Subscribe to Gizbot

ಆಧಾರ್‌ಕಾರ್ಡ್‌ಗೆ ಹೊಸ ಮೊಬೈಲ್ ನಂಬರ್ ಸೇರ್ಪಡೆ ಹೇಗೆ? ತಿಳಿಯಿರಿ!!

Posted By:

ಆಧಾರ್‌ ಕಾರ್ಡ್‌ ಹೊಂದಿರುವವರಿಗೆ ಮಾತ್ರ ಎಲ್‌ಪಿಜಿ ಸಬ್ಸಿಡಿ ನೀಡುವುದಾಗಿ ಸರ್ಕಾರ ಹೇಳಿದ್ದು, ಆಧಾರ್ ಕಾರ್ಡ್‌ಗೆ ಸಂಪರ್ಕಿಸಿದ ನಂಬರ್ ಇದ್ದರೆ ಮಾತ್ರ ಎಲ್‌ಪಿಜಿ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಇನ್ನು ಹಲವು ಸೇವೆಗೆಳನ್ನು ಆಧಾರ್‌ಗೆ ಅಟ್ಯಾಚ್ ಆಗಿರುವ ನಂಬರ್ ಮೂಲಕ ಪಡೆಯಬಹುದಾಗಿದ್ದು, ಆಧಾರ್ ಕಾರ್ಡ್ ಮಾಡಿಸುವ ವೇಳೆ ನೀಡಿದ್ದ ಮೊಬೈಲ್ ನಂಬರ್ ಕಳೆದರೆ ಈ ಮಾಹಿತಿ ಪಡೆಯಲು ಸಾಧ್ಯವಿಲ್ಲಾ.!!

ಹಾಗಾಗಿ, ಆಧಾರ್ ಕಾರ್ಡ್‌ಗೆ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಈಗ ಉಪಯೋಗಿಸದಿದ್ದಲ್ಲಿ, ಅಥವಾ ಇನ್ಯಾವುದೇ ಕಾರಣಗಳಿಂದ ಹಳೆ ನಂಬರ್ ಬಳಕೆಯಲ್ಲಿ ಇಲ್ಲ ಎಂದರೆ ಆಧಾರ್‌ಕಾರ್ಡ್‌ಗೆ ಹೊಸ ಮೊಬೈಲ್ ನಂಬರ್ ಸೇರ್ಪಡೆ ಹೇಗೆ ಮತ್ತು ಆಧಾರ್ ಕಾರ್ಡ್ ಮಾಡಿಸುವ ವೇಳೆ ಮೊಬೈಲ್ ನಂಬರ್ ನೀಡದೇ ಇದ್ದರೆ ಏನು ಮಾಡುವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1.ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ.

1.ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ.

ಆಧಾರ್‌ಕಾರ್ಡ್‌ಗೆ ಈಗಾಗಲೇ ನೋಂದಾಯಿಸಲ್ಪಟ್ಟ ಮೊಬೈಲ್ ನಂಬರ್ ಹಾಳಾಗಿದ್ದರೆ, ನೂತನ ಮೊಬೈಲ್ ನಂಬರ್ ಅಟ್ಯಾಚ್ ಮಾಡಿಸಲು ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ. ನಂತರ ನಿಮ್ಮ ಆಧಾರ್ ನಂಬರ್ ಮತ್ತು ಹೊಸ ಮೊಬೈಲ್ ನಂಬರ್ ನೀಡಿ.

2 ಹೊಸದಾಗಿ ನೀಡಿದ ಮೊಬೈಲ್ ನಂಬರ್ ಒಟಿಪಿ ಬರುತ್ತದೆ.

2 ಹೊಸದಾಗಿ ನೀಡಿದ ಮೊಬೈಲ್ ನಂಬರ್ ಒಟಿಪಿ ಬರುತ್ತದೆ.

ಆಧಾರ್ ದಾಖಲಾತಿ ಕೇಂದ್ರದಲ್ಲಿ ಆಧಾರ್ ನಂಬರ್ ಮತ್ತು ಹೊಸ ಮೊಬೈಲ್ ನಂಬರ್ ನೀಡಿದ ನಂತರ ಅವರು ಪರಿಶೀಲನೆ ನೆಡಸುತ್ತಾರೆ. ನಂತರ ನಿಮ್ಮ ಹೊಸ ಮೊಬೈಲ್‌ ನಂಬರ್‌ ಅನ್ನು ನಿಮ್ಮ ಆಧಾರ್‌ ನಂಬರ್‌ಗೆ ಸೇರಿಸುತ್ತಾರೆ. ನಂತರ ನಿಮಗೆ ಒನ್ ಟೈಮ್ ಪಾಸ್‌ವರ್ಡ್ ಬರುತ್ತದೆ.!!

3 ಬಯೋಮೆಟ್ರಿಕ್ ಸ್ಕ್ಯಾನ್ ಮಾಡಲಾಗುತ್ತದೆ!

3 ಬಯೋಮೆಟ್ರಿಕ್ ಸ್ಕ್ಯಾನ್ ಮಾಡಲಾಗುತ್ತದೆ!

ನಿಮ್ಮ ನೂತನ ಮೊಬೈಲ್‌ನಂಬರ್‌ಗೆ ಬಂದ ಒಟಿಪಿ ಪರಿಶೀಲನೆ ನಂತರ ಬಯೋಮೆಟ್ರಿಕ್ ಸ್ಕ್ಯಾನ್ ಮಾಡುತ್ತಾರೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಹೊಸ ಮೊಬೈಲ್ ಸಂಖ್ಯೆಗೆ ಆಧಾರ್‌ಗೆ ಅಟ್ಯಾಚ್ ಆಗಿರುವ ಬಗ್ಗೆ ಎಸ್ಎಂಎಸ್ ಬರುತ್ತದೆ.

4 ನೂತನ ನಂಬರ್ ಅಟ್ಯಾಚ್ ಆಗಿದೆ.!!

4 ನೂತನ ನಂಬರ್ ಅಟ್ಯಾಚ್ ಆಗಿದೆ.!!

ಮೊಬೈಲ್ ಸಂಖ್ಯೆಗೆ ಆಧಾರ್‌ಗೆ ಅಟ್ಯಾಚ್ ಆಗಿರುವ ಬಗ್ಗೆ ಎಸ್ಎಂಎಸ್ ಬಂದ ನಂತರ 72 ಗಂಟೆಗಳ ಒಳಗೆ ನಿಮ್ಮ ಆಧಾರ್ ಕಾರ್ಡ್ ಹಾಗೂ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗುತ್ತದೆ. ನಂತರ ನಿಮ್ಮ ಆಧಾರ್‌ ಸೇವೆಗಳ ಮಾಹಿತಿ ನಿಮ್ಮ ಹೊಸ ನಂಬರ್‌ಗೆ ಬಂದು ಸೇರಲಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
When i applied for aadhaar card(5 years ago) i wasn’t aware of the importance of providing mobile number. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot