ಮಲ್ಟಿ ಡಿವೈಸ್‌ಗಳಿಂದ ನಿಮ್ಮ ವಾಟ್ಸಾಪ್‌ ಅಕೌಂಟ್‌ ಅನ್ನು ರಿಮೂವ್‌ ಮಾಡುವುದು ಹೇಗೆ?

|

ಮೆಟಾ ಒಡೆತನದ ವಾಟ್ಸಾಪ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಮಲ್ಟಿ ಡಿವೈಸ್‌ ಫೀಚರ್ಸ್‌ ಕೂಡ ಒಂದಾಗಿದೆ. ಈ ಫೀಚರ್ಸ್‌ ಅನ್ನು ಕೆಲ ದಿನಗಳ ಹಿಂದೆಯಷ್ಟೇ ತನ್ನ ಬಳಕೆದಾರರಿಗೆ ಪರಿಚಯಿಸಿದೆ. ಈ ಫೀಚರ್ಸ್‌ ಮೂಲಕ ಬಳಕೆದಾರರು ತಮ್ಮ ಪ್ರಾಥಮಿಕ ಡಿವೈಸ್‌ ಅನ್ನು ಸಂಪರ್ಕಿಸದೆಯೇ ಮಲ್ಟಿ ಡಿವೈಸ್‌ಗಳನ್ನು ನಿಮ್ಮ ವಾಟ್ಸಾಪ್‌ ಖಾತೆಯನ್ನು ಬಳಸುವುದಕ್ಕೆ ಅನುಮತಿಸುತ್ತದೆ. ಅಂದರೆ ನೀವು ವಾಟ್ಸಾಪ್‌ ಕನೆಕ್ಟ್‌ ಮಾಡಿದ ಡಿವೈಸ್‌ ಸ್ವಿಚ್ಡ್‌ ಆಪ್‌ ಆಗಿದ್ದರೂ ಕನೆಕ್ಟ್‌ ಆಗಿರುವ ಡಿವೈಸ್‌ನಲ್ಲಿ ವಾಟ್ಸಾಪ್‌ ಅನ್ನು ಬಳಸಬಹುದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನ ಮಲ್ಟಿ ಡಿವೈಸ್‌ ಫೀಚರ್ಸ್‌ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ ಸ್ವಿಚ್ಡ್‌ ಆಫ್‌ ಆಗಿದ್ದರೂ ಕೂಡ ವಾಟ್ಸಾಪ್‌ ಅನ್ನು ಬಳಸಬಹುದಾಗಿದೆ. ಇದರಿಂದ ನೀವು ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ವಾಟ್ಸಾಪ್‌ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಇನ್ನು ನಿಮ್ಮ ಮುಖ್ಯ ಫೋನ್‌ ಮೂಲಕ ನೀವು ನಾಲ್ಕು ಡಿವೈಸ್‌ಗಳಿಗೆ ವಾಟ್ಸಾಪ್‌ ಅನ್ನು ಲಿಂಕ್‌ ಮಾಡುವುದಕ್ಕೆ ಅವಕಾಶವಿದೆ. ನಾಲ್ಕು ಡಿವೈಸ್‌ಗಳಲ್ಲಿಯೂ ಕೂಡ ವಾಟ್ಸಾಪ್‌ ಅನ್ನು ಬಳಸಬಹುದು. ಒಂದು ವೇಳೆ ನೀವು ಕನೆಕ್ಟ್‌ ಮಾಡಿರುವ ವಾಟ್ಸಾಪ್‌ ಅಕೌಂಟ್‌ ಅನ್ನು ಅನ್‌ಲಿಂಕ್‌ ಮಾಡಬೇಕಾದರೆ ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ, ಹಾಗಾದ್ರೆ ಮಲ್ಟಿ ಡಿವೈಸ್‌ನಿಂದ ನಿಮ್ಮ ವಾಟ್ಸಾಪ್‌ ಅಕೌಂಟ್‌ ಅನ್ನು ಅನ್‌ಲಿಂಕ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮಲ್ಟಿ ಡಿವೈಸ್‌ಗಳಿಂದ ನಿಮ್ಮ ವಾಟ್ಸಾಪ್‌ ಅಕೌಂಟ್‌ ಅನ್ನು ಅನ್‌ಲಿಂಕ್ ಮಾಡುವುದು ಹೇಗೆ?

ಮಲ್ಟಿ ಡಿವೈಸ್‌ಗಳಿಂದ ನಿಮ್ಮ ವಾಟ್ಸಾಪ್‌ ಅಕೌಂಟ್‌ ಅನ್ನು ಅನ್‌ಲಿಂಕ್ ಮಾಡುವುದು ಹೇಗೆ?

ನಿಮ್ಮ ವಾಟ್ಸಾಪ್‌ ಖಾತೆಯನ್ನು ಮಲ್ಟಿ ಡಿವೈಸ್‌ನಲ್ಲಿ ಬಳಸಲು ಬಯಸದಿದ್ದರೆ ನೀವು ಅವುಗಳನ್ನು ರಿಮೂವ್‌ ಮಾಡುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ತೆರೆಯಿರಿ ಮತ್ತು ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:2 ಇದರಲ್ಲಿ ಲಿಂಕ್ಡ್‌ ಡಿವೈಸ್‌ ಅನ್ನು ಟ್ಯಾಪ್ ಮಾಡಿ ಮತ್ತು ಈಗ ಹೊಸ ವಿಭಾಗವು ಕಾಣಿಸಿಕೊಳ್ಳುತ್ತದೆ.
ಹಂತ:3 ನಂತರ, ನಿಮ್ಮ ವಾಟ್ಸಾಪ್‌ ಖಾತೆಗೆ ಪ್ರವೇಶವನ್ನು ಹೊಂದಿರುವ ಸ್ಕ್ರೀನ್‌ ಕೆಳಗಿನ ಅರ್ಧಭಾಗದಲ್ಲಿ ಡಿವೈಸ್‌ಗಳ ಪಟ್ಟಿಯನ್ನು ಕಾಣಬಹುದು.
ಹಂತ:4 ಈ ಪಟ್ಟಿಯಲ್ಲಿ ಕಾಣುವ ಡಿವೈಸ್‌ಗಳ ಮೇಲೆ ಟ್ಯಾಪ್ ಮಾಡಿರಿ ಮತ್ತು ಲಾಗ್ ಔಟ್ ಬಟನ್ ಅನ್ನು ಒತ್ತಿರಿ.
ಈಗ ನಿಮ್ಮ ವಾಟ್ಸಾಪ್‌ ಖಾತೆಯನ್ನು ಮಲ್ಟಿ ಡಿವೈಸ್‌ಗಳಿಂದ ತೆಗೆದುಹಾಕಲಾಗುತ್ತದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಹೊಸದಾಗಿ ಗ್ರೂಪ್‌ ಕಾಲ್‌ನಲ್ಲಿ ಒಂದೇ ಭಾರಿಗೆ 32 ಜನರನ್ನು ಸೇರಿಸುವ ಫೀಚರ್ಸ್‌ ಜೊತೆಗೆ, ವಾಟ್ಸಾಪ್‌ ವಾಯಿಸ್‌ ಮೆಸೆಜ್‌ಗಳಿಗೆ ಬಬಲ್‌ಗಳು ಮತ್ತು ಸಂಪರ್ಕಗಳು ಮತ್ತು ಗುಂಪುಗಳಿಗೆ ಮಾಹಿತಿ ಸ್ಕೋರ್‌ಗಳಿಗಾಗಿ ನವೀಕರಿಸಿದ ವಿನ್ಯಾಸಗಳನ್ನು ಹೊರತರುತ್ತಿದೆ. ಗ್ಯಾಲರಿಯಲ್ಲಿ ನಿಮ್ಮ ಮೆಚ್ಚಿನ ಮಾಧ್ಯಮವನ್ನು ಪ್ರವೇಶಿಸುವಂತಹ ಸಣ್ಣ ಸುಧಾರಣೆಗಳನ್ನು ಸಹ ಹೊರತರಲಾಗುವುದು. ಪ್ರಸ್ತುತ ಬ್ರೆಜಿಲ್‌ನಲ್ಲಿ ಈ ವೈಶಿಷ್ಟ್ಯವನ್ನು ಹೊರತರಲಾಗುತ್ತಿದೆ. ಹಾಗೆಯೇ ವಾಟ್ಸಾಪ್‌ ಶೀಘ್ರದಲ್ಲೇ, ಬಳಕೆದಾರರು 2 GB ವರೆಗಿನ ಫೈಲ್‌ಗಳನ್ನು ಹಂಚಿಕೊಳ್ಳಲು ಅವಕಾಶ ಒದಗಿಸಲಿದೆ. ಪ್ರಸ್ತುತ ವಾಟ್ಸಾಪ್‌ ಬಳಕೆದಾರರು ತಮ್ಮ ಸ್ನೇಹಿತರಿಗೆ 100 MB ಫೈಲ್‌ಗಳನ್ನು ಕಳುಹಿಸಲು ಅನುಮತಿಸುತ್ತದೆ. ಈ ಫೀಚರ್‌ ಅನ್ನು ಹೊರತಂದ ನಂತರ, ಬಳಕೆದಾರರು ಅಂತಿಮವಾಗಿ ತಮ್ಮ ಸಂಪರ್ಕಗಳೊಂದಿಗೆ ದೊಡ್ಡ ಫೈಲ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ವಾಟ್ಸಾಪ್‌

ಇನ್ನು ಒಂದೇ ಖಾತೆಗೆ ಹೆಚ್ಚಿನ ಸಾಧನಗಳನ್ನು ಸೇರಿಸಲು ಬಳಕೆದಾರರಿಗೆ ಅವಕಾಶ ನೀಡುವ ಪಾವತಿಸಿದ ವೈಶಿಷ್ಟ್ಯವನ್ನು ವಾಟ್ಸಾಪ್‌ ಪರೀಕ್ಷಿಸುತ್ತಿದೆ. ಸದ್ಯ ಬಳಕೆದಾರರಿಗೆ ಟ್ಯಾಬ್ಲೆಟ್, ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಅನ್ನು ಜೋಡಿಸಲು ಅನುಮತಿಸುತ್ತದೆ. ವಾಟ್ಸಾಪ್‌ ಬಳಕೆದಾರರಿಗೆ ಒಂದು ಸಮಯದಲ್ಲಿ ಒಂದು ಸ್ಮಾರ್ಟ್‌ಫೋನ್ ಅನ್ನು ಮಾತ್ರ ಕನೆಕ್ಟ್‌ ಮಾಡಲು ಅನುಮತಿಸುತ್ತದೆ.

Best Mobiles in India

Read more about:
English summary
Here's How to unlink your WhatsApp account from multiple devices

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X