ನಕಲಿ ಮೊಬೈಲ್ ಚಾರ್ಜರ್‌ಗಳನ್ನು ಕಂಡುಹಿಡಿಯುವುದು ಹೇಗೆ ಗೊತ್ತಾ..?

By GizBot Bureau
|

ಸ್ಮಾರ್ಟ್ ಫೋನ್ ಬ್ಯಾಟರಿಗಳು ಸಿಡಿಯಲು ಪ್ರಮುಖ ಕಾರಣವೆಂದರೆ ಸುಳ್ಳು ಅಥವಾ ಫೇಕ್ ಚಾರ್ಜರ್ ಗಳನ್ನು ಗ್ರಾಹಕರು ಬಳಕೆ ಮಾಡುವುದು. ಕೆಲವೊಮ್ಮೆ ಯಾವ ಮಟ್ಟಿಗೆ ಈ ಫೇಕ್ ಚಾರ್ಜರ್ ಗಳು ಸಮಸ್ಯೆಯನ್ನು ಒಡ್ಡುತ್ತದೆ ಎಂದರೆ ಪ್ರಾಣಹಾನಿಯಾಗಿರುವ ಘಟನೆಗಳೂ ಕೂಡ ಬೆಳಕಿಗೆ ಬಂದಿದೆ.

ಇತ್ತೀಚೆಗಷ್ಟೇ, 90 ವರ್ಷದ ವ್ಯಕ್ತಿಯೊಬ್ಬರು ಮತ್ತು 60 ವರ್ಷದ ಅವರ ಮಗಳು ಚೆನೈ ನಲ್ಲಿ ಚಾರ್ಜರ್ ಬ್ಲಾಸ್ಟ್ ಆದ ಕಾರಣದಿಂದಾಗಿ ಮೃತಪಟ್ಟಿದ್ದರು. ಅವರು ರಾತ್ರಿಯ ವೇಳೆಯಲ್ಲಿ ಮೊಬೈಲ್ ನ್ನು ಗೋಡೆಯಲ್ಲಿನ ಸಾಕೆಟ್ ಗೆ ಚಾರ್ಜ್ ಮಾಡಲು ಹಾಕಿದ್ದರು ಎಂದು ತಿಳಿದು ಬಂದಿದೆ.

ನಕಲಿ ಮೊಬೈಲ್ ಚಾರ್ಜರ್‌ಗಳನ್ನು ಕಂಡುಹಿಡಿಯುವುದು ಹೇಗೆ ಗೊತ್ತಾ..?

ಒಂದು ವೇಳೆ ನಿಮ್ಮ ಫೋನನ ಒರಿಜಿನಲ್ ಚಾರ್ಜರ್ ಅಲ್ಲದೇ ಇದ್ದಲ್ಲಿ ಇಂತಹ ಘಟನೆಗಳು ಅಧಿಕಗೊಳ್ಳುವ ಸಾಧ್ಯತೆ ಇರುತ್ತದೆ. ಯಾಕೆಂದರೆ ಪೇಕ್ ಚಾರ್ಜರ್ ಗಳು ನಿಮ್ಮ ಬ್ಯಾಟರಿಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ. ಹಾಗಾಗಿ ಫೇಕ್ ಚಾರ್ಜರ್ ಗಳನ್ನು ಆದಷ್ಟು ಬಳಕೆ ಮಾಡಬೇಡಿ ಎಂದು ಎಲ್ಲಾ ಸ್ಮಾರ್ಟ್ ಫೋನ್ ಕಂಪೆನಿಗಳು ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡುತ್ತದೆ.

ಆದರೂ ಕೂಡ ಕೆಲವೊಮ್ಮೆ ಗ್ರಾಹಕರು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಅದೇ ಕಾರಣಕ್ಕೆ ನಾವಿಲ್ಲಿ ಫೇಕ್ ಚಾರ್ಜರ್ ಗಳನ್ನು ಗುರುತಿಸುವುದು ಹೇಗೆ ಎಂಬ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತಿದ್ದೇವೆ. ನಿಜವಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಯ ಚಾರ್ಜರ್ ಆಗಿದ್ದಲ್ಲಿ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ಒಂದು ವೇಳೆ ನಿಮ್ಮ ಸ್ಮಾರ್ಟ್ ಫೋನ್ ಜೊತೆಗೆ ಬಂದ ಚಾರ್ಜರ್ ಹಾಳಾದಲ್ಲಿ ಪುನಃ ಮತ್ತೊಮ್ಮೆ ಅದೇ ಸ್ಮಾರ್ಟ್ ಫೋನ್ ಕಂಪೆನಿಯ ಚಾರ್ಜರ್ ಖರೀದಿಸುವಾಗ ಕೆಲವು ಪ್ರಮುಖ ಅಂಶಗಳನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಇಲ್ಲದೇ ಇದ್ದರೆ ಫೇಕ್ ಚಾರ್ಜರ್ ಗಳು ನಿಮ್ಮ ಮೊಬೈಲ್ ನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ. ಕೇವಲ ಮೊಬೈಲ್ ಮಾತ್ರವೇ ಅಲ್ಲದೇ ಇನ್ನೂ ದೊಡ್ಡ ಮಟ್ಟದ ಅನಾಹುತಗಳೂ ನಡೆಯಬಹುದು. ಹಾಗಾಗಿ ಆದಷ್ಟು ಒರಿಜಿನಲ್ ಚಾರ್ಜರ್ ಗುರುತಿಸುವುದು ಹೇಗೆ ಎಂಬ ಬಗ್ಗೆ ನೀವು ತಿಳಿದುಕೊಂಡಿರುವುದು ಸೂಕ್ತ. ಆ ನಿಟ್ಟಿನಲ್ಲಿ ಈ ಲೇಖನದಲ್ಲಿರುವ ಸಲಹೆಗಳು ನಿಮಗೆ ಸಹಾಯಕವಾಗಲಿದೆ.

ನೈಜ ಮತ್ತು ನಕಲಿ ಸ್ಯಾಮ್‌ಸಂಗ್ ಚಾರ್ಜರ್ ಗಳು : ಚಾರ್ಜರ್ ಗುರುತಿಸುವಿಕೆಯಲ್ಲಿ ಪ್ರಮುಖ ವ್ಯತ್ಯಾಸವೆಂದರೆ ಚಾರ್ಜರ್ ಮೇಲೆ ಬರೆಯಲಾಗಿರುವ ಅಕ್ಷರಗಳು

ನೈಜ ಮತ್ತು ನಕಲಿ ಸ್ಯಾಮ್‌ಸಂಗ್ ಚಾರ್ಜರ್ ಗಳು : ಚಾರ್ಜರ್ ಗುರುತಿಸುವಿಕೆಯಲ್ಲಿ ಪ್ರಮುಖ ವ್ಯತ್ಯಾಸವೆಂದರೆ ಚಾರ್ಜರ್ ಮೇಲೆ ಬರೆಯಲಾಗಿರುವ ಅಕ್ಷರಗಳು

ಸುಳ್ಳು ಚಾರ್ಜರ್ ಮತ್ತು ನಿಜವಾದ ಸ್ಯಾಮ್ ಸಂಗ್ ಚಾರ್ಜರ್ ಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಒಂದು ದೊಡ್ಡ ಸಮಸ್ಯೆಯೇ ಸರಿ. ಒಂದು ಪ್ರಮುಖ ವ್ಯತ್ಯಾಸವೆಂದರೆ ಚಾರ್ಜರ್ ಮೇಲೆ ಬರೆಯಲಾಗಿರುವ ಪ್ರಿಂಟೆಟ್ ಟೆಕ್ಸ್ಟ್. ಒಂದು ವೇಳೆ ಅದು "A+" ಮತ್ತು "Made in China" ಜೊತೆಗೆ ಅದರ ಸ್ಪೆಸಿಫಿಕೇಷನ್ ಗಳನ್ನು ಬರೆದಿದ್ದರೆ ಖಂಡಿತ ಅದು ಚೀನಾದಲ್ಲಿ ತಯಾರಾಗಿರುವ ಸುಳ್ಳು ಚಾರ್ಜರ್ ಆಗಿರುತ್ತದೆ.

ಫೇಕ್ ಆಪಲ್ ಐಫೋನ್ ಚಾರ್ಜರ್: ಒರಿಜಿನಲ್ ಚಾರ್ಜರ್ ನಲ್ಲಿ

ಫೇಕ್ ಆಪಲ್ ಐಫೋನ್ ಚಾರ್ಜರ್: ಒರಿಜಿನಲ್ ಚಾರ್ಜರ್ ನಲ್ಲಿ "Designed by Apple in California" ಎಂದು ಬರೆದಿರಲಾಗುತ್ತದೆ.

ಸುಳ್ಳು ಆಪಲ್ ಚಾರ್ಜರ್ ಗಳು ಮಾರ್ಕೆಟ್ ನಲ್ಲಿ ಹೆಚ್ಚಾಗಿ ಲಭ್ಯವಾಗುತ್ತದೆ. ಐಫೋನ್ ನ ಒರಿಜಿನಲ್ ಚಾರ್ಜರ್ ಮತ್ತು ಫೇಕ್ ಚಾರ್ಜರ್ ಗಳನ್ನು ಗುರುತಿಸುವುದು ಬಹಳ ಕಷ್ಟಕರ. ಒರಿಜಿನಲ್ ಚಾರ್ಜರ್ ನಲ್ಲಿ "Designed by Apple in California" ಎಂದು ಬರೆದಿರಲಾಗುತ್ತದೆ. ಮತ್ತು ಆಪಲ್ ಫೇಕ್ ಚಾರ್ಜರ್ ಗಳಲ್ಲಿ ಆಪಲ್ ಲೋಗೋ ಹೆಚ್ಚು ಡಾರ್ಕ್ ಆಗಿ ಗೋಚರಿಸುತ್ತದೆ.

ಎಂಐ ಪೋನ್ ಗಳಿಗೆ ಫೇಕ್ ಶಿಯೋಮಿ ಚಾರ್ಜರ್ : ಕೇಬಲ್ ನ ಉದ್ದವನ್ನು ಲೆಕ್ಕ ಮಾಡಿ. 120ಸೆಂಮೀ ಗಿಂತ ಕಡಿಮೆ ಇರಬಾರದು

ಎಂಐ ಪೋನ್ ಗಳಿಗೆ ಫೇಕ್ ಶಿಯೋಮಿ ಚಾರ್ಜರ್ : ಕೇಬಲ್ ನ ಉದ್ದವನ್ನು ಲೆಕ್ಕ ಮಾಡಿ. 120ಸೆಂಮೀ ಗಿಂತ ಕಡಿಮೆ ಇರಬಾರದು

ಈ ಚಾರ್ಜರ್ ಗಳನ್ನು ಗುರುತಿಸಲು ನೀವು ಕೇಬಲ್ ನ ಉದ್ದವನ್ನು ಲೆಕ್ಕ ಹಾಕಬೇಕು.ಒಂದು ವೇಳೆ ಅದು 120ಸೆಂಮೀ ಗಿಂತ ಕಡಿಮೆ ಇದ್ದರೆ ಮತ್ತು ಅಡಾಪ್ಟರ್ ಸಹಜಕ್ಕಿಂತ ಹೆಚ್ಚು ದೊಡ್ಡದಾಗಿದ್ದರೆ ಆಗ ಅದು ಖಂಡಿತ ಫೇಕ್ ಚಾರ್ಜರ್ ಆಗಿರುವ ಸಾಧ್ಯತೆ ಇದೆ.

ಫೇಕ್ ಒನ್ ಪ್ಲಸ್ ಚಾರ್ಜರ್ ಗಳು: ಒರಿಜಿನಲ್ ಚಾರ್ಜರ್ ನಲ್ಲಿ, ಚಾರ್ಜಿಂಗ್ ಸಿಂಬಲ್ ರೆಗ್ಯುಲರ್ ಬ್ಯಾಟರಿ ಸಿಂಬಲ್ ಆಗುವ ಬದಲಾಗಿ ಫ್ಲಾಷ್ ಸಿಂಬಲ್ ಆಗಿ ಬದಲಾಗುತ್ತದೆ

ಫೇಕ್ ಒನ್ ಪ್ಲಸ್ ಚಾರ್ಜರ್ ಗಳು: ಒರಿಜಿನಲ್ ಚಾರ್ಜರ್ ನಲ್ಲಿ, ಚಾರ್ಜಿಂಗ್ ಸಿಂಬಲ್ ರೆಗ್ಯುಲರ್ ಬ್ಯಾಟರಿ ಸಿಂಬಲ್ ಆಗುವ ಬದಲಾಗಿ ಫ್ಲಾಷ್ ಸಿಂಬಲ್ ಆಗಿ ಬದಲಾಗುತ್ತದೆ

ಒನ್ ಪ್ಲಸ್ ಫೇಕ್ ಚಾರ್ಜರ್ ಗಳನ್ನು ಸ್ವಲ್ಪ ಸುಲಭದಲ್ಲೇ ಗುರುತಿಸಲು ಸಾಧ್ಯವಾಗುತ್ತದೆ. ಒರಿಜಿನಲ್ ಡ್ಯಾಷ್ ಚಾರ್ಜರ್ ನ್ನು ನೀವು ಪ್ಲಗ್ ಮಾಡಿದ ಕೂಡಲೇ ಚಾರ್ಜಿಂಗ್ ಸಿಂಬಲ್ ಫ್ಲಾಶ್ ಬದಲಾಗಿ ರೆಗ್ಯುಲರ್ ಬ್ಯಾಟರಿ ಚಾರ್ಜಿಂಗ್ ಸಿಂಬಲ್ ಆಗಿ ಬದಲಾಗುತ್ತದೆ. ಆದರೆ ಒಂದು ವೇಳೆ ಇದು ಹೀಗಾಗದೇ ಇದ್ದಲ್ಲಿ ಡ್ಯಾಷ್ ಚಾರ್ಜರ್ ಫೇಕ್ ಎಂದು ಪರಿಗಣಿಸಬಹುದು.

ಫೇಕ್ ಹುವಾಯಿ ಫೋನ್ ಚಾರ್ಜರ್ ಗಳು: ಎಡಾಪ್ಟರ್ ನಲ್ಲಿ ಪ್ರಿಂಟ್ ಮಾಡಲಾಗಿರುವ ಮಾಹಿತಿಯನ್ನು ಮತ್ತು ಚಾರ್ಜರ್ ನ ಬಾರ್ ಕೋಡ್ ನಲ್ಲಿರುವ ಮಾಹಿತಿಯನ್ನು ಮ್ಯಾಚ್ ಮಾಡಿ ನೋಡಬೇಕು

ಫೇಕ್ ಹುವಾಯಿ ಫೋನ್ ಚಾರ್ಜರ್ ಗಳು: ಎಡಾಪ್ಟರ್ ನಲ್ಲಿ ಪ್ರಿಂಟ್ ಮಾಡಲಾಗಿರುವ ಮಾಹಿತಿಯನ್ನು ಮತ್ತು ಚಾರ್ಜರ್ ನ ಬಾರ್ ಕೋಡ್ ನಲ್ಲಿರುವ ಮಾಹಿತಿಯನ್ನು ಮ್ಯಾಚ್ ಮಾಡಿ ನೋಡಬೇಕು

ಹುವಾಯಿ ಫೋನಿನ ಚಾರ್ಜರ್ ಒರಿಜಿನಲ್ಲಾ ಅಥವಾ ಫೇಕಾ ಎಂದು ಗುರುತಿಸುವುದಕ್ಕೆ, ಜಸ್ಟ್ ನೀವು ಚಾರ್ಜರ್ ನ ಬಾರ್ ಕೋಡ್ ನಲ್ಲಿರುವ ಮಾಹಿತಿಯು ಎಡಾಪ್ಟರ್ ನಲ್ಲಿ ಪ್ರಿಂಟ್ ಮಾಡಲಾಗಿರುವ ಮಾಹಿತಿಯೊಂದಿಗೆ ಮ್ಯಾಚ್ ಆಗುತ್ತದೆಯಾ ಎಂದು ಪರೀಕ್ಷಿಸಬೇಕು.ಒಂದು ವೇಳೆ ಇದು ಮ್ಯಾಚ್ ಆದರೆ ಆಗ ಇದು ಒರಿಜಿನಲ್ ಇಲ್ಲದೇ ಇದ್ದರೆ ಇದು ಫೇಕ್.

ಗೂಗಲ್ ಪಿಕ್ಸಲ್ ಫೋನ್ ಚಾರ್ಜರ್ ಗಳು: ಗೂಗಲ್ ಯಾವಾಗಲೂ ಕೂಡ ಫಾಸ್ಟ್ ಚಾರ್ಜರ್ ಗಳನ್ನು ತನ್ನ ಪಿಕ್ಸಲ್ ಸ್ಮಾರ್ಟ್ ಫೋನ್ ಗಳ ಜೊತೆಗೆ ನೀಡುತ್ತದೆ.

ಗೂಗಲ್ ಪಿಕ್ಸಲ್ ಫೋನ್ ಚಾರ್ಜರ್ ಗಳು: ಗೂಗಲ್ ಯಾವಾಗಲೂ ಕೂಡ ಫಾಸ್ಟ್ ಚಾರ್ಜರ್ ಗಳನ್ನು ತನ್ನ ಪಿಕ್ಸಲ್ ಸ್ಮಾರ್ಟ್ ಫೋನ್ ಗಳ ಜೊತೆಗೆ ನೀಡುತ್ತದೆ.

ಗೂಗಲ್ ಯಾವಾಗಲೂ ಕೂಡ ಫಾಸ್ಟ್ ಚಾರ್ಜರ್ ಗಳನ್ನು ತಮ್ಮ ಪಿಕ್ಸಲ್ ಚಾರ್ಜರ್ ಗಳ ಜೊತೆಗೆ ನೀಡುತ್ತದೆ. ಆದರೆ ಒಂದು ವೇಳೆ ಬ್ಯಾಟರಿಯು ಹೆಚ್ಚು ಸಮಯವನ್ನು ಚಾರ್ಜಿಂಗ್ ಗೆ ತೆಗೆದುಕೊಂಡರೆ ನೀವು ಆ ಚಾರ್ಜರ್ ನ್ನು ಫೇಕ್ ಎಂದು ಪರಿಗಣಿಸುವುದಕ್ಕೆ ಅಡ್ಡಿಯಿಲ್ಲ.

Best Mobiles in India

English summary
Here's how to spot fake chargers of Apple, Samsung, OnePlus and other smartphones. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X