Subscribe to Gizbot

ನಿಮ್ಮ ಸ್ಮಾರ್ಟ್‌ಫೋನ್ ಬೇಗನೆ ಚಾರ್ಜ್ ಆಗಬೇಕೇ? ಸಿಂಪಲ್ ಹೀಗೆ ಮಾಡಿ...!

Written By:

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ ಎನ್ನುವವರು ಸ್ಮಾರ್ಟ್‌ ಫೋನ್ ಅನ್ನು ಮಲಗುವ ವೇಳೆಯಲ್ಲಿ ಬಿಟ್ಟು ಇನ್ಯಾವುದೇ ಸಮಯದಲ್ಲಿ ಬಿಟ್ಟಿರಲು ಸಾಧ್ಯವಿಲ್ಲ ಎನ್ನುತ್ತಾರೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ವೇಗವಾಗಿ ಚಾರ್ಜ್ ಮಾಡಲು ಬಯಸುತ್ತಾರೆ. ಇದಕ್ಕಾಗಿಯೇ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ವೇಗವಾಗಿ ಚಾರ್ಜ್ ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವೇ ಇದಾಗಿದೆ.

ನಿಮ್ಮ ಸ್ಮಾರ್ಟ್‌ಫೋನ್ ಬೇಗನೆ ಚಾರ್ಜ್ ಆಗಬೇಕೇ? ಸಿಂಪಲ್ ಹೀಗೆ ಮಾಡಿ...!
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತಮವಾದ ಚಾರ್ಜರ್:

ಉತ್ತಮವಾದ ಚಾರ್ಜರ್:

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಉತ್ತಮವಾದ ಜಾರ್ಜರ್ ನಿಂದಲೇ ಚಾರ್ಜ್ ಮಾಡಿ. ಅಲ್ಲದೇ ಸರಿಯಾದ ರೀತಿಯಲ್ಲಿ ಚಾರ್ಜರ್ ಅನ್ನು ಪ್ಲಗ್ ಮಾಡಿ. ಉಪ್ಟಾ ಪ್ಲಗ್ ಮಾಡಿದರೆ ಇಲ್ಲವಾದರೆ ನಿಮ್ಮ ಫೋನ್ ಸಹ ಬಿಸಿಯಾಗಲಿದೆ. ಜೊತೆಗೆ ಚಾರ್ಜಿಂಗ್ ವೇಗವು ಇಳಿಕೆಯಾಗಲಿದೆ.

ಪ್ಲೈಟ್ ಮೋಡ್:

ಪ್ಲೈಟ್ ಮೋಡ್:

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಫ್ಲೈಟ್ ಮೋಡಿನಲ್ಲಿಟ್ಟು ಚಾರ್ಜ್ ಮಾಡಿದರೆ ವೇಗವಾಗಿ ಚಾರ್ಜ್ ಆಗಲಿದೆ. ಪ್ಲೇಟ್ ಮೋಡ್ ಆನ್‌ ಮಾಡುವುದರಿಂದ ನಿಮ್ಮ ಸ್ಮಾರ್ಟ್‌ಫೋನ್ ಕಾರ್ಯಚರಣೆಯಲ್ಲಿ ಶೇ.50 ರಷ್ಟು ಕಡಿಮೆಯಾಗಲಿದ್ದು, ವೇಗವಾಗಿ ಚಾರ್ಜ್ ಆಗಲಿದೆ.

ಆಫ್ ಮಾಡಿ:

ಆಫ್ ಮಾಡಿ:

ಫ್ಲೈಟ್ ಮೋಡಿನಲ್ಲಿಟ್ಟು ಚಾರ್ಜ್ ಮಾಡುವುದಕ್ಕಿಂತ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸಂಪೂರ್ಣವಾಗಿ ಆಫ್ ಮಾಡಿ ಚಾರ್ಜ್ ಮಾಡಿದ ಸಂದರ್ಭದಲ್ಲಿ ಹೆಚ್ಚು ವೇಗದಲ್ಲಿ ಸ್ಮಾರ್ಟ್‌ಫೋನ್ ಚಾರ್ಜ್ ಆಗಲಿದೆ. ಇದರಿಂದಾಗಿ ಹೆಚ್ಚಿನ ಸಮಯವು ಉಳಿತಾಯವಾಗಲಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ಬ್ಯಾಟರಿ ಸೇವಿಂಗ್ ಮೋಡ್:

ಬ್ಯಾಟರಿ ಸೇವಿಂಗ್ ಮೋಡ್:

ಇದಲ್ಲದೇ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಬ್ಯಾಟರಿ ಸೇವಿಂಗ್ ಮೋಡ್ ಅನ್ನು ಹೆಚ್ಚು ಬಳಕೆ ಮಾಡಿಕೊಳ್ಳಿ. ಇದರಿಂದಾಗಿ ನಿಮ್ಮ ಸ್ಮಾರ್ಟ್‌ಫೋನಿನ ಬ್ಯಾಟರಿ ಬ್ಯಾಕಪ್ ಹೆಚ್ಚಾಗಲಿದ್ದು, ಹೆಚ್ಚು ಹೊತ್ತು ಸ್ಮಾರ್ಟ್‌ಫೋನ್‌ ಬಳಕೆ ಮಾಡಬಹುದಾಗಿದೆ.

ಬೇಡದಿರುವುದನ್ನು ಆಫ್ ಮಾಡಿ:

ಬೇಡದಿರುವುದನ್ನು ಆಫ್ ಮಾಡಿ:

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಬೇಡದ ಇರುವ ಫೀಚರ್ ಗಳನ್ನು ಆಫ್ ಮಾಡಿ. ಉದಾ: ಯಾವಾಗಲು ಸಿಂಕ್ ಅನ್ನು ಆನ್ ಮಾಡಿಡುವುದ, GPS ಎಲ್ಲಾ ಸಂದರ್ಭದಲ್ಲಿ ಕಾರ್ಯನಿರ್ವಹಿಸುವುಂತೆ ಮಾಡುವುದು ಬ್ಯಾಟರಿ ಬಾಳಿಕೆಯನ್ನು ಕಡಿಮೆ ಮಾಡಲಿವೆ.

ಯಾವಗಲೂ ಬಳಸಬೇಡಿ

ಯಾವಗಲೂ ಬಳಸಬೇಡಿ

ಸುಮ್ಮನೇ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಕೆಣಕುತ್ತಿರಬೇಡಿ. ಬೇಕೆಂದ ಸಂದರ್ಭದಲ್ಲಿ ಮಾತ್ರವೇ ನೀವು ಸ್ಮಾರ್ಟ್‌ಫೋನ್ ಬಳಕೆ ಮಾಡಿಕೊಳ್ಳುವುದು ಉತ್ತಮ ಇಲ್ಲವಾದರೆ ಸುಮ್ಮನೇ ಬ್ಯಾಟರಿ ಕಡಿಮೆಯಾಗಲಿದೆ.

ಪವರ್ ಬ್ಯಾಂಕ್:

ಪವರ್ ಬ್ಯಾಂಕ್:

ವೇಗವಾಗಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಿಕೊಳ್ಳುವ ಸಲುವಾಗಿ ಪವರ್ ಬ್ಯಾಂಕ್ ಕೊಳ್ಳುವುದು ಉತ್ತಮ. ಯಾವಾಗ ಬೇಕಾದರು, ಎಲ್ಲಿ ಬೇಕಾದರು ಚಾರ್ಜ್ ಮಾಡಿಕೊಳ್ಳುವ ಅವಕಾಶವು ಇದರಲ್ಲಿ ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
How to charge your Android phone battery faster. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot