Subscribe to Gizbot

ಏರ್‌ಟೆಲ್‌ನಲ್ಲಿ 50 ನಿಮಿಷಗಳ 'ಫ್ರೀ' ಟಾಕ್ ಟೈಮ್ ಪಡೆದುಕೊಳ್ಳುವುದು ಹೇಗೆ?

Written By:

ಏರ್‌ಟೆಲ್ ಕೊನೆಗೂ ರಿಲಾಯನ್ಸ್ ಜಿಯೋದೊಂದಿಗೆ ಪೈಪೋಟಿಗೆ ಸಿದ್ಧವಾಗಿದೆ. ಆಂಡ್ರಾಯ್ಡ್ ಮತ್ತು ಐಓಎಸ್‌ಗೆ ಏರ್‌ಟೆಲ್ ಮೈಏರ್‌ಟೆಲ್ ಅಪ್ಲಿಕೇಶನ್ ಅನ್ನು ಪ್ರಸ್ತುತಪಡಿಸಿದ್ದು ಬಳಕೆದಾರರಿಗೆ ಕಂಪೆನಿ ಪ್ರಸ್ತುತಪಡಿಸುತ್ತಿರುವ ಹೊಸ ಹೊಸ ಆಫರ್‌ಗಳ ಬಗ್ಗೆ ಅರಿತುಕೊಳ್ಳಲು ಇದು ಸಹಾಯಕವಾಗಿದೆ.

ಓದಿರಿ: ವೋಲ್ಟ್ ಡಿವೈಸ್‎ಗಳಿಗೆ 4ಜಿ ಜಿಯೋ ಸಿಮ್ ಆಕ್ಟಿವೇಟ್ ಮಾಡುವುದು ಹೇಗೆ?

ತಮ್ಮ ಯೋಜನೆಯಲ್ಲಿ ಇನ್ನಷ್ಟು ಮುಂದುವರಿದಿರುವ ಕಂಪೆನಿ ಉಚಿತ 50 ನಿಮಿಷಗಳ ಸ್ಥಳೀಯ ಮತ್ತು ಎಸ್‌ಟಿಡಿ ಟಾಕ್ ಟೈಮ್ ಅನ್ನು ಒದಗಿಸುತ್ತಿದ್ದು ಇದನ್ನು ಬಳಸಿಕೊಂಡು ದೇಶಾದ್ಯಂತ ಯಾವುದೇ ಏರ್‌ಟೆಲ್ ಸಂಖ್ಯೆಗೆ ಕರೆಮಾಡಬಹುದಾಗಿದೆ. ಈ ಸೇವೆಯು ಇನ್ನೂ ಬೀಟಾ ಮೋಡ್‌ನಲ್ಲಿದ್ದು ಅಪ್ಲಿಕೇಶನ್ ಬಳಸುವಾಗ ಕೆಲವು ಬಗ್‌ಗಳು ಬಳಕೆದಾರರಿಗೆ ಎದುರಾಗಿವೆ.

ಓದಿರಿ: ಅನ್‎ಲಿಮಿಟೆಡ್ 4ಜಿ ಡೇಟಾವನ್ನು ಹೈ ಸ್ಪೀಡ್‎ನಲ್ಲಿ ಪಡೆದುಕೊಳ್ಳುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ: 1

ಹಂತ: 1

'ಮೈ ಏರ್‌ಟೆಲ್ ಅಪ್ಲಿಕೇಶನ್ ಡೌನ್‌ಲೋಡ್/ಅಪ್‌ಡೇಟ್ ಮಾಡಿ
ನೀವು ಈಗಾಗಲೇ ಮೈ ಏರ್‌ಟೆಲ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ನೀವು ಅಪ್ಲಿಕೇಶನ್ ಅನ್ನು ಆವೃತ್ತಿ ಸಂಖ್ಯೆ 4.1.5 ಗೆ ಅಪ್‌ಡೇಟ್ ಮಾಡಬೇಕು. ನೀವು ಹೊಸ ಏರ್‌ಟೆಲ್ ಗ್ರಾಹಕರಾಗಿದ್ದಲ್ಲಿ, ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಹಂತ: 2

ಹಂತ: 2

'ಏರ್‌ಟೆಲ್ ಡಯಲರ್' ಪಾಪ್‌ಅಪ್ ಕ್ಲಿಕ್ ಮಾಡಿ
ಅಪ್ಲಿಕೇಶನ್ ತೆರೆದು ಅದನ್ನು ವಿಶ್ಲೇಷಿಸುವಾಗ, ಪಾಪ್ ಅಪ್ ಗೋಚರಿಸುತ್ತದೆ ಮತ್ತು 'ಟ್ರೈ ಇಟ್ ನೌ' ಕ್ಲಿಕ್ ಮಾಡಿ. ಮುಂದಿನ ಪರದೆಯಲ್ಲಿ, ಆಕ್ಟಿವೇಟ್ ನೌ ಕ್ಲಿಕ್ ಮಾಡಿ ಮತ್ತು ನಿಮ್ಮ ಡಯಲರ್ ಆಕ್ಟಿವೇಟ್ ಆಗುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ: 3

ಹಂತ: 3

ನಿಮ್ಮ ಉಚಿತ ನಿಮಿಷಗಳು ಕ್ರೆಡಿಟ್ ಆಗಿರುತ್ತವೆ
ಡಯಲರ್ ಅನ್ನು ನೀವು ಆಕ್ಟಿವೇಟ್ ಮಾಡಿಕೊಂಡ ನಂತರ, ನೀವು ಸ್ವಲ್ಪ ಸಮಯ ಕಾಯಬೇಕಾಗುತ್ತದೆ ನಂತರ ಸಂದೇಶ ದೊರೆಯುತ್ತದೆ ನಿಮ್ಮ ಖಾತೆಗೆ ಉಚಿತ ನಿಮಿಷಗಳು ಕ್ರೆಡಿಟ್ ಆಗಿವೆ ಎಂಬುದು ಇದರ ಒಕ್ಕಣೆಯಾಗಿರುತ್ತದೆ. ಈ ಆಫರ್ ಪ್ರಿಪೈಡ್ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Follow the below steps to get 50 minutes of free Airtel to Airtel local and STD.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot