ಇನ್‌ಸ್ಟಾಗ್ರಾಂನಲ್ಲಿ ಬ್ಯುಸಿನೆಸ್ ಪ್ರೊಫೈಲ್ ಕ್ರಿಯೇಟ್ ಮಾಡುವುದು ಹೇಗೆ?

|

ಫೇಸ್‌ಬುಕ್ ಸಂಸ್ಥೆ ತನ್ನ ಒಡೆತನದಲ್ಲಿರುವ ಎಲ್ಲಾ ಆನ್‌ಲೈನ್ ತಾಣಗಳಲ್ಲಿಯೂ ಬ್ಯುಸಿನೆಸ್ ಪ್ರಚಾರಕ್ಕೆ ಕೈ ಜೋಡಿಸುತ್ತಿದೆ. ಫೇಸ್‌ಬುಕ್ಕಿನಲ್ಲಿ ಬ್ಯುಸಿನೆಸ್ ಪ್ರೊಫೈಲ್ ಕ್ರಿಯೇಟ್ ಮಾಡಿದಂತೆ ಇನ್‌ಸ್ಟಾಗ್ರಾಂನಲ್ಲಿಯೂ ತಮ್ಮ ವ್ಯಾಪಾರಗಳಿಗೆ ಅನುಕೂಲವಾಗುವಂತೆ ಬ್ಯುಸಿನೆಸ್ ಪ್ರೊಫೈಲ್ ಕ್ರಿಯೇಟ್ ಮಾಡಬಹುದಾದ ಆಯ್ಕೆ ಈಗಾಗಲೇ ಬಳಕೆದಾರರಿಗೆ ದೊರೆತಿದೆ.

ಇನ್‌ಸ್ಟಾಗ್ರಾಂನಲ್ಲಿ ಬ್ಯುಸಿನೆಸ್ ಪ್ರೊಫೈಲ್ ಕ್ರಿಯೇಟ್ ಮಾಡುವುದು ಹೇಗೆ?

ಚಿತ್ರಜಗತ್ತು ಇನ್‌ಸ್ಟಾಗ್ರಾಂ ಅನ್ನು ಸಹ ಬಹಳಷ್ಟು ಜನರು ಬಳಕೆ ಮಾಡುತ್ತಿರುವುದರಿಂದ ಫೇಸ್‌ಬುಕ್ಕಿನ ರೀತಿಯಲ್ಲಿ ಇನ್‌ಸ್ಟಾಗ್ರಾಂನಲ್ಲಿಯೂ ಬ್ಯುಸಿನೆಸ್ ಪ್ರೊಫೈಲ್ ಕ್ರಿಯೇಟ್ ಮಾಡುವುದು ಉತ್ತಮವೇ ಆಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಇನ್‌ಸ್ಟಾಗ್ರಾಂ ಬ್ಯುಸಿನೆಸ್ ಪ್ರೊಫೈಲ್ ಕ್ರಿಯೇಟ್ ಮಾಡುವುದು ಮತ್ತು ಪ್ರಚಾರ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.

ಇನ್‌ಸ್ಟಾಗ್ರಾಂ ಬ್ಯುಸಿನೆಸ್ ಪ್ರೊಫೈಲ್: ಸ್ಟೆಪ್ 1

ಇನ್‌ಸ್ಟಾಗ್ರಾಂ ಬ್ಯುಸಿನೆಸ್ ಪ್ರೊಫೈಲ್: ಸ್ಟೆಪ್ 1

ಇನ್‌ಸ್ಟಾಗ್ರಾಂ ಬ್ಯುಸಿನೆಸ್ ಪ್ರೊಫೈಲ್ ಕ್ರಿಯೇಟ್ ಮಾಡಲು ಮೊದಲು ಬ್ಯುಸಿನೆಸ್‌ಗಾಗಿರುವ ಫೇಸ್‌ಬುಕ್‌ ಪೇಜ್ ಕ್ರಿಯೇಟ್ ಮಾಡಿ. ಆನಂತರ ಇನ್‌ಸ್ಟಾಗ್ರಾಂಗೆ ಲಾಗಿನ್ ಆಗಿ ಪ್ರೊಫೈಲ್‌ನಲ್ಲಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ. ಅಲ್ಲಿ Switch to business account ಕ್ಲಿಕ್ ಮಾಡಿದ ನಂತರ ಕಾಣಿಸುವ Continue ಬಟನ್ ಕ್ಲಿಕ್ ಮಾಡುತ್ತಾ ಹೋಗಿ.

ಇನ್‌ಸ್ಟಾಗ್ರಾಂ ಬ್ಯುಸಿನೆಸ್ ಪ್ರೊಫೈಲ್: ಸ್ಟೆಪ್ 2

ಇನ್‌ಸ್ಟಾಗ್ರಾಂ ಬ್ಯುಸಿನೆಸ್ ಪ್ರೊಫೈಲ್: ಸ್ಟೆಪ್ 2

ಅಲ್ಲಿ Continue ಬಟನ್ ಕ್ಲಿಕ್ ಮಾಡುತ್ತಿದ್ದರೆ, ಕೊನೆಗೆ connect to facebook ಎಂದು ಕಾಣಿಸುತ್ತದೆ. ಅದರ ಕೆಳಗೆ choose page ಕ್ಲಿಕ್ ಮಾಡಿದರೆ ನೀವು ಈಗಾಗಲೇ ಕ್ರಿಯೇಟ್ ಮಾಡಿರುವ ಫೇಸ್‌ಬುಕ್‌ ಪೇಜ್‌ಗೆ ಲಿಂಕ್ ಆಗುತ್ತದೆ. ಆನಂತರ ನಿಮ್ಮ ಬ್ಯುಸಿನೆಸ್ ಪೇಜ್‌ನಲ್ಲಿ ಬೇರೆ ಮಾಹಿತಿಗಳನ್ನು ಸೇರಿಸಬಹುದು ಅಥವಾ ಬದಲಾಯಿಸಬಹುದು.

ಇನ್‌ಸ್ಟಾಗ್ರಾಂ ಬ್ಯುಸಿನೆಸ್ ಪ್ರೊಫೈಲ್: ಸ್ಟೆಪ್ 3

ಇನ್‌ಸ್ಟಾಗ್ರಾಂ ಬ್ಯುಸಿನೆಸ್ ಪ್ರೊಫೈಲ್: ಸ್ಟೆಪ್ 3

ಇನ್‌ಸ್ಟಾಗ್ರಾಂನೊಂದಿಗೆ ಲಿಂಕ್ ಆಗಿರುವ ಫೇಸ್‌ಬುಕ್‌ ಪೇಜ್‌ನಿಂದಲೇ ಎಲ್ಲ ಮಾಹಿತಿಗಳು ಇನ್‌ಸ್ಟಾಗ್ರಾಂ ಬ್ಯುಸಿನೆಸ್ ಪೇಜ್‌ಗೆ ಇಂಪೋರ್ಟ್ ಆಗಿ ಬಿಡುತ್ತವೆ. ಇದೆಲ್ಲ ಮಾಡಿ ಮುಗಿಸಿದ ನಂತರ Done ಎಮದು ಕ್ಲಿಕ್ ಮಾಡಿದರೆ ಇನ್‌ಸ್ಟಾಗ್ರಾಂ ಖಾತೆ ಬ್ಯುಸಿನೆಸ್ ಖಾತೆಯಾಗಿ ಬದಲಾಗುತ್ತದೆ.

ಇನ್‌ಸ್ಟಾಗ್ರಾಂ ಬ್ಯುಸಿನೆಸ್ ಪ್ರಚಾರ ಹೇಗೆ?

ಇನ್‌ಸ್ಟಾಗ್ರಾಂ ಬ್ಯುಸಿನೆಸ್ ಪ್ರಚಾರ ಹೇಗೆ?

ನಿಮ್ಮ ಇನ್‌ಸ್ಟಾಗ್ರಾಂ ಖಾತೆಗೆ ಲಾಗಿನ್ ಆಗಿ ಅಲ್ಲಿ ಇನ್‌ಸೈಟ್‌ ಪ್ಯಾನಲ್ ತೆರೆಯಿರಿ. ಇನ್‌ಸೈಟ್‌ ಸ್ಕ್ರೀನ್‌ನಲ್ಲಿ ಸ್ಕ್ರಾಲ್ ಮಾಡಿದಾಗ ಕ್ರಿಯೇಟ್ ಪ್ರೊಮೋಷನ್ ಎಂಬ ಆಯ್ಕೆ ಕಾಣಿಸುತ್ತದೆ.Create a new promotion ಕ್ಲಿಕ್ ಮಾಡಿ ನಿಮ್ಮ ಬ್ಯುಸಿನೆಸ್ ಪೋಸ್ಟ್ ಪ್ರಚಾರ ಮಾಡಿ. ಇದಕ್ಕಾಗಿ ನೀವು ದುಡ್ಡು ಪಾವತಿ ಮಾಡಬೇಕಾಗುತ್ತದೆ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
ಪ್ರಚಾರ ಮಾಡುವ ಮುನ್ನ ತಿಳಿದಿರಿ.!

ಪ್ರಚಾರ ಮಾಡುವ ಮುನ್ನ ತಿಳಿದಿರಿ.!

ಇನ್‌ಸ್ಟಾಗ್ರಾಂ ಖಾತೆಯಲ್ಲಿ ನೀವು ಪ್ರಚಾರ ಮಾಡಲು ಉದ್ದೇಶಿಸಿರುವ ಪೋಸ್ಟ್ ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದ್ದೇ ಆಗಿರಬೇಕು ಮತ್ತು ನಿಮ್ಮ ಗ್ರಾಹಕರು ನಿಮ್ಮನ್ನು ಹೇಗೆ ಸಂಪರ್ಕಿಸಬೇಕೆಂಬ ಮಾಹಿತಿಯನ್ನೂ ನೀಡಬೇಕು. ನಂತರ, ಪ್ರಚಾರಕ್ಕಾಗಿ ಎಷ್ಟು ಹಣ ಪಾವತಿ ಮಾಡಬೇಕೆಂಬುದನ್ನು budget ಸೆಟ್ಟಿಂಗ್ ನಲ್ಲಿ ಮಾಡಿಕೊಳ್ಳಬಹುದು.

Best Mobiles in India

English summary
How to Create an Instagram Business Account and Why You’d Want To. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X