ವಿಂಡೋಸ್‌ 11 ಲ್ಯಾಪ್‌ಟಾಪ್‌ ನಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದು ಹೇಗೆ?

|

ಇಂದಿನ ದಿನಗಳಲ್ಲಿ ಸ್ಕ್ರಿನ್‌ಶಾಟ್‌ಗಳು ಸಾಕಷ್ಟು ಉಪಯುಕ್ತವಾಗಿವೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲ ಲ್ಯಾಪ್‌ಟಾಪ್‌ಗಳಲ್ಲಿಯೂ ಕೂಡ ಸ್ಕ್ರಿನ್‌ಶಾಟ್‌ ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ. ನಿಮಗೆ ಬಹುಮುಖ್ಯವೆನಿಸಿದ ಮಾಹಿತಿಯನ್ನು ಸ್ಕ್ರೀನ್‌ಶಾಟ್‌ ಮೂಲಕ ಸೆರೆಹಿಡಿಯುವುದಕ್ಕೆ ಸಾಧ್ಯವಾಗಲಿದೆ. ನೀವು ಯಾವುದಾದರೂ ವೆಬ್‌ಸೈಟ್‌ನಲ್ಲಿ ಪ್ರಮುಖ ಮಾಹಿತಿಯನ್ನು ನೋಡಿದ್ದರೆ ಅದನ್ನು ಕ್ಷಣಾರ್ಧದಲ್ಲಿ ಸ್ಕ್ರೀನ್‌ಶಾಟ್‌ ರೂಪದಲ್ಲಿ ತೆಗೆದುಕೊಳ್ಳುವುದು ಅನುಕೂಲವಾಗಲಿದೆ.

ವಿಂಡೋಸ್

ಹೌದು, ವಿಂಡೋಸ್ ಲ್ಯಾಪ್‌ಟಾಪ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ವಿಂಡೋಸ್ 11 ಬಳಕೆದಾರರು ಮಾತ್ರವಲ್ಲದೆ, ವಿಂಡೋಸ್ 10 ಲ್ಯಾಪ್‌ಟಾಪ್‌ನಲ್ಲಿಯೂ ಕೂಡ ಈ ಮಾರ್ಗದರ್ಶಿ ಕಾರ್ಯನಿರ್ವಹಿಸುತ್ತದೆ. ಹಾಗಾದ್ರೆ ನೀವು ನಿಮ್ಮ ವಿಂಡೋಸ್ ಲ್ಯಾಪ್‌ಟಾಪ್‌ನಲ್ಲಿ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುವುದಕ್ಕೆ ಯಾವೆಲ್ಲಾ ಹಂತಗಳನ್ನು ಅನುಸರಿಸಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಂಡೋಸ್‌ 11 ಲ್ಯಾಪ್‌ಟಾಪ್‌ ನಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದು ಹೇಗೆ?

ವಿಂಡೋಸ್‌ 11 ಲ್ಯಾಪ್‌ಟಾಪ್‌ ನಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದು ಹೇಗೆ?

ವಿಧಾನ-1
ಹಂತ:1 ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಸ್ನಿಪ್ಪಿಂಗ್ ಟೂಲ್ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಇದರಲ್ಲಿ ನೀವು "ನ್ಯೂ" ಕ್ಲಿಕ್ ಮಾಡಿ.
ಹಂತ:3 ನಂತರ ನೀವು ಯಾವುದನ್ನಾದರೂ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು.
ಹಂತ:4 ಇದರಲ್ಲಿ ನೀವು ಒಮ್ಮೆ ಕ್ಲಿಕ್ ಮಾಡಿದರೆ, ಸ್ಕ್ರೀನ್‌ಶಾಟ್ ಅನ್ನು ಪ್ರಿವ್ಯೂ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಎಡಿಟ್‌ ಮಾಡುವುದಕ್ಕೆ ಅವಕಾಶವಿದೆ.
ಹಂತ: ಎಡಿಟ್‌ ಮಾಡಿದ ನಂತರ, ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ನೀವು ಸೇವ್‌ ಮಾಡಬಹುದು.

ಕಂಪ್ಯೂಟರ್‌ನಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದು ಹೇಗೆ

ಕಂಪ್ಯೂಟರ್‌ನಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದು ಹೇಗೆ

ವಿಧಾನ-2
ಪ್ರಿಂಟ್‌ಸ್ಕ್ರೀನ್ ಕೀಯನ್ನು ಬಳಸುವ ಮೂಲಕವು ನೀವು ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ನೀವು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಬಯಸುವ ಸೈಟ್ ಅನ್ನು ತೆರೆದ ನಂತರ ನೀವು Print Scrn ಮತ್ತು Ctrl ಕೀಗಳನ್ನು ಏಕಕಾಲದಲ್ಲಿ ಒತ್ತಬೇಕಾಗುತ್ತದೆ.
ಹಂತ:2 ನಂತರ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಪೇಂಟ್ ಅಪ್ಲಿಕೇಶನ್ ಅನ್ನು ತೆರೆಯಿರಿ.
ಹಂತ:3 ಇದೀಗ, ಸರಳವಾಗಿ Crtl ಮತ್ತು V ಕೀಗಳನ್ನು ಒತ್ತಿರಿ.
ಹಂತ:4 ನಂತರ Ctrl ಮತ್ತು S ಕೀಗಳನ್ನು ಒತ್ತುವ ಮೂಲಕ ಸ್ಕ್ರೀನ್‌ಶಾಟ್ ಅನ್ನು ಯಾವುದೇ ಫೋಲ್ಡರ್‌ನಲ್ಲಿ ಸೇವ್‌ ಮಾಡಬಹುದು.

ಸ್ನಿಪ್ಪಿಂಗ್ ಟೂಲ್ ಇಲ್ಲದೆ ನಿರ್ಧಿಷ್ಟ ಭಾಗದ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದು ಹೇಗೆ?

ಸ್ನಿಪ್ಪಿಂಗ್ ಟೂಲ್ ಇಲ್ಲದೆ ನಿರ್ಧಿಷ್ಟ ಭಾಗದ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದು ಹೇಗೆ?

ಹಂತ:1 ವಿಂಡೋಸ್ + ಶಿಫ್ಟ್ + ಎಸ್ ಅನ್ನು ಒಟ್ಟಿಗೆ ಟ್ಯಾಪ್ ಮಾಡಿ.
ಹಂತ:2 ಇದು ಸ್ಕ್ರೀನ್‌ಶಾಟ್ ವಿಂಡೋವನ್ನು ತರುತ್ತದೆ, ಇಲ್ಲಿ ನೀವು ಮೌಸ್ ಅನ್ನು ಎಳೆಯಲು ಮತ್ತು ನೀವು ಸ್ಕ್ರೀನ್‌ಶಾಟ್ ಮಾಡಲು ಬಯಸುವ ಭಾಗವನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.
ಹಂತ:3 ಇದರ ನಂತರ, ನಿಮ್ಮ ಕ್ಲಿಪ್‌ಬೋರ್ಡ್‌ನಿಂದ ಸ್ಕ್ರೀನ್‌ಶಾಟ್ ಅಂಟಿಸಲು ನೀವು ಪೇಂಟ್‌ಗೆ ಹೋಗಬಹುದು.

ಮ್ಯಾಕೋಸ್‌ನಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದು ಹೇಗೆ?

ಮ್ಯಾಕೋಸ್‌ನಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದು ಹೇಗೆ?

ಹಂತ:1 ಇಡೀ ಪರದೆಯ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಕಮಾಂಡ್ + ಶಿಫ್ಟ್ + 3 ಅನ್ನು ಒಟ್ಟಿಗೆ ಟ್ಯಾಪ್ ಮಾಡಿ.
ಹಂತ:2 ಫ್ರೀಫಾರ್ಮ್ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಕಮಾಂಡ್ + ಶಿಫ್ಟ್ + 4 ಅನ್ನು ಒಟ್ಟಿಗೆ ಟ್ಯಾಪ್ ಮಾಡಿ.
ಹಂತ:3 ಬಾಕ್ಸ್ ಸ್ಕ್ರೀನ್‌ಶಾಟ್ ಪಡೆಯಲು ಕಮಾಂಡ್ + ಶಿಫ್ಟ್ + 5 ಟ್ಯಾಪ್ ಮಾಡಿ.

Best Mobiles in India

Read more about:
English summary
if you have a Windows PC, then you can try the below-mentioned methods to take a screenshot of anything

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X