ಜಿಯೋ ಗುಣಮಟ್ಟ ಕಡಿಮೆ ಆಯ್ತಾ..? ಒಪನ್‌ ಸಿಗ್ನಲ್‌ ಕೊಟ್ಟ ವರದಿ ಏನು..?

|

ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ಕಾಲಿಟ್ಟ ನಂತರದಲ್ಲಿ 4G ಇಂಟರ್ನೆಟ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಜಿಯೋ ನಂತರದಲ್ಲಿ ವೇಗದ ಇಂಟರ್ನೆಟ್ ಸೇವೆಯನ್ನು ನೀಡಲು ಎಲ್ಲಾ ಟೆಲಿಕಾಂ ಕಂಪನಿಗಳು ಮುಂದಾಗಿವೆ, ಮಾರುಕಟ್ಟೆಯಲ್ಲಿ 4G ಡೇಟಾವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದ ನಂತರ ಯಾರು ವೇಗವಾಗಿ ಸೇವೆಯನ್ನು ನೀಡುತ್ತಾರೆ ಎನ್ನುವ ಸ್ಪರ್ಧೆಯೊಂದು ನಿರ್ಮಾಣವಾಗಿದ್ದು, ಇದು ಹೆಚ್ಚಿನ ಪ್ರಮಾಣದ ಸುದ್ದಿಯನ್ನು ಮಾಡುತ್ತಿದೆ.

ಜಿಯೋ ಗುಣಮಟ್ಟ ಕಡಿಮೆ ಆಯ್ತಾ..? ಒಪನ್‌ ಸಿಗ್ನಲ್‌ ಕೊಟ್ಟ ವರದಿ ಏನು..?

ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಯಾವುವ 4G ಇಂಟರ್ನೆಟ್ ವೇಗವನ್ನು ಅಳೆಯುವ ಒಪನ್ ಸಿಗ್ನಲ್ ಹೊಸದೊಂದು ವರದಿಯನ್ನು ಬಿಡುಗಡೆ ಮಾಡಿದ್ದು, 3G ಮತ್ತು 4G ಇಂಟರ್ನೆಟ್ ನಲ್ಲಿ ಏರ್‌ಟೆಲ್‌ ಎಲ್ಲಾ ಟೆಲಕಾಂ ಕಂಪನಿಗಳನ್ನು ಮೀರಿಸಿ ಮೊದಲ ಸ್ಥಾನವನ್ನು ಅಲಂಕರಿಸಿದೆ ಎನ್ನಲಾಗಿದೆ.

ಏರ್‌ಟೆಲ್ ಫಸ್ಟ್:

ಏರ್‌ಟೆಲ್ ಫಸ್ಟ್:

ಏರ್‌ಟೆಲ್ 6Mbps ವೇಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದ್ದು, ಇದೇ ಮಾದರಿಯಲ್ಲಿ ಜಿಯೋ 5.1Mbps ವೇಗದಲ್ಲಿ ಮಾತ್ರವೇ ಬಳಕೆದಾರರಿಗೆ ಸೇವೆಯನ್ನು ನೀಡುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಜಿಯೋವನ್ನು ಹಿಂದಿಕ್ಕಿದ ಏರ್‌ಟೆಲ್ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ ಎನ್ನಲಾಗಿದೆ. ಜಿಯೋ ವಿರುದ್ಧದ ಸಮರದಲ್ಲಿ ಏರ್‌ಟೆಲ್‌ಗೆ ದೊರೆತ ಜಯ ಎಂದು ಬಣ್ಣಿಸಲಾಗಿದೆ.

ಜಿಯೋ ಮೊದಲು:

ಜಿಯೋ ಮೊದಲು:

ಆದರೆ 4G ಕವರೆಜ್ ವಿಭಾಗದಲ್ಲಿ ಜಿಯೋ ಮೊದಲ ಸ್ಥಾನದಲ್ಲಿದ್ದು, ಉಳಿದ ಕಂಪನಿಗಳು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವೆಯನ್ನು ವಿಸ್ತರಿಸಬೇಕಿದೆ ಎಂದು ಒಪನ್ ಸಿಗ್ನಲ್ ಅಭಿಪ್ರಾಯ ವ್ಯಕ್ತಪಡಿಸಿದೆ.

What is Jio Cricket Gold Pass? How to Buy it
ಐಡಿಯಾಗೆ ಮೂರನೇ ಸ್ಥಾನ:

ಐಡಿಯಾಗೆ ಮೂರನೇ ಸ್ಥಾನ:

ಅಲ್ಲದೇ ಆಚ್ಚರಿಯ ವಿಷಯ ಎಂದರೆ, ಬಳಕೆದಾರರನ್ನು ಕಳೆದುಕೊಳ್ಳುತ್ತಿರುವ ಐಡಿಯಾ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಬಳಕೆದಾರರಿಗೆ 4.5 Mbps ವೇಗದಲ್ಲಿ ಸೇವೆಯನ್ನು ನೀಡುತ್ತಿದೆ. ಇದರೊಂದಿಗೆ ವೊಡಾಫೋನ್ 4.48 Mbps ವೇಗದ ಸೇವೆಯನ್ನು ಬಳಕೆದಾರರಿಗೆ ನೀಡುತ್ತಿದೆ.

BSNL ಕಮ್ಮಿ ಇಲ್ಲ:

BSNL ಕಮ್ಮಿ ಇಲ್ಲ:

ಇದೇ ಮಾದರಿಯಲ್ಲಿ ಸರ್ಕಾರಿ ಸ್ವಾಮ್ಯದ BSNL 4G ಸೇವೆಯನ್ನು ನೀಡುತ್ತಿಲ್ಲವಾದರು 2.19Mbps ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಬಳಕೆದಾರರಿಗೆ ಒದಗಿಸುತ್ತಿದೆ ಎಂದು ಒಪನ್ ಸಿಗ್ನಲ್ ವರದಿಯನ್ನು ಮಾಡಿದೆ.

Best Mobiles in India

English summary
Best 4G network in India: Airtel, Reliance Jio remain dominant. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X