ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ ಬದಲಾಯಿಸಲು ಹೀಗೆ ಮಾಡಿ?

|

ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್ ಭಾರತದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಪ್ರಮುಖ ಸ್ಟ್ರೀಮಿಂಗ್ ಸೇವೆಗಳಲ್ಲಿ ಒಂದಾಗಿದೆ. ಇನ್ನು ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರು ವಿಷಯವನ್ನು ಸ್ಟ್ರೀಮ್ ಮಾಡಬಹುದಾದ ಸ್ಕ್ರೀನ್‌ಗಳ ಸಂಖ್ಯೆ ಮತ್ತು HD ಮತ್ತು ಅಲ್ಟ್ರಾ HD ವೀಡಿಯೊ ಗುಣಮಟ್ಟದ ಲಭ್ಯತೆಯ ಆಧಾರದ ಮೇಲೆ ಪ್ಲಾನ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಸದ್ಯ ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಮೊಬೈಲ್, ಬೇಸಿಕ್, ಸ್ಟ್ಯಾಂಡರ್ಡ್ ಮತ್ತು ಪ್ರೀಮಿಯಂ ಸೇರಿದಂತೆ ಒಟ್ಟು ನಾಲ್ಕು ಪ್ಲಾನ್‌ಗಳನ್ನು ನೀಡುತ್ತಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ಪ್ಲಾಟ್‌ಫಾರ್ಮ್‌ ಭಾರತದಲ್ಲಿ ನಾಲ್ಕು ರೀತಿಯ ಪ್ಲಾನ್‌ಗಳನ್ನು ನೀಡುತ್ತಿದೆ. ಇದರಿಂದ ಬಳಕೆದಾರರು ತಮ್ಮ ಆಯ್ಕೆಯ ಪ್ಲಾನ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಇನ್ನು ನೆಟ್‌ಫ್ಲಿಕ್ಸ್‌ ಇತ್ತಿಚಿಗೆ ತನ್ನ ಬಳಕೆದಾರರ ಸಂಖ್ಯೆಯಲ್ಲಿ ಕುಸಿತವನ್ನು ಕಂಡಿದ್ದು, ಅಗ್ಗದ ಬೆಲೆಯಲ್ಲಿ ಜಾಹೀರಾತು-ಬೆಂಬಲಿತ ಪ್ಲಾನ್‌ ಪರಿಚಯಿಸಲು ಮುಂದಾಗಿದೆ. ಹಾಗಾದ್ರೆ ನೀವು ಕೂಡ ನಿಮ್ಮ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಪ್ಲಾನ್‌ ಅನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ ಬದಲಾಯಿಸುವುದು ಹೇಗೆ?

ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ ಬದಲಾಯಿಸುವುದು ಹೇಗೆ?

ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ ಅನ್ನು ಅಪ್‌ಗ್ರೇಡ್ ಮಾಡಲು ಅಥವಾ ಡೌನ್‌ಗ್ರೇಡ್ ಮಾಡಲು ನೀವು ಪ್ಲಾನ್‌ ಮಾಡಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ನೆಟ್‌ಫ್ಲಿಕ್ಸ್ ಅಪ್ಲಿಕೇಶನ್ ತೆರೆಯಿರಿ ಮತ್ತು ಲಾಗಿನ್ ಮಾಡಿ
ಹಂತ:2 ನಂತರ ಮೆನುವಿನಲ್ಲಿ "ಖಾತೆಗಳು" ವಿಭಾಗಕ್ಕೆ ಹೋಗಿ
ಹಂತ:3 ಇದರಲ್ಲಿ "ಪ್ಲಾನ್‌ ಡಿಟೇಲ್ಸ್‌" ವರ್ಗದ ಅಡಿಯಲ್ಲಿ, ನೀವು "ಚೇಂಜ್‌ ಪ್ಲಾನ್‌" ಆಯ್ಕೆಯನ್ನು ನೋಡುತ್ತೀರಿ
ಹಂತ:4 ಈಗ ನಿಮ್ಮ ಆದ್ಯತೆಯ ಪ್ಲಾನ್‌ಗಳನ್ನು ಆಯ್ಕೆಮಾಡಿ ಮತ್ತು "ಕಂಟಿನ್ಯೂ" ಕ್ಲಿಕ್ ಮಾಡಿ
ಹಂತ:5 ಅಂತಿಮವಾಗಿ, "ಸೇವ್‌ ಆಂಡ್‌ ಅಪ್ಡೇಟ್‌" ಕ್ಲಿಕ್ ಮಾಡಿ ಮತ್ತು ನೀವು ಬಯಸಿದ ಪ್ಲಾನ್‌ಗೆ ಬದಲಾಗಿ.

ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ನಲ್ಲಿ ನೀವು ನಿಮ್ಮ ಯೋಜನೆಯನ್ನು ಅಪ್‌ಗ್ರೇಡ್ ಮಾಡಿದ್ದರೆ, ಅದು ತಕ್ಷಣವೇ ಕಾರ್ಯಗತಗೊಳ್ಳುತ್ತದೆ. ನೆಟ್‌ಫ್ಲಿಕ್ಸ್ ಪ್ರಿಪೇಯ್ಡ್ ಸೇವೆಯಾಗಿರುವುದರಿಂದ, ನಿಮ್ಮ ಕೊನೆಯ ಪಾವತಿಯ ಉಳಿದ ಬಾಕಿಯ ಆಧಾರದ ಮೇಲೆ ನಿಮ್ಮ ಬಿಲ್ಲಿಂಗ್ ಡೇಟ್‌ ಬದಲಾಗುತ್ತದೆ. ಆದರೆ ನಿಮ್ಮ ಯೋಜನೆಯನ್ನು ಕಡಿಮೆ ಬೆಲೆಗೆ ನೀವು ಡೌನ್‌ಗ್ರೇಡ್ ಮಾಡಿದ್ದರೆ, ಅದು ನಿಮ್ಮ ಮುಂದಿನ ಬಿಲ್ಲಿಂಗ್ ದಿನಾಂಕದಂದು ಬದಲಾಗಲಿದೆ. ಆದ್ದರಿಂದ, ಮುಂದಿನ ಬಿಲ್ಲಿಂಗ್ ಡೇಟ್‌ ತನಕ ನೀವು ಹೈ-ಎಂಡ್ ಪ್ಲಾನ್ ಫೀಚರ್ಸ್‌ಗಳನ್ನು ಬಳಸಬಹುದು.

ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ಗಳು

ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ಗಳು

149 ರೂ ಮೊಬೈಲ್ ಪ್ಲಾನ್‌
ನೆಟ್‌ಫ್ಲಿಕ್ಸ್‌ 149ರೂ. ಮಾಸಿಕ ಬೆಲೆಯಲ್ಲಿ ಮೊಬೈಲ್‌ ಪ್ಲಾನ್‌ ನೀಡುತ್ತಿದೆ. ಈ ಯೋಜನೆಯು ಉತ್ತಮ ವೀಡಿಯೊ ಸ್ಟ್ರೀಮಿಂಗ್ ಗುಣಮಟ್ಟವನ್ನು (480p) ನೀಡುತ್ತದೆ. ಇದು ಒಂದು ಮೊಬೈಲ್ ಮತ್ತು ಒಂದು ಟ್ಯಾಬ್ಲೆಟ್ ಪರದೆಗೆ ಮಾತ್ರ ಪ್ರವೇಶವನ್ನು ಅನುಮತಿಸುತ್ತದೆ.

199ರೂ.ಬೇಸಿಕ್‌ ಪ್ಲಾನ್‌
199ರೂ.ಮಾಸಿಕ ಬೆಲೆಯಲ್ಲಿ ಬೇಸಿಕ್‌ ಪ್ಲಾನ್‌ ನೀಡುತ್ತಿದೆ. ಈ ಪ್ಲಾನ್‌ 480p ರೆಸಲ್ಯೂಶನ್‌ನ ವೀಡಿಯೊ ಗುಣಮಟ್ಟವನ್ನು ನೀಡಲಿದೆ. ಇದರಲ್ಲಿ ಮೊಬೈಲ್, ಟ್ಯಾಬ್ಲೆಟ್, ಟಿವಿ ಮತ್ತು ಕಂಪ್ಯೂಟರ್‌ನಲ್ಲಿ ಪ್ರವೇಶವನ್ನು ನೀಡುತ್ತದೆ

ಪ್ಲಾನ್‌

499ರೂ. ಸ್ಟ್ಯಾಂಡರ್ಡ್‌ ಪ್ಲಾನ್‌
ಸ್ಟ್ಯಾಂಡರ್ಡ್ ಯೋಜನೆಯು ತಿಂಗಳಿಗೆ 499ರೂ. ಶುಲ್ಕ ವಿಧಿಸುತ್ತದೆ. ಈ ಪ್ಲಾನ್‌ನಲ್ಲಿ ನೀವು 1080pರೆಸಲ್ಯೂಶನ್ ವೀಡಿಯೊಗಳನ್ನು ಸ್ಟ್ರೀಮಿಂಗ್‌ ಮಾಡಬಹುದಾಗಿದೆ. ಇದರಲ್ಲಿ ಬಳಕೆದಾರರು ಮೊಬೈಲ್, ಟ್ಯಾಬ್ಲೆಟ್, ಟಿವಿ ಮತ್ತು ಕಂಪ್ಯೂಟರ್‌ನಲ್ಲಿ ಸೇವೆಯನ್ನು ಪ್ರವೇಶಿಸಬಹುದು.

649ರೂ.ಪ್ರೀಮಿಯಂ ಪ್ಲಾನ್‌
ಈ ಪ್ಲಾನ್‌ ಭಾರತದಲ್ಲಿ ತಿಂಗಳಿಗೆ 649 ರೂ. ಬೆಲೆಯನ್ನು ಹೊಂದಿದೆ. ಇದು 4K+HDR ರೆಸಲ್ಯೂಶನ್ ನೀಡುತ್ತದೆ. ಈ ಪ್ಲಾನ್‌ನಲ್ಲಿ ಮೊಬೈಲ್, ಟ್ಯಾಬ್ಲೆಟ್, ಟಿವಿ ಮತ್ತು ಕಂಪ್ಯೂಟರ್‌ನಲ್ಲಿ ಪ್ರವೇಶವನ್ನು ನೀಡುತ್ತದೆ.

Best Mobiles in India

English summary
Netflix is one of the most expensive yet popular streaming services in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X