ಆಂಡ್ರಾಯ್ಡ್ ಬಳಕೆದಾರರು ಅರಿತಿರಲೇಬೇಕಾದ ಟಿಪ್ಸ್

By Shwetha
|

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಇಂದು ಮಿಲಿಯಗಟ್ಟಲೆ ಜನರು ಬಳಸುತ್ತಿದ್ದಾರೆ ಆದರೆ ಅವರುಗಳ ಸ್ಮಾರ್ಟ್‌ಫೋನ್ ಎಷ್ಟುಶಕ್ತಿಶಾಲಿ ಎಂಬುದು ಯಾರಿಗೂ ತಿಳಿದಿಲ್ಲ. ಕೆಲವೊಂದು ಟ್ರಿಕ್ಸ್‌ಗಳನ್ನು ಅನುಸರಿಸುವುದರ ಮೂಲಕ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಬಹುದಾಗಿದೆ.

ಓದಿರಿ: 5 ಅಡಿ ಎತ್ತರದಿಂದ ಬಿದ್ದರೂ ಫೋನ್‌ ಸುರಕ್ಷೆ ಗೊಳಿಸುವ 'ಗೊರಿಲ್ಲಾ ಗ್ಲಾಸ್‌ 5'

ಬನ್ನಿ ಇಂದಿನ ಲೇಖನದಲ್ಲಿ ಈ ಟ್ರಿಕ್ಸ್‌ಗಳೇನು ಎಂಬುದನ್ನು ನಾವು ಅರಿತುಕೊಳ್ಳಲಿದ್ದು ಇದು ಆಂಡ್ರಾಯ್ಡ್ ಪ್ರೇಮಿಗಳಿಗೆ ಹೆಚ್ಚು ಬಳಕೆಯದ್ದಾಗಿದೆ ಅದೇನು ಎಂಬುದನ್ನು ನೋಡೋಣ.

ಸ್ಮಾರ್ಟ್ ಲಾಕ್

ಸ್ಮಾರ್ಟ್ ಲಾಕ್

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಭದ್ರತೆಯನ್ನು ಅರಿತು ನೀವು ಗೊಂದದಲ್ಲಿದ್ದೀರಾ? ಪಾಸ್‌ವರ್ಡ್ ಮರೆತು ಹೋಗುತ್ತಿದ್ದೀರಾ? ಹಾಗಿದ್ದರೆ ಚಿಂತಿಸದಿರಿ. ನಿಮ್ಮ ಫೋನ್‌ಗೆ ಸ್ಮಾರ್ಟ್ ಲಾಕ್ ಅನ್ನು ಅಳವಡಿಸಿಕೊಳ್ಳಬಹುದಾಗಿದೆ. ಫೋನ್‌ನ ಸೆಟ್ಟಿಂಗ್‌ಗೆ ಹೋಗಿ ಮತ್ತು ಲಾಕ್ ಸ್ಕ್ರೀನ್‌ಗೆ ಹೋಗಿ. ಇಲ್ಲಿ ಸೆಕ್ಯೂರ್ ಲಾಕ್ ಸೆಟ್ಟಿಂಗ್ಸ್ ಆಪ್ಶನ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ಬೇರೆ ಬೇರೆ ಸ್ಮಾರ್ಟ್ ಲಾಕ್ ವಿಧಾನಗಳನ್ನು ಅರಿತುಕೊಳ್ಳಬಹುದಾಗಿದೆ.

ಪಿಸಿ/ಟ್ಯಾಬ್‌ಗೆ ಸಿಂಕ್ ಮಾಡಿಕೊಳ್ಳುವುದು

ಪಿಸಿ/ಟ್ಯಾಬ್‌ಗೆ ಸಿಂಕ್ ಮಾಡಿಕೊಳ್ಳುವುದು

ಜಿಮೇಲ್ ಖಾತೆಯೊಂದಿಗೆ ಆಂಡ್ರಾಯ್ಡ್ ಡಿವೈಸ್ ಅನ್ನು ಹೊಂದಿಸುವುದು ಕಡ್ಡಾಯವಾಗಿದೆ. ಆದರೆ ಹೀಗೆ ಮಾಡುವುದರಿಂದ ನೀವು ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ನೀವು ಮ್ಯೂಸಿಕ್, ಪಿಕ್ಚರ್ಸ್, ವೀಡಿಯೊಗಳು, ಸಂಪರ್ಕಗಳು, ಕ್ಯಾಲೆಂಡರ್, ಇಮೇಲ್ ಮೊದಲಾದವುಗಳನ್ನು ಸಿಂಕ್ ಮಾಡಿಕೊಳ್ಳಬಹುದಾಗಿದೆ. ಅಂತೆಯೇ ನಿಮ್ಮ ಕಂಪ್ಯೂಟರ್‌ನಿಂದ ಕೂಡ ಹೀಗೆಯೇ ಮಾಡಿಕೊಳ್ಳಬಹುದಾಗಿದೆ. ಇತರ ಆಂಡ್ರಾಯ್ಡ್ ಡಿವೈಸ್ ಮತ್ತು ಕ್ಲೌಡ್‌ನಿಂದ ಕೂಡ ಇದು ಸಾಧ್ಯವಾಗಲಿದೆ.

ವೈಫೈ ಹಾಟ್‌ಸ್ಪಾಟ್ ರಚನೆ

ವೈಫೈ ಹಾಟ್‌ಸ್ಪಾಟ್ ರಚನೆ

ಟೆದರಿಂಗ್ ಎಂಬ ಹೆಚ್ಚು ಪ್ರಯೋಜನಕಾರಿ ಫೀಚರ್ ಅನ್ನು ಬಳಸಿಕೊಂಡು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ವೈಫೈ ಹಾಟ್‌ಸ್ಪಾಟ್‌ಗೆ ಬದಲಿಸಿಕೊಳ್ಳಬಹುದಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ನ ಇಂಟರ್ನೆಟ್ ಸಂಪರ್ಕವನ್ನು ವೈಫೈ ನೆಟ್‌ವರ್ಕ್‌ಗೆ ಬದಲಾಯಿಸಿಕೊಂಡು ಇರ ಡಿವೈಸ್‌ಗಾಗಿ ಲಾಗ್ ಇನ್ ಮಾಡಿಕೊಳ್ಳಬಹುದಾಗಿದೆ.

ಆಂಡ್ರಾಯ್ಡ್ ಡಿವೈಸ್‌ನೊಂದಿಗೆ ಬಾರ್‌ಕೋಡ್‌ಗಳನ್ನು ಸ್ಕ್ಯಾನ್ ಮಾಡುವುದು

ಆಂಡ್ರಾಯ್ಡ್ ಡಿವೈಸ್‌ನೊಂದಿಗೆ ಬಾರ್‌ಕೋಡ್‌ಗಳನ್ನು ಸ್ಕ್ಯಾನ್ ಮಾಡುವುದು

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಬಾರ್ ಕೋಡ್ ಸ್ಕ್ಯಾನರ್ ಆಗಿ ಕೂಡ ಬಳಸಿಕೊಳ್ಳಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದಕ್ಕಾಗಿ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಲಭ್ಯವಿದ್ದು ಇವುಗಳು ಕ್ಯುಆರ್ ಕೋಡ್‌ಗಳು ಮತ್ತು ಬಾರ್‌ಕೋಡ್‌ಗಳನ್ನು ಸ್ಕ್ಯಾನ್ ಮಾಡಲು ಅನುಮತಿಸಲಿದೆ.

ಆಂಡ್ರಾಯ್ಡ್ ಫೋನ್ ಲಾಕ್ ಮಾಡುವುದು

ಆಂಡ್ರಾಯ್ಡ್ ಫೋನ್ ಲಾಕ್ ಮಾಡುವುದು

ನಿಮ್ಮ ಫೋನ್ ಕಳೆದುಕೊಳ್ಳುವುದು ದುಃಖಕರ ವಿಷಯವಾದರೂ ಅದರಲ್ಲಿರುವ ಡೇಟಾವನ್ನು ಕಳೆದುಕೊಳ್ಳುವುದು ಬಹುದೊಡ್ಡ ನಷ್ಟವಾಗಿ ಪರಿಣಮಿಸಬಹುದು. ರಿಮೋಟ್ ಲೊಕೇಶನ್‌ನಿಂದ ನಿಮ್ಮ ಫೋನ್‌ನಲ್ಲಿ ಇತರರು ಡೇಟಾವನ್ನು ಪ್ರವೇಶಿಸುವುದನ್ನು ನಿಮಗೆ ನಿರ್ಬಂಧಿಸಬಹುದಾಗಿದೆ.
ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಅನ್ನು ಬಳಸಿಕೊಂಡು ಇದನ್ನು ಮಾಡಬಹುದಾಗಿದೆ. ಸೆಟ್ಟಿಂಗ್ಸ್ > ಅಪ್ಲಿಕೇಶನ್ಸ್ > ಗೂಗಲ್ ಸೆಟ್ಟಿಂಗ್ಸ್ > ಸೆಕ್ಯುರಿಟಿ.ಇನ್

Best Mobiles in India

English summary
If you want to use your Android smartphone to the maximum extent that you can, you can go through the hidden tricks that you can actually try out.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X