'ಪಾನ್‌ ಕಾರ್ಡ್‌'ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?

By Suneel
|

ವಿವಿಧ ಉದ್ದೇಶಗಳಿಗೆ ಗುರುತು ಡಾಕುಮೆಂಟ್‌ ಆಗಿ ಇಂದು ಯಾವ ಕಂಪನಿಗೆ ಉದ್ಯೋಗಕ್ಕೆ ಸೇರಿದರು ಸಹ ಕೇಳುವುದು ಪಾನ್‌ ಕಾರ್ಡ್‌ ಅಂತ. ಪಾನ್‌ ಕಾರ್ಡ್‌ ಪ್ರಾಮುಖ್ಯತೆ ಬಗ್ಗೆ ಎಷ್ಟು ಜನರು ಕೇಳಿದ್ದಾರೋ ಇಲ್ವೋ ಗೊತ್ತಿಲ್ಲಾ. ಆದ್ರೆ ಉದ್ಯೋಗಕ್ಕೆಂದು ಪಟ್ಟಣಕ್ಕೆ ಕಾಲಿಟ್ಟವರಿಗೆ ಪಾನ್‌ ಕಾರ್ಡ್‌ ಕಡ್ಡಾಯವಾಗಿರುತ್ತದೆ.

ಅಂದಹಾಗೆ ಪಾನ್ ಕಾರ್ಡ್‌ ಅನ್ನು ಭಾರತದ ತೆರಿಗೆ ಇಲಾಖೆ ವಿತರಿಸುತ್ತದೆ. ಅಧಿಕೃತವಾಗಿ ಯಾವುದೇ ಬ್ಯುಸಿನೆಸ್ ಪ್ರಾರಂಭಿಸಬೇಕೆಂದರು ಸಹ ಇದು ಅತ್ಯಗತ್ಯ. ಪಾನ್ ಕಾರ್ಡ್‌ (PAN card -Permanent Account Number) ಖಾಯಂ ಹಣಕಾಸು ಖಾತೆ ಗುರುತಿನ ಕಾರ್ಡ್‌. ಅಲ್ಲದೇ ಇದನ್ನು ತೆರಿಗೆ ಪಾವತಿಸಲು, ಯಾವುದೇ ಆಸ್ತಿ ಖರೀದಿಸುವಾಗ ಹೀಗೆ ಹಲವು ಪ್ರಮುಖ ಕಾರ್ಯಗಳಿಗೆ ಅಗತ್ಯವಾಗಿದೆ.

ಹಲವು ಅಗತ್ಯಗಳಿಗೆ ಬಳಕೆಯಾಗುವ ಪಾನ್‌ ಕಾರ್ಡ್‌ ಅನ್ನು ಪಡೆಯಲು ಅರ್ಜಿ ಸಲ್ಲಿಸಲು ಬಹುಸಂಖ್ಯಾತರಿಗೆ ಕಛೇರಿಗಳಿಗೆ ಹೋಗಿ ನಿಲ್ಲಲು ಸಮಯವಿಲ್ಲ. ಅಥವಾ ಹಳ್ಳಿಯಿಂದ ಪಟ್ಟಣಕ್ಕೆ ಬರಲು ಸಮಯವಿಲ್ಲ ಎಂದುಕೊಳ್ಳೋಣ. ಅಲ್ಲದೇ ಆತುರವಾಗಿ ನಗರಕ್ಕೆ ಉದ್ಯೋಗ ಹುಡುಕಿಕೊಂಡು ಬಂದವರಿಗೆ ಪಾನ್‌ ಕಾರ್ಡ್‌ ಸಲ್ಲಿಸಲು ಸಮಯದ ಅಭಾವ ಎದುರಾಗುತ್ತದೆ. ಅಂತಹವರು ಇಂದು ಸುಲಭವಾಗಿ ಆನ್‌ಲೈನ್‌ನಲ್ಲಿ ಪಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಸರಳ ವಿಧಾನಗಳನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಹಂತ 1

ಹಂತ 1

ಮೊದಲು ಎನ್‌ಎಸ್‌ಡಿಎಲ್‌ ವೆಬ್‌ಸೈಟ್‌ (https://tin.nsdl.com/pan/) ಅನ್ನು ಓಪನ್‌ ಮಾಡಿ

ಹಂತ 2

ಹಂತ 2

ಈ ಹಂತದಲ್ಲಿ New PAN for Indian Citizens (Form 49A) ಎಂಬ ಲಿಂಕ್‌ ಮೇಲೆ ಕ್ಲಿಕ್ ಮಾಡಿ.

ಹಂತ 3

ಹಂತ 3

online Application for New PAN(Form 49A) ಎಂಬ ಲಿಂಕ್‌ ಮೇಲೆ ಈ ಹಂತದಲ್ಲಿ ಕ್ಲಿಕ್‌ಮಾಡಿ. ಆದರೆ ಅರ್ಜಿ ಸಲ್ಲಿಸುವ ಮೊದಲು ಈ ಹಂತದಲ್ಲಿ ನೀವು ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಓದಿಕೊಳ್ಳಿ.

ಹಂತ 4

ಹಂತ 4

ಸೂಚನೆಗಳನ್ನೆಲ್ಲಾ ನಿಖರವಾಗಿ ಓದಿಕೊಳ್ಳಿ. ನಂತರದಲ್ಲಿ ಮೌಸ್‌ ಅನ್ನು ಪೇಜ್‌ ಕೆಳಗೆ ನೋಡಲು ಸ್ಕ್ರಾಲ್‌ ಮಾಡಿ. ಅಲ್ಲಿ ನೀವು ಯಾವ ವಿಧದ ಅರ್ಜಿದಾರ ಎಂಬುದನ್ನು ಆಯ್ಕೆ ಮಾಡಲು ಬಟನ್‌ ಕಾಣುತ್ತದೆ.

 ಹಂತ 5

ಹಂತ 5

ಅರ್ಜಿದಾರರ ವಿಧದಲ್ಲಿ ನೀವು ಯಾವ ರೀತಿಯ ಅರ್ಜಿದಾರ ಎಂಬುದನ್ನ ಆಯ್ಕೆ ಮಾಡಿ. ಸಾಮಾನ್ಯವಾಗಿ ವಯಕ್ತಿಕವಾಗಿ ನೀವು ಪಾನ್‌ ಕಾರ್ಡ್‌ ಹೊಂದಲು ಬಯಸುವವರಾಗಿದ್ದರೆ Induvidual ಎಂಬುದನ್ನು ಆಯ್ಕೆ ಮಾಡಿ.

ಹಂತ 6

ಹಂತ 6

ಅರ್ಜಿಯ ಕೆಟಗರಿ ಆಯ್ಕೆ ಮಾಡಿದ ನಂತರ ನಿಮಗೆ ಅರ್ಜಿಯ ಆನ್‌ಲೈನ್‌ ಫಾರ್ಮ್‌ ಓಪನ್‌ ಆಗುತ್ತದೆ. ಅದನ್ನು ನಿಖರವಾಗಿ ಎಚ್ಚರದಿಂದ ಓದಿಕೊಂಡು ಭರ್ತಿ ಮಾಡಿ. ನಂತರ ನೀವು ಶುಲ್ಕವನ್ನು ಕ್ರೆಡಿಟ್/ಡೆಬಿಟ್ ಕಾರ್ಡ್‌ ಮೂಲಕ ಅಥವಾ ನೆಟ್‌ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬೇಕಾಗುತ್ತದೆ.ಅಲ್ಲದೇ ಅಲ್ಲಿ AO ಕೋಡ್‌ ಸರ್ಚ್‌ ಮಾಡಿ ನೀಡಬೇಕಾಗುತ್ತದೆ.

ಹಂತ 7

ಹಂತ 7

ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ನೀವು ಒಂದು ಸ್ವೀಕೃತಿ ಫಾರ್ಮ್‌ ಅನ್ನು 16 ಸಂಖ್ಯೆಯ ಸ್ವೀಕೃತಿ ನಂಬರ್‌ನೊಂದಿಗೆ ಪಡೆಯುತ್ತೀರಿ. ಇದನ್ನು ಪ್ರಿಂಟ್‌ ತೆಗೆದುಕೊಳ್ಳಿ.

 ಹಂತ 8

ಹಂತ 8

ಇತ್ತೀಚಿನ ಎರಡು ಭಾವಚಿತ್ರ ಫೋಟೋಗಳನ್ನು ಸ್ವೀಕೃತಿ ಫಾರ್ಮ್‌ನಲ್ಲಿ ಫೋಟೋಗಾಗಿ ಕಾಯ್ದಿರಿಸಿದ ಸ್ಥಳದಲ್ಲಿ ಅಂಟಿಸಿ. ಸಹಿ ಬಾಕ್ಸ್‌ನಲ್ಲಿ ನಿಮ್ಮ ಸಹಿ ಮಾಡಿ.

 ಹಂತ 9

ಹಂತ 9

ಒಂದು ವೇಳೆ ಆನ್‌ಲೈನ್‌ನಲ್ಲಿ ನೀವು ಶುಲ್ಕ 106 ರೂಪಾಯಿಗಳನ್ನು ಪಾವತಿ ಮಾಡದಿದ್ದಲ್ಲಿ ಮಾಂಡ್ ಡ್ರಾಫ್ಟ್ ಅಥವಾ ಚೆಕ್ ಅನ್ನು ಸೆಲ್ಪ್‌ ಅಟೆಸ್ಟ್‌ ಮಾಡಿದ ನಿಮ್ಮ ಡಾಕುಮೆಂಟ್‌ಗಳ ಜೊತೆ ಪೋಸ್ಟ್‌ ಮಾಡುವ ಕವರ್‌ ಒಳಗೆ ಹಾಕಿರಿ.

ಹಂತ  10

ಹಂತ 10

ಪೋಸ್ಟ್‌ ಮಾಡುವ ಕವರ್‌ ಮೇಲೆ "Application for PAN" ಎಂದು ಬರೆದು ನಿಮ್ಮ ಸ್ವೀಕೃತ ನಂಬರ್ ಬರೆಯಿರಿ.

ಹಂತ 11

ಹಂತ 11

ಪೋಸ್ಟ್‌ ಕವರ್‌ ಅನ್ನು ಎನ್‌ಎಸ್‌ಡಿಎಲ್‌ನ ವಿಳಾಸಕ್ಕೆ ಪೋಸ್ಟ್ ಮಾಡಿ: Income Tax PAN Services Unit, NSDL e-Governance Infrastructure Limited, 5th floor, Mantri Sterling, Plot No. 341, Survey No. 997/8, Model Colony, Near Deep Bungalow Chowk, Pune - 411016.

ಹಂತ 12

ಹಂತ 12

ಅರ್ಜಿಯನ್ನು ಪೋಸ್ಟ್‌ ಮಾಡಿದ 15 ದಿನದ ಒಳಗೆ ನಿಮಗೆ ನಿಮ್ಮ ಪೋಸ್ಟ್‌ ಎನ್‌ಎಸ್‌ಡಿಎಲ್‌ಗೆ ತಲುಪಿದ್ದರೆ, ನೀವು ನೀಡಿರುವ ಇಮೇಲ್‌ ವಿಳಾಸಕ್ಕೆ ಇಮೇಲ್‌ ಸಂದೇಶ ಪಡೆಯುತ್ತೀರಿ. ನಂತರದಲ್ಲಿ ಪಾನ್‌ ಕಾರ್ಡ್‌ ನೀವು ನೀಡಿರುವ ಪೋಸ್ಟ್‌ ವಿಳಾಸಕ್ಕೆ ಪಾನ್‌ ಕಾರ್ಡ್‌ ಬರುತ್ತದೆ.

 ಗಿಜ್‌ಬಾಟ್‌

ಗಿಜ್‌ಬಾಟ್‌

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?

ಯೂಟ್ಯೂಬ್‌ ವೀಡಿಯೋಗಳ ಡೌನ್‌ಲೋಡ್‌ ಹೇಗೆ?ಯೂಟ್ಯೂಬ್‌ ವೀಡಿಯೋಗಳ ಡೌನ್‌ಲೋಡ್‌ ಹೇಗೆ?

ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ

ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?

 ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
How to Apply for PAN Card in India(Online Procedure). Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X