ಆಂಡ್ರಾಯ್ಡ್ ಸ್ಮಾರ್ಟ್ಫೋನ್ ನಲ್ಲಿ ಸೇವ್ ಆಗಿರುವ ವೈಫೈ ಪಾಸ್ವರ್ಡ್ ನೋಡುವುದು ಹೇಗೆ?

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ನಲ್ಲಿ ಸಂಗ್ರಹವಾಗಿರುವ ವೈಫೈ ಪಾಸ್ವರ್ಡ್ಗಳನ್ನು ತಿಳಿಯಲು ರೂಟ್ ಫೋಲ್ಡರ್ ಗೆ ರೀಡ್ ಆಕ್ಸೆಸ್ ನೀಡಬಲ್ಲ ಫೈಲ್ ಎಕ್ಸ್ಪ್ಲೋರರ್ ಅಥವ ವೈಫೈ ಪಾಸ್ವರ್ಡ್ ರಿಕವರಿ(ರೂಟ್) ಟೂಲ್ ಬಳಸಬಹುದು.

By Tejaswini P G
|

ನೀವು ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ಹಲವಾರು ವೈಫೈಗಳಿಗೆ ಕನೆಕ್ಟ್ ಮಾಡಿರುತ್ತೀರಿ. ಈ ಎಲ್ಲಾ ಪಾಸ್ವರ್ಡ್ಗಳು ಆಂಡ್ರಾಯ್ಡ್ ನ ಇಂಟರ್ನಲ್ ರಿಸರ್ವ್ಡ್ ಮೆಮೋರಿಯಲ್ಲಿ ಸಂಗ್ರಹವಾಗಿರುತ್ತದೆ. ನೀವು ಕನೆಕ್ಟ್ ಮಾಡಿರುವ ವೈಫೈಗಳ ಪಾಸ್ವರ್ಡ್ ಮರೆಯುವುದು ಸಾಮಾನ್ಯ.

ಆಂಡ್ರಾಯ್ಡ್ ಸ್ಮಾರ್ಟ್ಫೋನ್ ನಲ್ಲಿ ಸೇವ್ ಆಗಿರುವ ವೈಫೈ ಪಾಸ್ವರ್ಡ್ ನೋಡುವುದು ಹೇಗೆ

ಇದಕ್ಕೆಂದೇ ನಾವು ಇಲ್ಲಿ ನೀಡಿದ್ದೇವೆ ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ಕನೆಕ್ಟ್ ಮಾಡಿರುವ ಎಲ್ಲಾ ವೈಫೈಗಳ ಪಾಸ್ವರ್ಡ್ ಅನ್ನು ತಿಳಿಯುವ ಎರಡು ಸುಲಭ ವಿಧಾನಗಳು.ಈ ವಿಧಾನಗಳಲ್ಲಿ ಒಂದು ರೂಟೆಡ್ ಆಂಡ್ರಾಯ್ಡ್ ಸಾಧನಗಳಿಗಾದರೆ ಮತ್ತೊಂದು ನಾನ್-ರೂಟೆಡ್ ಸಾಧನಗಳಲ್ಲಿ ಕೆಲಸಮಾಡುತ್ತದೆ.

ವಿಧಾನ 1: ಫೈಲ್ ಮ್ಯಾನೇಜರ್ ಬಳಸಿ

ವಿಧಾನ 1: ಫೈಲ್ ಮ್ಯಾನೇಜರ್ ಬಳಸಿ

ಈ ವಿಧಾನದಲ್ಲಿ ಮೊತ್ತ ಮೊದಲಿಗೆ ನಿಮಗೆ ಬೇಕು ರೂಟ್ ಫೋಲ್ಡರ್ ಗೆ ರೀಡ್ ಆಕ್ಸೆಸ್ ನೀಡಬಲ್ಲ ಫೈಲ್ ಎಕ್ಸ್ಪ್ಲೋರರ್. ನೀವು ಬಳಸುತ್ತಿರುವ ಫೈಲ್ ಎಕ್ಸ್ಪ್ಲೋರರ್ಗೆ ಈ ಸಾಮರ್ಥ್ಯ ಇಲ್ಲದಿದ್ದಲ್ಲಿ ರೂಟ್ ಎಕ್ಸ್ಪ್ಲೋರರ್ ಅಥವ ಸೂಪರ್ ಮ್ಯಾನೇಜರ್ ಇನ್ಸ್ಟಾಲ್ ಮಾಡಿ.ಈ ಆಪ್ಗಳು ಸಿಸ್ಟಮ್ ಫೋಲ್ಡರ್ ಪ್ರವೇಶಿಸಲು ಅಗತ್ಯವಾದ ಸೂಪರ್ ಯೂಸರ್ ಅನುಮತಿ ನೀಡುತ್ತದೆ.

ಹಂತ 1: /data/misc/wifi ಫೋಲ್ಡರ್ ಗೆ ಹೋಗಿ wpa_supplicant.conf ಫೈಲ್ ಅನ್ನು ಹುಡುಕಿ

ಹಂತ 2: ನಿಮ್ಮ ಬಿಲ್ಟ್-ಇನ್ ಟೆಕ್ಸ್ಟ್/HTML ವ್ಯೂವರ್ ಬಳಸಿ ಆ ಫೈಲ್ ಅನ್ನು ತೆರೆಯಿರಿ. ಅದರಲ್ಲಿ ನೀವು ಕನೆಕ್ಟ್ ಮಾಡಿರುವ ನೆಟ್ವರ್ಕ್ ಗಳ ನೆಟ್ವರ್ಕ್ SSID ಮತ್ತು ಪಾಸ್ವರ್ಡ್ಗಳನ್ನು ಕಾಣಬಹುದು.

ನಿಮಗೆ ಬೇಕಾದ ಪಾಸ್ವರ್ಡ್ ಗಳನ್ನು ಬರೆದಿಟ್ಟುಕೊಳ್ಳಿ..

ನಿಮಗೆ ಬೇಕಾದ ಪಾಸ್ವರ್ಡ್ ಗಳನ್ನು ಬರೆದಿಟ್ಟುಕೊಳ್ಳಿ..

ಸೂಚನೆ: wpa_supplicant.conf ಫೈಲ್ನಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಸಾಧನದ ಮೇಲೆ ಅಡ್ಡ ಪರಿಣಾಮಗಳು ಉಂಟಾಗಬಹುದು.

ಗೂಗಲ್ ಆವಿಷ್ಕಾರ: 40 ಭಾಷೆಗಳನ್ನು ಭಾಷಾಂತರಿಸಲಿದೆ ಪ್ರಿಕ್ಸಲ್ ಇಯರ್ ಬಡ್ಸ್..!ಗೂಗಲ್ ಆವಿಷ್ಕಾರ: 40 ಭಾಷೆಗಳನ್ನು ಭಾಷಾಂತರಿಸಲಿದೆ ಪ್ರಿಕ್ಸಲ್ ಇಯರ್ ಬಡ್ಸ್..!

 ES ಫೈಲ್ ಎಕ್ಸ್ಪ್ಲೋರರ್ ಬಳಸಿ ವೈಫೈ ಪಾಸ್ವರ್ಡ್ ತಿಳಿಯುವ ವಿಧಾನ

ES ಫೈಲ್ ಎಕ್ಸ್ಪ್ಲೋರರ್ ಬಳಸಿ ವೈಫೈ ಪಾಸ್ವರ್ಡ್ ತಿಳಿಯುವ ವಿಧಾನ

ಹಂತ 1: ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ES ಫೈಲ್ ಎಕ್ಸ್ಪ್ಲೋರರ್ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿ

ಹಂತ 2:ES ಫೈಲ್ ಎಕ್ಸ್ಪ್ಲೋರರ್ ನ "ರೂಟ್ ಎಕ್ಸ್ಪ್ಲೋರರ್" ಆಯ್ಕೆಯನ್ನು ಸಕ್ರಿಯಗೊಳಿಸಿ

ಹಂತ 3: ES ಫೈಲ್ ಎಕ್ಸ್ಪ್ಲೋರರ್ ಮೂಲಕ ರೂಟ್ ಫೋಲ್ಡರ್ ಗೆ ಹೋಗಿ ಅಲ್ಲಿ 'data' ಡೈರೆಕ್ಟರಿ ಹುಡುಕಿ.

ಹಂತ 4: 'data' ಡೈರೆಕ್ಟರಿಯಲ್ಲಿ ‘misc' ಫೋಲ್ಡರ್ ಗೆ ಹೋಗಿ

ಹಂತ 5: ಈಗ ಇಲ್ಲಿ ಲಭ್ಯವಿರುವ ‘wifi' ಫೋಲ್ಡರ್ ನಲ್ಲಿ wpa_supplicant.conf ಫೈಲ್ ಹುಡುಕಿ. ES ಫೈಲ್ ಎಕ್ಸ್ಪ್ಲೋರರ್ ನ ಬಿಲ್ಟ್-ಇನ್ ಟೆಕ್ಸ್ಟ್/HTML ವ್ಯೂವರ್ ಬಳಸಿ ಆ ಫೈಲ್ ಅನ್ನು ತೆರೆಯಿರಿ

ಹಂತ 6: ನೀವು ಕನೆಕ್ಟ್ ಮಾಡಿರುವ ನೆಟ್ವರ್ಕ್ ಗಳ ನೆಟ್ವರ್ಕ್ SSID ಮತ್ತು ಪಾಸ್ವರ್ಡ್ಗಳನ್ನು ಇಲ್ಲಿ ಕಾಣಬಹುದು

ಇದುವರೆಗೆ ಕನೆಕ್ಟ್ ಮಾಡಿರುವ` ವೈಫೈ ಪಾಸ್ವರ್ಡ್ಗಳನ್ನು ತಿಳಿಯುವುದು ಇಷ್ಟು ಸರಳ

ವಿಧಾನ 2 : ವೈಫೈ ಪಾಸ್ವರ್ಡ್ ರಿಕವರಿ(ರೂಟ್) ಬಳಸಿ

ವಿಧಾನ 2 : ವೈಫೈ ಪಾಸ್ವರ್ಡ್ ರಿಕವರಿ(ರೂಟ್) ಬಳಸಿ

ವೈಫೈ ಪಾಸ್ವರ್ಡ್ ರಿಕವರಿ ಒಂದು ಉಚಿತ ಟೂಲ್ ಆಗಿದ್ದು, ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ಸಂಗ್ರಹವಾಗಿರುವ ಪಾಸ್ವರ್ಡ್ಗಳನ್ನು ತಿಳಿಯಲು ಇದಕ್ಕೆ ರೂಟ್ ಆಕ್ಸೆಸ್ ನ ಅಗತ್ಯವಿರುತ್ತದೆ.ಈ ಟೂಲ್ ಬಳಸಿ ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿರುವ ಎಲ್ಲಾ ವೈಫೈ ಪಾಸ್ವರ್ಡ್ಗಳನ್ನು ಬ್ಯಾಕ್ ಆಪ್ ಮಾಡಬಹುದು.

ವೈಫೈ ಪಾಸ್ವರ್ಡ್ ರಿಕವರಿ ಟೂಲ್ ನ ಫೀಚರ್ಗಳು

ವೈಫೈ ಪಾಸ್ವರ್ಡ್ ರಿಕವರಿ ಟೂಲ್ ನ ಫೀಚರ್ಗಳು

• ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ಸೇವ್ ಆಗಿರುವ ಎಲ್ಲಾ ವೈಫೈ ನೆಟ್ವರ್ಕ್ ಗಳ ಪಾಸ್ವರ್ಡ್ಗಳನ್ನು ಪಟ್ಟಿಮಾಡಿ, ಬ್ಯಾಕಪ್ ಮತ್ತು ರೀಸ್ಟೋರ್ ಕೂಡ ಮಾಡಬಹುದು

• SSID ಮತ್ತು ಪಾಸ್ವರ್ಡ್ ಗಳನ್ನು ಫುಲ್ ಸ್ಕ್ರೀನ್ ನಲ್ಲಿ ನೋಡಬಹುದು( ನೋಡಲು ಮತ್ತು ಶೇರ್ ಮಾಡಲು ಅನುಕೂಲಕರ)

• ವೈಫೈ ಪಾಸ್ವರ್ಡ್ ಅನ್ನು ಕ್ಲಿಪ್ಬೋರ್ಡ್ ಗೆ ಕಾಪಿ ಮಾಡಿಕೊಳ್ಳಬಹುದು

• ವೈಫೈ ಪಾಸ್ವರ್ಡ್ ನ QR ಕೋಡ್ ತೋರಿಸುತ್ತದೆ

• SMS ಅಥವ ಈಮೇಲ್ ಮೂಲಕ ಪಾಸ್ವರ್ಡ್ ಶೇರ್ ಮಾಡಬಹುದು

ವೈಫೈ ಪಾಸ್ವರ್ಡ್ ರಿಕವರಿ ಬಳಸುವುದು ಹೇಗೆ

ಹಂತ 1:ವೈಫೈ ಪಾಸ್ವರ್ಡ್ ರಿಕವರಿಯನ್ನು ನಿಮ್ಮ ರೂಟೆಡ್ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ನಲ್ಲಿ ಡೌನ್ಲ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿ

ಹಂತ 2: ಇನ್ಸ್ಟಾಲ್ ಮಾಡಿದ ಬಳಿಕ ಅದಕ್ಕೆ ರೂಟ್ ಪರ್ಮಿಶನ್ ನೀಡಿ

ಹಂತ 3: ನೀವು ಈಗ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಸಂಗ್ರಹವಾಗಿರುವ ಎಲ್ಲಾ ವೈಫೈ ನೆಟ್ವರ್ಕ್ ಮತ್ತದರ ಪಾಸ್ವರ್ಡ್ಗಳ ಪಟ್ಟಿಯನ್ನು ಕಾಣಬಹುದು. ನಿಮಗೆ ಬೇಕಾದ ನೆಟ್ವರ್ಕ್ ಮೇಲೆ ಟ್ಯಾಪ್ ಮಾಡಿ "ಕಾಪಿ ಪಾಸ್ವರ್ಡ್ ಟು ಕ್ಲಿಪ್ಬೋರ್ಡ್" ಅನ್ನು ಆಯ್ಕೆ ಮಾಡಿ

ಇದುವರೆಗೆ ಕನೆಕ್ಟ್ ಮಾಡಿರುವ ವೈಫೈ ಪಾಸ್ವರ್ಡ್ ತಿಳಿಯಲು ಪ್ಲೇಸ್ಟೋರ್ನಲ್ಲಿ ಹಲವಾರು ಆಪ್ಗಳು ಲಭ್ಯವಿದ್ದರೂ, ವೈಫೈ ಪಾಸ್ವರ್ಡ್ ರಿಕವರಿ ಟೂಲ್ ಎಲ್ಲಕ್ಕಿಂತ ಉತ್ತಮ ಮತ್ತು ಬಳಸಲು ಸರಳ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಲು ಮರೆಯಬೇಡಿ!

Best Mobiles in India

Read more about:
English summary
Here's how you can find out saved wifi passwords in your android device.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X