ಸ್ಮಾರ್ಟ್‌ಫೋನ್ ಎನ್ನುವುದು ನಮ್ಮ ದಿನ ನಿತ್ಯದ ಅವಶ್ಯಕ ವಸ್ತುಗಳಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ನಮ್ಮ ಅಗತ್ಯತೆಗಳನ್ನು ಪೂರೈಸುವಲ್ಲಿ ಸ್ಮಾರ್ಟ್‌ಫೋನ್‌ಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಬೆಳಿಗ್ಗೆ ಅಲಾರಂ ಇಟ್ಟು ಎಬ್ಬಿಸುವುದರಿಂದ ಹಿಡಿದು ಆಫೀಸ್ ಕ್ಯಾಬ್ ಬುಕ್ ಮಾಡಿ, ಮಧ್ಯಾಹ್ನದ ಊಟ ತರಿಸಿಕೊಳ್ಳಲು ಸ್ಮಾರ್ಟ್‌ಫೋನ್ ಇರಲೇ ಬೇಕು.

ಓದಿರಿ: ಫೇಸ್‌ಬುಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ..! ಫೇಸ್‌ಬುಕ್-ಆಧಾರ್ ಲಿಂಕ್..?
ಆದರೆ ಇದೇ ಸ್ಮಾರ್ಟ್‌ಫೋನ್ ಬ್ಯಾಟರಿ ನಮಗೆ ತೀರಾ ಅವಶ್ಯವಾಗಿರುವಾಗಲೇ ಖಾಲಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಮೊಬೈಲ್ ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡಿಕೊಳ್ಳುವ ಅಗತ್ಯತೆ ಇರುತ್ತದೆ. ಆದರೆ ಮೊಬೈಲ್‌ನಲ್ಲಿ ಫಾಸ್ಟ್ ಚಾರ್ಜ್-ಟರ್ಬೋ ಚಾರ್ಜ್ ಇಲ್ಲವಾದರೆ ಕಷ್ಟವಾಗುತ್ತದೆ. ಆದರೆ ಇಂದು ನಾವೊಂದು ಟ್ರಿಕ್ ಹೇಳಿ ಕೊಡಲಿದ್ದೇವೆ, ಇದರಿಂದ ನಿಮ್ಮ ಫೋನ್ ವೇಗವಾಗಿ ಚಾರ್ಜ್ ಆಗಲಿದೆ.
ಫಾಸ್ಟ್ ಚಾರ್ಜ್:
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟರ್ಬೋ ಚಾರ್ಜರ್, ಫಾಸ್ಟ್ ಚಾರ್ಜಿಂಗ್, ಕ್ವೀಕ್ ಚಾರ್ಜಿಂಗ್ ಹಾಗೂ ಡಾಷ್ ಚಾರ್ಜಿಂಗ್ ವ್ಯವಸ್ಥೆಯೂ ಇಲ್ಲವೆಂದರೂ ನೀವು ತಲೆ ಕಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡಿಕೊಳ್ಳಲು ಯಾವುದೇ ಹೆಚ್ಚಿನ ಶ್ರಮವನ್ನು ವಹಿಸುವ ಅಗತ್ಯವೂ ಇಲ್ಲ ಎನ್ನಲಾಗಿದೆ.
ಫ್ಲೇಟ್ ಮೋಡ್:
ನಿಮ್ಮ ಸ್ಮಾರ್ಟ್‌ಫೋನ್ ಸಾಮಾನ್ಯಕ್ಕಿಂತ ವೇಗವಾಗಿ ಚಾರ್ಜ್ ಆಗಬೇಕಾದ ಸಂದರ್ಭದಲ್ಲಿ ನಿಮ್ಮ ಫೋನಿನಲ್ಲಿ ಫ್ಲೇಟ್ ಮೋಡ್ ಆನ್ ಮಾಡಿ. ಇದರಿಂದಾಗಿ ನಿಮ್ಮ ಫೋನ್ ಅತೀ ವೇಗವಾಗಿ ಚಾರ್ಜ್ ಆಗಲು ಶುರುವಾಗುತ್ತದೆ. ಕಡಿಮೆ ಅವಧಿಯಲ್ಲಿ ಫೋನ್ ಚಾರ್ಜ್ ಆಗಲಿದೆ.
ತುರ್ತು ಸಂದರ್ಭದಲ್ಲಿ:
ತುರ್ತು ಸಂದರ್ಭದಲ್ಲಿ ಹೆಚ್ಚಿನ ವೇಗವಾಗಿ ಮೊಬೈಲ್ ಫೋನ್ ಚಾರ್ಜ್ ಆಗಬೇಕು ಎಂದು ಬಯಸಿದರೆ ನೀವು ಈ ಮಾದರಿಯಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಆದರೆ ಈ ರೀತಿಯಲ್ಲಿ ಮಾಡುವುದರಿಂದ ನಿಮ್ಮ ಫೋನಿಗೆ ಯಾವುದೇ ಕರೆಗಳು, ಮೇಸೆಜ್‌ಗಳು ಬರುವುದಿಲ್ಲ ಎನ್ನಲಾಗಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.