ವಾಟ್ಸಾಪ್‌ ಚಾಟ್‌ಗಳನ್ನು ನಿಮ್ಮ ಹೊಸ ಮೊಬೈಲ್‌ಗೆ ವರ್ಗಾಯಿಸಲು ಹೀಗೆ ಮಾಡಿ!

|

ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜಿಂಗ್ ಆಪ್‌ ವಾಟ್ಸಾಪ್‌ ಸದ್ಯ ತನ್ನ ನೂತನ ಪ್ರೈವಸಿ ನಿಯಮದಿಂದಾಗಿ ಸುದ್ದಿಯಲ್ಲಿದೆ. ಆದರೆ ಬಳಕೆದಾರರ ಅನುಕೂಲಕ್ಕಾಗಿ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಅಳವಡಿಸಿದೆ. ಫೋಟೊ, ವಿಡಿಯೊ ಶೇರ್ ಹಾಗೂ ಟೆಕ್ಸ್ಟ್‌ ಮೆಸೆಜ್‌ ಮಾಡಲು ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿದೆ. ಹಾಗೆಯೇ ಬಳಕೆದಾರರಿಗೆ ಬ್ಯಾಕ್‌ಅಪ್‌ ಪಡೆದುಕೊಳ್ಳಲು ಅನುಕೂಲಕರ ಆಯ್ಕೆಗಳನ್ನು ನೀಡಿದೆ.

ಫೈಲ್‌ಗಳನ್ನು

ಹೌದು, ಜನಪ್ರಿಯ ವಾಟ್ಸಾಪ್‌ ಆಪ್‌ನಲ್ಲಿ ಟೆಕ್ಸ್ಟ್ ಚಾಟ್‌ಗಳು, ಫೋಟೊಗಳು, ವಿಡಿಯೊಗಳು ಸೇರಿದಂತೆ ಇತರೆ ಫೈಲ್‌ಗಳನ್ನು ಬ್ಯಾಕ್‌ಅಪ್‌ ಪಡೆದುಕೊಳ್ಳುವ ಅವಕಾಶ ನೀಡಿದೆ. ಒಂದು ವೇಳೆ ಬಳಕೆದಾರರು ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿದರೂ ಸಹ ಅವರು ತಮ್ಮ ವಾಟ್ಸಾಪ್‌ ಬ್ಯಾಕ್‌ಅಪ್‌ ಪಡೆದುಕೊಳ್ಳಬಹುದು. ಹೀಗೆ ನೀವು ಹೊಸ ಸ್ಮಾರ್ಟ್‌ಫೋನ್‌ಗೆ ವಾಟ್ಸಾಪ್‌ ಬಳಕೆ ಮಾಡುತ್ತಿದ್ದು, ನಿಮ್ಮ ಹಳೆಯ ವಾಟ್ಸಾಪ್‌ನ ಚಾಟ್‌ಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನಿಂದ ಹೊಸ ಫೋನಿಗೆ ವರ್ಗಾಯಿಸವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ ಚಾಟ್ ವರ್ಗಾಯಿಸಲು ಹಳೆಯ ಫೋನಿನಲ್ಲಿ ಈ ಕ್ರಮ ಅನುಸರಿಸಿ

ವಾಟ್ಸಾಪ್‌ ಚಾಟ್ ವರ್ಗಾಯಿಸಲು ಹಳೆಯ ಫೋನಿನಲ್ಲಿ ಈ ಕ್ರಮ ಅನುಸರಿಸಿ

* ವಾಟ್ಸಾಪ್ ಸೆಟ್ಟಿಂಗ್ > ಚಾಟ್ಸ್ > ಚಾಟ್‌ ಬ್ಯಾಕ್‌ಅಪ್‌

* ಬ್ಯಾಕ್‌ಅಪ್ ಬಟನ್ ಆನ್‌ ಮಾಡಿ.

* ವಿಡಿಯೊಗಳ ಬ್ಯಾಕ್‌ಅಪ್‌ ಬೇಕಿದ್ದರೇ ವಿಡಿಯೊ ಬ್ಯಾಕ್‌ಅಪ್ ಆಯ್ಕೆಯನ್ನು ಸಕ್ರಿಯ ಮಾಡಿರಿ.

ಹೊಸ ಸ್ಮಾರ್ಟ್‌ಫೋನಿನಲ್ಲಿ ಈ ಕ್ರಮಗಳನ್ನು ಫಾಲೋ ಮಾಡಿರಿ:

ಹೊಸ ಸ್ಮಾರ್ಟ್‌ಫೋನಿನಲ್ಲಿ ಈ ಕ್ರಮಗಳನ್ನು ಫಾಲೋ ಮಾಡಿರಿ:

* ಹೊಸ ಸ್ಮಾರ್ಟ್‌ಫೋನಿನಲ್ಲಿ ನಿಮ್ಮ ಫೋನ್ ನಂಬರ್ ಬಳಸಿ ವಾಟ್ಸಾಪ್ ಲಾಗ್ ಇನ್‌ ನಮೂದಿಸಿರಿ.

* ನಂತರ ಕರ್ನ್ಫರಮೇಶನ್‌ಗಾಗಿ OTP ಪಡೆಯುವಿರಿ.

* ಆಗ ರೀಸ್ಟೋರ್-Restore ಬಟನ್ ಒತ್ತಿರಿ. ಹಳೆಯ ಫೋನಿನಲ್ಲಿನ ವಾಟ್ಸಾಪ್ ಡಾಟಾಗಳು ಈ ಹೊಸ ಫೋನಿನಲ್ಲಿ ಲಭ್ಯ ಆಗುತ್ತವೆ.

ಗೂಗಲ್‌ ಡ್ರೈವ್‌ ಮೂಲಕ ಬ್ಯಾಕ್‌ಅಪ್‌ ಮಾಡಬಹುದು

ಗೂಗಲ್‌ ಡ್ರೈವ್‌ ಮೂಲಕ ಬ್ಯಾಕ್‌ಅಪ್‌ ಮಾಡಬಹುದು

* ವಾಟ್ಸಾಪ್ ಮೆನು ಟ್ಯಾಪ್ ಮಾಡಿ ಮತ್ತು ಸೆಟ್ಟಿಂಗ್‌ಗಳು> ಚಾಟ್‌ಗಳು> ಚಾಟ್ ಬ್ಯಾಕ್‌ಅಪ್‌ಗೆ ಹೋಗಿ.

* ನಂತರ, ನೀವು manually ಬ್ಯಾಕಪ್ ಮಾಡಬಹುದು, ಅಥವಾ ನೀವು ಬಯಸಿದಂತೆ ನಿಯಮಿತವಾಗಿ automatically ಬ್ಯಾಕಅಪ್ ಮಾಡಲು ಹೊಂದಿಸಬಹುದು. ವಾಟ್ಸಾಪ್ ಅನ್ನು ರೀಇನ್‌ಸ್ಟಾಲ್‌ ಮಾಡಿದಾಗ, ಅದು ನಿಮ್ಮ ಚಾಟ್‌ಗಳನ್ನು ಮತ್ತು ಮಲ್ಟಿಮೀಡಿಯಾವನ್ನು Google ಡ್ರೈವ್‌ನಿಂದ ಮರುಪಡೆಯಲು ಕೇಳುತ್ತದೆ.

* ಅಪ್ಲಿಕೇಶನ್‌ನಲ್ಲಿ ಚಾಟ್‌ಗಳು ಮತ್ತು ಸಂಪರ್ಕಗಳು ತಕ್ಷಣ ಗೋಚರಿಸುತ್ತವೆ, ಆದರೆ ಮಾಧ್ಯಮವು ಹಿನ್ನೆಲೆಯಲ್ಲಿ ಡೌನ್‌ಲೋಡ್ ಮಾಡಲು ಪ್ರಾರಂಭಿಸುತ್ತದೆ.
ವಿಮರ್ಶೆಗಳು ಮತ್ತು ಪರೀಕ್ಷೆ ಇತ್ಯಾದಿಗಳಿಗಾಗಿ ನಾವು ಸ್ಮಾರ್ಟ್‌ಫೋನ್‌ಗಳನ್ನು ಬದಲಾಯಿಸಿದಾಗ ನಾವು ಬಳಸುವ ವಿಧಾನ ಇದು.

ಮಲ್ಟಿ ಡಿವೈಸ್ ವಾಟ್ಸಾಪ್ ಖಾತೆ

ಮಲ್ಟಿ ಡಿವೈಸ್ ವಾಟ್ಸಾಪ್ ಖಾತೆ

ಜನಪ್ರಿಯ ವಾಟ್ಸಾಪ್ ಒಂದೇ ಬಾರಿ ಎರಡು ವಾಟ್ಸಾಪ್ ಖಾತೆಗಳನ್ನು ಬಳಕೆ ಮಾಡುವ ಅವಕಾಶ ಲಭ್ಯವಾಗಿಸಿದೆ. ಹಾಗೆಯೇ ಮಲ್ಟಿ ಡಿವೈಸ್ ಸಪೋರ್ಟ್‌ ಸಹ ನೀಡಿದೆ. ಹೀಗಾಗಿ ಬಳಕೆದಾರರು ಪ್ಯಾರಲಲ್‌ ಸ್ಪೇಸ್‌ ಹಾಗೂ ಡ್ಯುಯಲ್ ಸ್ಪೇಸ್‌ ನಂತಹ ಥರ್ಡ್‌ ಪಾರ್ಟಿ ಆಪ್ಸ್‌ಗಳನ್ನು ಬಳಕೆ ಮಾಡುವ ಅಗತ್ಯ ಇರುವುದಿಲ್ಲ.

Best Mobiles in India

English summary
Here Is How To Transfer WhatsApp Chats To A New Phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X