ಜಿ-ಮೇಲ್‌ನಲ್ಲಿ ನಿಮ್ಮ ಸಿಗ್ನೇಚರ್‌ ಕ್ರಿಯೆಟ್‌ ಮಾಡುವುದು ಹೇಗೆ?

|

ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಜಿ-ಮೇಲ್‌ ಕೂಡ ಒಂದಾಗಿದೆ. ಗೂಗಲ್‌ನ ಜಿ-ಮೇಲ್‌ ಸೇವೆಯನ್ನು ಬಳಸಿಕೊಂಡು ನಿಮ್ಮ ಪ್ರಮುಖ ದಾಖಲೆಗಳನ್ನು ಬೇರೆಯವರಿಗೆ ಶೇರ್ ಮಾಡಬಹುದಾಗಿದೆ. ದಾಖಲೆಗಳ ಗೌಪ್ಯತೆ ಕಾಪಾಡುವುದಕ್ಕೆ ಜಿ-ಮೇಲ್‌ ಉತ್ತಮವಾದ ಆಯ್ಕೆಯಾಗಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಕೂಡ ಜಿ-ಮೇಲ್‌ ಅಕೌಂಟ್‌ ಹೊಂದುವುದಕ್ಕೆ ಬಯಸುತ್ತಾರೆ. ಇನ್ನು ಜಿ-ಮೇಲ್‌ ಕೂಡ ತನ್ನ ಬಳಕೆದಾರರಿಗೆ ಅನೇಕ ಫೀಚರ್ಸ್‌ಗಳನ್ನು ನೀಡುತ್ತಾ ಬಂದಿದೆ. ಇದರಲ್ಲಿ ಹಲವು ಗೌಪ್ಯ ಫೀಚರ್ಸ್‌ಗಳು ಕೂಡ ಸೇರಿವೆ.

ಜಿ-ಮೇಲ್‌

ಹೌದು, ಗೂಗಲ್‌ನ ಜಿ-ಮೇಲ್‌ನಲ್ಲಿ ಹಲವು ಫೀಚರ್ಸ್‌ಗಳ ಬಗ್ಗೆ ಬಳಕೆದಾರರಿಗೆ ತಿಳಿದಿರುವುದಿಲ್ಲ. ಇವುಗಳಲ್ಲಿ ಇಮೇಳ್‌ಗಳಿಗೆ ಸಿಗ್ನೇಚರ್‌ ಆಡ್‌ ಮಾಡುವ ಫೀಚರ್ಸ್‌ ಕೂಡ ಒಂದಾಗಿದೆ. ಈ ಫೀಚರ್ಸ್‌ ಬಳಸಿ ಬಳಕೆದಾರರು ಜಿ-ಮೇಲ್‌ ಮೂಲಕ ಹಂಚಿಕೊಳ್ಳುವ ಇಮೇಲ್‌ಗಳಿಗೆ ತಮ್ಮ ಸಹಿಯನ್ನು ಸೇರಿಸಬಹುದಾಗಿದೆ. ಇಮೇಲ್ ಸಿಗ್ನೇಚರ್‌ ಎನ್ನುವುದು ನಿಮ್ಮ ಸಂಪರ್ಕ ಮಾಹಿತಿ ಆಗಿದೆ. ಇದನ್ನು ಆಟೋಮ್ಯಾಟಿಕ್‌ ಆಗಿ ಸದೇಶಗಳ ಕೊನೆಯಲ್ಲಿ ಸೇರಿಸಬಹುದಾಗಿದೆ. ಹಾಗಾದ್ರೆ ಜಿ-ಮೇಲ್‌ ನಲ್ಲಿ ನಿಮ್ಮ ಇಮೇಲ್‌ಗೆ ನೀವು ಸಹಿಯನ್ನು ಸೇರಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೆಬ್ ಬ್ರೌಸರ್ ಬಳಸುವಾಗ ಜಿ-ಮೇಲ್‌ನಲ್ಲಿ ಸಿಗ್ನೇಚರ್‌ ಕ್ರಿಯೆಟ್‌ ಮಾಡುವುದು ಹೇಗೆ?

ವೆಬ್ ಬ್ರೌಸರ್ ಬಳಸುವಾಗ ಜಿ-ಮೇಲ್‌ನಲ್ಲಿ ಸಿಗ್ನೇಚರ್‌ ಕ್ರಿಯೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸಿಸ್ಟಂನಲ್ಲಿ ಜಿ-ಮೇಲ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ನಂತರ ಮೇಲಿನ ಬಲ ಮೂಲೆಯಲ್ಲಿ, ಸೆಟ್ಟಿಂಗ್ಸ್‌ ಮೆನು ಕ್ಲಿಕ್ ಮಾಡಿ.
ಹಂತ:3 ಇದೀಗ, 'ಎಲ್ಲಾ ಸೆಟ್ಟಿಂಗ್‌ಗಳನ್ನು ನೋಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:4 ನಂತರ "ಸಿಗ್ನೇಚರ್‌" ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಿ.
ಹಂತ:5 ಇದೀಗ 'ಕ್ರಿಯೇಟ್ ನ್ಯೂ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:5 ನಂತರ ನಿಮ್ಮ ಸಿಗ್ನೇಚರ್‌ಗೆ ಹೆಸರನ್ನು ನೀಡಿ, ಕ್ರಿಯೆಟ್‌ ಬಟನ್ ಕ್ಲಿಕ್ ಮಾಡಿ.
ಹಂತ:6 ಇದೀಗ ಬಾಕ್ಸ್‌ನಲ್ಲಿ ನಿಮ್ಮ ಸಿಗ್ನೇಚರ್‌ ಟೆಕ್ಸ್ಟ್‌ ಅನ್ನು ಸೇರಿಸಿ. ನೀವು ಬಯಸಿದರೆ, ಇಮೇಜ್‌ ಅನ್ನು ಆಡ್‌ ಮಾಡುವ ಮೂಲಕ ಸಿಗ್ನೇಚರ್‌ ಸ್ಟೈಲ್‌ ಬದಲಾಯಿಸಬಹುದು.
ಹಂತ:7 ನಂತರ ಪೇಜ್‌ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ ಮತ್ತು ಬದಲಾವಣೆಗಳನ್ನು ಸೇವ್‌ ಆಯ್ಕೆಯನ್ನು ಕ್ಲಿಕ್ ಮಾಡಿ.

ಆಂಡ್ರಾಯ್ಡ್‌ ಅಪ್ಲಿಕೇಶನ್ ಬಳಸುವಾಗ ಜಿ-ಮೇಲ್‌ ನಲ್ಲಿ ಸಿಗ್ನೇಚರ್‌ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಆಂಡ್ರಾಯ್ಡ್‌ ಅಪ್ಲಿಕೇಶನ್ ಬಳಸುವಾಗ ಜಿ-ಮೇಲ್‌ ನಲ್ಲಿ ಸಿಗ್ನೇಚರ್‌ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಜಿ-ಮೇಲ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನಂತರ ಮೇಲಿನ ಎಡಭಾಗದಲ್ಲಿ, ಮೆನು ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ಕೆಳಕ್ಕೆ ಸ್ಕ್ರಾಲ್ ಮಾಡಿ, ನಂತರ ಸೆಟ್ಟಿಂಗ್‌ಗಳ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಇದೀಗ, ನೀವು ಸಿಗ್ನೇಚರ್‌ ಸೇರಿಸಲು ಬಯಸುವ ಗೂಗಲ್‌ ಖಾತೆಯನ್ನು ಆಯ್ಕೆಮಾಡಿ.
ಹಂತ:5 ನಂತರ ಮೊಬೈಲ್ ಸಿಗ್ನೇಚರ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:6 ಈಗ ನಿಮ್ಮ ಸಿಗ್ನೇಚರ್‌ಗಾಗು ಟೆಕ್ಸ್ಟ್‌ ಅನ್ನು ನಮೂದಿಸಿ.
ಹಂತ:7 ಒಕೆ ಟ್ಯಾಪ್ ಮಾಡಿ.

ಐಒಎಸ್‌ ಅಪ್ಲಿಕೇಶನ್ ಬಳಸುವಾಗ ಜಿ-ಮೇಲ್‌ನಲ್ಲಿ ಸಿಗ್ನೇಚರ್‌ ಕ್ರಿಯೆಟ್‌ ಮಾಡುವುದು ಹೇಗೆ?

ಐಒಎಸ್‌ ಅಪ್ಲಿಕೇಶನ್ ಬಳಸುವಾಗ ಜಿ-ಮೇಲ್‌ನಲ್ಲಿ ಸಿಗ್ನೇಚರ್‌ ಕ್ರಿಯೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಐಫೋನ್‌ ನಲ್ಲಿ, ಜಿ-ಮೇಲ್ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಮೆನು ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ಇದೀಗ, ಕೆಳಕ್ಕೆ ಸ್ಕ್ರಾಲ್ ಮಾಡಿ, ನಂತರ ಸೆಟ್ಟಿಂಗ್ಸ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ನಂತರ, ನಿಮ್ಮ ಖಾತೆಯ ಹೆಸರನ್ನು ಟ್ಯಾಪ್ ಮಾಡಿ.
ಹಂತ:5 ಸಿಗ್ನೇಚರ್‌ ಸೆಟ್ಟಿಂಗ್ಸ್‌ ಟ್ಯಾಪ್ ಮಾಡಿ.
ಹಂತ:6 ಇದೀಗ 'ಮೊಬೈಲ್ ಸಿಗ್ನೇಚರ್' ಸೆಟ್ಟಿಂಗ್ ಅನ್ನು ಆನ್ ಮಾಡಿ.
ಹಂತ:7 ನಿಮ್ಮ ಮೊಬೈಲ್ ಸಿಗ್ನೇಚರ್‌ ಅನ್ನು ಸೇರಿಸಿ.
ಹಂತ:8 ಇದೀಗ ಸೇವ್‌ ಮಾಡಲು ಬ್ಯಾಕ್‌ ಬಟನ್ ಟ್ಯಾಪ್ ಮಾಡಿ.

Most Read Articles
Best Mobiles in India

Read more about:
English summary
Gmail enables users to create a signature that is attached to every email that they share automatically.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X