ಗೂಗಲ್ ಮ್ಯಾಪ್ ಗೆ ಗುಡ್ ಬಾಯ್ ಹೇಳಲಿದ್ಯಾ ಐಫೋನ್ !

By Gizbot Bureau
|

ಆಪಲ್ ನ ಅಪ್ಪಟ ಅಭಿಮಾನಿಗಳಿಗೂ ಕೂಡ ನೇವಿಗೇಷನ್ ಆಪ್ ಅಂದ್ರೆ ಅದು ಗೂಗಲ್ ಮ್ಯಾಪ್ ಆಗಿತ್ತು. ಉತ್ತಮ ಮಾರ್ಜಿನ್ ನಲ್ಲಿರುವ ಗೂಗಲ್ ನ ಆಪ್ ಎಂದರೆ ಅದು ಗೂಗಲ್ ಮ್ಯಾಪ್ ಆಪ್. ಆದರೆ ಇದೀಗ ಆಪಲ್ ಗೂಗಲ್ ಮ್ಯಾಪ್ ಗೆ ಗುಡ್ ಬೈ ಹೇಳುವ ಸಾಧ್ಯತೆ ಕಾಣುತ್ತಿದೆ. ಗೂಗಲ್ ಮ್ಯಾಪ್ ಗಾಗಿ ಆಪಲ್ ಹಣ ನೀಡುವುದನ್ನು ಮುಂದಿನ ದಿನಗಳಲ್ಲಿ ನಿಲ್ಲಿಸುವ ಸಾಧ್ಯತೆ ಇದೆ. ಯಾಕೆ ಎಂದು ಕೇಳುತ್ತಿದ್ದೀರಾ? ಅದಕ್ಕೂ ಕಾರಣವಿದೆ. ಮುಂದೆ ಓದಿ.

ಹೊಸ ರೀತಿಯ ಮ್ಯಾಪ್ ಬಿಡುಗಡೆ:

ಹೊಸ ರೀತಿಯ ಮ್ಯಾಪ್ ಬಿಡುಗಡೆ:

WWDC 2019 ನಲ್ಲಿ ಕ್ಯೂಪರ್ಟಿನೋ ಮೂಲದ ಟೆಕ್ ಸಂಸ್ಥೆ ಐಓಎಸ್ 13 ನ್ನು ಬಿಡುಗಡೆಗೊಳಿಸಿದ್ದು ಐಫೋನಿನ ಹೊಸ ಸಾಫ್ಟ್ ವೇರ್ ಇದಾಗಿದೆ ಮತ್ತು ಇದರಲ್ಲಿ ಹೊಸ ರೀತಿಯ ಮ್ಯಾಪ್ ನ್ನು ಅವತರಣಿಕೆಯನ್ನುತೋರಿಸಲಾಗಿದೆ.

ಆದ್ಯತೆ ಮೇರೆಗೆ ಸೆಟ್ಟಿಂಗ್ಸ್:

ಆದ್ಯತೆ ಮೇರೆಗೆ ಸೆಟ್ಟಿಂಗ್ಸ್:

ಆಪಲ್ ಸುಮಾರು 4 ಮಿಲಿಯನ್ ಮೈಲುಗಳ ದೂರವನ್ನು ಇದರಲ್ಲಿ ಒಳಗೊಂಡಿದೆ ಮತ್ತು ನಿಖರವಾದ ಡಾಟಾ ನೀಡುವುದಕ್ಕೆ ಸರ್ವಪ್ರಯತ್ನವನ್ನು ನಡೆಸಿದೆ. ಆಪಲ್ ಮ್ಯಾಪ್ ನಲ್ಲಿ ಹೆಚ್ಚು ಅಕ್ಯುರೇಟ್ ಆಗಿರುವ ಮಾಹಿತಿಗಳು ಲಭ್ಯವಾಗುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಬಳಕೆದಾರರಿಗೂ ಕೂಡ ಕಸ್ಟಮೈಸೇಷನ್ ಗೆ ಅವಕಾಶವಿರುತ್ತದೆ. ಅವರ ಆದ್ಯತೆಯ ಮೇರೆಗೆ ಸೆಟ್ಟಿಂಗ್ಸ್ ಮಾಡಿಕೊಳ್ಳಬಹುದು.

ಆಪಲ್ ಸ್ಟ್ರೀಟ್ ವ್ಯೂ:

ಆಪಲ್ ಸ್ಟ್ರೀಟ್ ವ್ಯೂ:

ಗೂಗಲ್ ಸ್ಟ್ರೀಟ್ ವ್ಯೂ ಫೀಚರ್ ನಂತೆಯೇ ಆಪಲ್ ನಲ್ಲೂ ಕೂಡ ಬಳಕೆದಾರರಿಗೆ ನಿರ್ಧಿಷ್ಟ ಏರಿಯಾದ ಸ್ಟ್ರೀಟ್ ವ್ಯೂ ನೀಡುವುದಕ್ಕೆ ಆಪಲ್ ಮ್ಯಾಪ್ ನಲ್ಲಿ ಕೆಲವು ಫೀಚರ್ ಗಳನ್ನು ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಬೈನಾಕ್ಯುಲರ್ ಅಥವಾ ದೂರದರ್ಶಕ ಐಕಾನ್ ಮ್ಯಾಪ್ ಆಪ್ ನಲ್ಲಿ ಲಭ್ಯವಿರುತ್ತದೆ ಮತ್ತು ಅದನ್ನು ಬಳಕೆದಾರರು ಟ್ಯಾಪ್ ಮಾಡುವ ಮೂಲಕ ಹತ್ತಿರದ ವ್ಯೂ ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ.

2012 ರಲ್ಲೇ ಬಿಡುಗಡೆಗೊಂಡಿತ್ತು:

2012 ರಲ್ಲೇ ಬಿಡುಗಡೆಗೊಂಡಿತ್ತು:

2012 ರಲ್ಲಿ ಆಪಲ್ ಮ್ಯಾಪ್ ನ್ನು ಬಿಡುಗಡೆಗೊಳಿಸಿತ್ತು ಆದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿತು. ಆಪಲ್ ನ ಸಿಇಓ ಆಪಲ್ ನ ಅಧಿಕೃತ ವೆಬ್ ಸೈಟ್ ನಲ್ಲಿ ತೆರೆದ ಪತ್ರವನ್ನೇ ಬರೆದಿದ್ದರು ಮತ್ತು ಸಮಸ್ಯೆಗಳ ಬಗ್ಗೆ ಕ್ಷಮೆಯಾಚಿಸಿದ್ದರು. ಇದು 2012 ರಲ್ಲಿ ನಡೆದದ್ದು ಮತ್ತು ಆಪಲ್ ಮ್ಯಾಪ್ ನ ಆರಂಭಿಕ ದಿನಗಳಾಗಿತ್ತು.ಆದಾದ ನಂತರ ಸಾಕಷ್ಟು ಬದಲಾವಣೆಗಳಾಗಿವೆ ಮತ್ತು ಸ್ಮಾರ್ಟ್ ಫೋನ್ ಗಳಲ್ಲಿ ಗೂಗಲ್ ಡೀಫಾಲ್ಟ್ ನೇವಿಗೇಷನ್ ಆಪ್ ಆಗಿ ಗುರುತಿಸಿಕೊಂಡು ಪ್ರಸಿದ್ಧಿಯಾಗಿದೆ. ಐಓಎಸ್ 13 ಮೂಲಕ ಆಪಲ್ ಸಂಸ್ಥೆ ಪುನಃ ಆಪಲ್ ಮ್ಯಾಪ್ ನ್ನು ಜಗತ್ತಿಗೆ ಪರಿಚಯಿಸುವುದಕ್ಕೆ ಮುಂದಾಗುತ್ತಿದೆ.

ಯುಎಸ್ ನಲ್ಲಿ ಮೊದಲು ಬಿಡುಗಡೆ:

ಯುಎಸ್ ನಲ್ಲಿ ಮೊದಲು ಬಿಡುಗಡೆ:

ಈ ವರ್ಷಾಂತ್ಯದ ಒಳಗೆ ಆಪಲ್ ಮ್ಯಾಪ್ ಯುಸ್ ನಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.ನಂತರ, ಇತರೆ ವಿಶ್ವದ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಆದರೆ ಯಾವ ದೇಶಗಳಿಗೆ ಹೊಸ ಆಪಲ್ ಮ್ಯಾಪ್ ಫೀಚರ್ ಲಭ್ಯವಾಗುತ್ತದೆ ಎಂಬ ಬಗ್ಗೆ ಆಪಲ್ ಬಿಡುಗಡೆಗೊಳಿಸಿಲ್ಲ.ಹಾಗಾಗಿ ಭಾರತದಲ್ಲಿ ಯಾವಾಗ ಬಿಡುಗಡೆಗೊಳ್ಳಲಿದೆ ಎಂಬುದನ್ನು ಖಾತ್ರಿಗೊಳಿಸುವುದಕ್ಕೆ ಸಾಧ್ಯವಿಲ್ಲ.

ಸ್ಪರ್ಧಿಸಲು ಸಾಧ್ಯವೇ?

ಸ್ಪರ್ಧಿಸಲು ಸಾಧ್ಯವೇ?

ಗೂಗಲ್ ಗೆ ಸ್ಪರ್ಧೆಯೊಡ್ಡುವ ಸಾಧ್ಯತೆಗಳ ಬಗ್ಗೆ ಮಾತನಾಡುವುದಕ್ಕೆ ಈಗಲೇ ಸಾಧ್ಯವಿಲ್ಲ ಯಾಕೆಂದರೆ ಆಪಲ್ ಮ್ಯಾಪ್ ಬಗೆಗಿನ ಸಂಪೂರ್ಣ ವಿವರಣೆಗಳು ಇನ್ನೂ ಲಭ್ಯವಾಗಿಲ್ಲ. ನೇವಿಗೇಷನ್ ವಿಚಾರದಲ್ಲಿ ಗೂಗಲ್ ಗಿಂತ ಹೆಚ್ಚಿನ ಫೀಚರ್ ಗಳನ್ನು ಒಳಗೊಂಡಿದ್ದಲ್ಲಿ ಮಾತ್ರವೇ ಆಪಲ್ ಯಶಸ್ಸು ಕಾಣುವುದಕ್ಕೆ ಸಾಧ್ಯವೆಂಬುದು ಮಾತ್ರ ಖಚಿತ.

Best Mobiles in India

Read more about:
English summary
Here's Why iPhone Users Might Not Use Google Maps Anymore

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X