ನೀವು ಇಳಿಯಬೇಕಾದ ರೈಲು ನಿಲ್ದಾಣದ ಬಗ್ಗೆ ಆಲರ್ಟ್‌ ಪಡೆಯಲು ಹೀಗೆ ಮಾಡಿ!

|

ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ(IRCTC) ತನ್ನ ಪ್ರಯಾಣಿಕರಿಗೆ ಅನೇಕ ಸೇವೆಗಳನ್ನು ಪರಿಚಯಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಮಾದರಿಯ ಸೇವೆಗಳನ್ನು ಪರಿಚಯಿಸುತ್ತಾ ಬಂದಿದೆ. IRCTC ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌, ಆನ್‌ಲೈನ್‌ ಫುಡ್‌ ಆರ್ಡರ್‌ನಂತಹ ಸೇವೆಗಳನ್ನು ನೀಡುತ್ತಾ ಬಂದಿದೆ. ಇನ್ನು ನೀವು ರೈಲಿನಲ್ಲಿ ಪ್ರಯಾಣಿಸುವಾಗ ನಿದ್ರಿಸುತ್ತಿದ್ದರೆ ನೀವು ತಲುಪಬೇಕಾದ ಸ್ಥಳಬಂದಾಗ ನಿಮ್ಮನ್ನು ಆಲರ್ಟ್‌ ಮಾಡುವ ಫೀಚರ್ಸ್‌ ಅನ್ನು ಸಹ ಪರಿಚಯಿಸಿದೆ.

ರೈಲು ನಿಲ್ದಾಣ

ಹೌದು, ರೈಲಿನಲ್ಲಿ ನೀವು ಪ್ರಯಾಣಿಸುವಾಗ ಕೆಲವೊಮ್ಮೆ ನಿದ್ರೆಯ ಕಾರಣದಿಂದಾಗಿ ನೀವು ಇಳಿಯಬೇಕಾದ ಸ್ಥಳ ಬಿಟ್ಟು ಮುಂದೆ ಸಾಗುವ ಸಾಧ್ಯತೆಗಳಿವೆ. ಕೆಲವರಿಗೆ ನಿದ್ರೆಯ ಸಮಯದಲ್ಲಿ ತಾವು ಇಳಿಯಬೇಕಾದ ರೈಲು ನಿಲ್ದಾಣದ ಬಗ್ಗೆ ಗೊಂದಲವುಂಟಾಗುವ ಸಾದ್ಯತೆ ಕೂಡ ಇದೆ. ಇದೇ ಕಾರಣಕ್ಕೆ ನೀವು ರೈಲಿನಲ್ಲಿ ಪ್ರಯಾಣಿಸುವಾಗ ನೀವು ಇಳಿಯಬೇಕಾದ ರೈಲು ನಿಲ್ದಾಣದ ಬಗ್ಗೆ ನಿಮ್ಮನ್ನ ಆಲರ್ಟ್‌ ಮಾಡುವ ಫೀಚರ್ಸ್‌ ಕೂಡ IRCTC ಹೊಂದಿದೆ. ಹಾಗಾದ್ರೆ ನೀವು ರೈಲಿನಲ್ಲಿ ಪ್ರಯಾಣಿಸುವಾಗ ಇಳಿಯಬೇಕಾದ ರೈಲು ನಿಲ್ದಾಣದ ಬಗ್ಗೆ ಆಲರ್ಟ್‌ ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೆಕ್‌ ಆಪ್‌ ಕಾಲ್‌ ಅಥವಾ ಡೆಸ್ಟಿನೇಶನ್‌ ಆಲರ್ಟ್‌ ಅನ್ನು ಸೆಟ್‌ ಮಾಡುವುದು ಹೇಗೆ?

ವೆಕ್‌ ಆಪ್‌ ಕಾಲ್‌ ಅಥವಾ ಡೆಸ್ಟಿನೇಶನ್‌ ಆಲರ್ಟ್‌ ಅನ್ನು ಸೆಟ್‌ ಮಾಡುವುದು ಹೇಗೆ?

ನೀವು ತಲುಪಬೇಕಾದ ಡೆಸ್ಟಿನೇಶನ್‌ ಆಲರ್ಟ್‌ ಸೆಟ್‌ ಮಾಡಲು ನಿಮಗೆ ಇಂಟರ್‌ನೆಟ್‌ ಅಗತ್ಯವಿಲ್ಲ. ಇದಕ್ಕಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.
ಹಂತ:1 ಮೊದಲಿಗೆ ನಿಮ್ಮ ಫೋನ್‌ನಲ್ಲಿ ಡಯಲರ್ ತೆರೆಯಿರಿ.
ಹಂತ:2 ನಂತರ 139 ಅನ್ನು ಡಯಲ್ ಮಾಡಿ ಮತ್ತು ಕಸ್ಟಮರ್‌ ಕೇರ್‌ ಅಸಿಸ್ಟೆಂಟ್‌ ಜೊತೆ ಮಾತನಾಡಲು ನಿರೀಕ್ಷಿಸಿ.
ಹಂತ:3 ಇದೀಗ, ಕಸ್ಟಮರ್‌ ಅಸಿಸ್ಟೆಂಟ್‌ ನೀಡುವ ಸೂಚನೆಯ ಮೇರೆಗೆ ನಿರ್ದಿಷ್ಟ ಸಂಖ್ಯೆಯ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ, ಉದಾಹರಣೆಗೆ, ಹಿಂದಿಗೆ 1 ಮತ್ತು ಇಂಗ್ಲಿಷ್‌ಗೆ 2.
ಹಂತ:4 ನಂತರ 2 ಅನ್ನು ಒತ್ತಿರಿ.

ಆಲರ್ಟ್‌

ಹಂತ:5 ಆಲರ್ಟ್‌ ಸೆಟ್‌ ಮಾಡಲು 7 ಅನ್ನು ಒತ್ತಿರಿ.
ಹಂತ:6 ಇದೀಗ, ನೀವು ವೇಕ್-ಅಪ್ ಕರೆಯನ್ನು ಪಡೆಯಲು ನೀವು ಆಯ್ಕೆ ಮಾಡಬಹುದು.
ಹಂತ:7 ಒಮ್ಮೆ ನೀವು ಸಂಬಂಧಿತ ಸಂಖ್ಯೆಗಳನ್ನು ಒತ್ತುವ ಮೂಲಕ ಆಯ್ಕೆಗಳನ್ನು ಸೆಟ್‌ ಮಾಡಿದ ನಂತರ , ನೀವು ನಿಮ್ಮ 10-ಅಂಕಿಯ PNR ಸಂಖ್ಯೆಯನ್ನು ನಮೂದಿಸಬೇಕು ಮತ್ತು ದೃಢೀಕರಣಕ್ಕಾಗಿ 1 ಅನ್ನು ಒತ್ತಿರಿ.

ಇದೆಲ್ಲ ಪ್ರಕ್ರಿಯೆಗಳು ಮುಗಿದ ನಂತರ ನೀವು ಸುಲಭವಾಗಿ ನಿಮ್ಮನ್ನು ಎಚ್ಚರಗೊಳಿಸುವ ವೇಕ್‌ ಆಪ್‌ ಕರೆಯನ್ನು ಸೆಟ್‌ ಮಾಡಬಹುದು.

IRCTC

ಇದಲ್ಲದೆ IRCTC ಇ-ವ್ಯಾಲೆಟ್‌ನಲ್ಲಿ ಹಣ ಸೇರಿಸುವ ಮೂಲಕ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಮಾಡುವ ಹಣ ಪಾವತಿಸಬಹುದಾಗಿದೆ. ಇದರಿಂದ ನೀವು ಪ್ರತಿಬಾರಿಯೂ ನಿಮ್ಮ ಅಕೌಂಟ್‌ನಿಂದ ಹಣ ಪಾವತಿಸುವುದು ತಪ್ಪಲಿದೆ. ಇದಲ್ಲದೆ IRCTC ಯಿಂದ ಲಭ್ಯವಾಗುವ ಸೇವೆಗಳಿಗೂ ಕೂಡ ಹಣ ಪಾವತಿಸುವುದಕ್ಕೆ ಸಾಧ್ಯವಾಗಲಿದೆ.

IRCTC ಇ-ವ್ಯಾಲೆಟ್‌ಗೆ ನೋಂದಾಯಿಸುವುದು ಹೇಗೆ?

IRCTC ಇ-ವ್ಯಾಲೆಟ್‌ಗೆ ನೋಂದಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ IRCTC ಖಾತೆಗೆ ಲಾಗಿನ್ ಮಾಡಿ. ಹಂತ:2 ಇದರಲ್ಲಿ IRCTC ಇ-ವ್ಯಾಲೆಟ್‌ ವಿಭಾಗಕ್ಕೆ ಹೋಗಿ ಮತ್ತು ರಿಜಿಸ್ಟರ್‌ ನೌ ಆಯ್ಕೆಯನ್ನು ಕ್ಲಿಕ್ ಮಾಡಿ. ಹಂತ:3 IRCTC ಇ-ವ್ಯಾಲೆಟ್‌ ನೋಂದಣಿಗಾಗಿ ಬಳಕೆದಾರರು ಪ್ಯಾನ್ ಅಥವಾ ಆಧಾರ್ ಅನ್ನು ಪರಿಶೀಲಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಹಂತ:4 ಪರಿಶೀಲನೆಯನ್ನು ಮಾಡಿದ ನಂತರ, IRCTC ಇ-ವ್ಯಾಲೆಟ್‌ ನೋಂದಣಿ ಶುಲ್ಕವನ್ನು ಪಾವತಿಸಲು ಪೇಮೆಂಟ್‌ ಪೇಜ್‌ ಕಾಣಿಸಿಕೊಳ್ಳುತ್ತದೆ. ತೆರಿಗೆಯನ್ನು ಹೊರತುಪಡಿಸಿ 50 ರೂ.ಗಳಿಗೆ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪಾವತಿ ಯಶಸ್ವಿಯಾದ ನಂತರ, ಬಳಕೆದಾರರು ಲಾಗ್ ಔಟ್ ಆಗಲಿದ್ದಾರೆ. ತಮ್ಮ IRCTC ಇ-ವ್ಯಾಲೆಟ್‌ಗಳನ್ನು ರೀಚಾರ್ಜ್ ಮಾಡಲು ಅವರು ತಮ್ಮ IRCTC ಖಾತೆಗಳಿಗೆ ಮತ್ತೆ ಲಾಗಿನ್ ಆಗಬೇಕಾಗುತ್ತದೆ.

Best Mobiles in India

Read more about:
English summary
Here's How to Set Destination alert or wake-up call alert

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X