ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಅನ್ನು ಫಾರ್ಮ್ಯಾಟ್ ಮಾಡಲು ಈ ಕ್ರಮ ಅನುಸರಿಸಿ!

|

ನೀವು ಹೊಸ ಸ್ಮಾರ್ಟ್‌ಫೋನ್‌ ತೆಗೆದುಕೊಂಡಾಗ ಹಳೆ ಸ್ಮಾರ್ಟ್‌ಫೋನಿನ ಡೇಡಾವನ್ನು ಹೊಸ ಫೋನಿಗೆ ವರ್ಗಾಯಿಸಿಕೊಳ್ಳುವುದು ಸಾಮಾನ್ಯ. ಒಂದು ವೇಳೆ ನೀವು ನಿಮ್ಮ ಹಳೆ ಸ್ಮಾರ್ಟ್‌ಫೋನ್‌ ಅನ್ನು ನಿಮ್ಮ ಸ್ನೇಹಿತರು, ಇಲ್ಲವೇ ನಿಮ್ಮ ಕುಟುಂಬದವರಿಗೆ ನೀಡುವಾಗ ಫೋನಿನಲ್ಲಿರುವ ಡೇಟಾವನ್ನು ಫಾರ್ಮ್ಯಾಟ್‌ ಮಾಡುವುದು ಅವಶ್ಯಕ. ನೀವು ನಿಮ್ಮ ಹಳೆ ಫೋನಿನಲ್ಲಿರುವ ಡೇಟಾವನ್ನು ಕಾಪಿ ಮಾಡಿಕೊಂಡ ನಂತರ ಫಾರ್ಮ್ಯಾಟ್‌ ಮಾಡುವುದು ಅಗತ್ಯವಾಗಿದೆ. ಆದರೆ ಕೆಲವು ಫೋನ್‌ಗಳಲ್ಲಿ ಫಾರ್ಮ್ಯಾಟ್‌ ಮಾಡುವುದು ಹೇಗೆ ಅನ್ನೊದು ತಿಳಿಯುವುದೇ ಇಲ್ಲ.

ಫಾರ್ಮ್ಯಾಟ್‌

ಹೌದು, ಹಳೆ ಸ್ಮಾರ್ಟ್‌ಫೋನಿನಲ್ಲಿರುವ ಡೇಟಾವನ್ನು ಫಾರ್ಮ್ಯಾಟ್‌ ಮಾಡುವುದು ತುಂಬಾ ಅವಶ್ಯಕವಾಗಿದೆ. ಏಕೆಂದರೆ ನಿಮ್ಮ ಡೇಟಾ ಬೇರೆಯವರಿಗೆ ತಿಳಿಯದಂತೆ ಮಾಡುವುದು ಇದರ ಉದ್ದೇಶವಾಗಿದೆ. ಅಲ್ಲದೆ ಕೆಲವು ಸಂದರ್ಭದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ರಿಸೆಟ್‌ ಮಾಡುವ ಆಸೆ ಬರಬಹುದು. ಇಂತಹ ಸನ್ನಿವೇಶದಲ್ಲಿ ನಿಮ್ಮ ಫೋನ್‌ ಅನ್ನು ಫಾರ್ಮ್ಯಾಟ್‌ ಮಾಡಿದರೆ ಎಲ್ಲಾ ಸೆಟ್ಟಿಂಗ್‌ಗಳನ್ನು ಡೀಫಾಲ್ಟ್‌ಗೆ ರಿಸ್ಟೋರ್‌ ಮಾಡಲಾಗುತ್ತದೆ. ಇದು ಲಾಗ್ ಇನ್ ಮಾಡಿದ ಅಪ್ಲಿಕೇಶನ್‌ಗಳು, ಫೋಟೋಗಳು ಮತ್ತು ನಿಮ್ಮ ಸಂದೇಶಗಳನ್ನು ಒಳಗೊಂಡಂತೆ ಸ್ಮಾರ್ಟ್‌ಫೋನ್‌ನಲ್ಲಿರುವ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಅಳಿಸಿಹಾಕುತ್ತದೆ. ಹಾಗಾದ್ರೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಅನ್ನು ಫಾರ್ಮ್ಯಾಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ರೀಸೆಟ್ ಮಾಡುವುದು ಹೇಗೆ?

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ರೀಸೆಟ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಫೋನಿನ ಸೆಟ್ಟಿಂಗ್ಸ್‌ ಅಪ್ಲಿಕೇಶನ್ ತೆರೆಯಿರಿ ಮತ್ತು ಸಿಸ್ಟಮ್ ಅನ್ನು ಟ್ಯಾಪ್ ಮಾಡಿ.
ಹಂತ:2 ಇದರಲ್ಲಿ ರಿಸೆಟ್‌ ಮಾಡುವ ಆಯ್ಕೆಗಳನ್ನು ಆಯ್ಕೆಮಾಡಿ.
ಹಂತ:3 ಇದೀಗ ಲಿಸ್ಟ್‌ನ ಕೆಳಭಾಗದಲ್ಲಿ ಎಲ್ಲಾ ಡೇಟಾವನ್ನು ಅಳಿಸಿ ಆಯ್ಕೆಮಾಡಿ.
ಹಂತ:4 ಡಿಲೀಟ್‌ ಮಾಡಲಾಗುವ ಡೇಟಾಗೆ ಸಂಬಂಧಿಸಿದ ಮಾಹಿತಿಯನ್ನು ಓದಿ, ನಂತರ ಎಲ್ಲಾ ಡೇಟಾವನ್ನು ಅಳಿಸಿ ಟ್ಯಾಪ್ ಮಾಡಿ.
ಹಂತ:5 ನಂತರ ಪ್ರಕ್ರಿಯೆಯನ್ನು ದೃಢೀಕರಿಸಲು ನಿಮ್ಮ ಪಿನ್ ಅಥವಾ ಪಾಸ್ಕೋಡ್ ಅನ್ನು ನಮೂದಿಸಿ.
ಹಂತ:6 ಸ್ಕ್ರೀನ್‌ ಮೇಲೆ ತೋರಿಸುವ ಎಚ್ಚರಿಕೆಯನ್ನು ಪರಿಶೀಲಿಸಿ.
ಹಂತ:7 ಇದೀಗ ನಿಮ್ಮ ಫೋನ್‌ನಲ್ಲಿ ಎಲ್ಲಾ ಡೇಟಾವನ್ನು ಅಳಿಸು ಆಯ್ಕೆಯನ್ನು ಟ್ಯಾಪ್ ಮಾಡಿ.

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿ ಫ್ಯಾಕ್ಟರಿ ರಿಸೆಟ್‌ ಮಾಡುವುದು ಹೇಗೆ?

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿ ಫ್ಯಾಕ್ಟರಿ ರಿಸೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಸೆಟ್ಟಿಂಗ್ಸ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನಂತರ ಅಕೌಂಟ್‌ ಮತ್ತು ಬ್ಯಾಕಪ್ ಆಯ್ಕೆಮಾಡಿ > ಮ್ಯಾನೇಜ್‌ ಅಕೌಂಟ್ಸ್‌.
ಹಂತ:3 ಲಿಸ್ಟ್‌ನಲ್ಲಿ ನಿಮ್ಮ ಸ್ಯಾಮ್‌ಸಂಗ್‌ ಖಾತೆಯನ್ನು ಪತ್ತೆ ಮಾಡಿ ಮತ್ತು ಎಂಟ್ರಿ ಟ್ಯಾಪ್ ಮಾಡಿ, ನಂತರ ರಿಮೂವ್‌ ಅಕೌಂಟ್‌ ಆಯ್ಕೆಮಾಡಿ.
ಹಂತ:4 ಇದೀಗ ಮೇನ್‌ ಸೆಟ್ಟಿಂಗ್ಸ್‌ ಮೆನುಗೆ ಹಿಂತಿರುಗಿ,
ಹಂತ:5 ನಂತರ ಜನರಲ್‌ ಮ್ಯಾನೇಜ್‌ಮೆಂಟ್‌ ಟ್ಯಾಪ್ ಮಾಡಿ.

ರಿಸೆಟ್‌

ಹಂತ:6 ಕೆಳಗೆ ಸ್ಕ್ರಾಲ್ ಮಾಡಿ ಮತ್ತು ರಿಸೆಟ್‌ ಮೇಲೆ ಟ್ಯಾಪ್ ಮಾಡಿ.
ಹಂತ:7 ಇದರಲ್ಲಿ ಫ್ಯಾಕ್ಟರಿ ಡೇಟಾ ರೀಸೆಟ್ ಮೇಲೆ ಟ್ಯಾಪ್ ಮಾಡಿ.
ಹಂತ:8 ಅಳಿಸಲಾಗುವ ಡೇಟಾಗೆ ಸಂಬಂಧಿಸಿದ ಮಾಹಿತಿಯನ್ನು ಓದಿ, ನಂತರ ರಿಸೆಟ್‌ ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ:9 ಡಿಲೀಟ್‌ ಮಾಡಲು ನಿಮ್ಮ ಪಿನ್ ಅಥವಾ ಪಾಸ್ಕೋಡ್ ಅನ್ನು ನಮೂದಿಸಿ.
ಹಂತ:10 ಇದೀಗ ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿ ಎಲ್ಲವನ್ನೂ ಅಳಿಸಿ ಟ್ಯಾಪ್ ಮಾಡಿ.

Best Mobiles in India

English summary
Whether you want a fresh start, or you are switching to a new phone, here’s how to reset your Android phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X