ವಾಟ್ಸಾಪ್‌ ವೆಬ್‌ನಲ್ಲಿ ಡಿಲೀಟ್‌ ಮಾಡಿದ ಮೆಸೇಜ್‌ ಅನ್ನು ಮರಳಿ ಪಡೆಯುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ವಾಟ್ಸಾಪ್‌ ಪ್ರತಿಯೊಬ್ಬರೂ ಉಪಯೋಗಿಸುವ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಒಂದೆನಿಸಿಕೊಂಡಿದೆ. ಮೆಟಾ ಒಡೆತನದ ವಾಟ್ಸಾಪ್‌ ತನ್ನ ಆಕರ್ಷಕ ಫೀಚರ್ಸ್‌ಗಳ ಮೂಲಕ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಇನ್ನು ವಾಟ್ಸಾಪ್‌ ಕೂಡ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದಲ್ಲದೆ ವಾಟ್ಸಾಪ್‌ ವೆಬ್‌ ಆವೃತ್ತಿಯಲ್ಲಿಯೂ ಕೂಡ ಅನೇಕ ಆಕರ್ಷಕ ಫಿಚರ್ಸ್‌ಗಳನ್ನು ಒಳಗೊಂಡಿದೆ. ಇದೇ ಕಾರಣಕ್ಕೆ ವಾಟ್ಸಾಪ್‌ ವೆಬ್‌ ಆವೃತ್ತಿ ಕೂಡ ಹೆಚ್ಚಿನ ಬಳಕೆದಾರರನ್ನು ಸೆಳೆದಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ವೆಬ್‌ ಆವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬಳಕೆದಾರರನ್ನು ಸೆಳೆದಿದೆ. ಕಚೇರಿಗಳಲ್ಲಿ ಕೆಲಸ ಮಾಡುವಾಗ ಲ್ಯಾಪ್‌ಟಾಪ್‌ಗಳಲ್ಲಿ ವಾಟ್ಸಾಪ್‌ ವೆಬ್‌ ತೆರೆದುಕೊಂಡು ಚಾಟ್‌ ಮಾಡುವ ಮಂದಿ ಸಾಕಷ್ಟಿದ್ದಾರೆ. ತಮ್ಮ ಸಹೋದ್ಯೋಗಿಗಳೊಂದಿಗೆ ಸಮನ್ವಯ ಸಾಧಿಸುವುದಕ್ಕೂ ಕೂಡ ಇದು ಉಪಯುಕ್ತವಾಗಿದೆ. ಇನ್ನು ನೀವು ವಾಟ್ಸಾಪ್‌ ವೆಬ್‌ ಆವೃತ್ತಿ ಬಳಸುತ್ತಿದ್ದು, ಬಹುಮುಖ್ಯವಾದ ಚಾಟ್‌ ಅನ್ನು ಆಕಸ್ಮಿಕವಾಗಿ ಡಿಲೀಟ್‌ ಮಾಡಿದರೆ ಪಡೆಯುವುದು ಹೇಗೆ ಎನ್ನುವ ಚಿಂತೆ ಕಾಡೋದು ಸಹಜ. ಹಾಗಂತ ಚಿಂತಿಸಬೇಕಾದ ಅಗತ್ಯವಿಲ್ಲ. ಏಕೆಂದರೆ ವಾಟ್ಸಾಪ್‌ ವೆಬ್‌ ಆವೃತ್ತಿಯಲ್ಲಿ ನೀವು ಡಿಲೀಟ್‌ ಮಾಡಲಾದ ಮೆಸೇಜ್‌ ಅನ್ನು ಮರಳಿ ಪಡೆಯುವುದಕ್ಕೆ ಅವಕಾಶವಿದೆ ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ವೆಬ್‌ನಲ್ಲಿ ಡಿಲೀಟ್‌ ಮಾಡಲಾದ ಮೆಸೇಜ್‌ ಅನ್ನು ರಿಸ್ಟೋರ್‌ ಮಾಡೋಕೆ ಕೆಲವು ನಿಯಮ ಪಾಲಿಸಬೇಕಾಗುತ್ತದೆ. ಅದರಂತೆ ಗೂಗಲ್ ಕ್ರೋಮ್‌ನಲ್ಲಿ ಲಭ್ಯವಿರುವ 'WA Web Plus for WhatsApp' ಎಂಬ ವಿಸ್ತರಣೆಯು ನಿಮ್ಮ ಡಿಲೀಟ್‌ ಮೆಸೇಜ್‌ ಅನ್ನು ಮರಳಿ ಪಡೆಯಲು ಸಹಾಯ ಮಾಡಲಿದೆ. ಡಿಲೀಟ್‌ ಮಾಡಿದ ಸಂದೇಶಗಳನ್ನು ಮರಳಿ ಪಡೆಯಲು, ನಿಮ್ಮ ಆನ್‌ಲೈನ್ ಸ್ಟೇಟಸ್‌ ಅನ್ನು ಹೈಡ್‌ ಮಾಡಲು, ರೆಸಿಪ್ಟ್‌ ರೀಡ್‌ ಮತ್ತು ಸಂಪರ್ಕ ಹೆಸರುಗಳು, ಪ್ರೊಫೈಲ್ ಚಿತ್ರಗಳನ್ನು ಬ್ಲರ್‌ ಮಾಡುವುದಕ್ಕೆ ಅವಕಾಶ ನೀಡುವ ಕಾರ್ಯಗಳನ್ನು ಮಾಡಲು ಇದು ನಿಮಗೆ ಅನುವು ಮಾಡಿಕೊಡುತ್ತದೆ.

ವಾ ವೆಬ್ ಪ್ಲಸ್ ಅನ್ನು ಬಳಸುವುದು ಹೇಗೆ ?

ವಾ ವೆಬ್ ಪ್ಲಸ್ ಅನ್ನು ಬಳಸುವುದು ಹೇಗೆ ?

* ವಾ ವೆಬ್‌ ಪ್ಲಸ್‌ ಫಾರ್‌ ವಾಟ್ಸಾಪ್‌ ವಿಸ್ತರಣೆಯನ್ನು ಇನ್‌ಸ್ಟಾಲ್‌ ಮಾಡಿದ ನಂತರ, ನೀವು ಬಳಸಲು ಬಯಸುವ ಫೀಚರ್ಸ್‌ಗಳನ್ನು ಆನ್ ಮಾಡಲು ವಾ ವೆಬ್‌ ಪ್ಲಸ್‌ನ ಸೆಟ್ಟಿಂಗ್ಸ್‌ ಪೇಜ್‌ಗೆ ಟಾಗಲ್ ಮಾಡಬೇಕು. ಕ್ರೋಮ್‌ನಲ್ಲಿ ನಿಮ್ಮ 'ವಿಸ್ತರಣೆಗಳು' ಬಟನ್ ಮೂಲಕ ಟಾಗಲ್‌ ಮಾಡಬಹುದು. ಇದು URL ಬಾರ್‌ನಲ್ಲಿ ಬಲಕ್ಕೆ ಇರುತ್ತದೆ ಮತ್ತು ಜಿಗ್ಸಾ ಪಜಲ್ ಪೀಸ್‌ನಂತೆ ಆಕಾರವನ್ನು ಹೊಂದಿರುತ್ತದೆ.

* ಇದರಲ್ಲಿ WA Web Plus for WhatsApp ಐಕಾನ್‌ ಮೇಲೆ ಕ್ಲಿಕ್ ಮಾಡಿ. ಸೆಟ್ಟಿಂಗ್ಸ್‌ ಪೇಜ್‌ ತೆರೆದ ನಂತರ, 'ಗೌಪ್ಯತೆ' ಮತ್ತು 'ಕಸ್ಟಮೈಸೇಶನ್‌ಗಳು' ವಿಭಾಗಗಳ ಅಡಿಯಲ್ಲಿ ವರ್ಗೀಕರಿಸಲಾದ ಹಲವಾರು ಆಯ್ಕೆಗಳು ಕಾಣಲಿವೆ. ಇಲ್ಲಿ ಡಿಲೀಟ್‌ ಮಾಡಿದ ಸಂದೇಶಗಳನ್ನು ರಿಸ್ಟೋರ್‌ ಮಾಡಿ ಎಂಬ ಫೀಚರ್ಸ್‌ ಮೇಲೆ ಟ್ಯಾಪ್‌ ಮಾಡಿ.

* ಇದೀಗ ನೀವು ಬ್ರೌಸರ್‌ನಲ್ಲಿ ವಾಟ್ಸಾಪ್‌ ವೆಬ್ ಅನ್ನು ತೆರೆದಾಗ ನೀವು ಡಿಲೀಟ್‌ ಮಾಡಿರುವ ಮೆಸೇಜ್‌ ಅನ್ನು ಮರಳಿ ಪಡೆಯಲು ಸಾಧ್ಯವಾಗಲಿದೆ.

ಪ್ರೊಫೈಲ್‌

ಇದಲ್ಲದೆ ನೀವು ನಿಮ್ಮ ಪ್ರೊಫೈಲ್‌ ಅನ್ನು ಹೈಡ್‌ ಮಾಡುವ ಆಯ್ಕೆ ಆನ್‌ ಮಾಡಿದರೆ ಪ್ರೊಫೈಲ್‌ ಹೈಡ್‌ ಆಗಲಿದೆ. ನಿಮ್ಮ ಸ್ಟೇಟಸ್‌ ಅನ್ನು ಹೈಡ್‌ ಮಾಡಿದರೆ ಬೇರೆಯವರು ಸ್ಟೇಟಸ್‌ ನೋಡದಂತೆ ತಡೆಯಬಹುದಾಗಿದೆ. ಹಾಗೆಯೇ WA ವೆಬ್ ಪ್ಲಸ್‌ನಲ್ಲಿರುವ ಫೀಚರ್ಸ್‌ಗಳನ್ನು ಅನ್-ಟಿಕ್ ಮಾಡುವ ಮೂಲಕ ನೀವು ಯಾವಾಗಲೂ ಬಯಸದ ಫೀಚರ್ಸ್‌ಗಳನ್ನು ಡಿಆಕ್ಟಿವ್‌ ಮಾಡಬಹುದು.

Best Mobiles in India

English summary
Here's how to restore deleted messages on WhatsApp Web

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X