ನಿಮ್ಮ ಫೇಸ್‌ಬುಕ್, ಟ್ವಿಟರ್ ಅಕೌಂಟ್ ಕದಿಯಲಾಗಿದೆಯಾ?..ತಿಳಿಯೋದು ಹೇಗೆ?

|

ಹಿಂದೆಲ್ಲ ಜೀವನ ಚರಿತ್ರೆ ತಿಳಿಯಬೇಕು ಎಂದರೆ ಡೈರಿಗಳಿರುತ್ತಿದ್ದವು. ಆದರೆ ಈಗ ಯಾರದ್ದೇ ಜೀವನದ ಬಗ್ಗೆ ತಿಳಿಯಬೇಕು ಎಂದರೆ ಡೈರಿಗಳು ಅಲ್ಲ ಬದಲಾಗಿ ಸೋಷಿಯಲ್ ಮೀಡಿಯಾಗಳು ಸಾಕು.. ಹೌದು ಸೋಷಿಯಲ್ ಮೀಡಿಯಾಗಳು ಈಗ ಪ್ರತಿಯೊಬ್ಬರ ಜೀವನದ ಕೈಗನ್ನಡಿಯಿದ್ದಂತೆ.. ಎಲ್ಲವನ್ನೂ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವವರ ಸಂಖ್ಯೆಗೆನೂ ಕಡಿಮೆ ಇಲ್ಲ. ಸ್ವಲ್ಪ ಬೇಜಾರಾಯ್ತು ಅಂದ್ರೂ ಸ್ಟೇಟಸ್ ಹಾಕ್ತಾರೆ., ಸ್ವಲ್ಪ ಖುಷಿ ಆಯ್ತು ಅಂದ್ರೂ ಕಮೆಂಟ್ ಮಾಡ್ತಾರೆ. ಯಾವ ಗಂಟೆಯ ಯಾವ ನಿಮಿಷದ ಯಾವ ಸೆಕೆಂಡ್ ನಲ್ಲಿ ಒಬ್ಬ ವ್ಯಕ್ತಿಯ ಮನಸ್ಸು ಹೇಗೆ ವರ್ತಿಸುತ್ತಿತ್ತು ಎಂದು ತಿಳಿಯಬಹುದು. ಅಷ್ಟು ಕರಾರುವಕ್ ಮಾಹಿತಿ ಸೋಷಿಯಲ್ ಮೀಡಿಯಾದಿಂದ ಲಭ್ಯವಾಗುತ್ತೆ.

ನಿಮ್ಮ ಫೇಸ್‌ಬುಕ್, ಟ್ವಿಟರ್ ಅಕೌಂಟ್ ಕದಿಯಲಾಗಿದೆಯಾ?..ತಿಳಿಯೋದು ಹೇಗೆ?


ಆದರೆ ಈ ಸೋಷಿಯಲ್ ಮೀಡಿಯಾ ಅಕೌಂಟ್ ಗಳು ಕಳ್ಳರ ಕೈಗೆ ಸಿಕ್ಕಿದರೆ..!! ಹೌದು ನೀವು ಕೇಳುತ್ತಿರುವುದು ನಿಜ. ಕೇವಲ ಚಿನ್ನ, ಬೆಳ್ಳಿ, ದುಡ್ಡು ಮಾತ್ರ ಕದಿಯೋರಿರೋದಿಲ್ಲ. ಬದಲಾಗಿ ನಿಮ್ಮ ಸೋಷಿಯಲ್ ಅಕೌಂಟ್ ನ ಮಾಹಿತಿಯನ್ನು ಕದ್ದು ನಿಮ್ಮದಲ್ಲದ ಪೋಸ್ಟ್ ಗಳನ್ನು ಪೋಸ್ಟ್ ಮಾಡಿ, ಯಾವುದೇ ಅನಗತ್ಯ ವಿಚಾರಗಳನ್ನು ನಿಮ್ಮ ಅಕೌಂಟ್ ನಲ್ಲಿ ಶೇರ್ ಮಾಡಿ ಬೇಡದ ಕಿತಾಪತಿ ಕೆಲಸ ಮಾಡುವವರು ಬೇಜಾನ್ ಮಂದಿ ಇದ್ದಾರೆ. ಹಾಗಾಗಿ ನೀವು ಆದಷ್ಟು ಜೋಪಾನವಾಗಿರಬೇಕು. ಯಾವಾಗಲೂ ನಿಮ್ಮ ಸೋಷಿಯಲ್ ಅಕೌಂಟಿನ ಮಾಹಿತಿಯನ್ನು ಯಾರಾದರೂ ಕದ್ದಿದ್ದಾರಾ ಎಂಬ ಬಗ್ಗೆ ಪರೀಕ್ಷಿಸಿಕೊಳ್ಳುತ್ತಿರಬೇಕು. ಹಾಗಾದ್ರೆ ಕಳ್ಳರು ನಿಮ್ಮ ಅಕೌಂಟಿನಲ್ಲಿ ಕೈಚಳಕ ತೋರಿಸಿದ್ದಾರಾ ತಿಳಿಯೋದು ಹೇಗೆ? ಅದಕ್ಕೆ ಕೆಲವು ಸರಳ ಮಾರ್ಗಗಳಿವೆ.. ತಿಳಿಯಬೇಕು ಎಂದರೆ ಮುಂದೆ ಓದಿ...

• ನಿಮ್ಮ ಫೇಸ್ ಬುಕ್ ಅಕೌಂಟ್ ಕದಿಯಾಲಾಗಿದೆಯಾ ತಿಳಿಯೋದು ಹೇಗೆ?

ಈ ಕೆಳಗಿನ ಮೆಥೆಡ್ ಗಳನ್ನು ಫಾಲೋ ಮಾಡಿ ನಿಮ್ಮ ಫೇಸ್ ಬುಕ್ ಅಕೌಂಟ್ ಕದ್ದಿದ್ದಾರಾ ಎಂದು ತಿಳಿಯಬಹುದು.

1. ಸೆಟ್ಟಿಂಗ್ಸ್ ಗೆ ತೆರಳಿ

2. ಸೆಕ್ಯುರಿಟಿ ಎಂಡ್ ಲಾಗಿನ್ ಆಯ್ಕೆಯನ್ನು ಕ್ಲಿಕ್ ಮಾಡಿ

3. Where you’re logged in ಆಯ್ಕೆಯನ್ನು ಕ್ಲಿಕ್ಕಿಸಿ

ಇದು ನಿಮಗೆ ಎಲ್ಲೆಲ್ಲಿ ಲಾಗಿನ್ ಆಗಿದ್ದೀರಿ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತೆ. ಹೆಸರು ಮತ್ತು ಸ್ಥಳದ ವಿವರವನ್ನೂ ನೀಡುತ್ತೆ. ಒಂದು ವೇಳೆ ನೀವು ಗುರುತಿಸಲ್ಪಡದ ಯಾವುದಾದರೂ ಡಿವೈಸ್ ಗಮನಿಸಿದರೆ, ನಿಮ್ಮ ಅಕೌಂಟ್ ಕದಿಯಲ್ಪಟ್ಟಿದೆ ಎಂದರ್ಥ.

• ನಿಮ್ಮ ಇನ್ ಸ್ಟಾ ಗ್ರಾಂ ಅಕೌಂಟ್ ಕದಿಯಲಾಗಿದೆ ಎಂದು ಪರೀಕ್ಷಿಸಿಕೊಳ್ಳುವುದು ಹೇಗೆ?

ಇನ್ ಸ್ಟಾ ಗ್ರಾಂನ ಅಕೌಂಟ್ ಕದಿಯಲಾಗಿದೆಯಾ ಎಂದು ತಿಳಿಯಲು ಸುಲಭ ಮಾರ್ಗಗಳಿವೆ. ಒಂದು ವೇಳೆ ನಿಮಗೆ ಅಪರಿಚಿತವಿರುವ ಯಾವುದೇ ವ್ಯಕ್ತಿಯ ಪೋಸ್ಟ್ ನಿಮ್ಮ ಅಕೌಂಟಿನಲ್ಲಿದ್ದರೆ,ಅಥವಾ ಫೋಟೋಗಳಿದ್ದರೆ ತಕ್ಷಣವೇ ತಿಳಿದುಬಿಡುತ್ತೆ.ಒಂದು ವೇಳೆ ಹೀಗಿರುವುದು ತಿಳಿದುಬಂದರೆ ಕೂಡಲೇ ನಿಮ್ಮ ಇನ್ ಸ್ಟಾ ಗ್ರಾಂ ಅಕೌಂಟಿನ ಪಾಸ್ ವರ್ಡ್ ಬದಲಿಸಿಬಿಡಿ..ಟು ಫ್ಯಾಕ್ಟರ್ ಅಥೊಂಟಿಕೇಷನ್ ಮಾಡಿವುದನ್ನು ಮರೆಯಬೇಡಿ. ಇದರಿಂದ ಮೂರನೇ ವ್ಯಕ್ತಿಗಳು ಯಾರೂ ನಿಮ್ಮ ಅಕೌಂಟಿಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಲಾಗಿನ್ ಆಗುವಾಗ ಓಟಿಪಿ ಹಾಕಲೇಬೇಕಾಗುತ್ತದೆ.


• ನಿಮ್ಮ ಟ್ವೀಟರ್ ಅಕೌಂಟ್ ಕದಿಯಲಾಗಿದೆಯಾ ತಿಳಿಯುವ ಸುಲಭ ವಿಧಾನ ಯಾವುದು ಗೊತ್ತಾ?

ಫೇಸ್ ಬುಕ್ ನಲ್ಲಿ ತಿಳಿದಂತೆ ಟ್ವೀಟರ್ ನಲ್ಲೂ ಕೂಡ ನಿಮ್ಮ ಅಕೌಂಟ್ ಹ್ಯಾಕ್ ಆಗಿದೆಯಾ ಅಥವಾ ಇಲ್ಲವಾ ಎಂದು ತಿಳಿದುಕೊಳ್ಳಬಹುದು. ಕೆಲವು ಸರಳ ಹಂತಗಳನ್ನು ಫಾಲೋ ಮಾಡಿ.. ಹಂತಗಳು ಹೀಗಿವೆ

1. ಸೆಟ್ಟಿಂಗ್ಸ್ ಎಂಡ್ ಪ್ರೈವೆಸಿ ಗೆ ತೆರಳಿ

2. ಪ್ರೈವಸಿ ಎಂಡ್ ಸೇಫ್ಟಿಯನ್ನು ಕ್ಲಿಕ್ ಮಾಡಿ

3. ಟ್ವೀಟರ್ ಡಾಟಾ ವನ್ನು ಆಯ್ಕೆ ಮಾಡಿ

ಈಗ ನಿಮ್ಮ ಟ್ವೀಟರ್ ಡಾಟಾ ಪುಟವನ್ನು ಪರೀಕ್ಷಿಸಿ. ಸಂಪೂರ್ಣ ಇತಿಹಾಸವನ್ನೇ ಆ ಪುಟ ವಿವರಿಸುತ್ತೆ. ಆಪ್ ಹಿಸ್ಟರಿ ಮತ್ತು ಆಪ್ ಎಂಡ್ ಡಿವೈಸ್ ಸೆಕ್ಷನ್ ಗಳೂ ಕೂಡ ಇದನ್ನು ವಿವರಿಸುತ್ತೆ. ಇದರಲ್ಲಿ ನಿಮ್ಮ ಅಕೌಂಟಿನಿಂದ ನೀವು ಯಾವುದನ್ನೆಲ್ಲ ಬ್ರೌಸ್ ಮಾಡಿದ್ದೀರಿ, ಯಾವೆಲ್ಲ ಆಪ್ಸ್ ಓಪನ್ ಮಾಡಿದ್ದೀರಿ, ಯಾವ ಫೋನಿನಿಂದ ಅಥವಾ ಡಿವೈಸ್ ನಿಂದ ಲಾಗಿನ್ ಆಗಿದ್ದೀರಿ ಎಂಬುದನ್ನೆಲ್ಲ ತಿಳಿದುಕೊಳ್ಳಬಹುದು. ಆದರೆ ಬೇಸರದ ವಿಚಾರ ಅಂದ್ರೆ ಫೇಸ್ ಬುಕ್ ನಂತೆ ಇದರಲ್ಲಿ ಕೂಡಲೇ ಯಾವುದೇ ಆಕ್ಷನ್ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಎಲ್ಲಾ ಅಕೌಂಟ್ ನಲ್ಲೂ ಸೇಫ್ ಆಗಿರಬೇಕು ಎಂದರೆ ಇರುವುದೇ ಒಂದೇ ಸಿಂಪಲ್ ಮಾರ್ಗ. ಆಗಾಗ ನಿಮ್ಮ ಪಾಸ್ ವರ್ಡ್ ಬದಲಾಯಿಸುತ್ತಾ ಇರುವುದು ಮತ್ತು ಟು ಸ್ಪೆಪ್ ವೆರಿಫಿಕೇಷನ್ ಆಯ್ಕೆ ಇದ್ದಲ್ಲಿ ಅದಕ್ಕೆ ಯಾವಾಗಲೂ ಪ್ರಾಮುಖ್ಯತೆ ನೀಡುವುದು.. ಟ್ವೀಟರ್ ನಲ್ಲೂ ಕೂಡ ಟು ಸ್ಪೆಪ್ ವೆರಿಫಿಕೇಷನ್ ಗೆ ಅವಕಾಶವಿದ್ದು, ಯಾವಾಗಲೂ ಅದನ್ನೇ ಆಯ್ಕೆ ಮಾಡಿಕೊಂಡಿರುವುದು ಸೂಕ್ತ.

Best Mobiles in India

English summary
How to check if your Facebook, Instagram or Twitter account been hacked. Here are some tricks to know is your social media account is safe or not. to know more visit to kannada. gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X