ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಸಾಲ ಪಡೆದುಕೊಂಡಿದ್ದರೆ ಮಾಹಿತಿ ತಿಳಿಯುವುದು ಹೇಗೆ?

|

ಭಾರತದಲ್ಲಿ ಬ್ಯಾಂಕಿಂಗ್‌ ಹಾಗೂ ಹಣಕಾಸು ವ್ಯವಹಾರ ನಡೆಸುವಾಗ ಪ್ಯಾನ್‌ಕಾರ್ಡ್‌ ಅವಶ್ಯಕವಾಗಿದೆ. ಇದೇ ಕಾರಣಕ್ಕೆ ಬ್ಯಾಕಿಂಗ್‌ ವ್ಯವಹಾರ ನಡೆಸುವ ಪ್ರತಿಯೊಬ್ಬರೂ ಪ್ಯಾನ್‌ ಕಾರ್ಡ್‌ ಪಡೆಯುವುದಕ್ಕೆ ಬಯಸುತ್ತಾರೆ. ಇನ್ನು ಪ್ಯಾನ್‌ಕಾರ್ಡ್‌ ಹತ್ತು-ಅಂಕಿಯ ಆಲ್ಫಾನ್ಯೂಮರಿಕ್ ಸಂಖ್ಯೆಯನ್ನು ಹೊಂದಿದ್ದು, ಇದನ್ನು ಆದಾಯ ತೆರಿಗೆ ಇಲಾಖೆಯು ನೀಡುತ್ತದೆ. ಆದಾಯ ತೆರಿಗೆ ಪಾವತಿಸುವವರು, ಹೆಚ್ಚಿನ ಹಣಕಾಸು ವ್ಯವಹಾರ ನಡೆಸುವವರು ಪ್ಯಾನ್‌ಕಾರ್ಡ್‌ ಬಳಸಬೇಕಾಗುತ್ತದೆ.

ಹೊಂದಿರಬೇಕಾದ

ಹೌದು, ಪ್ಯಾನ್‌ ಕಾರ್ಡ್‌ ಅನ್ನು ಪ್ರತಿಯೊಬ್ಬರೂ ಹೊಂದಿರಬೇಕಾದ ಅಗತ್ಯವಿದೆ. ಆರ್ಥಿಕ ಅಥವಾ ಹಣಕಾಸಿನ ವಹಿವಾಟುಗಳಿಗೆ ಪ್ರವೇಶಿಸಲು ಉದ್ದೇಶಿಸಿರುವ ಯಾವುದೇ ವ್ಯಕ್ತಿಯೂ ಸಹ ಪ್ಯಾನ್‌ ಕಾರ್ಡ್‌ ಪಡೆಯಬೇಕು. ಏಕೆಂದರೆ ಪ್ಯಾನ್ ಕಾರ್ಡ್‌ ಒಬ್ಬ ವ್ಯಕ್ತಿಯ ಎಲ್ಲಾ ತೆರಿಗೆ-ಸಂಬಂಧಿತ ವಹಿವಾಟುಗಳನ್ನು ಟ್ರ್ಯಾಕ್ ಮಾಡುತ್ತದೆ. ಅಲ್ಲದೆ ಆದಾಯ ತೆರಿಗೆ ಇಲಾಖೆಯು ತೆರಿಗೆ ಪಾವತಿಗಳ ಅನುಸರಣೆಯನ್ನು ಪರಿಶೀಲಿಸಲು ಇದು ಅನುಮತಿಸುತ್ತದೆ. ಹಾಗಾದ್ರೆ ಪ್ಯಾನ್‌ ಕಾರ್ಡ್‌ ಮೂಲಕ ತಮ್ಮ ಹೆಸರಿನಲ್ಲಿ ಸಾಲ ಪಡೆದಿರುವ ಬಗ್ಗೆ ತಿಳಿಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಯಾನ್‌ ಕಾರ್ಡ್‌

ಪ್ಯಾನ್‌ ಕಾರ್ಡ್‌ ನಿಮ್ಮ ಎಲ್ಲಾ ಹಣಕಾಸು ಸಂಬಂಧಿತ ಬ್ಯಾಂಕಿಂಗ್‌ ವಹಿವಾಟುಗಳನ್ನು ಟ್ರ್ಯಾಕ್‌ ಮಾಡುತ್ತದೆ. ಇದರಿಂದ ನಿಮ್ಮ ತೆರಿಗೆ ಪಾವತಿ ವ್ಯವಹಾರಗಳ ಬಗ್ಗೆ ಗಮನವಿರಿಸಲು ಆದಾಯ ತೆರಿಗೆ ಇಲಾಖೆಗೆ ಅವಕಾಶ ನೀಡಲಿದೆ. ಅಲ್ಲದೆ ನೀವು ಯಾವುದೇ ಹಣಕಾಸು ಸಂಸ್ಥೆಯಿಂದ ತೆಗೆದುಕೊಂಡ ಪ್ರತಿಯೊಂದು ಸಾಲವನ್ನು ಆಯಾ ಪ್ಯಾನ್‌ ಕಾರ್ಡ್‌ನಲ್ಲಿ ದಾಖಲಿಸಲಾಗುತ್ತದೆ. ಇಂದಿನ ದಿನಗಳಲ್ಲಿ ಬೇರೆಯವರ ಪ್ಯಾನ್‌ಕಾರ್ಡ್‌ ಮೂಲಕ ಸಾಲ ಪಡೆದು ವಂಚಿಸುವ ಘಟನೆಗಳು ನಡೆಯುತ್ತಲೇ ಇವೆ. ಆದರಿಂದ ಪ್ಯಾನ್‌ಕಾರ್ಡ್‌ ಮೂಲಕ ನಿಮ್ಮ ಹೆಸರಿನಲ್ಲಿ ಏನಾದ್ರೂ ಸಾಲ ಇದೆಯಾ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಪ್ಯಾನ್ ಕಾರ್ಡ್ ಮೂಲಕ ಸಾಲದ ವಿವರವನ್ನು ಚೆಕ್‌ ಮಾಡುವುದು ಹೇಗೆ?

ಪ್ಯಾನ್ ಕಾರ್ಡ್ ಮೂಲಕ ಸಾಲದ ವಿವರವನ್ನು ಚೆಕ್‌ ಮಾಡುವುದು ಹೇಗೆ?

* ಕ್ರೆಡಿಟ್ ಸ್ಕೋರ್‌ಗಳು ನಿಮ್ಮ ಎಲ್ಲಾ ಸಾಲ ನೀಡುವ ಆಕ್ಟಿವಿಟಿಯನ್ನು ಟ್ರ್ಯಾಕ್ ಮಾಡುತ್ತವೆ, ಇದು ಸಾಲಗಳಿಗೂ ಅನ್ವಯಿಸುತ್ತದೆ.
* ಕ್ರೆಡಿಟ್ ಸ್ಕೋರ್‌ಗಳನ್ನು ಅಪ್ಡೇಟ್‌ ಮಾಡುವ ಅನೇಕ ಯೂನಿಟ್‌ಗಳಿವೆ. ಇದರಿಂದ ಹಣಕಾಸಿನ ಸಂಸ್ಥೆಗಳಿಗೆ ರಿ-ಪೇಮೆಂಟ್‌ ಹಿಸ್ಟರಿಯನ್ನು ವಿಶ್ಲೇಷಿಸುವ ಮಾರ್ಗವನ್ನು ಒದಗಿಸಲಿದೆ.
* ಕ್ರೆಡಿಟ್ ಸ್ಕೋರ್‌ಗಳನ್ನು ಲೆಕ್ಕಾಚಾರ ಮಾಡುವ ಮತ್ತು ರೆಕಾರ್ಡ್ ಮಾಡುವ ಯೂನಿಟ್‌ಗಳ ಮೂಲಕ CIBIL ಸ್ಕೋರ್‌ ತಿಳಿಯಬಹುದು.
* ಈ ಯೂನಿಟ್‌ಗಳ ಮೂಲಕ ಇತ್ತೀಚಿನ ಕ್ರೆಡಿಟ್ ಸ್ಕೋರ್‌ಗಳನ್ನು ಒದಗಿಸುತ್ತವೆ. ಈ ಕ್ರೆಡಿಟ್ ಸ್ಕೋರ್‌ ರಿಪೋರ್ಟ್‌ನಲ್ಲಿ ನಿಮ್ಮ ಹೆಸರಿನಲ್ಲಿ ಯಾವುದಾದರೂ ಸಾಲದ ವಿವರ ಇದ್ದರೆ ಕಾಣಲಿದೆ.
* ಒಂದು ವೇಳೆ ನಿಮ್ಮ ಗಮನಕ್ಕೆ ಬಾರದ ಸಾಲದ ವಿವರ ಕಂಡು ಬಂದರೆ, ನಿಮ್ಮ ಪ್ಯಾನ್ ಕಾರ್ಡ್ ದುರುಪಯೋಗವಾಗಿರುವ ಸಾದ್ಯತೆಯಿರಲಿದೆ.

ಕ್ರೆಡಿಟ್

ಇದಲ್ಲದೆ ನೀವು ನಿಮ್ಮ ಇತ್ತೀಚಿನ ಕ್ರೆಡಿಟ್ ಸ್ಕೋರ್‌ಗಳನ್ನು ಪಡೆಯಲು ನೀವು ಕ್ರೆಡಿಟ್ ಬ್ಯೂರೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಇತ್ತೀಚಿನ ಕ್ರೆಡಿಟ್ ಸ್ಕೋರ್‌ಗಳನ್ನು ಪಡೆಯುವುದಕ್ಕೆ ನೀವು ನಿಮ್ಮ ಕೆಲವು ವೈಯಕ್ತಿಕ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಖಾತೆಯಲ್ಲಿ ನೀವು ಕೆಲವು ಅನುಮಾನಾಸ್ಪದ ಆಕ್ಟಿವಿಟಿಯನ್ನು ಗುರುತಿಸಿದರೆ, ಹೆಚ್ಚಿನ ವಿವರಗಳನ್ನು ಪಡೆಯಲು ನೀವು ಅದನ್ನು ಸಂಬಂಧಿತ ಹಣಕಾಸು ಸಂಸ್ಥೆಗೆ ವರದಿ ಮಾಡುವುದಕ್ಕೆ ಅವಕಾಶ ಕೂಡ ದೊರೆಯಲಿದೆ.

Best Mobiles in India

English summary
Here’s how to check online if your PAN card was used to take a loan?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X