯನ್ನು ಟ್ಯಾಪ್‌ ಮಾಡಿ.

3. ಬಳಿಕ, ಆಸಕ್ತಿಯಿಲ್ಲ (Not interested) ಆಯ್ಕೆ ಕ್ಲಿಕ್ ಮಾಡಿ.

4. ವಿಡಿಯೋ ತೆಗೆಯಲಾಗಿದೆ ಎಂಬ ಪಾಪ್‌ಅಪ್‌ ನಿಮಗೆ ಕಾಣುತ್ತದೆ. ಮತ್ತು ಏಕೆ..? ಹಾಗೂ ಅನ್‌ಡೂ ಆಯ್ಕೆಗಳು ನಿಮ್ಮ ಮುಂದೆ ಕಾಣುತ್ತವೆ.

5. ನಂತರ, 'ಏಕೆ ಹೇಳಿ..?' (Tell us why) ಕ್ಲಿಕ್ ಮಾಡಿ. ಮತ್ತು 'ವಿಡಿಯೋವನ್ನು ಈಗಾಗಲೇ ವೀಕ್ಷಿಸಿದ್ದೇನೆ' ಅಥವಾ 'ವಿಡಿಯೋ ನನಗೆ ಇಷ್ಟವಾಗಲಿಲ್ಲ' ಆಯ್ಕೆ ಕ್ಲಿಕ್ ಮಾಡಿ.

Best Mobiles in India

English summary
Here Is How To Stop Unwanted YouTube Recommendations

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X