ಐಫೋನ್​ನಿಂದ ಆ್ಯಂಡ್ರಾಯ್ಡ್​ಗೆ ಫೋಟೊ, ವಿಡಿಯೋ ಟ್ರಾನ್ಸಫರ್​ ಹೇಗೆ?

By Gizbot Bureau
|

ಅಂಗೈಯಲ್ಲಿ ಸಾಲುವ ಪುಟ್ಟ ಸ್ಮಾರ್ಟ್​ಫೋನ್ ಇಂದು ನಮ್ಮ ಜಗತ್ತೇ ಆಗಿ ಬಿಟ್ಟಿದೆ. ನಮ್ಮ ಎಲ್ಲ ದಾಖಲೆಗಳು, ಫೋಟೊಗಳು, ವಿಡಿಯೋಗಳು ಎಲ್ಲವೂ ಡಿಜಿಟಲ್ ರೂಪದಲ್ಲಿ ಇದರಲ್ಲೇ ಇರುತ್ತವೆ. ಹಳೆಯ ಫೋನ್ ಬದಲಾಗಿ ಹೊಸ ಫೋನ್ ಕೊಂಡಾಗ ಇದರಲ್ಲಿನ ಅಗತ್ಯ ಡಿಜಿಟಲ್ ದಾಖಲೆ, ಫೊಟೊಗಳನ್ನು ಕೂಡ ಹೊಸ ಫೋನ್​ಗೆ ವರ್ಗಾಯಿಸಿಕೊಳ್ಳಬೇಕಾಗುತ್ತದೆ.

ಫೈಲ್ ಟ್ರಾನ್ಸಫರ್ ಮಾಡುವುದು ಸುಲಭವಲ್ಲ!

ಫೈಲ್ ಟ್ರಾನ್ಸಫರ್ ಮಾಡುವುದು ಸುಲಭವಲ್ಲ!

ನೀವು ಆ್ಯಂಡ್ರಾಯ್ಡ್​ ಫೋನ್ ಬಳಕೆದಾರರಾಗಿದ್ದು, ಹೊಸ ಆ್ಯಂಡ್ರಾಯ್ಡ್​ ಫೋನ್ ಕೊಂಡಾಗ ಡಿಜಿಟಲ್ ವರ್ಗಾವಣೆ ಅಷ್ಟೇನೂ ತ್ರಾಸದಾಯಕವಲ್ಲ. ಆದರೆ ಒಂದೊಮ್ಮೆ ನೀವು ಐಫೋನ್ ಬಳಸುತ್ತಿದ್ದು, ಆ್ಯಂಡ್ರಾಯ್ಡ್​ಗೆ ಸ್ವಿಚ್​ ಆಗುತ್ತಿದ್ದಲ್ಲಿ ಡಿಜಿಟಲ್ ದಾಖಲೆಗಳ ಟ್ರಾನ್ಸಫರ್​ ಅಷ್ಟೊಂದು ಸುಲಭವಲ್ಲ. ಅದೇ ರೀತಿ ಆ್ಯಂಡ್ರಾಯ್ಡ್​ನಿಂದ ಆ್ಯಪಲ್​ಗೆ ಟ್ರಾನ್ಸಫರ್​ ಮಾಡುವುದು ಸಹ ಸುಲಭವಲ್ಲ. ಐಫೋನ್​ನಿಂದ ನಿಮ್ಮ ಹೊಸ ಆ್ಯಂಡ್ರಾಯ್ಡ್​ ಫೋನ್​ಗೆ ಫೋಟೊ, ವಿಡಿಯೋಗಳನ್ನು ಟ್ರಾನ್ಸಫರ್ ಮಾಡುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡುತ್ತಿದ್ದೇವೆ...

ಫೈಲ್ ಟ್ರಾನ್ಸಫರ್​ಗೆ ಮೂರು ವಿಧಾನಗಳು

ಫೈಲ್ ಟ್ರಾನ್ಸಫರ್​ಗೆ ಮೂರು ವಿಧಾನಗಳು

ಬೇರೆ ಬೇರೆ ಆಪರೇಟಿಂಗ್ ಸಿಸ್ಟಂ ಹೊಂದಿರುವ ಫೋನ್​ಗಳ ಮಧ್ಯೆ ಫೈಲ್ ಟ್ರಾನ್ಸಫರ್​ ಮಾಡಬಹುದಾದ ಮೂರು ವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ. ಕ್ಲೌಡ್ ಸರ್ವಿಸ್, ಜಿಯೊ ಸ್ವಿಚ್ ಮತ್ತು ಗೂಗಲ್ ಫೋಟೊಸ್ ಇವೇ ಮೂರು ವಿಧಾನಗಳ ಮೂಲಕ ಫೈಲ್​ಗಳನ್ನು ಟ್ರಾನ್ಸಫರ್ ಮಾಡಬಹುದಾಗಿದೆ.

ವಿಧಾನ 1: ಜಿಯೊ ಕ್ಲೌಡ್ ಬಳಸುವುದು

ವಿಧಾನ 1: ಜಿಯೊ ಕ್ಲೌಡ್ ಬಳಸುವುದು

ಐಫೋನ್ ಬಳಕೆದಾರರು ತಮ್ಮ ಫೋನ್​ನಲ್ಲಿರುವ ಎಲ್ಲ ಡೇಟಾವನ್ನು ಜಿಯೊ ಕ್ಲೌಡ್ ಅಥವಾ ಇನ್ನಾವುದೇ ಕ್ಲೌಡ್​ಗೆ ಅಪ್ಲೋಡ್​ ಮಾಡಬಹುದು. ನಂತರ ಈ ಸ್ಟೋರೇಜ್​ ಲಿಂಕ್ ಅನ್ನು ಇಮೇಲ್, ಮೆಸೇಜಿಂಗ್ ಮೂಲಕ ಶೇರ್ ಮಾಡಬಹುದು. ಹೊಸ ಫೋನ್​ನಲ್ಲಿ ಲಿಂಕ್ ಕ್ಲಿಕ್ ಮಾಡಿ ಕ್ಲೌಡ್​ನಿಂದ ಡೇಟಾ ಡೌನ್ಲೋಡ್ ಮಾಡಿಕೊಳ್ಳಬಹುದು. ಇಷ್ಟಾದ ನಂತರ ಕ್ಲೌಡ್​ನಲ್ಲಿನ ಡೇಟಾ ಡಿಲೀಟ್​ ಮಾಡಿದಲ್ಲಿ ಕ್ಲೌಡ್​ನಲ್ಲಿ ಸ್ಟೋರೇಜ್ ಸ್ಪೇಸ್​ ಉಳಿತಾಯವಾಗುತ್ತದೆ. ಒನ್ ಡ್ರೈವ್, ಡ್ರಾಪ್​ಬಾಕ್ಸ್​ ಮುಂತಾದ ಆ್ಯಪ್​ಗಳು ಈ ರೀತಿ ಕ್ಲೌಡ್​ ಬ್ಯಾಕಪ್​ ಮಾಡಿಕೊಳ್ಳಲು ಸೂಕ್ತವಾಗಿವೆ.

ವಿಧಾನ 2: ಜಿಯೊ ಸ್ವಿಚ್ ಆ್ಯಪ್​ ಬಳಸುವುದು

ವಿಧಾನ 2: ಜಿಯೊ ಸ್ವಿಚ್ ಆ್ಯಪ್​ ಬಳಸುವುದು

ಜಿಯೊ ಸ್ವಿಚ್ ಇದು ವೈರ್​ಲೆಸ್​ ಡೇಟಾ ಟ್ರಾನ್ಸಫರ್ ಆ್ಯಪ್ ಆಗಿದೆ. ಈ ಆ್ಯಪ್ ಆ್ಯಂಡ್ರಾಯ್ಡ್​ ಹಾಗೂ ಐಪೋನ್ ಎರಡಕ್ಕೂ ಹೊಂದಿಕೊಳ್ಳುತ್ತದೆ. ಎರಡೂ ಪೋನ್​ಗಳಲ್ಲಿ ಈ ಆ್ಯಪ್ ಇನಸ್ಟಾಲ್ ಮಾಡಿಕೊಂಡು ಫೈಲ್​ಗಳನ್ನು ಈಸಿಯಾಗಿ ಶೇರ್ ಮಾಡಿಕೊಳ್ಳಬಹುದು.

ವಿಧಾನ 3: ಗೂಗಲ್ ಫೋಟೋಸ್​ ಬಳಸುವುದು

ವಿಧಾನ 3: ಗೂಗಲ್ ಫೋಟೋಸ್​ ಬಳಸುವುದು

ಗೂಗಲ್​ ಫೋಟೊ ಆ್ಯಪ್​ಗೆ ಫೈಲ್​ಗಳನ್ನು ಅಪ್ಲೋಡ್​ ಮಾಡಿದಲ್ಲಿ ತಕ್ಷಣವೇ ಇವನ್ನು ಯಾವುದೇ ಡಿವೈಸ್​ನಲ್ಲಾದರೂ ಬಳಸಬಹುದಾಗಿದೆ. ಜೊತೆಗೆ ನಿರ್ದಿಷ್ಟ ಫೈಲ್​ಗಳಿಗೆ ಲಿಂಕ್ ಕ್ರಿಯೇಟ್​ ಮಾಡಿ ಎಸ್ಸೆಮ್ಮೆಸ್​, ವಾಟ್ಸಾಪ್, ಇಮೇಲ್ ಮೂಲಕ ಲಿಂಕ್ ಶೇರ್ ಮಾಡುವ ಸೌಲಭ್ಯವೂ ಇದರಲ್ಲಿದೆ.

Best Mobiles in India

English summary
Here's how to share photos, videos from iPhone to Android smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X