Subscribe to Gizbot

ಆಧಾರ್ ಕಳೆದರೆ ಆನ್‌ಲೈನ್‌ನಲ್ಲಿ 5 ನಿಮಿಷದಲ್ಲಿ ಡೌನ್‌ಲೋಡ್ ಮಾಡಿ!! ಹೇಗೆ ತಿಳಿಯಿರಿ?

Written By:

ಸರ್ಕಾರದ ಬಹುತೇಕ ಎಲ್ಲಾ ಯೋಜನೆಗಳನ್ನು ಪಡೆಯಲು ಇಂದು ಆಧಾರ್‌ ಕಾರ್ಡ್‌ ಇರಲೇಬೇಕು. ಜನಸಾಮಾನ್ಯರ ಅಧಿಕಾರ ಆಗಿರುವ ಆಧಾರ್‌ ಕಾರ್ಡ್ ಇಲ್ಲದಿದ್ದರೆ ಸರ್ಕಾರದ ಯಾವ ಕೆಲಸವು ಆಗಲಾರದು. ಹಾಗಾಗಿ, ಆಧಾರ್‌ ಕಾರ್ಡ್‌ ಅನ್ನು ನಾವು ಜೋಪಾನವಾಗಿ ಇಟ್ಟಿಕೊಳ್ಳಬೇಕು.

ಇನ್ನು ಕೆಲವೊಮ್ಮೆ ಆಧಾರ್ ಕಾರ್ಡ್ ಅನ್ನು ನಾವು ಅಕಸ್ಮಾತ್ ಆಗಿ ಕಳೆದುಕೊಳ್ಳುತ್ತೇವೆ. ಮತ್ತೆ ವಾಪಸ್‌ ಪಡೆಯುವುದು ಹೇಗೆ? ಎಂಬ ಚಿಂತೆಯಲ್ಲಿ ಇರುತ್ತೇವೆ. ಅದಕ್ಕಾಗಿ ನಾವು ನಿಮಗೆ ಆಧಾರ್ ಕಾರ್ಡ್‌ ಕಳೆದು ಹೋದರೆ ಆನ್‌ಲೈನ್‌ನಲ್ಲಿ ಆಧಾರ್‌ ಕಾರ್ಡ್ ಮತ್ತೆ ಪಡೆಯುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಓದಿರಿ:ಜಿಯೋ ಉಚಿತ ಆಫರ್ ಮುಗಿದರೆ?...ಮುಂದಿನದು ಫ್ರೀ ಅಲ್ಲದ ಉಚಿತ ಆಫರ್!!

ಇದಕ್ಕಾಗಿ ನಿವು. ಆಧಾರ್ ಕಾರ್ಡ್ ಪಡೆದುಕೊಳ್ಳುವಾಗ ಪಡೆದಿರುವ ರಸೀತಿ ಸಂಖ್ಯೆ(ನೋಂದಣಿ ನಂತರ ಸಿಗುವ ಸಂಖ್ಯೆ) ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ಹೊಂದಿರಬೇಕು ಅಥವಾ ನೆನಪಿಟ್ಟುಕೊಂಡಿರಬೇಕು ಇವೆರಡು ಇದ್ದರೆ ಡೂಪ್ಲಿಕೇಟ್ ಆಧಾರ್ ಕಾರ್ಡ್ ಮರಳಿ ಪಡೆಯಲು ಸಹಾಯವಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1.ಅಫಿಶಿಯಲ್ ವೆಬ್‌ಸೈಟ್‌ ತೆರೆಯಿರಿ

1.ಅಫಿಶಿಯಲ್ ವೆಬ್‌ಸೈಟ್‌ ತೆರೆಯಿರಿ

ಇ ಆಧಾರ್‌ಕಾರ್ಡ್ ಆನ್‌ಲೈನ್ ಅಫಿಶಿಯಲ್ ವೆಬ್‌ಸೈಟ್‌ ತೆರೆಯಿರಿ. ನಂತರ ಆಧಾರ್ ಎನ್‌ರೊಲ್‌ಮೆಂಟ್‌ನಲ್ಲಿ "get Aadhaar number on mobile"ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

2 ನೋಂದಣಿ ಸಂಖ್ಯೆ ವಿವರ ಸಲ್ಲಿಸಿ

2 ನೋಂದಣಿ ಸಂಖ್ಯೆ ವಿವರ ಸಲ್ಲಿಸಿ

"get Aadhaar number on mobile"ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಹೊಸದೊಂದು ವಿಂಡೊ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ನೋಂದಣಿ ಸಂಖ್ಯೆ ವಿವರ ಸಲ್ಲಿಸಿ(ನೋಂದಣಿ ಸಂಖ್ಯೆ, ದಿನಾಂಕ, ಸಮಯ, ನಿವಾಸ ಹೆಸರು ಹಾಗೂ ಪಿನ್ ಕೋಡ್) ಆಧಾರ್ ರಸೀತಿ ಸ್ಲಿಪ್ ನಲ್ಲಿರುವಂತೆ.

3.ಆಧಾರ್‌ಕಾರ್ಡ್ ಡೌನ್‌ಲೋಡ್ ಮಾಡಿ.

3.ಆಧಾರ್‌ಕಾರ್ಡ್ ಡೌನ್‌ಲೋಡ್ ಮಾಡಿ.

ನಿಮ್ಮ ನೋಂದಾಯಿತ ಮೊಬೈಲ್ ಫೋನಿಗೆ One Time Pin ಬರುತ್ತದೆ. OTP ನಮೂದಿಸಿ 7ನಕಲಿ ಆಧಾರ್‌ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ನಿಮ್ಮ ಮುಂದೆ ಬರಲಿದೆ. ನಂತರ ಪಾಸ್‌ವರ್ಡ್ ಕೇಳುತ್ತದೆ.

4.ಪಾಸ್‌ವರ್ಡ್ ನೀಡಿ ಆಧಾರ್ ಪಡೆಯಿರಿ

4.ಪಾಸ್‌ವರ್ಡ್ ನೀಡಿ ಆಧಾರ್ ಪಡೆಯಿರಿ

ಪಾಸ್‌ವರ್ಡ್ ಬಗ್ಗೆ ಇ-ಮೇಲ್ ಮತ್ತು ಎಸ್ಎಂಎಸ್ ಬರುತ್ತದೆ. ಪಾಸ್‌ವರ್ಡ್ ಹಾಕಿ ಆಧಾರ್‌ಕಾರ್ಡ್ ಡೌನ್‌ಲೊಡ್ ಮಾಡಿಕೊಳ್ಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The government is gearing up to facilitate Aadhaar number-enabled financial transactions through mobile phones . to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot