ಯಶಸ್ಸಿನ ಕದದ ಬೋಲ್ಟ್ ತೆರೆಯಲು ಜಿಯೋ ಬಳಸಿದ 'ವೋಲ್ಟ್'

By Shwetha
|

ಭಾರತದ ಅತಿದೊಡ್ಡ ವ್ಯವಹಾರ ಸಂಸ್ಥೆ ರಿಲಾಯನ್ಸ್ ಇಂಡಸ್ಟ್ರಿ ತನ್ನೆಲ್ಲಾ ಟೆಲಿಕಾಮ್ ಅನ್ನು ವೋಲ್ಟ್ ಮೂಲಕ ಬೆಟ್ ಮಾಡುತ್ತಿದೆ. ಜಿಯೋ ವೋಲ್ಟ್ ಸೇವೆಯನ್ನು ಬಳಕೆದಾರರಿಗೆ ಒದಗಿಸುವ ಮೂಲಕ ಟೆಲಿಕಾಮ್ ಕ್ಷೇತ್ರದಲ್ಲಿ ಈ ಹಿಂದೆ ಯಾರೂ ಮಾಡಿರದ ಸಾಧನೆಯೊಂದನ್ನು ಮಾಡಹೊರಟಿದೆ. 90 ದಿನಗಳ ಉಚಿತ ಇಂಟರ್ನೆಟ್, ಕರೆ, ಎಸ್‌ಎಮ್‌ಎಸ್, ಅಪ್ಲಿಕೇಶನ್‌ಗಳ ಸೌಲಭ್ಯ ಇಷ್ಟಲ್ಲದೆ ವೋಲ್ಟ್ ಅನ್ನು ಪ್ರಸ್ತುತಪಡಿಸುವ ಮೂಲಕ ಫೋನ್ ಇತಿಹಾಸದಲ್ಲೇ ಹೊಸದಾದ ದಾಖಲೆಯನ್ನು ಸೃಷ್ಟಿಸಹೊರಟಿದೆ.

ಓದಿರಿ: 50 ರೂಪಾಯಿಗೆ 1ಜಿಬಿ ಡೇಟಾ ಜಿಯೋ ಆಫರ್

ವೋಲ್ಟ್ ಎಂದರೇನು?

ವೋಲ್ಟ್ ಎಂದರೇನು?

ವಾಯ್ಸ್ ಓವರ್ ಲಾಂಗ್ ಟರ್ಮ್ ಇವೊಲ್ಯೂಶನ್ ಎಂಬುದಾಗಿ ವೋಲ್ಟ್ ಅನ್ನು ಪರಿಗಣಿಸಲಾಗಿದೆ. ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್ ಅಥವಾ ಐಪಿ ಆಧಾರಿತ ಎಲ್‌ಟಿಇ ನೆಟ್‌ವರ್ಕ್ ಎಂಬುದಾಗಿ ಇದನ್ನು ಕರೆಯಲಾಗುತ್ತದೆ. ಎಲ್‌ಟಿಇ ಬಳಸಿಕೊಂಡು ವಾಯ್ಸ್ ಕಾಲ್‌ಗಳನ್ನು ಮಾಡಲು ಇದು ಬಳಕೆದಾರರನ್ನು ಅನುಮತಿಸುತ್ತದೆ. ಎಚ್‌ಡಿ ಗುಣಮಟ್ಟದಲ್ಲಿ ಕರೆಮಾಡುವ ಸೌಲಭ್ಯವನ್ನು ಇದು ಬಳಕೆದಾರರಿಗೆ ನೀಡುತ್ತದೆ. ಈ ಕರೆಗಳ ಗುಣಮಟ್ಟವನ್ನು ಅಂದಾಜು ಮಾಡುವುದು ಕೊಂಚ ಕಷ್ಟವೇ, ಆದರೆ ಇತರ ಸಾಂಪ್ರದಾಯಿಕ ಕರೆಗಳಿಗೆ ಹೋಲಿಸಿದಾಗ ಇದು ಹೆಚ್ಚಿನ ಸುಧಾರಿಕೆಯನ್ನು ಕಂಡುಕೊಂಡಿದೆ.

ವೋಲ್ಟ್ ಹೇಗೆ ಕಾರ್ಯನಿರ್ವಹಿಸುತ್ತದೆ

ವೋಲ್ಟ್ ಹೇಗೆ ಕಾರ್ಯನಿರ್ವಹಿಸುತ್ತದೆ

ವೋಲ್ಟ್ ಅಥವಾ ವಾಯ್ಸ್ ಓವರ್ ಎಲ್‌ಟಿಇ ಸಿನಾರಿಯೊದಲ್ಲಿ ವಾಯ್ಸ್ ಕರೆಗಳು ಸಾಂಪ್ರದಾಯಿಕವಾಗಿ 4ಜಿ ಎಲ್‌ಟಿಇ ಡೇಟಾ ನೆಟ್‌ವರ್ಕ್‌ನಲ್ಲಿ ಒದಗಿಸಲಾಗುತ್ತದೆ. ಇದನ್ನು ಮೂಲತಃ 2ಜಿ ಅಥವಾ 3ಜಿ ನೆಟ್‌ವರ್ಕ್ ಅನ್ನು ಬಳಸಿಕೊಂಡು ಮಾಡಲಾಗುತ್ತದೆ. ವೋಲ್ಟ್ ತಂತ್ರಜ್ಞಾನವು ವಾಯ್ಸ್ ಅನ್ನು ಇನ್ನೊಂದು ಅಪ್ಲಿಕೇಶನ್‌ನಂತೆ ಎಲ್‌ಟಿಇ ಡೇಟಾ ನೆಟ್‌ವರ್ಕ್‌ನಲ್ಲಿ ಬಳಸಲು ನೆರವು ನೀಡುತ್ತದೆ. ಹೆಚ್ಚು ವೇಗದ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ವಿತರಿಸಲು ಅಂದರೆ 4ಜಿ ಎಂಬುದಾಗಿ ಇದನ್ನು ಕರೆಯಲಾಗುತ್ತದೆ.

ವೋಲ್ಟ್ ಪ್ರಯೋಜನಗಳೇನು

ವೋಲ್ಟ್ ಪ್ರಯೋಜನಗಳೇನು

ಬ್ಯಾಂಡ್‌ಗಳನ್ನು ಬದಲಾಯಿಸದೇ ವಾಯ್ಸ್ ಮತ್ತು ಡೇಟಾವನ್ನು ಬದಲಾಯಿಸಲು ಆಪರೇಟರ್‌ಗೆ ವೋಲ್ಟ್ ಅನುಮತಿಸುತ್ತದೆ. ಇದು ಸ್ಪೆಕ್ಟ್ರಮ್‌ನ ನಿಖರವಾದ ಬಳಕೆಯನ್ನು ಹೆಚ್ಚಿಸುತ್ತದೆ. ವೀಡಿಯೊ ಹಂಚಿಕೆ, ಮಲ್ಟಿಮೀಡಿಯಾ ಮೆಸೇಜಿಂಗ್, ಚಾಟ್ ಮತ್ತು ಫೈಲ್ ಟ್ರಾನ್ಸ್‌ಫರ್ ಅನ್ನು ನಡೆಸಲು ನೆರವು ನೀಡುತ್ತದೆ.

ರಿಲಾಯನ್ಸ್ ಜಿಯೋದ ವೋಲ್ಟ್ ಬೆಟ್

ರಿಲಾಯನ್ಸ್ ಜಿಯೋದ ವೋಲ್ಟ್ ಬೆಟ್

ಜಿಯೋಗಾಗಿ, ವೋಲ್ಟ್ ಬೇಸ್ ಇಂಜಿನ್ ಅನ್ನು ಹೊಂದಿಕೊಂಡು ವಾಯ್ಸ್ ಸೇವೆಯನ್ನು ನಡೆಸುತ್ತದೆ. ಇದು ರಿಲಾಯನ್ಸ್‌ನೊಂದಿಗೆ ಪಾಲುದಾರಿಕೆಯನ್ನು ಪಡೆದುಕೊಂಡು ಬ್ಯಾಕಪ್ ವಾಯ್ಸ್ ಏರ್‌ವೇವ್ಸ್ ಅನ್ನು ನಡೆಸುತ್ತದೆ. ಜಿಯೋ ಮತ್ತು ಆರ್‌ಕಾಮ್ ಸ್ಪೆಕ್ಟ್ರಮ್ ಶೇರಿಂಗ್ ಅನ್ನು ಹೊಂದಿದ್ದು 17 ವಲಯಗಳಲ್ಲಿ ಟ್ರೇಡಿಂಗ್ ಒಪ್ಪಂದವನ್ನು ಮಾಡಿಕೊಂಡಿದೆ.

ವೋಲ್ಟ್‌ನ ಸ್ಮಾರ್ಟ್‌ಫೋನ್ ಬೆಂಬಲ

ವೋಲ್ಟ್‌ನ ಸ್ಮಾರ್ಟ್‌ಫೋನ್ ಬೆಂಬಲ

ದೇಶದಲ್ಲಿ ವೋಲ್ಟ್ ಅನ್ನು ಬೆಂಬಲಿಸುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಿವೆ. ರಿಲಾಯನ್ಸ್ ತನ್ನ ಎಲ್‌ವೈಎಫ್ ಬ್ರ್ಯಾಂಡ್ ಅಡಿಯಲ್ಲಿ 20 ವೋಲ್ಟ್ ಬೆಂಬಲಿತ ಸ್ಮಾರ್ಟ್‌ಫೋನ್‌ಗಳನ್ನು ಆಫರ್ ಮಾಡುತ್ತಿದೆ. ಅತಿ ಕಡಿಮೆ ದರದ ಎಲ್‌ವೈಎಫ್ ಸ್ಮಾರ್ಟ್‌ಫೋನ್ ಹೆಸರು ಎಲ್‌ವೈಎಫ್ ಫ್ಲೇಮ್ ಎಂದಾಗಿದ್ದು ಇದು ರೂ 2,999 ಕ್ಕೆ ದೊರೆಯುತ್ತಿದೆ. ಎಲ್ಲಾ ಜಾಗತಿಕ ಸ್ಮಾರ್ಟ್‌ಫೋನ್‌ಗಳಾದ ಸ್ಯಾಮ್‌ಸಂಗ್, ಎಚ್‌ಟಿಸಿ, ಲೆನೊವೊ, ಹುವಾವೆ, ಶ್ಯೋಮಿ ಮೈಕ್ರೋಮ್ಯಾಕ್ಸ್, ಲಾವಾ, ಕಾರ್ಬನ್, ಇಂಟೆಕ್ಸ್ ಮತ್ತು ಇತರ ಫೋನ್‌ಗಳಲ್ಲಿ ವೋಲ್ಟ್ ಬೆಂಬಲ ದೊರೆಯಲಿದೆ.

ಯಾವುದೇ ಹೆಚ್ಚಿನ ದರ ಶುಲ್ಕಗಳಿಲ್ಲ

ಯಾವುದೇ ಹೆಚ್ಚಿನ ದರ ಶುಲ್ಕಗಳಿಲ್ಲ

ರಿಲಾಯನ್ಸ್ ಜಿಯೋ ಕರೆಗಳನ್ನು ಉಚಿತವಾಗಿ ನೀಡುತ್ತಿದೆ. ಎಚ್‌ಡಿ ಕರೆಗಳಿಗೆ ಹೆಚ್ಚಿನ ದರ ವಿಧಿಸಲಾಗಿಲ್ಲ ಅಂತೆಯೇ ಇದು ಒಂದೇ ರೀತಿಯ ಡೇಟಾ ನೆಟ್‌ವರ್ಕ್ ಅನ್ನು ಬಳಸಿಕೊಳ್ಳಲಿದೆ.

Best Mobiles in India

English summary
In this article we can see that Reliance jio Volt all you need to know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X