ವಾಟ್ಸಪ್‌ ಸ್ಟೇಟಸ್‌ಗಳನ್ನು ಸುಲಭವಾಗಿ ಸೇವ್ ಮಾಡುವುದು ಹೇಗೆ ಗೊತ್ತಾ?

|

ಸದ್ಯ ಅತೀ ಜನಪ್ರಿಯ ಮೆಸೆಜ್ ಅಪ್ಲಿಕೇಶನ್ ಎಂದು ಗುರುತಿಸಿಕೊಂಡಿರುವ ವಾಟ್ಸಪ್‌ ತನ್ನ ಬಳಕೆದಾರರ ಹೆಚ್ಚಿನ ಹೊಸ ಸೇವೆಗಳನ್ನು ಈಗಾಗಲೇ ಪರಿಚಯಿಸಿದೆ. ಅವುಗಳಲ್ಲಿ ವಾಟ್ಸಪ್ ಸ್ಟೇಟಸ್ ಆಯ್ಕೆಯು ಬಳಕೆದಾರರಲ್ಲಿ ಹೊಸ ಟ್ರೆಂಡ್ ರೂಪಿಸಿದೆ. ಕಾಂಟ್ಯಾಕ್ಟ್‌ ಲಿಸ್ಟನಲ್ಲಿರುವವರ ವಾಟ್ಸಪ್ ಸ್ಟೇಟಸ್ ನೋಡಬಹುದಾಗಿದ್ದು, ಅವುಗಳಲ್ಲಿ ಇಷ್ಟವಾಗುವ ಸ್ಟೇಟಸ್‌ಗಳನ್ನು ಸೇವ್ ಸಹ ಮಾಡಬಹುದಾಗಿದೆ. ಆದರೆ ಬಹುತೇಕರಿಗೆ ವಾಟ್ಸಪ್ ಸ್ಟೇಟಸ್‌ ಸೇವೆ ಮಾಡುವುದು ಹೇಗೆ ಎನ್ನುವುದು ತಿಳಿದಿರುವುದಿಲ್ಲ. ಬದಲಿಗೆ ಸ್ಟೇಟಸ್ ಇಟ್ಟವರಿಗೆ ಆ ವಿಡಿಯೊ/ಫೋಟೊ ಕಳಿಸಿ ಎಂದು ಮೆಸೆಜ್ ಮಾಡುತ್ತಾರೆ.

ಫೇಸ್‌ಬುಕ್

ಹೌದು, ಫೇಸ್‌ಬುಕ್ ಒಡೆತನದ ವಾಟ್ಸಪ್ ಅಪ್ಲಿಕೇಶನ್ ಸ್ಟೇಟಸ್‌ ಫೀಚರ್ ಬಳಕೆದಾರರನ್ನು ಹೆಚ್ಚು ಆಕರ್ಷಿಸಿದ್ದು, ಇತ್ತೀಚಿಗಷ್ಟೆ ಸ್ಟೇಟಸ್‌ ನೇರವಾಗಿ ಫೇಸ್‌ಬುಕ್‌ಗೆ ಶೇರ್ ಮಾಡುವ ಆಯ್ಕೆಯನ್ನು ಸಹ ಸಂಸ್ಥೆ ಪರಿಚಯಿಸಿದೆ. 24 ಗಂಟೆಗಳು ಮಾತ್ರ ಕಾಲಾವಧಿಯನ್ನು ಹೊಂದಿರುವ ವಾಟ್ಸಪ್‌ ಸ್ಟೇಟಸ್‌ ಅನ್ನು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನಿನಲ್ಲಿ ಸೇವ್ ಮಾಡಿಕೊಳ್ಳಲು ಅವಕಾಶ ಇದೆ. ಆಂಡ್ರಾಯ್ಡ್ ಮತ್ತು ಐಓಎಸ್‌ ಬಳಕೆದಾರರಿಬ್ಬರಿಗೂ ಸ್ಟೇಟಸ್ ಸೇವ್ ಮಾಡಿಕೊಳ್ಳುವ ಆಯ್ಕೆಗಳಿವೆ. ಹಾಗದಾರೇ ವಾಟ್ಸಪ್ ಸ್ಟೇಟಸ್ ವಿಡಿಯೊಗಳನ್ನು ಸೇವ್ ಮಾಡುವುದು ಹೇಗೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಫೋನ್‌ ಫೈಲ್‌ ಮ್ಯಾನೇಜರ್‌

ಫೋನ್‌ ಫೈಲ್‌ ಮ್ಯಾನೇಜರ್‌

ಆಂಡ್ರಾಯ್ಡ್ ಓಎಸ್‌ ಪ್ಲಾಟ್‌ಫಾರ್ಮ್‌ನಲ್ಲಿ ವಾಟ್ಸಪ್‌ ಸ್ಟೇಟಸ್ ಸೇವ್ ಮಾಡಿಕೊಳ್ಳಲು ಈ ಹಂತಗಳನ್ನು ಅನುಸರಿ.
ವಾಟ್ಸಪ್‌ ಸ್ಟೇಟಸ್ ಕೇವಲ 24 ಗಂಟೆಗಳ ಕಾಟಲಾವಧಿಯನ್ನು ಪಡೆದಿರುತ್ತವೆ. ಆ ನಂತರ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗಿ ಹೋಗುತ್ತವೆ. ಸ್ಟೇಟಸ್ಗಳು ಚಾಲ್ತಿ ಇದ್ದಾಗ ಸ್ಮಾರ್ಟ್‌ಫೋನ್‌ ಫೈಲ್‌ ಮ್ಯಾನೇಜರ್‌ನಲ್ಲಿ ಸ್ಟೇಟಸ್‌ಗಳು ಸ್ಟೋರ್ ಆಗಿರುತ್ತದೆ. ಅಗತ್ಯ ಇದ್ದರೇ ಫೈಲ್‌ ಮ್ಯಾನೇಜರ್ ಆಪ್‌ನಿಂದ ಸೇವ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ ಈ ಕ್ರಮ ಅನುಸರಿಸಿ.
* ಫೈಲ್‌ ಮ್ಯಾನೇಜರ್ ಆಪ್ ತೆರೆಯಿರಿ
* ಫೈಲ್‌ ಮ್ಯಾನೇಜರ್ ಆಪ್ ಇರದಿದ್ದರೇ, ಗೂಗಲ್ ಪ್ಲೇ ಸ್ಟೋರ್‌ನಿಂದ Files by Google ಆಪ್ ಇನ್‌ಸ್ಟಾಲ್ ಮಾಡಿ.
* ಫೈಲ್‌ ಮ್ಯಾನೇಜರ್ ಆಪ್‌ನ ಸೆಟ್ಟಿಂಗ್‌ನಲ್ಲಿ ಶೋ ಹಿಡೆನ್ ಫೈಲ್ಸ್‌ ಆಯ್ಕೆಯನ್ನು ಸಕ್ರಿಯ ಮಾಡಿರಿ.
* ಆನಂತರ ಫೈಲ್ ಮ್ಯಾನೇಜರ್ ಆಪ್‌ನಲ್ಲಿ, ಇಂಟರ್ನಲ್ ಸ್ಟೋರೇಜ್ ತೆರೆದು ವಾಟ್ಸಪ್ ಕ್ಲಿಕ್ಕ್ ಮಾಡಿ.
* ವಾಟ್ಸಪ್‌ನಲ್ಲಿ ಸ್ಟೇಟಸ್ ಆಯ್ಕೆ ಸೆಲೆಕ್ಟ್ ಮಾಡಿರಿ. ಇಲ್ಲಿಂದ ಸ್ಟೇಟಸ್ ಸೇವ್ ಮಾಡಿಕೊಳ್ಳಬಹುದು.

ಸ್ಟೇಟಸ್‌ ಸೇವರ್ ಆಪ್ ಬಳಕೆ

ಸ್ಟೇಟಸ್‌ ಸೇವರ್ ಆಪ್ ಬಳಕೆ

ವಾಟ್ಸಪ್ ಸ್ಟೇಟಸ್‌ ಸೇವ್ ಮಾಡಿಕೊಳ್ಳಲು ಬೇಕಿದ್ದರೇ ಥರ್ಡಪಾರ್ಟಿ ಆಪ್ಸ್‌ಗಳ ಬಳಕೆ ಮಾಡಬಹುದು. ಅದಕ್ಕಾಗಿ ಗೂಗಲ್ ಪ್ಲೇನಲ್ಲಿ ಸಾಕಷ್ಟು ಅಪ್ಲಿಕೇಶನ್‌ಗಳು ಲಭ್ಯ ಇವೆ. ಸ್ಟೇಟಸ್‌ ಸೇವರ್ ಆಪ್‌ ಬಳಕೆಯ ಮೂಲಕ ವಾಟ್ಸಪ್ ಸ್ಟೇಟಸ್ ವಿಡಿಯೊ ಮತ್ತು ಫೋಟೊಗಳನ್ನು ಸೇವ್ ಮಾಡಿಕೊಳ್ಳಬಹುದಾಗಿದೆ. ಆದರೆ ಈ ಥರ್ಡ್‌ಪಾರ್ಟಿ ಆಪ್‌ಗಳಲ್ಲಿ ಜಾಹಿರಾತುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಸ್ಕ್ರೀನ್‌ಶಾಟ್‌ ಅಥವಾ ಸ್ಕ್ರೀನ್ ರೇಕಾರ್ಡ್

ಸ್ಕ್ರೀನ್‌ಶಾಟ್‌ ಅಥವಾ ಸ್ಕ್ರೀನ್ ರೇಕಾರ್ಡ್

ವಾಟ್ಸಪ್‌ ಸೇವ್ ಮಾಡಲು ಸ್ಕ್ರೀನ್‌ಶಾಟ್‌ ಅಥವಾ ಸ್ಕ್ರೀನ್ ರೇಕಾರ್ಡ್ ಆಯ್ಕೆಯನ್ನು ಬಳಸಿಕೊಳ್ಳಬಹುದು. ವಾಟ್ಸಪ್ ಸ್ಟೇಟಸ್‌ ಸೇವ್ ಮಾಡಲು ಬಹುತೇಕರು ಈ ಆಯ್ಕೆಯನ್ನೇ ಅನುಸರಿಸುತ್ತಾರೆ. ಆದರೆ ಇದಕ್ಕಿಂತ ಉತ್ತಮ ಎಂದರೇ ಮೇಲೆ ತಿಳಿಸಿದ ವಿಧಾನಗಳು ಬೆಸ್ಟ್‌.

ಐಫೋನ್‌ನಲ್ಲಿ ಈ ಹಂತ ಅನುಸರಿಸಿ

ಐಫೋನ್‌ನಲ್ಲಿ ಈ ಹಂತ ಅನುಸರಿಸಿ

ಐಫೋನ್‌ನಲ್ಲಿಯು ಫೈಲ್ ಮ್ಯಾನೇಜರ್ ಇದ್ದು, ಆದರೆ ವಾಟ್ಸಪ್ ಸ್ಟೇಟಸ್‌ಗೆ ಸೇವ್‌ಗೆ ಬೆಂಬಲವಿಲ್ಲ. ಹೀಗಾಗಿ ಐಫೋನ್‌ನಲ್ಲಿ ವಾಟ್ಸಪ್ ಸ್ಟೇಟಸ್ ಸೇವ್ ಮಾಡಲು ಬಳಕೆದಾರರು ಸ್ಕ್ರೀನ್‌ಶಾಟ್‌ ಅಥವಾ ಸ್ಕ್ರೀನ್ ರೇಕಾರ್ಡ್ ಟೂಲ್‌ಗಳನ್ನು ಬಳಸಬಹುದು.

Best Mobiles in India

English summary
here’s a quick guide to how you can download WhatsApp Status photos and videos. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X