ನಿಮ್ಮನ್ನ ಬಿಟ್ಟು ಇನ್ಯಾರಾದರೂ ನಿಮ್ಮ ಫೇಸ್ ಬುಕ್ ಅಕೌಂಟಿಗೆ ಲಾಗಿನ್ ಆಗಿದ್ದರೆ ಎಂಬುದು ತಿಳಿಯುವುದು ಹೇಗೆ?

By Gizbot Bureau
|

ಫೇಸ್ ಬುಕ್ ಯಾವಾಗಲೂ ಕೂಡ ಹ್ಯಾಕರ್ ಗಳ ಟಾರ್ಗೆಟ್ ಆಗಿರುತ್ತದೆ. ಜನರ ವಯಕ್ತಿಕ ಮಾಹಿತಿಗಳನ್ನು, ಅವರ ಪೋಸ್ಟ್ ಗಳು, ಚಿತ್ರಗಳು ಮತ್ತು ವೀಡಿಯೋಗಳನ್ನು ಅವರ ಅಕೌಂಟಿನಿಂದ ಕದಿಯುವ ಉದ್ದೇಶವನ್ನು ಅವರು ಹೊಂದಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಒಬ್ಬ ವ್ಯಕ್ತಿಯ ಹೆಚ್ಚಿನ ವಯಕ್ತಿಕ ಮಾಹಿತಿಗಳು ಲಭ್ಯವಿರುತ್ತದೆ.

ಅನಧಿಕೃತ ಲಾಗಿನ್ ನ್ನು ಫೇಸ್ ಬುಕ್ ನಲ್ಲಿ ತಿಳಿಯಲು ಹೀಗೆ ಮಾಡಿ.

ಅದೇ ಕಾರಣಕ್ಕೆ ಇದೀಗ ಫೇಸ್ ಬುಕ್ ನಲ್ಲಿ ಲಾಗಿನ್ ಆಗಿರುವ ಡಿವೈಸ್, ಹೆಸರು ಮತ್ತು ಸ್ಥಳವನ್ನು ತಿಳಿದುಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಆದರೆ ಫೇಸ್ ಬುಕ್ ಸ್ವಯಂಚಾಲಿತವಾಗಿ ನಿಮಗೆ ಇದನ್ನು ನೋಟಿಫೈ ಮಾಡುವುದಿಲ್ಲ. ಬದಲಾಗಿ ನಿಮಗೆ ಲಾಗಿನ್ ಅಲರ್ಟ್ ಬೇಕಿದ್ದರೆ ಅದನ್ನು ಸೆಟ್ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಕೂಡ ಲಾಗಿನ್ ಅಲರ್ಟ್ ಬೇಕು ಎಂದು ಇಚ್ಛಿಸುತ್ತಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಅಗತ್ಯತೆಗಳು :

ಅಗತ್ಯತೆಗಳು :

  • ಕಾರ್ಯ ನಿರ್ವಹಿಸುವ ಅಂತರ್ಜಾಲ ಸಂಪರ್ಕ
  • ಡಿವೈಸ್ ಜೊತೆಗೆ ಫೇಸ್ ಬುಕ್ ಆಪ್ ಅಥವಾ ವೆಬ್ ವರ್ಷನ್
  • ಲಾಗಿನ್ ಐಡಿ ಮತ್ತು ಪಾಸ್ ವರ್ಡ್
  • 1. ಅನುಸರಿಸಬೇಕಾಗಿರುವ ಹಂತಗಳು: : ಫೇಸ್ ಬುಕ್ ಆಪ್

    1. ಅನುಸರಿಸಬೇಕಾಗಿರುವ ಹಂತಗಳು: : ಫೇಸ್ ಬುಕ್ ಆಪ್

    - ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಫೇಸ್ ಬುಕ್ ಆಪ್ ನ್ನು ತೆರೆಯಿರಿ

    -ಮೇಲ್ಬಾಗದ ಬಲ ಬದಿಯಲ್ಲಿರುವ ಮೂರು ಲಂಬಾಕೃತಿಯ ಬಾರ್ ನ್ನು ಟ್ಯಾಪ್ ಮಾಡಿ

    - ಕೆಳಗೆ ಸ್ಕ್ರೋಲ್ ಮಾಡಿ ಮತ್ತು ಸೆಟ್ಟಿಂಗ್ಸ್ ಮತ್ತು ಪ್ರೈವೆಸಿ ಆಯ್ಕೆಯನ್ನು ಸ್ಕ್ರೋಲ್ ಮಾಡಿ.

    - ಸೆಟ್ಟಿಂಗ್ಸ್ ನ್ನು ಟ್ಯಾಪ್ ಮಾಡಿ ಮತ್ತು ಸೆಕ್ಯುರಿಟಿ ಮತ್ತು ಲಾಗಿನ್ ಆಯ್ಕೆಗೆ ತೆರಳಿ.

    - ಸೆಟ್ಟಿಂಗ್ ಅಪ್ ಎಕ್ಸ್ಟ್ರಾ ಸೆಕ್ಯುರಿಟಿಯ ಅಡಿಯಲ್ಲಿ'Get alerts about unrecognised logins' ನ್ನು ಟ್ಯಾಪ್ ಮಾಡಿ.

    - ಪ್ರತಿಯೊಂದು ಆಯ್ಕೆಯನ್ನೂ ಟ್ಯಾಪ್ ಮಾಡಿ - ನೋಟಿಫಿಕೇಷನ್,ಮೆಸೇಂಜರ್ ಮತ್ತು ಇಮೇಲ್ ಮತ್ತು ಗೆಟ್ ನೋಟಿಫಿಕೇಷನ್ ನ್ನಿನ ಚೆಕ್ ಬಾಕ್ಸ್ ನ್ನು ಸೆಲೆಕ್ಟ್ ಮಾಡಿದರೆ ಅಲರ್ಟ್ ರಿಸೀವ್ ಆಗುತ್ತದೆ.

    2. ಅನುಸರಿಸಬೇಕಾಗಿರುವ ಹಂತಗಳು:ವೆಬ್ ಸೈಟ್ ನಲ್ಲಿ

    2. ಅನುಸರಿಸಬೇಕಾಗಿರುವ ಹಂತಗಳು:ವೆಬ್ ಸೈಟ್ ನಲ್ಲಿ

    - www.facebook.com ನ್ನು ನಿಮ್ಮ ಪಿಸಿ ಅಥವಾ ಮ್ಯಾಕ್ ನಲ್ಲಿ ಯಾವುದೇ ಬ್ರೌಸರ್ ಬಳಸಿ ತೆರೆಯಿರಿ

    - ಇದೀಗ ಮೇಲ್ಬಾಗದ ಬಲಗಡೆಯ ಡ್ರಾಪ್ ಡೌನ್ ಮೆನುವನ್ನು ಕ್ಲಿಕ್ಕಿಸಿ.

    - ‘ಸೆಟ್ಟಿಂಗ್ಸ್' ನ್ನು ಸೆಲೆಕ್ಟ್ ಮಾಡಿ ಮತ್ತು ‘ಸೆಕ್ಯುರಿಟಿ ಎಂಡ್ ಲಾಗಿನ್' ಸೆಕ್ಷನ್ ನ್ನು ಸೆಲೆಕ್ಟ್ ಮಾಡಿ.

    - ‘ಸೆಕ್ಯುರಿಟಿ ಎಂಡ್ ಲಾಗಿನ್' ಸೆಕ್ಷನ್ ನ ಅಡಿಯಲ್ಲಿ, ‘Get alerts about unrecognised logins' ಆಯ್ಕೆಯನ್ನು ಹುಡುಕಾಡಿ.

    - ಪ್ರತಿ ಸೆಕ್ಷನ್ ನಲ್ಲೂ ‘Get Notifications' ಆಯ್ಕೆಯನ್ನು ಸೆಲೆಕ್ಟ್ ಮಾಡಿ ಮತ್ತು ‘Save changes' ನ್ನು ಕ್ಲಿಕ್ಕಿಸಿ. ಇದೀಗ ನಿಮ್ಮ ಅಕೌಂಟಿಗೆ ಲಾಗಿನ್ ಅಲರ್ಟ್ ಆಕ್ಟಿವೇಟ್ ಆಗುತ್ತದೆ.

    ಸೂಚನೆ:

    ಸೂಚನೆ:

    ಫೇಸ್ ಬುಕ್ ಅಕೌಂಟ್ ನ್ನು ಆಕ್ಸಿಸ್ ಮಾಡುವುದಕ್ಕೆ ಬಳಕೆದಾರರು ತಾವು ಯಾವಾಗಲೂ ಬಳಕೆ ಮಾಡುವ ಕೆಲವು ಡಿವೈಸ್ ಗಳನ್ನು ಮಾತ್ರವೇ ಸೆಟ್ ಮಾಡಿ ಇಡುವುದಕ್ಕೂ ಕೂಡ ಅವಕಾಶವಿರುತ್ತದೆ. ಇದು ಅವರು ಲಾಗಿನ್ ಆಗದ ಡಿವೈಸ್ ಗಳ ಪಟ್ಟಿಯನ್ನು ವೀಕ್ಷಿಸುವುದಕ್ಕೆ ಅವಕಾಶ ನೀಡುತ್ತದೆ.

    ಇದನ್ನು ಮಾಡುವುದಕ್ಕಾಗಿ ‘Two-Factor Authentication' ಸೆಕ್ಷನ್ ಗೆ ತೆರಳಿ ಮತ್ತು ‘Authorized Logins' ಆಯ್ಕೆಯನ್ನು ಕ್ಲಿಕ್ಕಿಸಿ. ಅಧಿಕೃತ ಡಿವೈಸ್ ಗಳನ್ನು ಸೆಲೆಕ್ಟ್ ಮಾಡಿ ಮತ್ತು ‘Close' ಬಟನ್ ನ್ನು ಒತ್ತಿ ಸೇವ್ ಮಾಡಿ.

Best Mobiles in India

English summary
How to enable unauthorised login notification on Facebook

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X