ರೇಡಿಯೇಷನ್ ಲೆವೆಲ್ ನಿಮ್ಮ ಆರೋಗ್ಯಕ್ಕೆ ಹಾನಿ- ತಿಳಿದುಕೊಳ್ಳಿ ನಿಮ್ಮ ಫೋನಿನ ರೇಡಿಯೇಷನ್ ಲೆವೆಲ್

By Gizbot Bureau
|

ಹೆಚ್ಚಿನ ಮಂದಿ ಸ್ಮಾರ್ಟ್ ಫೋನ್ ಖರೀದಿಸುವಾಗ ಅದರ ವೈಶಿಷ್ಟ್ಯತೆ ಅಥವಾ ಬೆಲೆಯನ್ನು ನೋಡುತ್ತಾರೆ. ಆದರೆ ಸ್ಮಾರ್ಟ್ ಫೋನ್ ಖರೀದಿಸುವಾಗ ಇನ್ನೂ ಕೆಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಅವುಗಳೆಂದರೆ ಸೇವ್ ನಂತರದ ಸೇವೆ, ಮರುಮಾರಾಟದ ಬೆಲೆ ಅಥವಾ ರೇಡಿಯೇಷನ್ ಲೆವೆಲ್.

ನಿಮ್ಮ ಫೋನಿನ ರೇಡಿಯೇಷನ್ ಲೆವೆಲ್ ಚೆಕ್ ಮಾಡುವುದು ಹೇಗೆ?

ಆದರೆ ರೇಡಿಯೇಷನ್ ಲೆವೆಲ್ ನ್ನು ಹೆಚ್ಚಿನ ಮಂದಿ ತಲೆಕೆಡಿಸಿಕೊಳ್ಳದೆ ತಾವು ಖರೀದಿಸಬೇಕು ಎಂದುಕೊಂಡಿರುವ ಮೊಬೈಲ್ ನ್ನು ಖರೀದಿಸುತ್ತಾರೆ. ರೇಡಿಯೇಷನ್ ಅಥವಾ ಒಂದು ಫೋನಿನ SAR ವ್ಯಾಲ್ಯೂ ಅಂದರೆ ಸಾಮಾನ್ಯವಾಗಿ ಒಂದು ಡಿವೈಸ್ ಬಿಡುಗಡೆಗೊಳಿಸುವ ರೇಡಿಯೋ ಫ್ರೀಕ್ವೆನ್ಸಿ ಅಂದರೆ ಆ ಡಿವೈಸ್ ಬಿಡುಗಡೆಗೊಳಿಸುವ ಒಂದು ಮೊತ್ತದ ರೇಡಿಯೇಷನ್ ನಿಮ್ಮ ಆರೋಗ್ಯದ ಮೇಲೆ ಕ್ರಮೇಣವಾಗಿ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಹಾಗಾದ್ರೆ ಯಾರು ತಮ್ಮ ಸ್ಮಾರ್ಟ್ ಫೋನಿನ ರೇಡಿಯೇಷನ್ ಲೆವೆಲ್ ನ್ನು ತಿಳಿದುಕೊಳ್ಳಲು ಇಚ್ಛಿಸುತ್ತೀರೋ ಅವರು ಈ ಕೆಳಗಿನ ಹಂತವನ್ನು ಅನುಸರಿಸಬಹುದು.

ಅಗತ್ಯವಾಗಿ ಬೇಕಾಗಿರುವ ಪ್ರಾಥಮಿಕ ಅಂಶಗಳು:

ಅಗತ್ಯವಾಗಿ ಬೇಕಾಗಿರುವ ಪ್ರಾಥಮಿಕ ಅಂಶಗಳು:

ಕೆಲವು ಸ್ಮಾರ್ಟ್ ಫೋನ್ ಕಂಪೆನಿಗಳು SAR ರೇಟಿಂಗ್ ನ್ನು ಬಳಕೆದಾರರ ಮ್ಯಾನುವಲ್ ನಲ್ಲಿ ಬರೆದಿರುತ್ತಾರೆ. ಈ ಮ್ಯಾನುವಲ್ ಪುಸ್ತಕವು ನೀವು ಖರೀದಿಸಿರುವ ಸ್ಮಾರ್ಟ್ ಫೋನಿನ ಬಾಕ್ಸ್ ಜೊತೆಗೆ ಇರುತ್ತದೆ. ಆದರೆ ಕೆಲವು ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಗಳು ತಮ್ಮ ವೆಬ್ ಸೈಟಿನ ವೈಶಿಷ್ಟ್ಯತೆಗಳ ಸೆಕ್ಷನ್ ನಲ್ಲಿ ನಮೂದಿಸಿರುತ್ತಾರೆ. ಆದರೆ ತಮ್ಮ ಫೋನಿನ ಒಳಗೆ ಬರೆದಿರುವ ಈ SAR ವ್ಯಾಲ್ಯೂ ವನ್ನು ತಿಳಿದುಕೊಳ್ಳುವುದಕ್ಕೆ ಸ್ವಲ್ಪ ಕೆಲಸ ಮಾಡಬೇಕಷ್ಟೇ! ಏನು ಮಾಡಬೇಕು ಎಂಬುದನ್ನು ಮುಂದೆ ಓದಿ.

SAR ವ್ಯಾಲ್ಯೂವನ್ನು ತಿಳಿದುಕೊಳ್ಳಲು ಅನುಸರಿಸಬೇಕಾಗಿರುವ ಹಂತಗಳು :

SAR ವ್ಯಾಲ್ಯೂವನ್ನು ತಿಳಿದುಕೊಳ್ಳಲು ಅನುಸರಿಸಬೇಕಾಗಿರುವ ಹಂತಗಳು :

1.ಸ್ಮಾರ್ಟ್ ಫೋನ್ ನ್ನು ಅನ್ ಲಾಕ್ ಮಾಡಿ ಮತ್ತು ಡಯಲರ್ ನ್ನು ತೆರೆಯಿರಿ.

2.ಇದೀಗ ‘*#07# ಕೋಡ್ ನ್ನು ಟೈಪ್ ಮಾಡಿ.

3.ಇದೀಗ ಸ್ಮಾರ್ಟ್ ಫೋನ್ ಸ್ವಯಂಚಾಲಿತವಾಗಿ ನಿಮ್ಮ ಫೋನಿನ SAR ರೇಟಿಂಗ್ ನ್ನು ತೋರಿಸುತ್ತದೆ.

ಬಳಕೆದಾರರು ಈ ಮೂಲಕ ಇತರೆ ಕೆಲವು ಮಾಹಿತಿಗಳನ್ನು ಕೂಡ ಪಡೆದುಕೊಳ್ಳಬಹುದು. IMEI ನಂಬರ್ ಇತ್ಯಾದಿಗಳನ್ನು ಇದೇ ಮೆಥೆಡ್ ನ್ನು ಬಳಸಿ ಪಡೆಯಬಹುದು. ಆದರೆ ಕೋಡ್ ಕೆಲವಕ್ಕೆ ವಿಭಿನ್ನವಾಗಿರುತ್ತದೆ.

IMEI ನಂಬರ್ ತಿಳಿದುಕೊಳ್ಳಲು ಅನುಸರಿಸಬೇಕಾಗಿರುವ ಅಂಶಗಳು:

IMEI ನಂಬರ್ ತಿಳಿದುಕೊಳ್ಳಲು ಅನುಸರಿಸಬೇಕಾಗಿರುವ ಅಂಶಗಳು:

1.ನಿಮ್ಮ ಸ್ಮಾರ್ಟ್ ಫೋನಿನ ಡಯಲರ್ ಆಪ್ ನ್ನು ತೆರೆಯಿರಿ

2.ಡಯಲರ್ ನಲ್ಲಿ ‘*#06# ನ್ನು ಟೈಪ್ ಮಾಡಿ.

3.ಒಮ್ಮೆ ಮುಗಿದ ನಂತರ ಸ್ಮಾರ್ಟ್ ಫೋನ್ ಸ್ವಯಂಚಾಲಿತವಾಗಿ IMEI ನಂಬರ್ ನ್ನು ತೋರಿಸುತ್ತದೆ.

Best Mobiles in India

English summary
How to check the radiation level of your smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X