ಇನ್‌ಸ್ಟಾಗ್ರಾಮ್‌ನಲ್ಲಿ ಬೂಮ್‌ರಾಂಗ್, ಹೈಪರ್ಲ್ಯಾಪ್ಸ್ ಫೀಚರ್ಸ್‌ ಬಳಸುವುದು ಹೇಗೆ?

|

ಇನ್‌ಸ್ಟಾಗ್ರಾಮ್‌ ಬಳಕೆದಾರರ ನೆಚ್ಚಿನ ಫೋಟೋ ಮತ್ತು ವೀಡಿಯೋ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ತನ್ನ ಆಕರ್ಷಕ ಫೀಚರ್ಸ್‌ಗಳ ಕಾರಣದಿಂದ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದರ ನಡುವೆ ಇದೀಗ ಇನ್‌ಸ್ಟಾಗ್ರಾಮ್‌ ತನ್ನ ಬೂಮರಾಂಗ್ ಮತ್ತು ಹೈಪರ್ಲ್ಯಾಪ್ಸ್ ಎಂಬ ಎರಡು ಅಪ್ಲಿಕೇಶನ್‌ಗಳನ್ನು ಸ್ಥಗಿತಗೊಳಿಸಿದೆ. ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಆಪಲ್‌ ಆಪ್‌ ಸ್ಟೋರ್‌ನಿಂದ ತೆಗೆದುಹಾಕಿದೆ. ಅಲ್ಲದೆ ಈ ತಿಂಗಳ ಕೊನೆಯಲ್ಲಿ IGTV ಅಪ್ಲಿಕೇಶನ್ ಅನ್ನು ಕೂಡ ತೆಗೆದುಹಾಕುವುದಾಗಿ ಈಗಾಗಲೇ ದೃಢಪಡಿಸಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ತನ್ನ ಬೂಮ್‌ರಾಂಗ್‌ ಮತ್ತು ಹೈಪರ್ಲ್ಯಾಪ್ಸ್‌ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಈ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವುದಕ್ಕೆ ಯಾವುದೇ ಅಧಿಕೃತ ಕಾರಣವನ್ನು ನೀಡಿಲ್ಲ. ಆದರೆ ಬೂಮರಾಂಗ್ ಅಪ್ಲಿಕೇಶನ್‌ ಇಲ್ಲದೆ ಹೋದರೂ ಬೂಮ್‌ರಾಗ್‌ ಫೀಚರ್ಸ್‌ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನ ಮುಖ್ಯ ಭಾಗವಾಗಿದೆ. ಹೈಪರ್ಲ್ಯಾಪ್ಸ್ ಫೀಚರ್ಸ್‌ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಇಲ್ಲ. ಆದ್ದರಿಂದ, ನೀವು ಕೆಲವು ಪರ್ಯಾಯಗಳನ್ನು ಬಳಸಬೇಕಾಗುತ್ತದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ಬೂಮ್‌ರಾಗ್‌ ಫೀಚರ್ಸ್‌ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ

ಇನ್‌ಸ್ಟಾಗ್ರಾಮ್‌ ಆಪ್‌ ಮೂಲಕ ಬೂಮ್‌ರಾಂಗ್ ವೀಡಿಯೊಗಳನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ಆಪ್‌ ಮೂಲಕ ಬೂಮ್‌ರಾಂಗ್ ವೀಡಿಯೊಗಳನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ
ಹಂತ:2 ಆಪ್‌ ಮೇಲಿನ ಎಡ ಮೂಲೆಯಲ್ಲಿರುವ 'ಯುವರ್ ಸ್ಟೋರಿ' ಆಯ್ಕೆಯನ್ನು ಟ್ಯಾಪ್ ಮಾಡಿ
ಹಂತ:3 ಇದರಲ್ಲಿ 'ಕ್ಯಾಮೆರಾ' ಆಯ್ಕೆಯನ್ನು ಟ್ಯಾಪ್ ಮಾಡಿ
ಹಂತ:4 ಇಲ್ಲಿ ನೀವು ವ್ಯೂಫೈಂಡರ್ ಸ್ಕ್ರೀನ್‌ನ ಎಡಭಾಗದಲ್ಲಿ ಬಹು ಆಯ್ಕೆಗಳನ್ನು ಕಾಣಬಹುದು.
ಹಂತ:5 ಈ ಆಯ್ಕೆಗಳನ್ನು ವಿಸ್ತರಿಸಲು ಕೆಳಗಿನ ಬಾಣದ ಮೇಲೆ ಟ್ಯಾಪ್ ಮಾಡಿ ಮತ್ತು ಇದರಲ್ಲಿ ಬೂಮರಾಂಗ್ ಆಯ್ಕೆಯನ್ನು ಆರಿಸಿ
ಹಂತ:6 ಇದೀಗ ನೀವು ವೀಡಿಯೊವನ್ನು ರೆಕಾರ್ಡ್ ಮಾಡುವುದನ್ನು ಪ್ರಾರಂಭಿಸಲು ಶಟರ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.

ಹೀಗೆ ಮಾಡುವ ಮೂಲಕ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಬೂಮ್‌ರಾಂಗ್‌ ವೀಡಿಯೋ ಕ್ರಿಯೆಟ್‌ ಮಾಡಬಹುದಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹೈಪರ್ಲ್ಯಾಪ್ಸ್ ವೀಡಿಯೊ ಕ್ರಿಯೆಟ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಹೈಪರ್ಲ್ಯಾಪ್ಸ್ ವೀಡಿಯೊ ಕ್ರಿಯೆಟ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಹೈಪರ್ಲ್ಯಾಪ್ಸ್‌ ವೀಡಿಯೊ ಕ್ರಿಯೆಟ್‌ ಮಾಡಬೇಕಾದರೆ ನಿವು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಅಥವಾ ಸ್ಮಾರ್ಟ್‌ಫೋನ್‌ನ ಕ್ಯಾಮರಾ ಅಪ್ಲಿಕೇಶನ್ ಅನ್ನು ಅವಲಂಬಿಸಬೇಕಾಗುತ್ತದೆ. ಹೈಪರ್ಲ್ಯಾಪ್ಸ್ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಮತ್ತು ನಂತರ ಅವುಗಳನ್ನು ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್ ಮಾಡಲು ಮೈಕ್ರೋಸಾಫ್ಟ್ ಹೈಪರ್ಲ್ಯಾಪ್ಸ್ ಮೊಬೈಲ್ ಅಥವಾ ಫ್ರೇಮ್‌ಲ್ಯಾಪ್ಸ್‌ನಂತಹ ಥರ್ಡ್‌ ಪಾಟಿ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದೆ.

ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್‌ ಖಾತೆಗಳನ್ನು ಲಿಂಕ್ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್‌ ಖಾತೆಗಳನ್ನು ಲಿಂಕ್ ಮಾಡುವುದು ಹೇಗೆ?

ಹಂತ:1 ನೀವು ನಿಮ್ಮ Instagram ಪ್ರೊಫೈಲ್‌ಗೆ ಹೋಗಿ ಮತ್ತು ಮೂರು-ಚುಕ್ಕೆಗಳ ಮೆನು ಟ್ಯಾಪ್ ಮಾಡಿ. ನಂತರ ನೀವು ಸೆಟ್ಟಿಂಗ್ಸ್‌ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.
ಹಂತ:2 ಖಾತೆ> ಲಿಂಕ್ ಮಾಡಿದ ಖಾತೆಗಳನ್ನು ಟ್ಯಾಪ್ ಮಾಡಿ.
ಹಂತ:3 ಫೇಸ್‌ಬುಕ್ ಟ್ಯಾಪ್ ಮಾಡಿ ಮತ್ತು ನಿಮ್ಮ ಫೇಸ್‌ಬುಕ್ ಲಾಗಿನ್ ಮಾಹಿತಿಯನ್ನು ನಮೂದಿಸಿ.
ಒಮ್ಮೆ ನೀವು ಖಾತೆಗಳನ್ನು ಲಿಂಕ್ ಮಾಡಿದ ನಂತರ, ಅದೇ ಪರದೆಯಿಂದ ಫೇಸ್‌ಬುಕ್‌ನಲ್ಲಿ ಯಾವುದೇ ಪೋಸ್ಟ್ ಅನ್ನು ಹಂಚಿಕೊಳ್ಳಬಹುದು.

ಇನ್‌ಸ್ಟಾಗ್ರಾಮ್‌ ನಿಂದ ಫೇಸ್‌ಬುಕ್ ಪ್ರೊಫೈಲ್ ಅನ್ನು ಡಿಲಿಂಕ್ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ನಿಂದ ಫೇಸ್‌ಬುಕ್ ಪ್ರೊಫೈಲ್ ಅನ್ನು ಡಿಲಿಂಕ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.
ಹಂತ:2 ನಂತರ ಮೇಲಿನ ಬಲಭಾಗದಲ್ಲಿರುವ ಆಯ್ಕೆಯ ಮೇಲೆ ಟ್ಯಾಪ್ ಮಾಡಿ, ನಂತರ ಸೆಟ್ಟಿಂಗ್‌ಗಳ ಮೇಲೆ ಟ್ಯಾಪ್ ಮಾಡಿ.
ಹಂತ:3 ಇಲ್ಲಿ, ಕೆಳಭಾಗದಲ್ಲಿರುವ ಅಕೌಂಟ್‌ಗಳ ಸೆಂಟರ್‌ ಅನ್ನು ಟ್ಯಾಪ್ ಮಾಡಿ, ನಂತರ ಮೇಲ್ಭಾಗದಲ್ಲಿ ನಿಮ್ಮ ಹೆಸರನ್ನು ಟ್ಯಾಪ್ ಮಾಡಿ.
ಹಂತ:4 ನಿಮ್ಮ ಸಂಪರ್ಕಿತ ಖಾತೆಯನ್ನು ಟ್ಯಾಪ್ ಮಾಡಿ, ಮುಂದುವರಿಸಿ ಟ್ಯಾಪ್ ಮಾಡಿ ಮತ್ತು ಅಕೌಂಟ್‌ ಸೆಂಟರ್‌ನಿಂದ ತೆಗೆದುಹಾಕಿ.
ಹಂತ:5 ಇದೀಗ ಕಂಟಿನ್ಯೂ ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ರಿಮೂವ್‌ ಮೇಲೆ ಟ್ಯಾಪ್ ಮಾಡಿ. ನಿಮ್ಮ ಖಾತೆಗಳನ್ನು ಈಗ ಅನ್‌ಲಿಂಕ್ ಮಾಡಲಾಗುತ್ತದೆ.

Best Mobiles in India

Read more about:
English summary
Here's how to create Boomerang and Hyperlapse videos using the Instagram app

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X