ಮೊಬೈಲ್‌ ಮೆಮೊರಿಗೆ ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡಲು ಇದು ಬೆಸ್ಟ್ ಟ್ರಿಕ್ಸ್!!

|

ಯೂಟ್ಯೂಬ್ ವಿಡಿಯೋಗಳನ್ನು ಇಂಟರ್ನೆಟ್ ಸಂಪರ್ಕವಿಲ್ಲದೇ ವೀಕ್ಷಿಸಬೇಕಾದರೆ ಅವುಗಳನ್ನು ಮೊದಲು ಡೌನ್ ಲೋಡ್ ಮಾಡಿಕೊಳ್ಳಬೇಕು. ಯೂಟ್ಯೂಬ್ ಆಪ್‌ನಲ್ಲಿರುವ ಆಫ್ ಲೈನ್ ಫೋಲ್ಡರ್‌ನಲ್ಲಿ ನೀವು ನೇರವಾಗಿ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಂಡು ನೋಡಬಹುದಾದ ಮತ್ತು ಡಿಲೀಟ್ ಮಾಡಬಹುದು ಆಯ್ಕೆ ನಿಮಗೆಲ್ಲಾ ತಿಳಿದಿರಬಹುದು.

ಯೂಟ್ಯೂಬ್ ವಿಡಿಯೊ ಪ್ಲೇ ಮಾಡಿ ಆ ವಿಡಿಯೊದ ಕೆಳಗೆ ಶೇರ್ ಬಟನ್‌ನ ಪಕ್ಕದಲ್ಲಿಯೇ ಡೌನ್ ಲೋಡ್ ಬಟನ್ ಇರುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ವಿಡಿಯೊ ಡೌನ್ ಲೋಡ್ ಆಗುತ್ತದೆ. ಹೀಗೆ ಮೊಬೈಲ್‌ನಲ್ಲಿ ಡೌನ್ ಲೋಡ್ ಮಾಡಿದ ವಿಡಿಯೊಗಳನ್ನು ಕಂಪ್ಯೂಟರ್‌ಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಈ ವಿಡಿಯೊಗಳನ್ನು ನಿಮ್ಮ ಮೊಬೈಲ್‌ನಲ್ಲಿ ಮಾತ್ರ ವೀಕ್ಷಿಸಬಹುದು.

ಮೊಬೈಲ್‌ ಮೆಮೊರಿಗೆ ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡಲು ಇದು ಬೆಸ್ಟ್ ಟ್ರಿಕ್ಸ್!!

ಇಲ್ಲಿ ಇರುವ ಮತ್ತೊಂದು ತೊಂದರೆ ಎಂದರೆ, ಯೂಟ್ಯೂಬ್‌ನಲ್ಲಿನ ಎಲ್ಲಾ ವಿಡಿಯೋಗಳನ್ನು ನಾವು ಡೌನ್‌ಲೋಡ್ ಮಾಡಲು ಅವಕಾಶವಿಲ್ಲ. ಹಾಗಾಗಿ, ಯೂಟ್ಯೂಬ್‌ನಲ್ಲಿನ ಪ್ರತಿಯೊಂದು ವಿಡಿಯೋಗಳನ್ನು ನಾವು ಬೇರೆಯವರಿಗೂ ಶೇರ್ ಮಾಡುವಂತೆ ಡೌನ್‌ಲೋಡ್ ಮಾಡುವುದು ಹೇಗೆ ಎಂಬ ಟ್ರಿಕ್ಸ್ ಅನ್ನು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಹಂತ 1:

ಹಂತ 1:

ಯೂಟ್ಯೂಬ್ ತೆರೆದು ನೀವು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊವನ್ನು ಹುಡುಕಿ. ನಂತರ, ವೀಡಿಯೊವನ್ನು ಪ್ಲೇ ಮಾಡಿ ವಿರಾಮಗೊಳಿಸಿ.ವಿಡಿಯೋ ಕಳೆಗೆ ನೀವು ಶೇರ್ ಅನ್ನು ಕಾಣುತ್ತೀರಾ (ಮೇಲಿನ ಚಿತ್ರವನ್ನು ನೋಡಿ. )

ಹಂತ 2:

ಹಂತ 2:

ಅಲ್ಲಿ ಶೇರ್ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನೀವು ಲಿಂಕ್ ನಕಲಿಸಲು ಒಂದು ಆಯ್ಕೆಯನ್ನು ಕಾಣುತ್ತೀರಾ. ಅದನ್ನು ಕ್ಲಿಕ್ ಮಾಡಿ ಮತ್ತು ಲಿಂಕ್ ಅನ್ನು ನಕಲಿಸಿ (ಚಿತ್ರ ನೋಡಿ).

ಹಂತ 3:

ಹಂತ 3:

ಲಿಂಕ್ ಅನ್ನು ನಕಲಿಸಿದ ನಂತರ, ನಿಮ್ಮ ಕ್ರೋಮ್ ಬ್ರೌಸರ್ ತೆರೆಯಿರಿ. ಹೊಸ ಟ್ಯಾಬ್ ತೆರೆದು, ಆ ಟ್ಯಾಬ್‌ನಲ್ಲಿ ನೀವು ನಕಲಿಸಿಕೊಂಡ ಲಿಂಕ್ ಅನ್ನು ಪೇಸ್ಟ್ ಮಾಡಿ.

ಹಂತ 4:

ಹಂತ 4:

ಈಗ ಆ ವೀಡಿಯೊ ಬ್ರೌಸರ್‌ನಲ್ಲಿ ತೆರೆಯುತ್ತದೆ. ಯಾವುದೇ ಸಮಸ್ಯೆ ಇದ್ದರೆ, ಬ್ರೌಸರ್ ಆಯ್ಕೆಯಲ್ಲಿ, ಸೆಟ್ಟಿಂಗ್ ಅನ್ನು ಡೆಸ್ಕ್‌ಟಾಪ್ ವೀಕ್ಷಣೆ ಮೋಡ್‌ಗೆ ಬದಲಾಯಿಸಿ.

ಹಂತ 5:

ಹಂತ 5:

ಈ ಹಂತ ಪ್ರಮುಖವಾಗಿದ್ದು, ಪೇಸ್ಟ್ ಮಾಡಿರುವ ಯೂಟ್ಯೂಬ್ ಲಿಂಕ್‌ನಲ್ಲಿ 'y' ಅಕ್ಷರದ ಹಿಂದಿನ (http://m.) ಎಲ್ಲಾ ಅಕ್ಷರಗಳನ್ನು ಅಳಿಸಿ. (ಮೇಲಿನ ಚಿತ್ರ ನೋಡಿ)

ಹಂತ 7:

ಹಂತ 7:

http://m ಅಕ್ಷರಗಳನ್ನು ಅಳಿಸಿದ ನಂತರ, ಈಗ ಅದೇ ಸ್ಥಳದಲ್ಲಿ 'ಎಸ್ಎಸ್' (ss) ಅಕ್ಷರಗಳನ್ನು ಟೈಪ್ ಮಾಡಿ.

ಹಂತ 8:

ಹಂತ 8:

'Ss' ಟೈಪ್ ಮಾಡಿದ ನಂತರ, ಲಿಂಕ್ ಸರ್ಚ್ ಮಾಡಿರಿ. ಈಗ ನೀವು ಈ ರೀತಿಯ ಹೊಸ ಸೈಟ್‌ಗೆ ತೆರೆದುಕೊಳ್ಳುತ್ತೀರಾ.

ಹಂತ 9:

ಹಂತ 9:

ಈಗ ನೀವು 360p ಅಥವಾ 480p ಅಥವಾ ಇತ್ಯಾದಿಗಳಲ್ಲಿ ಮೊಬೈಲ್‌ಗೆ ನೇರವಾಗಿ ಯೂಟ್ಯೂಬ್ ವಿಡಿಯೋಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಚಿತ್ರ ನೋಡಿ!

Best Mobiles in India

English summary
Go to youtube app and search for the video you wanted to download and open it.After opening. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X