Just In
Don't Miss
- Movies
Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆ್ಯಂಡ್ರಾಯ್ಡ್ ಫೋನಿನಲ್ಲಿ ಉತ್ತಮ ಫೋಟೋಗಳನ್ನು ತೆಗೆಯುವುದು ಹೇಗೆ.
ಹೊಚ್ಚ ಹೊಸ ಆ್ಯಂಡ್ರಾಯ್ಡ್ ಫೋನನ್ನು ಖರೀದಿಸಿದ್ದೀರ, ಅದರಲ್ಲಿ ಉತ್ತಮ ಕ್ಯಾಮೆರಾ ಕೂಡ ಇದೆ, ಆದರೂ ನಿಮ್ಮ ಸ್ನೇಹಿತರು ಇನ್ಸ್ಟಾಗ್ರಾಮಿನಲ್ಲಿ ಹಾಕುವ ಸುಂದರ ಚಿತ್ರಗಳನ್ನು ತೆಗೆಯುವುದು ನಿಮ್ಮಿಂದಾಗುತ್ತಿಲ್ಲ. ತಲೆ ಕೆಡಿಸಿಕೊಳ್ಳಬೇಡಿ, ನಿಮ್ಮ ನೆರವಿಗೆ ನಾವಿದ್ದೇವೆ! ಪರಿಣಿತರಂತೆ ಚಿತ್ರಗಳನ್ನು ತೆಗೆಯುವುದಕ್ಕೆ ಇಲ್ಲಿ ಕೆಲವು ಸಲಹೆಗಳಿವೆ.
ಆಂಡ್ರಾಯ್ಡ್ ಫೋನ್‌ನಲ್ಲಿ ಡಿಲೀಟ್ ಆದ ಫೋಟೋ ಮರುಪಡೆದುಕೊಳ್ಳುವುದು ಹೇಗೆ?

ಡಿಜಿಟಲ್ ಜೂಮನ್ನು ಹೆಚ್ಚು ಉಪಯೋಗಿಸಬೇಡಿ.
ಡಿಜಿಟಲ್ ಜೂಮ್ ಚಿತ್ರವನ್ನು ಮತ್ತಷ್ಟು ಹಿಗ್ಗಿಸಿ ಮಬ್ಬು ಮಬ್ಬಾಗಿ ಕಾಣುವಂತೆ ಮಾಡಿಬಿಡುತ್ತದೆ. ಹಾಗಾಗಿ ಚಿತ್ರವನ್ನು ಆಪ್ಟಿಕಲ್ ಜೂಮ್ ಉಪಯೋಗಿಸಿ ತೆಗೆದು ನಂತರದಲ್ಲಿ ಎಡಿಟ್ ಮಾಡುವುದು ಉತ್ತಮ.

ಫ್ಲಾಷ್ ಅಪರೂಪಕ್ಕೆ ಉಪಯೋಗಿಸಿ.
ಫೋನಿನಲ್ಲಿರುವ ಫ್ಲಾಷನ್ನು ಉಪಯೋಗಿಸಿ ಚಿತ್ರ ತೆಗೆದರೆ ಚಿತ್ರದ ಆಳವು ಕಡಿಮೆಯಾಗುತ್ತದೆ ಮತ್ತು ಚಿತ್ರ ಹೆಚ್ಚು ಚಪ್ಪಟೆಯಾಗಿ ತೋರುತ್ತದೆ. ನಿಮ್ಮ ಚಿತ್ರಗಳು ಸಹಜವಾಗಿ ಕಾಣಬೇಕೆಂದರೆ ಫ್ಲಾಷ್ ಉಪಯೋಗಿಸದೆ ಸಹಜ ಬೆಳಕನ್ನು ಅರಿತುಕೊಂಡು ಚಿತ್ರ ತೆಗೆಯಿರಿ. ಕತ್ತಲೆ ಕೋಣೆಯಲ್ಲಿ, ಸಹಜ ಬೆಳಕು ಲಭ್ಯವಿಲ್ಲದ ಸಮಯದಲ್ಲಿ ಅನಿವಾರ್ಯವಾಗಿ ಫ್ಲಾಷ್ ಉಪಯೋಗಿಸಬೇಕಾದಲ್ಲಿ ಕೊಂಚ ದೂರದಿಂದ ಫೋಟೋ ತೆಗೆಯಿರಿ. ಹೀಗೆ ಮಾಡುವುದರಿಂದ ಫ್ಲಾಷ್ ಚಿತ್ರದ ಕೆಲ ಭಾಗವನ್ನು ಹೆಚ್ಚು ಪ್ರಖರವಾಗಿಸುವುದನ್ನು ತಡೆಯಬಹುದು.

ಮೂರು ಪಟ್ಟಿಯ ನಿಯಮ
ಪರಿಣಿತಿ ಹೊಂದದ ಛಾಯಾಗ್ರಹಕ ಫೋಟೋ ತೆಗೆಯುವ ವಸ್ತು/ ವ್ಯಕ್ತಿಯನ್ನು ಚಿತ್ರದ ಫ್ರೇಮಿನ ಮಧ್ಯದಲ್ಲಿ ಇಡುವುದೇ ಹೆಚ್ಚು. ಚಿತ್ರವೊಂದು ಸುಂದರವಾಗುವುದಕ್ಕೆ ಫೋಟೋದಲ್ಲಿರುವ ವಸ್ತು / ವ್ಯಕ್ತಿ ಮಧ್ಯದಲ್ಲಿರಬಾರದೆಂದು ನಿಜವಾದ ಕಲಾವಿದನಿಗೆ ಗೊತ್ತಿರುತ್ತದೆ. ಮೂರು ಪಟ್ಟಿಯ ನಿಯಮದಲ್ಲಿ ಚೌಕಟ್ಟನ್ನು ಅಡ್ಡವಾಗಿ ಮತ್ತು ಲಂಬವಾಗಿ ಮೂರು ಗೆರೆಗಳನ್ನೆಳೆದು ವಿಭಾಗಿಸಬೇಕು. ಈಗ ನಿಮ್ಮ ವಸ್ತುವನ್ನು ಈ ಗೆರೆಗಳ ಮೇಲೆ ಬರುವಂತೆ ನೋಡಿಕೊಳ್ಳಿ; ಎರಡು ಗೆರೆಗಳು ಸೇರುವೆಡೆ ನಿಮ್ಮ ವಸ್ತು ಬಂದರೆ ಇನ್ನೂ ಉತ್ತಮ. ಈಗ ನಿಮ್ಮ ಚಿತ್ರ ನೋಡುಗರ ಮನದಲ್ಲಿ ಛಾಪೊತ್ತುವುದು ಖಂಡಿತ.

ಬೆಳಕು ಮತ್ತು ಫೋಕಸ್
ಅ) ಮೊದಲಿಗೆ ಸಹಜ ಬೆಳಕು ಯಾವ ದಿಕ್ಕಿನಿಂದ ಬರುತ್ತಿದೆ ಎಂಬುದನ್ನು ಗಮನಿಸಿ; ನಂತರ ಬೆಳಕಿಗೆ ತಕ್ಕಂತೆ ನಿಮ್ಮ ವಸ್ತುವನ್ನು ಇರಿಸಿ. ಉದಾಹರಣೆಗೆ, ಬೆಳಕು ಬರುತ್ತಿರುವ ದಿಕ್ಕಿನಲ್ಲಿ ನಿಮ್ಮ ವಸ್ತುವನ್ನೆಂದಿಗೂ ಇರಿಸಬೇಡಿ (ಸಿಲೌಟ್ ಚಿತ್ರಗಳನ್ನೊರತುಪಡಿಸಿ). ಸಹಜ ಮತ್ತು ಕೃತಕ ಬೆಳಕುಗಳೆರಡನ್ನೂ ಉಪಯೋಗಿಸಿಕೊಂಡು ನಿಮ್ಮ ಚಿತ್ರದ ವಸ್ತುವಿನ ಎಲ್ಲಾ ಲಕ್ಷಣಗಳನ್ನೂ ಸೆರೆಹಿಡಿಯಬಹುದು.
ಆ) ಮಬ್ಬಾದ ಚಿತ್ರ ಯಾರಿಗೆ ಇಷ್ಟವಾಗುತ್ತದೆ ಹೇಳಿ? ಚಿತ್ರ ಮಬ್ಬಾಗುವುದಕ್ಕೆ ಕೈಗಳು ನಡುಗುವುದು ಕಾರಣವಾಗಬಹುದು ಅಥವಾ ನಿಮ್ಮ ಶಟರ್ ಸ್ಪೀಡಿಗಿಂತ ವಸ್ತುವಿನ ಚಲನೆ ಜಾಸ್ತಿಯಿರಬಹುದು. ಚಿತ್ರವನ್ನು ತೆಗೆಯಬೇಕಾದರೆ ನಿಮ್ಮ ಕ್ಯಾಮೆರಾವನ್ನು ಎರಡೂ ಕೈಗಳಿಂದ ಹಿಡಿದುಕೊಳ್ಳಿ, ನಿಮ್ಮ ಮೊಣಕೈ ದೇಹಕ್ಕೆ ಅಂಟಿಕೊಂಡಿರಲಿ. ನಂತರ ಶಟರ್ ಬಟನ್ನನ್ನು ಅರ್ಧ ಒತ್ತಿ ಹಿಡಿಯಿರಿ, ಈಗ ಕ್ಯಾಮೆರಾ ಮುಖ್ಯ ವಸ್ತುವಿನ ಮೇಲೆ ಫೋಕಸ್ ಆಗುತ್ತದೆ, ಫೋಕಸ್ ಆದ ನಂತರ ಶಟರ್ ಬಟನ್ನನ್ನು ಪೂರ್ತಿಯಾಗಿ ಒತ್ತಿ. ಕ್ಯಾಮೆರಾ ಚಿತ್ರವನ್ನು ತೆಗೆದು ಮುಗಿಸುವವರೆಗೂ ಶಟರ್ ಬಟನ್ನನ್ನು ಬಿಡಬೇಡಿ. ವೇಗದ ವಸ್ತುಗಳನ್ನು ಚಿತ್ರಿಸಲು ಶಟರ್ ಸ್ಪೀಡನ್ನು ಜಾಸ್ತಿ ಮಾಡಿ. ಹಲವು ಕ್ಯಾಮೆರಾಗಳಲ್ಲಿ ವೇಗದ ಚಿತ್ರಗಳನ್ನು ಸೆರೆಹಿಡಿಯಲು ಸ್ಪೋರ್ಟ್ ಆಯ್ಕೆ ಇರುತ್ತದೆ. ಅದನ್ನೂ ಉಪಯೋಗಿಸಬಹುದು.

ಸಂಯೋಜನೆ
ಮೂರು ಪಟ್ಟಿಯ ನಿಯಮದ ಜೊತೆಗೆ ಕೋನಗಳು ಮತ್ತು ಸಮರೂಪವೂ ಮುಖ್ಯ. ಸರಿಯಾದ ಕೋನವನ್ನು ಉಪಯೋಗಿಸುವುದು ಇಡೀ ಚಿತ್ರದ ಪ್ರಭಾವವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಲೇ ಸ್ವಂತಿಗಳನ್ನು ಸಾಮಾನ್ಯವಾಗಿ ಮೇಲಿನಿಂದ ತೆಗೆದುಕೊಳ್ಳುವುದು.

ಹೆಚ್.ಡಿ.ಆರ್ ಮೋಡನ್ನು ಯಾವಾಗ ಹೇಗೆ ಉಪಯೋಗಿಸಬೇಕು
ಹೆಚ್.ಡಿ.ಆರ್ ಮೋಡನ್ನು ಉಪಯೋಗಿಸುವಾಗ ನಿಮ್ಮ ಫೋನು ಚೂರೂ ಅಲುಗದಂತಿರಬೇಕು. ಸ್ವಲ್ಪ ಅಲುಗಾಡಿದರೂ ಚಿತ್ರವು ಮಬ್ಬು ಮಬ್ಬಾಗಿ ಬಿಡುತ್ತದೆ ಮತ್ತು ಚಿತ್ರದಲ್ಲಿ ಕೆಲವು ಬೂದು ಬಣ್ಣ ಕಾಣಿಸುತ್ತದೆ. ಯಾಕೆಂದರೆ ಹೆಚ್.ಡಿ.ಆರ್ ಮೋಡಿನಲ್ಲಿ ಕ್ಯಾಮೆರಾ ಒಂದೇ ಚಿತ್ರದ ಎರಡು ಮೂರು ಪ್ರತಿಗಳನ್ನು ಒಂದಾದ ನಂತರ ಒಂದರಂತೆ ವೇಗವಾಗಿ ಕ್ಲಿಕ್ಕಿಸಿಕೊಂಡು, ಅಷ್ಟೂ ಚಿತ್ರಗಳಲ್ಲಿರುವ ಬೆಳಕು, ವಿವರಗಳನ್ನು ಉಪಯೋಗಿಸಿಕೊಂಡು ಉತ್ತಮ ಚಿತ್ರವನ್ನು ನೀಡುತ್ತದೆ.

ಪೋಟೋ ತೆಗೆಯುವ ಮತ್ತು ಸಂಕಲನ ಮಾಡುವ ಆ್ಯಪ್ ಗಳು
ನಿಮ್ಮ ಫೋನಿನ ಕ್ಯಾಮೆರಾದಲ್ಲಿ ಉತ್ತಮ ಆಯ್ಕೆಗಳಿರದಿದ್ದಲ್ಲಿ, ಅಥವಾ ಕೆಲವೊಂದು ಸಂದರ್ಭದಲ್ಲಿ ಚಿತ್ರ ತೆಗೆಯುವುದು ಕಷ್ಟವಾಗಿದ್ದಲ್ಲಿ ನೀವು ಫೋಟೋ ತೆಗೆಯಲು ಮತ್ತು ತೆಗೆದ ಫೋಟೋಗಳನ್ನು ಎಡಿಟ್ ಮಾಡಲೆಂದೇ ಇರುವ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.
ಆ್ಯಂಡ್ರಾಯ್ಡ್ ಫೋನು ಉಪಯೋಗಿಸುವವರಿಗೆ ಪ್ರೊ ಹೆಚ್.ಡಿ.ಆರ್, ಪ್ರೊ ಕ್ಯಾಪ್ಚರ್ ಫ್ರೀ, ಕ್ಯಾಮೆರಾ ಎಫ್.ವಿ 5 ಮತ್ತು ಸ್ನ್ಯಾಪ್ ಸೀಡ್ ನಂತಹ ಆ್ಯಪ್ ಗಳು ಲಭ್ಯವಿದೆ.

ಕ್ಯಾಮೆರಾ ಲೆನ್ಸನ್ನು ಸ್ವಚ್ಛಗೊಳಿಸಿ
ನಮ್ಮರಿವಿಗೆ ಬಾರದಂತೆ ದಿನನಿತ್ಯ ಒಂದಷ್ಟು ಧೂಳು, ಕಸ ಫೋನಿಗೆ ಮೆತ್ತಿಕೊಳ್ಳುತ್ತಲೇ ಇರುತ್ತದೆ. ಚಿತ್ರವನ್ನು ತೆಗೆಯುವ ಮುನ್ನ ನಿಮ್ಮ ಫೋನಿನ ಕ್ಯಾಮೆರಾ ಲೆನ್ಸಿನ ಮೇಲೆ ಯಾವುದೇ ಧೂಳು, ಗೀರುಗಳಿಲ್ಲವೆಂದು ಖಚಿತಪಡಿಸಿಕೊಳ್ಳಿ.

ಲ್ಯಾಂಡ್ ಸ್ಕೇಪ್ ಫೋಟೋ ತೆಗೆಯಿರಿ
ಪೋರ್ಟ್ರೇಟ್ ಮೋಡಿಗಿಂತ ಲ್ಯಾಂಡ್ ಸ್ಕೇಪ್ ಮೋಡಿನಲ್ಲಿ ತೆಗೆದ ಫೋಟೋಗಳು ಹೆಚ್ಚು ಸುಂದರವಾಗಿ ಕಾಣುತ್ತವೆ. ಅಗಲ ಪರದೆಯ ಕ್ರಾಂತಿಯಿಂದಾಗಿ ನಮ್ಮ ಕಣ್ಣುಗಳು ಲ್ಯಾಂಡ್ ಸ್ಕೇಪ್ ಮೋಡಿನಲ್ಲಿ ನೋಡುವುದಕ್ಕೆ ಒಗ್ಗಿಹೋಗಿದೆ. ತೀರ ಬೇಕೇ ಬೇಕೆನ್ನುವ ಸಂದರ್ಭಗಳನ್ನೊರತುಪಡಿಸಿ ಲ್ಯಾಂಡ್ ಸ್ಕೇಪ್ ಮೋಡನ್ನೇ ಹೆಚ್ಚಾಗಿ ಉಪಯೋಗಿಸಿ.

ಕಪ್ಪು ಬಿಳುಪಿನ ಚಿತ್ರ
ಬಣ್ಣದ ಚಿತ್ರಗಳ ಆಗಮನದೊಂದಿಗೆ ನಾವು ‘ಕಪ್ಪು - ಬಿಳುಪಿನ' ಸೌಂದರ್ಯವನ್ನೇ ಮರೆತುಬಿಟ್ಟಿದ್ದೇವೆ. ಕಪ್ಪು ಬಿಳುಪಿನ ಚಿತ್ರಗಳು ಹೆಚ್ಚು ಕಾಂಟ್ರಾಸ್ಟ್ ಹೊಂದಿರುವುದರ ಜೊತೆಗೆ ನೋಡುಗರ ಮನದಲ್ಲಿ ಹೆಚ್ಚಿನ ಪ್ರಭಾವ ಬೀರುವುದರಲ್ಲೂ ಮುಂದಿವೆ. ಚಿತ್ರ ತೆಗೆಯುವಾಗಲೇ ಕಪ್ಪು ಬಿಳುಪಿನ ಆಯ್ಕೆಯನ್ನು ಉಪಯೋಗಿಸಬಹುದು, ಫಿಲ್ಟರ್ ಆ್ಯಪ್ ಗಳನ್ನೂ ಉಪಯೋಗಿಸಬಹುದು. ಅಥವಾ ಬಣ್ಣದ ಚಿತ್ರವನ್ನು ಎಡಿಟ್ ಮಾಡಿ ಕಪ್ಪು ಬಿಳುಪಿನ ಚಿತ್ರವಾಗಿ ಮಾರ್ಪಡಿಸಬಹುದು.
ಸುಂದರ ಚಿತ್ರ ತೆಗೆಯಲು ಉತ್ತಮ ಕ್ಯಾಮೆರಾ ಬೇಕಾಗಿಲ್ಲ, ಬೇಕಿರುವುದು ಒಳ್ಳೆಯ ಛಾಯಾಗ್ರಹಕ ಅಥವಾ ಒಂದಷ್ಟು ತಾಂತ್ರಿಕ ಗೊತ್ತಿರುವ ಸಾಮಾನ್ಯ. ನಿಮ್ಮ ಗೆಳೆಯರೊಟ್ಟಿಗಿನ, ಕುಟುಂಬದೊಟ್ಟಿಗಿನ ಸುಂದರ ಕ್ಷಣಗಳನ್ನು ಸುಂದರವಾಗಿ ಸೆರೆಹಿಡಿಯಲು ಈ ಟಿಪ್ಸುಗಳು ನಿಮಗೆ ಸಹಾಯಕವಾಗುತ್ತವೆಯೆನ್ನುವುದು ನಮ್ಮ ನಿರೀಕ್ಷೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470