ರಿಲಾಯನ್ಸ್ ಜಿಯೋ 4ಜಿ ಸಿಮ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಬಳಸುವುದು ಹೇಗೆ?

Written By:

ಟೆಲಿಕಾಮ್ ಕ್ಷೇತ್ರದಲ್ಲಿ ಹೆಚ್ಚು ಸದ್ದನ್ನು ಉಂಟುಮಾಡುತ್ತಿರುವ ರಿಲಾಯನ್ಸ್ ಜಿಯೋ ಸಿಮ್ ಹಲವಾರು ಬದಲಾವಣೆಗಳ ನಂತರವೇ ಈಗ 4ಜಿ ಸ್ಮಾರ್ಟ್‌ಫೋನ್ ಬಳಸುವವರ ಕೈ ಸೇರಿದೆ. ಮೊದಲು ರಿಲಾಯನ್ಸ್ ಉದ್ಯೋಗಿಗಳಿಗೆ ಮಾತ್ರವೇ ದೊರಕುತ್ತಿದ್ದ ಈ ಸಿಮ್ ಅನ್ನು ನಂತರ ರಿಲಾಯನ್ಸ್ ಮಾಲೀಕತ್ವದ ಎಲ್‌ವೈಎಫ್ ಬ್ರ್ಯಾಂಡೆಡ್ ಸ್ಮಾರ್ಟ್‌ಫೋನ್‌ಗಳಿಗೆ ನೀಡಲಾಯಿತು. ಇತ್ತೀಚೆಗೆ ತಾನೇ, ನಿರ್ದಿಷ್ಟ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಮಾಲೀಕರು ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗೆ ತಮ್ಮ ಪ್ರಯಾಣ ಬೆಳೆಸಿದ್ದು ಜಿಯೋ ಸಿಮ್ ಅನ್ನು
ಪಡೆದುಕೊಳ್ಳುತ್ತಿದ್ದರು.

ಓದಿರಿ: ನಿಮ್ಮ ಏರಿಯಾದಲ್ಲಿ 'ರಿಲಾಯನ್ಸ್ ಜಿಯೋ' ಸಿಮ್ ಸ್ಟೋರ್‌ ಪತ್ತೆ ಹೇಗೆ?

ಇದೀಗ ಬಂದ ಸುದ್ದಿಯು ಮಾಹಿತಿಯೊಂದನ್ನು ದೃಢೀಕರಿಸುತ್ತಿದ್ದು ಯಾವುದೇ 4ಜಿ ಸ್ಮಾರ್ಟ್‌ಫೋನ್ ಮಾಲೀಕರು ಆಯ್ಕೆಯ ರಿಲಾಯನ್ಸ್ ಡಿಜಿಟಲ್‌ ಮಳಿಗೆಗಳಿಗೆ ಹೋಗಬಹುದಾಗಿದ್ದು ರಿಲಾಯನ್ಸ್ ಜಿಯೋ ಸಿಮ್ ಅನ್ನು ಪಡೆದುಕೊಳ್ಳಬಹುದು ಎಂದಾಗಿದೆ. ಇದು ಮೂರು ತಿಂಗಳುಗಳ ಅನಿಯಮಿತ ಡೇಟಾವನ್ನು ಒದಗಿಸುತ್ತಿದ್ದು ಕರೆ, ಎಸ್‌ಎಮ್‌ಎಸ್ ಹಾಗೂ ರಿಲಾಯನ್ಸ್ ಜಿಯೋ ಸೇವೆಗಳಿಗೆ ಪ್ರವೇಶವನ್ನು ಒದಗಿಸುತ್ತಿದೆ. ಇಂದಿನ ಲೇಖನದಲ್ಲಿ ಜಿಯೋ ಸಿಮ್ ಅನ್ನು 4ಜಿ ಸ್ಮಾರ್ಟ್‌ಫೋನ್‌ಗಳಲ್ಲಿ ಹೇಗೆ ಬಳಸುವುದು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
4ಜಿ ಮೊಬೈಲ್‌

4ಜಿ ಮೊಬೈಲ್‌

ಜಿಯೋ ಸಿಮ್ ಹ್ಯಾಂಡ್‌ಸೆಟ್ ಲಾಕ್ ಮಾದರಿಯಲ್ಲಿ ಬಂದಿರುತ್ತದೆ. ಪ್ರತೀ ಹ್ಯಾಂಡ್‌ಸೆಟ್ ಅನನ್ಯ IMEI ಸಂಖ್ಯೆಯೊಂದಿಗೆ ಬಂದಿರುತ್ತವೆ ನೀವು ಎಲ್‌ವೈಎಫ್ IMEI ಸಂಖ್ಯೆಯನ್ನು ಬಳಸಲು ಯಾವುದೇ 4ಜಿ ಮೊಬೈಲ್‌ನಲ್ಲಿ ಸಿಮ್ ಕಾರ್ಯನಿರ್ವಹಿಸುವಂತೆ ಮಾಡಬೇಕಾಗುತ್ತದೆ.

ರೂಟ್ ಮಾಡಬೇಕು

ರೂಟ್ ಮಾಡಬೇಕು

ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಅನ್ನು ರೂಟ್ ಮಾಡಬೇಕು. ಎಕ್ಸ್‌ಪೋಸ್‌ಡ್ ಮಾಡ್ಯೂಲ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಈಗ ನಿಮ್ಮ IMEI ಎಕ್ಸ್‌ಪೋಸ್‌ಡ್ ಮಾಡ್ಯೂಲ್‌ಗೆ ಬದಲಾಗುತ್ತದೆ ಮತ್ತು ಅದನ್ನು ಆಕ್ಟಿವೇಟ್ ಮಾಡಿ

ವೆಬ್ ಬ್ರೌಸಿಂಗ್‌

ವೆಬ್ ಬ್ರೌಸಿಂಗ್‌

ಈಗ ಜಿಯೋ ಸಿಮ್ ಅನ್ನು ಬಳಸಿ ಮತ್ತು ನೆಟ್‌ವರ್ಕ್ ದೊರೆಯಲು ಸ್ವಲ್ಪ ಸಮಯ ಕಾಯಿರಿ; ಎಪಿಎನ್‌ನೊಂದಿಗೆ ವೆಬ್ ಬ್ರೌಸಿಂಗ್‌ಗಾಗಿ ಹಸ್ತಚಾಲಿತವಾಗಿ ಜಿಯೋ ಸೆಟ್ಟಿಂಗ್‌ಗಳನ್ನು ರಚಿಸಿಕೊಳ್ಳಿ.

ಜಿಯೋ ಅಪ್ಲಿಕೇಶನ್

ಜಿಯೋ ಅಪ್ಲಿಕೇಶನ್

ಜಿಯೋ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡು ಯಾವುದೇ 4ಜಿ ಮೊಬೈಲ್‌ನಲ್ಲಿ ಜಿಯೋ ಸಿಮ್ ಬಳಸಿಕೊಂಡು ಎಚ್‌ಡಿ ಕರೆಗಳನ್ನು ಮಾಡಬಹುದಾಗಿದೆ.

ಕೋಡ್

ಕೋಡ್

ಸರ್ವೀಸ್ ಪ್ರೊವೈಡರ್ ಕೋಡ್ ಅನ್ನು ಜನರೇಟ್ ಮಾಡುತ್ತಾರೆ. ನಿಮ್ಮ ಸಮೀಪದ ರಿಲಾಯನ್ಸ್ ಡಿಜಿಟಲ್, ಮಿನಿ ಸ್ಟೋರ್ ಅಥವಾ ಜಿಯೋ ಪಾರ್ಟ್ನರ್ ಸ್ಟೋರ್‌ಗೆ ಭೇಟಿ ನೀಡಿ ಮತ್ತು ಉಚಿತವಾಗಿ ಸಿಮ್ ಕಾರ್ಡ್ ಅನ್ನು ಪಡೆದುಕೊಳ್ಳಿ.

ಎಸ್‌ಎಮ್‌ಎಸ್ ಅಥವಾ ಕರೆ

ಎಸ್‌ಎಮ್‌ಎಸ್ ಅಥವಾ ಕರೆ

ನೋಂದಿತ ಮೊಬೈಲ್ ಸಂಖ್ಯೆಯಲ್ಲಿ ನೀವು ಎಸ್‌ಎಮ್‌ಎಸ್ ಅಥವಾ ಕರೆಯನ್ನು ಸ್ವೀಕರಿಸಿದ ತಕ್ಷಣ ನಿಮ್ಮ 4ಜಿ ಸಿಮ್ ಕಾರ್ಡ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.

ಜಿಯೋಜಾಯಿನ್ ಅಪ್ಲಿಕೇಶನ್

ಜಿಯೋಜಾಯಿನ್ ಅಪ್ಲಿಕೇಶನ್

ಕರೆಗಳನ್ನು ಮಾಡಲು ನೀವು ಜಿಯೋಜಾಯಿನ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗಿದ್ದರೂ 4ಜಿ ಡೇಟಾ ಸೇವೆಗಳಿಗೆ ಇದು ಅಗತ್ಯವಾಗಿರುವುದಿಲ್ಲ. ಎಲ್‌ವೈಎಫ್ ಅಲ್ಲದ ಫೋನ್‌ಗಳನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ಈ ಅಪ್ಲಿಕೇಶನ್ ಮುಖ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
In this article we are giving you guidance on how to use my jio 4g sim in Smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot