ಮೊಬೈಲ್ ಗೀಳು ಎಂಬ ಭಯಾನಕ ಸಮಸ್ಯೆಯಿಂದ ಪಾರಾಗುವುದು ಹೇಗೆ?

|

ಇಂದಿನ ಮತ್ತೊಂದು ಆತಂಕಕಾರಿ ವಿಷಯವೆಂದರೆ, ಜಗತ್ತಿನಾದ್ಯಂತ ಅತಿಹೆಚ್ಚು ಮೊಬೈಲ್ ಗೀಳಿಗೆ ಬಿದ್ದವರಲ್ಲಿ ಮಲೇಷನ್ನರು ಮೊದಲನೆಯ ಸ್ಥಾನದಲ್ಲಿದ್ದರೆ, ಭಾರತೀಯರು ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಎರಡರಷ್ಟು ಭಾರತೀಯರು ತಮ್ಮ ಮೊಬೈಲ್‌ ಫೋನ್‌ಗಳಿಗೆ ಅಡಿಕ್ಟ್ ಆಗಿದ್ದರೆ, ಶೇ.90ರಷ್ಟು ಭಾರತೀಯರ ಜೀವನ ಶೈಲಿಯೇ ಇದರಿಂದ ಬದಲಾಗಿ ಹೋಗಿದೆ.

ಹೌದು, ಮೊಬೈಲ್ ಗೀಳು ಎಂಬುದು ಈಗ ಸಾಮಾನ್ಯ ಸಮಸ್ಯೆಯಾಗಿ ಉಳಿದಿಲ್ಲ. ವ್ಯಕ್ತಿಯು ಸಾವನ್ನು ತಲುಪುವಷ್ಟು ಮೊಬೈಲ್‌ ಗೀಳು ಬೆಳೆದುಬಿಟ್ಟಿದೆ. ಮಾನಸಿಕ ಮತ್ತು ದಯಹಿಕವಾಗಿ ಮಾನವನ ಚಹರೆಯನ್ನೇ ಈ ಮೊಬೈಲ್‌ ಗೀಳು ಬದಾಲಾಯಿಸುತ್ತಿರುವ ವಿಷಯವನ್ನು ಸಂಶೋಧಕರು ಬಂಹಿರಂಗಪಡಿಸಿದ್ದಾರೆ ಎಂದರೆ, ನಾವು ಈ ಸಮನಸ್ಯೆಯಿಂದ ಹೊರಬರಬೇಕಿದೆ.

ಮೊಬೈಲ್ ಗೀಳು ಎಂಬ ಭಯಾನಕ ಸಮಸ್ಯೆಯಿಂದ ಪಾರಾಗುವುದು ಹೇಗೆ?

ವಿಶ್ವದಾದ್ಯಂತ ಶೇ.48ರಷ್ಟು ಜನರು ಈಗಾಗಲೇ ಮೊಬೈಲ್‌ ಫೋನ್‌ಗಳಿಗೆ ಅಡಿಕ್ಟ್ ಆಗಿರುವ ಬಗ್ಗೆ ಲೈಮ್‌ಲೈಟ್ ನೆಟ್‌ವರ್ಕ್ಸ್‌ ಸಂಸ್ಥೆಯ 'ದಿ ಸ್ಟೇಟ್ ಆಫ್‌ ಡಿಜಿಟಲ್‌ ಲೈಫ್ ಸ್ಟೈಲ್ಸ್ 2018' ಎಂಬ ಸಮೀಕ್ಷಾ ವರದಿ ಕೂಡ ತಿಳಿಸಿದೆ. ಹಾಗಾದರೆ, ಮೊಬೈಲ್ ಗೀಳಿ ಬಿದ್ದವರು ಆ ಸಮಸ್ಯೆಯಿಂದ ಹೇಗೆ ಹೊರಬರಬಹುದು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ನೋಟಿಫಿಕೇಷನ್ಸ್ ಬಂದ್‌ ಮಾಡಿ

ನೋಟಿಫಿಕೇಷನ್ಸ್ ಬಂದ್‌ ಮಾಡಿ

ಪ್ರತಿಸಾರಿ ಮೊಬೈಲ್‌ ಟಿಂಗ್ ಎಂದಾಗಲೂ ತೆರೆದು ನೋಡುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಇಂತಹ ನೋಟಿಫಿಕೇಷನ್‌ಗಳು ಮೊಬೈಲ್ ನೋಡುವಂತೆ ನಮ್ಮನ್ನು ಪ್ರೇರೇಪಿಸುತ್ತವೆ. ಹಾಗಾಗಿ, ತೀರಾ ಅಗತ್ಯವಿರುವ ಸಂಗತಿಗಳನ್ನು ಬಿಟ್ಟು ಉಳಿದವುಗಳ ನೋಟಿಫಿಕೇಷನ್‌ಗಳನ್ನು ಡಿಆಕ್ಟಿವೇಟ್ ಮಾಡುವ ಮೂಲಕ ಮೊಬೈಲ್ ಅನ್ನು ನಿಯಂತ್ರಿಸಬಹುದು.

ಮಲಗಿದ್ದಾಗ ಫೋನ್‌ ಬೇಡ

ಮಲಗಿದ್ದಾಗ ಫೋನ್‌ ಬೇಡ

ಫೇಸ್‌ಬುಕ್‌, ವಾಟ್ಸ್‌ಆಪ್ ಮತ್ತು ಇನ್‌ಸ್ಟಗ್ರಾಮ್‌ನಂತಹ ಜಾಲತಾಣಗಳಿಂದ ರಾತ್ರಿ ಮಲಗುವ ಮುನ್ನ ದುರವಿರಿ. ಮಲಗುವ ಮುನ್ನ ಕನಿಷ್ಠ ಒಂದು ಗಂಟೆ ಮೊಬೈಲ್‌ನಿಮದ ದೂರವಿರಿ. ನೀವು ಹಾಸಿಗೆಯಲ್ಲಿ ಕಳೆಯುವ ಸಮಯ, ಬೆಳಗ್ಗೆ ಏಳುವ ಮುನ್ನದ ಗಳಿಗೆಗಳು ನಿಮ್ಮ ಅತ್ಯಂತ ಖಾಸಗಿ ಕ್ಷಣಗಳು. ಅಂತಹ ಸಮಯವನ್ನು ಹಾಳುಮಾಡಿಕೊಳ್ಳಬೇಡಿ.

How to check PF balance in Mobile (KANNADA)
ನಿಮಗೆ ನೀವೇ ಟೈಮರ್!

ನಿಮಗೆ ನೀವೇ ಟೈಮರ್!

ಮೊಬೈಲ್‌ ತೆರೆಯುವಾಗ ಇಂತಿಷ್ಟೇ ಸಮಯ ಇದನ್ನು ನೋಡುತ್ತೇನೆ ಎಂಬ ಸಮಯಮಿತಿಯನ್ನು ಹಾಕಿಕೊಳ್ಳಿ. ಆದರೆ ನೋಡುತ್ತಾ ಹೋದರೆ ಸಮಯ ದಾಟಿದ್ದೇ ತಿಳಿಯುವುದಿಲ್ಲ. ಅದಕ್ಕೇ ನೀವು ಅಂದುಕೊಂಡ ಸಮಯಕ್ಕೆ ಅಲಾರ್ಮ್ ಸೆಟ್‌ ಮಾಡಿಕೊಳ್ಳಿ. ಅದು ಸೂಚನೆ ನೀಡಿದ ಕೂಡಲೇ ನಿರ್ದಾಕ್ಷಿಣ್ಯವಾಗಿ ಮೊಬೈಲ್‌ ಅನ್ನು ಬದಿಗಿಡಿ.

ನಿರ್ದಿಷ್ಟ ಉದ್ದೇಶ ಇರಲಿ!

ನಿರ್ದಿಷ್ಟ ಉದ್ದೇಶ ಇರಲಿ!

ಒಂದು ಬಾರಿ ಮೊಬೈಲ್‌ ತೆರೆದಾಗ ಒಂದು ಕೆಲಸವನ್ನು ಮಾತ್ರ ಮಾಡುತ್ತೇನೆ ಎಂದು ನಿರ್ಧರಿಸಿ. ನಿರ್ದಿಷ್ಟ ಉದ್ದೇಶ ಈಡೇರಿದ ಬಳಿಕ ನಿಮ್ಮ ಫೋನ್‌ ಕೆಳಗಿಡಿ. ಒಮ್ಮೆ ಬಳಸಿದ ನಂತರ ಆಪ್‌ಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿ. ಕಿರಿಕಿರಿ ಆಗುತ್ತಿದೆ ಎನಿಸಿದ ಆಪ್‌ಗಳನ್ನು ಹೈಡ್ ಮಾಡಿ ಅಥವಾ ಡಿಲೀಟ್ ಮಾಡಿದರೂ ತೊಂದರೆ ಏನಿಲ್ಲ.

ಸೋಶಿಯಲ್ ಸೈಟ್‌ ಏಕೆ?

ಸೋಶಿಯಲ್ ಸೈಟ್‌ ಏಕೆ?

ಒಂದು ತಿಂಗಳು ಅಥವಾ ವರ್ಷವೇ ಟ್ವಿಟ್ಟರ್‌, ಫೇಸ್‌ಬುಕ್‌ನಿಂದ ಆಚೆಗೆ ಇದ್ದರೆ ಆಕಾಶವೇನೂ ಮುಳುಗಿಹೋಗುವುದಿಲ್ಲ.ಬದಲಿಗೆ ನಿಮ್ಮ ಪಾಲಿಗೆ ಓದಲು, ಚಿಂತಿಸಲು ಕ್ವಾಲಿಟಿ ಟೈಮ್‌ ಉಳಿಯುತ್ತದೆ. ಕೆಲವು ಸೋಶಿಯಲ್ ಸೈಟ್‌ಗಳಿಂದ ಆಗಾಗ ಹೊರಗೆ ಹೋಗುವುದು, ಕೆಲವು ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು.

ಆಪ್‌ಗಳಿಗಳನ್ನು ಹೈಡ್ ಮಾಡಿ

ಆಪ್‌ಗಳಿಗಳನ್ನು ಹೈಡ್ ಮಾಡಿ

ಇದು ಒಂದು ವಿಶೇಷ ತಂತ್ರವಾಗಿದ್ದು, ನೀವು ಮೊಬೈಲ್‌ ತೆರೆದು ನೋಡಿ ಯಾವುದೇ ಆಪ್‌ ನೋಡಿದರು ಮನಸ್ಸು ಸಲೀಸಾಗಿ ಅದರ ಹತ್ತಿರ ವಾಲುತ್ತದೆ. ನೀವು ಮೊಬೈಲ್ ಅನ್ನು ತೆಗೆದಾಗ ಪ್ರತಿಯೊಂದು ಆಪ್ ಅನ್ನು ಚೆಕ್ ಮಾಡುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ, ಹೆಚ್ಚು ಸೆಳೆಯುವಂತಹ ಆಪ್‌ಗಳಿಗಳನ್ನು ಹೈಡ್ ಮಾಡಿಡುವುದು ಒಳ್ಳೆಯದು.

Best Mobiles in India

English summary
While mobile phone use may feel positive, it can actually limit us... There aretreatment centers and counselors that specialize in. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X