Subscribe to Gizbot

ವೈಫೈ ಭದ್ರತೆಯನ್ನು ಪರಿಶೀಲಿಸುವುದು ಹೇಗೆ?

Written By:

ನಿಮ್ಮ ವೈಫೈಯನ್ನು ಮತ್ತೊಬ್ಬ ವ್ಯಕ್ತಿ ಬಳಸುತ್ತಿದ್ದಾನೆ ಎಂಬುದನ್ನು ಪರಿಶೀಲಿಸುವುದು ಹೇಗೆ? ನೀವು ಪಾವತಿಸುತ್ತಿರುವ ಅಂತರ್ಜಾಲ ವ್ಯವಸ್ಥೆಯನ್ನು ಬೇರೊಬ್ಬ ವ್ಯಕ್ತಿ ಬಳಸಿದಾಗ ನಿಮ್ಮ ಅಂತರ್ಜಾಲದ ಸಂಪರ್ಕ ನಿಧಾನವಾಗುವುದು ಸಹಜವಾಗಿದೆ. ನಿಮ್ಮ ನೆಟ್‌ವರ್ಕ್ ಅನ್ನು ಬಳಸಿಕೊಂಡು ಈ ವ್ಯಕ್ತಿ ನಿಮ್ಮ ವೈಯಕ್ತಿಕ ಫೈಲ್ ಅನ್ನು ಅತಿಕ್ರಮಿಸಲೂಬಹುದು ಆತನ ವೈಯಕ್ತಿಕ ಅಥವಾ ನಿಯಮ ಬಾಹಿರ ಚಟುವಟಿಕೆಗಳಿಗೆ ವ್ಯಕ್ತಿ ನಿಮ್ಮ ಅಂತರ್ಜಾಲವನ್ನು ಬಳಸುತ್ತಿದ್ದಾನೆ ಎಂದಾದಲ್ಲಿ ಇದು ನಿಮಗೆ ಅಪಾಯವನ್ನು ತಂದೊಡ್ಡುವ ಸಂಭವ ಕೂಡ ಹೆಚ್ಚಿದೆ.

ಹಾಗಿದ್ದರೆ ಈ ತೊಂದತೆಯನ್ನು ನೀಗಿಸಿಕೊಳ್ಳುವ ಉಪಾಯ ಏನಾದರೂ ಇದೆಯೇ ಎಂಬುದು ನಿಮ್ಮ ಚಿಂತೆಯಾಗಿದ್ದರೆ ಇಂದಿನ ಲೇಖನ ನಿಮಗೆ ಹೆಚ್ಚಿನ ಸಹಾಯವನ್ನು ಒದಗಿಸಬಹುದು. ನಿಮ್ಮ ವೈರ್‌ಲೆಸ್ ಸಂಪರ್ಕವನ್ನು ಅಳವಡಿಸಿಕೊಳ್ಳುವಾಗ ನೀವು ತೆಗೆದುಕೊಳ್ಳಬಹುದಾದ ಕೆಲವೊಂದು ನಿಯಮಗಳು ಮತ್ತು ಮುಂಜಾಗ್ರತಾ ಕ್ರಮಗಳನ್ನು ಈ ಲೇಖನ ನಿಮಗೆ ತಿಳಿಸಿಕೊಡುತ್ತದೆ. ಹಾಗಿದ್ದರೆ ಆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಈ ತೊಂದರೆಗಳನ್ನು ಹೇಗೆ ನಿವಾರಿಸಿಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂಟರ್ ಡಿವೈಸ್‌ಗಳ ಪರಿಶೀಲನೆ

#1

ಬ್ರೌಸರ್ ಅಥವಾ ವಿಳಾಸ ಪಟ್ಟಿಯಲ್ಲಿ ಅದರ ಐಪಿ ವಿಳಾಸವನ್ನು ನಮೂದಿಸುವ ಮೂಲಕ ನಿಮ್ಮ ರೂಟರ್‌ನ ಅಡ್ಮಿನಿಸ್ಟ್ರೇಟೀವ್ ಕನ್ಸೋಲ್‌ಗೆ ಲಾಗಿನ್ ಮಾಡಿಕೊಳ್ಳುವುದು. ನಿಮ್ಮ ರೂಟರ್ ಅನ್ನು ಆಧರಿಸಿ ಸಾಮಾನ್ಯವಾಗಿ ಐಪಿ ಸಂಖ್ಯೆ 192.168.0.1 or 192.168.1.1 ಎಂದಾಗಿರುತ್ತದೆ.

ರೂಟರ್‌ನ ಡೀಫಾಲ್ಟ್ ವಿಳಾಸ

#2

ನಿಮ್ಮ ರೂಟರ್‌ನ ಡೀಫಾಲ್ಟ್ ವಿಳಾಸ ನಿಮಗೆ ತಿಳಿದಿಲ್ಲ ಎಂದಾದಲ್ಲಿ ಈ ಮಾರ್ಗದರ್ಶಿಯನ್ನು ಪರಿಶೀಲಿಸಿಕೊಳ್ಳಿ ಅಥವಾ ಕಮಾಂಡ್ ಪ್ರಾಂಪ್ಟ್‌ಗೆ ಹೋಗಿ (Start > Run/Search for cmd) ಇಲ್ಲಿ ಐಪಿ ಕಾನ್ಫಿಗರ್ ಮಾಡಿ. ಗಮನಿಸಿ ನಿಮ್ಮ ಸ್ಥಳೀಯ ಪ್ರದೇಶದ ಸಂಪರ್ಕದಡಿಯಲ್ಲಿ ಡೀಫಾಲ್ಟ್ ಗೇಟ್‌ವೇ ಅಡಿಯಲ್ಲಿ ನಿಮಗೆ ಅಗತ್ಯದ ವಿಳಾಸವಿರಬೇಕು.

ಮ್ಯಾಕ್

#3

ಪರ್ಯಾಯವಾಗಿ, ನೀವು ಮ್ಯಾಕ್‌ನಲ್ಲಿದ್ದರೆ, ಸಿಸ್ಟಮ್ ಆದ್ಯತೆಗಳು ಅಡಿಯಲ್ಲಿ ನೆಟ್‌ವರ್ಕ್‌ಗೆ ಹೋಗುವ ಮೂಲಕ ಡೀಫಾಲ್ಟ್ ವಿಳಾಸವನ್ನು ನಿಮಗೆ ಕಾಣಬಹುದು . ರೂಟರ್‌ನ ಪಕ್ಕದಲ್ಲೇ ಇದನ್ನು ಪಟ್ಡಿ ಮಾಡಿರಬೇಕು.

ಈದರ್‌ನೆಟ್

#4

ನೀವು ಈದರ್‌ನೆಟ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, "Advanced..." ಅನ್ನು ಕ್ಲಿಕ್ ಮಾಡುವ ಮೂಲಕ, ನೀವು ವೈಫೈ ಬಳಸುತ್ತಿದ್ದೀರಿ ಎಂದಾದಲ್ಲಿ "TCP/IP" ಅನ್ನು ಕ್ಲಿಕ್ ಮಾಡಿ ನಂತರ ನಿಮ್ಮ ಬ್ರೌಸರ್ ಅನ್ನು ಆ ವಿಳಾಸಕ್ಕೆ ಪಾಯಿಂಟ್ ಮಾಡಿ ಮತ್ತು ನಿಮ್ಮ ಲಾಗಿನ್ ವರದಿಗಳನ್ನು ನಮೂದಿಸಿ ನೀವು ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿಲ್ಲ ಎಂದಾದಲ್ಲಿ ಇದು ಅಡ್ಮಿನ್ ಮತ್ತು ಪಾಸ್‌ವರ್ಡ್ ಎರಡರ ಮಿಶ್ರವಾಗಿರಬೇಕು.

ಕ್ರಮ ತೆಗೆದುಕೊಳ್ಳುವುದು

#5

WPA2 ಅಥವಾ WPA -- WEP ಮುಂತಾದ ಬಲವಾದ ಪಾಸ್‌ವರ್ಡ್‌ಗಳನ್ನು ಬಳಸಿಕೊಳ್ಳವುದು ಅತಿ ಸರಳ ಮತ್ತು ಉತ್ತಮ ಕ್ರಮವಾಗಿದೆ. SSIDಬ್ರಾಡ್‌ಕಾಸ್ಟ್ (ನಿಮ್ಮ ನೆಟ್‌ವರ್ಕ್‌ ಹೆಸರಿನ ಜಾಹೀರಾತನ್ನು ಸಮೀಪದ ವೈಫೈ ಡಿವೈಸ್‌ಗಳಿಗೆ ನೀಡುವುದನ್ನು ಇದು ತಡೆಯುತ್ತದೆ) ಸ್ವಿಚ್ ಆಫ್ ಮಾಡಿ ಅಥವಾ ಅನುಮತಿಸಿದ ಇಲ್ಲವೇ ಬ್ಲಾಕ್ ಮಾಡಿರುವ ಡಿವೈಸ್‌ಗಳಿಗಾಗಿ MAC ವಿಳಾಸದ ಮೂಲಕ ಫಿಲ್ಟರ್ ಮಾಡಿ.

ಟ್ರ್ಯಾಕ್

#6

ನಿಮ್ಮ ವೈಫೈ ಸಂಪರ್ಕವನ್ನು ಬಳಸಿಕೊಳ್ಳುತ್ತಿರುವ ವ್ಯಕ್ತಿಯ ಪ್ರದೇಶವನ್ನು ಅರಿತುಕೊಳ್ಳಲು MoocherHunter ಎಂಬ ಪರಿಕರ ಲಭ್ಯವಿದ್ದು ಇದರಿಂದ ಈತನನ್ನು ಟ್ರ್ಯಾಕ್ ಮಾಡಬಹುದಾಗಿದೆ.

 ಪಾವತಿ ವೈಫೈ ಮೂಲಕ ಲಾಭ ಗಳಿಸುವುದು

#7

ನೀವು ಪಾವತಿಸುವ ವೈಫೈ ಸಂಪರ್ಕವನ್ನು ಇನ್ನೊಬ್ಬ ವ್ಯಕ್ತಿ ಬಳಸುತ್ತಿದ್ದಾನೆ ಎಂದಾದಲ್ಲಿ ಆತ ನಿಮಗೆ ದುಡ್ಡು ತೆರಬೇಕಾಗಿರುವುದು ನಿಜಕ್ಕೂ ನ್ಯಾಯಸಮ್ಮತ. Chillifire ಎಂಬ ಪರಿಕರವನ್ನು ಬಳಸಿಕೊಂಡು ನಿಮ್ಮ ಈ ಅಗತ್ಯತೆಯನ್ನು ಸಾಧಿಸಿಕೊಳ್ಳಬಹುದಾಗಿದೆ. ನೀವು ಸಾರ್ವಜನಿಕ ಹಾಟ್‌ಸ್ಪಾಟ್ ಅನ್ನು ನಡೆಸಬೇಕೆಂಬ ಹಂಬದಲ್ಲಿ ಇದ್ದೀರಿ ಎಂದಾದಲ್ಲಿ, ನಿಮ್ಮ ಗ್ರಾಹಕ ರೂಟರ್‌ನಿಂದ ಪಾವತಿಗಾಗಿ ಅಥವಾ ಉಚಿತವಾಗಿರುವ ಅಂತರ್ಜಾಲ ಸಂಪರ್ಕವನ್ನು ಇದು ಅನುಮತಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about how to check if someone is using your wifi.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot