ಆಂಡ್ರಾಯ್ಡ್‌ನಲ್ಲಿ ವಿವಿಧ ಕಾಲಮಾನಗಳ ಡ್ಯುಯಲ್ ಕ್ಲಾಕ್‌ ಸೆಟ್‌ ಮಾಡುವುದು ಹೇಗೆ?

By Suneel
|

ಸ್ಮಾರ್ಟ್‌ಫೋನ್‌ಗಳ ಅಧಿಕ ಬಳಕೆಯಿಂದ ಆದ ಬದಲಾವಣೆ ಏನು? ಎಂದು ಕೇಳಿದ್ರೆ ತಕ್ಷಣ * ಕಾಯಿನ್‌ ಬೂತ್‌ ಫೋನ್‌ಗಳು ಕಾಣೆಯಾದವು (ವಿರಳವಾಗಿವೆ) * ಗಡಿಯಾರ, ವಾಚ್‌ಗಳನ್ನು ಮಾರುವವರು ಟೆಂಟ್ ಎತ್ತಿದರು ಎಂದು ಹೇಳಬಹುದು. ಹಾಗೂ ಏನಾದ್ರು ಸ್ಮಾರ್ಟ್‌ಫೋನ್‌ ಬಳಕೆದಾರರು ವಾಚ್ ಕಟ್ಟಿದ್ದಾರೆ ಅಂದ್ರೆ ಅದು ಫ್ಯಾಷನ್‌ಗಾಗಿ, ಟೈಮ್‌ ನೋಡೋಕೆ ಅಲ್ಲಾ ಎಂದಲೇ ತಿಳಿಯಬೇಕು. ಸೆಲ್‌ಫೋನ್‌ನಲ್ಲಿನ ಲಿಮಿಟೇಶನ್ ಎಂದರೆ ಕೇವಲ ಒಂದು ಟೈಮ್‌ಜೋನ್‌ ಅನ್ನು ಮಾತ್ರ ತೋರಿಸುತ್ತದೆ.

ಓಕೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರು ಪ್ರಪಂಚದ ಹಲವು ದೇಶಗಳಲ್ಲಿ ಇದ್ದಲ್ಲಿ, ಅವರನ್ನು ದಿನನಿತ್ಯ ಸಂಪರ್ಕದಲ್ಲಿ ಇಟ್ಟಿಕೊಳ್ಳಲು ನೀವು ವಿವಿಧ ಕಾಲಮಾನಗಳನ್ನು ಕ್ಯಾರಿ ಮಾಡಲೇಬೇಕಾಗುತ್ತದೆ. ಈ ಕಾರಣಕ್ಕಾಗಿ ನೀವು ಹಲವು ಫೋನ್‌ಗಳನ್ನು ಮತ್ತು ವಿವಿಧ ಕಾಲಮಾನಗಳನ್ನು ತೋರಿಸುವ ಅಧಿಕ ಬೆಲೆಯ ವಾಚ್‌ ಅನ್ನು ಖರೀದಿಸುವ ಅಗತ್ಯವಿಲ್ಲ. ಯಾಕಂದ್ರೆ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಒಂದೇ ಆಂಡ್ರಾಯ್ಡ್(Android) ಫೋನ್‌ನಲ್ಲಿ ವಿವಿಧ ಕಾಲಮಾನಗಳನ್ನು(ಟೈಮ್‌ಜೋನ್‌) ಅನ್ನು ಸೆಟ್‌ ಮಾಡುವುದು ಹೇಗೆ ಎಂದು ತಿಳಿಸುತ್ತಿದೆ.

ನಿಮ್ಮ ಪ್ರೀತಿ ಪಾತ್ರರ ವಾಟ್ಸಾಪ್‌ನ ಎಲ್ಲಾ ಚಟುವಟಿಕೆಗಳನ್ನು ಟ್ರ್ಯಾಕ್‌ ಮಾಡುವುದು ಹೇಗೆ?

ಹಂತ 1

ಹಂತ 1

ಒಮ್ಮೆ ನಿಮ್ಮ ಫೋನ್‌ ರೂಟೆಡ್‌ ಆದಲ್ಲಿ, ನಿಮ್ಮ ಫೋನ್‌ಗೆ Xposed installer ಅನ್ನು ಇನ್‌ಸ್ಟಾಲ್‌ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 2

ಹಂತ 2

ಈ ಹಂತದಲ್ಲಿ ನೀವು ಮಲ್ಟಿಜೋನ್ ಕ್ಲಾಕ್‌ನ Xposed module ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ, ಇನ್‌ಸ್ಟಾಲ್‌ ಮಾಡಿ. ಇದು ನಿಮ್ಮ ಆಂಡ್ರಾಯ್ಡ್ ಸ್ಟೇಟಸ್‌ ಬಾರ್‌ನಲ್ಲಿ ಮಲ್ಟಿಜೋನ್‌ ಕ್ಲಾಕ್‌ ಅನ್ನು ತೋರಿಸಲು ಅವಕಾಶ ನೀಡುತ್ತದೆ.

ಹಂತ 3

ಹಂತ 3

ಸ್ಮಾರ್ಟ್‌ಫೋನ್‌ನಲ್ಲಿ ಒಮ್ಮೆ Xposed module ಇನ್‌ಸ್ಟಾಲ್‌ ಆದಲ್ಲಿ, ಆಪ್‌ ಲಾಂಚ್‌ ಮಾಡಿ ಮತ್ತು Xposed installer ಅನ್ನು ಎನೇಬಲ್‌ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 4

ಹಂತ 4

Xposed module, Xposed installer'ಗೆ ಆಡ್‌ ಆದ ನಂತರ, ನೀವು ನಿಮ್ಮ ಡಿವೈಸ್‌ನಲ್ಲಿ ವಿವಿಧ ಕಾಲಮಾನಗಳ ಟೈಮ್‌ ಅನ್ನು ನೋಡುತ್ತೀರಿ. ಅದರಲ್ಲಿ ನಿಮ್ಮ ಅಗತ್ಯಕ್ಕೆ ತಕ್ಕ ಟೈಮ್‌ಜೋನ್‌ಗಳನ್ನು ಆಯ್ಕೆ ಮಾಡಿ, ನಂತರ ಸ್ಟೇಟಸ್‌ ಬಾರ್‌ನಲ್ಲಿ ಪ್ರದರ್ಶನವಾಗುತ್ತದೆ.

ಹಂತ 5

ಹಂತ 5

ಡಿವೈಸ್‌ನಲ್ಲಿ 12/24 hrs ಟೈಮ್‌ ಮತ್ತು am/pm ಫಾರ್ಮ್ಯಾಟ್‌ಗೆ ಬದಲಿಸಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Here's how You Can Set Dual Clocks with Different Time Zones on Your Android Device. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X