ಗೂಗಲ್‌ ಕ್ರೋಮ್‌ನಲ್ಲಿ ಪಾಪ್-ಅಪ್ ಸೈಟ್ ನೋಟಿಫಿಕೇಶನ್‌ ಬ್ಲಾಕ್‌ ಮಾಡುವುದು ಹೇಗೆ?

|

ಗೂಗಲ್‌ ಕ್ರೋಮ್‌ ಬಳಕೆದಾರರು ಪ್ರತಿ ಬಾರಿ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಕೆಲವು ಸೈಟ್ಗಳು ಪಾಪ್-ಅಪ್‌ ಆಗುತ್ತಿರುತ್ತವೆ. ಪ್ರತಿ ಪಾಪ್-ಅಪ್ ನೋಟಿಫಿಕೇಶನ್ ಅನ್ನು ಪ್ರತಿ ಬಾರಿಯೂ ಬ್ಲಾಕ್ ಮಾಡುತ್ತಾ ಹೋಗುವುದು ಕೆಲವರಿಗೆ ಕಿರಿಕಿರಿ ಎನಿಸಲಿದೆ. ಇದರಿಂದ ನೀವು ಮಾಡುವ ಕೆಲಸದ ಮೇಲೆ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಕೂಡ ಉಂಟು. ಆದರೆ ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ ಏಕೆಂದರೆ ಬಳಕೆದಾರರು ಕ್ರೋಮ್‌ನಲ್ಲಿ ನೋಟಿಫಿಕೇಶನ್ ಸೆಟ್ಟಿಂಗ್‌ಗಳನ್ನು ಟ್ವೀಕ್ ಮಾಡುವ ಮೂಲಕ ಎಲ್ಲಾ ಪಾಪ್-ಅಪ್ ನೋಟಿಫಿಕೇಶನ್‌ಗಳನ್ನು ಒಮ್ಮೆಲೆ ಸ್ಟಾಪ್‌ ಮಾಡಬಹುದು.

ಗೂಗಲ್‌

ಹೌದು, ಗೂಗಲ್‌ ಕ್ರೋಮ್‌ನಲ್ಲಿ ನೀವು ಯಾವುದೇ ವೆಬ್‌ಸೈಟ್‌ ತೆರೆದಾಗ ಅಲ್ಲಿ ಕೆಲವು ಸೈಟ್‌ ಪಾಪ್‌-ಆಪ್‌ ಆಗುತ್ತಿರುತ್ತದೆ. ಕೆಲವು ಬಳಕೆದಾರರು ಇದನ್ನು ಬ್ಲಾಕ್‌ ಮಾಡುತ್ತಾ ಹೋಗುತ್ತಾರೆ. ಒಂದು ವೇಳೆ ನೀವು ಯಾವುದೇ ಪಾಪ್‌-ಆಪ್‌ ನೋಟಿಫಿಕೇಶನ್ ಸ್ವೀಕರಿಸಲು ಬಯಸದಿದ್ದರೆ ಒಮ್ಮೆಲೇ ತೆಗೆದುಹಾಕುವ ಅವಕಾಶ ಕೂಡ ಇದರಲ್ಲಿ ಲಭ್ಯವಿದೆ. ಯಾವುದೇ ಸಮಯದಲ್ಲಿ ನೋಟಿಫಿಕೇಶನ್‌ಗಳನ್ನು ಸ್ವೀಕರಿಸಲು ಸೆಟ್ಟಿಂಗ್‌ಗಳನ್ನು ನಿಷ್ಕ್ರಿಯಗೊಳಿಸಬಹುದು. ಕೆಲವು ಸೈಟ್‌ಗಳಿಂದ ಪಾಪ್-ಅಪ್ ನೋಟಿಫಿಕೇಶನ್‌ಗಳನ್ನು ಸ್ವೀಕರಿಸಲು ಮತ್ತು ಇತರರನ್ನು ನಿರ್ಬಂಧಿಸಲು ಸೆಟ್‌ ಮಾಡಬಹುದಾಗಿದೆ. ಹಾಗಾದ್ರೆ ಪಾಪ್‌ ಆಪ್‌ ಸೆಟ್ಟಿಗ್‌ ನೋಟಿಫಿಕೇಶನ್‌ ಅನ್ನು ಸ್ಟಾಪ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಕ್ರೋಮ್‌ನಲ್ಲಿ ಪಾಪ್-ಅಪ್ ಸೈಟ್ ನೋಟಿಫಿಕೇಶನ್‌ ಬ್ಲಾಕ್‌ ಮಾಡುವುದು ಹೇಗೆ?

ಗೂಗಲ್‌ ಕ್ರೋಮ್‌ನಲ್ಲಿ ಪಾಪ್-ಅಪ್ ಸೈಟ್ ನೋಟಿಫಿಕೇಶನ್‌ ಬ್ಲಾಕ್‌ ಮಾಡುವುದು ಹೇಗೆ?

ಹಂತ:1 ನಿಮ್ಮ ಕಂಪ್ಯೂಟರ್‌ನಲ್ಲಿ, ಕ್ರೋಮ್‌ ತೆರೆಯಿರಿ.

ಹಂತ:2 ಮೇಲಿನ ಬಲಭಾಗದಲ್ಲಿ, ಮೋರ್‌ ಕ್ಲಿಕ್ ಮಾಡಿ.

ಹಂತ:3 ಸೆಟ್ಟಿಂಗ್‌ಗಳಿಗೆ ಹೋಗಿ.

ಹಂತ:4 ಗೌಪ್ಯತೆ ಮತ್ತು ಸುರಕ್ಷತೆಯಡಿಯಲ್ಲಿ ಸೈಟ್ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ.

ಹಂತ:5 ನೋಟಿಫಿಕೇಶನ್‌ಗಳ ಮೇಲೆ ಕ್ಲಿಕ್ ಮಾಡಿ.

ಸೈಟ್‌

ಹಂತ:6 ಎಲ್ಲಾ ಸೈಟ್‌ಗಳಿಂದ ಪಾಪ್-ಅಪ್ ನೋಟಿಫಿಕೇಶನ್‌ಗಳನ್ನು ಆಫ್ ಮಾಡಲು, ಸೈಟ್‌ಗಳಿಗಾಗಿ ಟಾಗಲ್ ಆನ್ ಮಾಡಿ ನೋಟಿಫಿಕೇಶನ್‌ಗಳನ್ನು ಆಫ್ ಮಾಡಲು ಕೇಳಬಹುದು.

ಹಂತ:7 ನೋಟಿಫಿಕೇಶನ್‌ ನಿರ್ಬಂಧಿಸಲು ಬಳಕೆದಾರರು "Use quieter messaging" ಫೀಚರ್ಸ್‌ಗಾಗಿ ಟಾಗಲ್ ಅನ್ನು ಆನ್ ಮಾಡಬಹುದು.

ಹಂತ:8 ನಿರ್ದಿಷ್ಟ ಸೈಟ್ ಅನ್ನು ನಿರ್ಬಂಧಿಸಲು, "ಬ್ಲಾಕ್" ವಿಭಾಗದ ಅಡಿಯಲ್ಲಿ ಸೇರಿಸು ಕ್ಲಿಕ್ ಮಾಡಿ. ನೀವು ನಿರ್ಬಂಧಿಸಲು ಬಯಸುವ ಸೈಟ್‌ನ ಹೆಸರನ್ನು ನಮೂದಿಸಿ ಮತ್ತು ಸೇರಿಸು ಕ್ಲಿಕ್ ಮಾಡಿ.

ಹಂತ:9 ನೀವು ಸೈಟ್‌ನಿಂದ ನೋಟಿಫಿಕೇಶನ್ಗಳನ್ನು ಸ್ವೀಕರಿಸಲು ಬಯಸಿದರೆ, "ಅನುಮತಿಸು" ವಿಭಾಗದ ಅಡಿಯಲ್ಲಿ ಸೇರಿಸು ಕ್ಲಿಕ್ ಮಾಡಿ. ಸೈಟ್ ನಮೂದಿಸಿ ಮತ್ತು ಸೇರಿಸು ಕ್ಲಿಕ್ ಮಾಡಿ.

ಗೂಗಲ್

ಇನ್ನು ಗೂಗಲ್ ಕ್ರೋಮ್ ಇತ್ತೀಚೆಗೆ ಹೊಸ ಅಪ್ಡೇಟ್‌ಗಳನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ ಬಳಕೆದಾರರಿಗಾಗಿ ಒಂದು ಅಪ್ಡೇಟ್‌ ಲಿಂಕ್ ಅನ್ನು ತೆರೆಯುವ ಬದಲು ಪ್ರೀ ವ್ಯೂವ್‌ ಮಡಲು ಕೂಡ ಅವಕಾಶ ನೀಡುತ್ತಿದೆ. ಗೂಗಲ್ ಕ್ರೋಮ್‌ನ ಆಂಡ್ರಾಯ್ಡ್ ಅಪ್ಲಿಕೇಶನ್ ಈಗ ಬಳಕೆದಾರರು ಲಿಂಕ್‌ನ ವಿಷಯಗಳನ್ನು ಪ್ರತ್ಯೇಕ ಟ್ಯಾಬ್‌ನಲ್ಲಿ ತೆರೆಯುವ ಮೊದಲು 'ಪ್ರೀವೈ ಪೇಜ್‌' ಎಂಬ ಹೊಸ ಫೀಚರ್ಸ್‌ನೊಂದಿಗೆ ನೋಡಲು ಅನುಮತಿಸುತ್ತದೆ. ಪ್ರಿವ್ಯೂ ಪೇಜ್‌ ಆಯ್ಕೆಯನ್ನು ಬಳಸಲು, ನಿಮಗೆ ಬೇಕಾದ ಲಿಂಕ್‌ನಲ್ಲಿ ಲಾಂಗ್‌ ಟೈಂ ಪ್ರೆಸ್‌ ಮಾಡಬೇಕಾಗುತ್ತದೆ. ನೀವು ಪ್ರಿ ವ್ಯೂ ಆಯ್ಕೆಯನ್ನು ಟ್ಯಾಪ್ ಮಾಡಿದಾಗ, ಲಿಂಕ್‌ನಿಂದ ಪೇಜ್‌ ಸ್ಲೈಡ್ ಆಗುತ್ತದೆ.

Best Mobiles in India

English summary
Here is how you can block the pop-up site notifications on Chrome.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X