ಸ್ಮಾರ್ಟ್‌ಫೋನ್‌ ಇಲ್ಲದೇ ಒಲಾ & ಉಬರ್ ಬುಕ್ ಮಾಡುವುದು ಹೇಗೆ..?

|

ದೇಶದ ಪ್ರಮುಖ ನಗರಗಳಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಒಲಾ ಮತ್ತು ಉಬರ್ ಕಂಪನಿಗಳು ಅತೀ ಹೆಚ್ಚಿನ ಬಳಕೆದಾರನ್ನು ಹೊಂದಿವೆ. ಅಲ್ಲದೇ ಉತ್ತಮ ಸೇವೆಯನ್ನು ನೀಡುವ ಮೂಲಕ ತಮ್ಮದೇ ಬಳಕೆದಾರರನ್ನು ಸೃಷ್ಠಿಸಿಕೊಂಡಿವೆ. ಇದೇ ಮಾದರಿಯಲ್ಲಿ ಆಫರ್ ಗಳು, ದರ ಕಡಿತಗಳು ಸೇರಿದಂತೆ ಅನೇಕ ಆಯ್ಕೆಗಳನ್ನು ನೀಡುವ ಮೂಲಕ ಹೆಚ್ಚಿನ ಜನರನ್ನು ಸೆಳೆಯುತ್ತಿವೆ.

ಸ್ಮಾರ್ಟ್‌ಫೋನ್‌ ಇಲ್ಲದೇ ಒಲಾ & ಉಬರ್ ಬುಕ್ ಮಾಡುವುದು ಹೇಗೆ..?

ಇದೇ ಮಾದರಿಯಲ್ಲಿ ಒಲಾ ಮತ್ತು ಉಬರ್ ಕ್ಯಾಬ್ ಗಳನ್ನುಬುಕ್ ಮಾಡಬೇಕಾದರೆ ಸ್ಮಾರ್ಟ್‌ಫೋನ್ ಬೇಕು ಮತ್ತು ಅದರಲ್ಲಿ ಒಲಾ ಅಥವಾ ಉಬರ್ ಆಪ್ ಇರಲೇ ಬೇಕಾಗಿತ್ತು. ಸ್ಮಾರ್ಟ್‌ಫೋನ್ ಇಲ್ಲದವರು ಈ ಸೇವೆಯನ್ನು ಪಡೆಯಲು ಸಾಧ್ಯವಿರಲಿಲ್ಲ. ಆದರೆ ಸಹ ಈ ಪರಿಸ್ಥಿತಿಯೂ ಬದಲಾಗಿದ್ದು, ಸ್ಮಾರ್ಟ್‌ಫೋನ್ ಇಲ್ಲದೇಯೂ ಕ್ಯಾಬ್ ಬುಕ್ ಮಾಡುವ ಅವಕಾಶ ಲಭ್ಯವಿದೆ. ಈ ಹಿನ್ನಲೆಯಲ್ಲಿ ಕ್ಯಾಬ್ ಬುಕ್ ಮಾಡುವ ಕುರಿತು ಮಾಹಿತಿಯೂ ಮುಂದಿನಂತೆ ಇದೆ.

ಉಬರ್ ಬುಕ್ ಮಾಡುವುದು ಹೇಗೆ:

ಉಬರ್ ಬುಕ್ ಮಾಡುವುದು ಹೇಗೆ:

ಸ್ಮಾರ್ಟ್‌ಫೋನ್ ಇಲ್ಲದ ಸಮಯದಲ್ಲಿ ನಿಮ್ಮ ಕಂಪ್ಯೂಟರ್ ನಲ್ಲಿಯೇ ಉಬರ್ ಕ್ಯಾಬ್ ಬುಕ್ ಮಾಡಬಹುದಾಗಿದೆ. ಈ ಹೊಸ ಆಯ್ಕೆಯೂ ಕಳೆದ ಕೆಲವು ದಿನಗಳಿಂದ ಕಾರ್ಯಾಚರಣೆಯನ್ನು ಆರಂಭಿಸಿದೆ ಎನ್ನಲಾಗಿದೆ. ಈ ಕೆಳಗಿನ ಹಂತಗಳ ಮೂಲಕ ನೀವು ಉಬರ್ ಕ್ಯಾಬ್ ಬುಕ್ ಮಾಡಬಹುದಾಗಿದೆ.

ಹಂತ 01:

ಹಂತ 01:

ಮೊದಲಿಗೆ ನಿಮ್ಮ ಕಂಪ್ಯೂಟರ್‌ನ ಬ್ರೌಸರ್ ನಲ್ಲಿ m.uber.com ಅನ್ನು ಓಪನ್ ಮಾಡಿರಿ.

ಹಂತ 02:

ಹಂತ 02:

ಇದಾದ ನಂತರದಲ್ಲಿ ತೆರೆದುಕೊಳ್ಳುವ ಸ್ಕ್ರಿನ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಪಾಸ್‌ವರ್ಡ್ ಅನ್ನು ಎಂಟ್ರಿ ಮಾಡಿರಿ.

ಹಂತ 04:

ಹಂತ 04:

ಲಾಗ್ ಆದ ನಂತರದಲ್ಲಿ ನಿಮ್ಮ ಲೋಕೇಷನ್ ಬಳಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಇದಾದ ಮೇಲೆ ನಿಮಗೆ ಬುಕ್ಕಿಂಗ್ ಪೇಜ್ ತೆರೆದುಕೊಳ್ಳಲಿದೆ.

ಹಂತ 05:

ಹಂತ 05:

ಬುಕ್ಕಿಂಗ್ ಪೇಜ್‌ನಲ್ಲಿ ನೀವು ಪಿಕ್‌ಆಪ್ ಮತ್ತು ಡ್ರಾಪ್ ಲೋಕೇಷನ್ ಅನ್ನು ಎಂಟ್ರಿ ಮಾಡಬೇಕಾಗಿದೆ. ಇದಾದ ಮೇಲೆ ನಿಮಗೆ ಯಾವ ಕಾರು ಬೇಕು ಎಂಬುದನ್ನು ಆಯ್ಕೆಯನ್ನು ಮಾಡಿಕೊಳ್ಳುವ ಅವಕಾಶವು ದೊರೆಯಲಿದೆ.

ಹಂತ 06:

ಹಂತ 06:

ಇದಾದ ನಂತರದಲ್ಲಿ ಪೇಮೆಂಟ್ ಮೋಡ್ ಸೆಲೆಕ್ಟ್ ಮಾಡಿಕೊಂಡು ನೀವು ಕ್ಯಾಬ್ ಅನ್ನು ಬುಕ್ ಮಾಡಬಹುದಾಗಿದೆ. ನೀವು ಬುಕ್ ಮಾಡಿದ ಸ್ಥಳಕ್ಕೆ ಕ್ಯಾಬ್ ಆಗಮಿಸಲಿದೆ.

ಆಪ್ ಇಲ್ಲದೇ ಒಲಾ ಬುಕ್ ಮಾಡುವುದು ಹೇಗೆ?

ಆಪ್ ಇಲ್ಲದೇ ಒಲಾ ಬುಕ್ ಮಾಡುವುದು ಹೇಗೆ?

ಉಬರ್ ಮಾದರಿಯಲ್ಲಿಯೇ ಒಲಾ ಕ್ಯಾಬ್‌ ಗಳನ್ನು ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ನಿಮಗೆ ಆಪ್ ಆಗಲಿ ಸ್ಮಾರ್ಟ್‌ಫೋನ್ ಅಗಲಿ ಅವಶ್ಯವಿಲ್ಲ ಎನ್ನಲಾಗಿದೆ. ಈ ಕೆಳಗಿನ ಹಂತಗಳ ಮೂಲಕ ನೀವು ಒಲಾ ಬುಕ್ ಮಾಡಬಹುದಾಗಿದೆ.

ಹಂತ 01:

ಹಂತ 01:

ಮೊದಲಿಗೆ ನಿಮ್ಮ ಕಂಪ್ಯೂಟರ್ ಬ್ರೌಸರ್ ನಲ್ಲಿ www.olacabs.com ಅನ್ನು ಓಪನ್ ಮಾಡಿರಿ.

ಹಂತ 02:

ಹಂತ 02:

ಇದಾದ ನಂತರದಲ್ಲಿ ಸ್ಮಾರ್ಟ್‌ಫೋನ್ ಮಾದರಿಯ ಇಂಟರ್ಫೇಸ್ ಕಾಣಿಸಿಕೊಳ್ಳಿದ್ದು, ಇದರಲ್ಲಿ ಡ್ರಾಪ್ ಲೋಕೇಷನ್ ಮತ್ತು ಪಿಕಪ್ ಲೋಕೇಷನ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಹಂತ 03:

ಹಂತ 03:

ಇದಾದ ನಂತರದಲ್ಲಿ ಕೆಳಗೆ ಟ್ಯಾಕ್ಸಿ, ಆಟೋಗಳ ಲಿಸ್ಟ್ ಕಾಣಿಸಲಿದ್ದು, ಜೊತೆಗೆ ಎಸ್ಟಿಮೇಟ್ ದರಗಳು ಕಾಣಿಸಿಕೊಳ್ಳಲಿದೆ. ನಿಮಗೆ ಬೇಕಾದ ಕ್ಯಾಬ್ ಸೆಲೆಕ್ಟ ಮಾಡಿಕೊಂಡು ಟ್ಯಾಕ್ಸಿ ಬುಕ್ ಮಾಡಿಕೊಳ್ಳಬಹುದಾಗಿದೆ.

ಹಂತ 04:

ಹಂತ 04:

ಕ್ಯಾಷ್ ನಲ್ಲಿ ಪೇಮೆಂಟ್ ಮಾಡುವುದಿದ್ದರೇ ನೀವು ಮೊಬೈಲ್ ನಂಬರ್ ನೀಡಬೇಕಾಗಿದೆ. ಈ ಸಂದರ್ಭದಲ್ಲಿ OTP ಬರಲಿದ್ದು, ಅದನ್ನು ಎಂಟ್ರಿ ಮಾಡಿದರೆ ನೀವು ಬುಕ್ ಮಾಡಿದ ಸ್ಥಳಕ್ಕೆ ಕ್ಯಾಬ್ ಬರಲಿದೆ.

ಓದಿರಿ: ಜಿಯೋ ಗುಣಮಟ್ಟ ಕಡಿಮೆ ಆಯ್ತಾ..? ಒಪನ್‌ ಸಿಗ್ನಲ್‌ ಕೊಟ್ಟ ವರದಿ ಏನು..?

How to read deleted WhatsApp messages - GIZBOT KANNADA
Best Mobiles in India

English summary
How to Book an Uber or Ola Cab Without the App. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X