ವಿಂಡೋಸ್ ಲ್ಯಾಪ್ಟಾಪ್ ಟ್ರ್ಯಾಕಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸುವುದು ಹೇಗೆ?

ಮೈಕ್ರೋಸಾಫ್ಟ್ ವಿಂಡೋಸ್ 10 ನಲ್ಲಿ ವಿಂಡೋಸ್ ಡಿವೈಸ್ಗಳ ಸ್ಥಳವನ್ನು ಗುರುತಿಸುವ "ಫೈಂಡ್ ಮೈ ಡಿವೈಸ್" ಎಂಬ ವಿಶೇಷ ಫೀಚರ್ ಇದೆ.

By Tejaswini P G
|

ಸುಮಾರು ಎರಡು ವರ್ಷಗಳ ಹಿಂದೆ ಮೈಕ್ರೋಸಾಫ್ಟ್ ವಿಂಡೋಸ್ 10 ಗೆ ಹಲವಾರು ಫೀಚರ್ಗಳನ್ನೊಳಗೊಂಡ ಭಾರೀ ಅಪ್ಡೇಟ್ ಒಂದನ್ನು ಬಿಡುಗಡೆ ಮಾಡಿತ್ತು. "ಫೈಂಡ್ ಮೈ ಡಿವೈಸ್" ಆ ಅಪ್ಡೇಟ್ನಲ್ಲಿದ್ದ ಹಲವು ಫೀಚರ್ಗಳಲ್ಲಿ ಒಂದು.

ವಿಂಡೋಸ್ ಲ್ಯಾಪ್ಟಾಪ್ ಟ್ರ್ಯಾಕಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸುವುದು ಹೇಗೆ?

ಈ ಫೀಚರನ್ನು ಒಮ್ಮೆ ಸಕ್ರಿಯಗೊಳಿಸಿದರೆ, ನಿಮ್ಮ ವಿಂಡೋಸ್ ಡಿವೈಸ್ ತನ್ನ ಸ್ಥಳವನ್ನು ಗುರುತಿಸಿ , ನಿಯಮಿತವಾಗಿ ಲೊಕೇಶನ್ ನ ಮಾಹಿತಿಯನ್ನು ಸಂಗ್ರಹಿಸಿಡುತ್ತದೆ. ಒಂದು ವೇಳೆ ನಿಮ್ಮ ಡಿವೈಸ್ ಕಳೆದು ಹೋದರೆ ಈ ಮಾಹಿತಿಯನ್ನು ಉಪಯೋಗಿಸಿ ಆ ಸಾಧನವನ್ನು ಪತ್ತೆಹಚ್ಚಬಹುದು.

ಈ ಫೀಚರ್ ಬಳಸಿ ನಿಮ್ಮ ಡಿವೈಸ್ ಅನ್ನು ಪತೆಹಚ್ಚಬಹುದು, ಆದರೆ ಅದರಲ್ಲಿರುವ ಮಾಹಿತಿಯನ್ನು ದೂರದಿಂದಲೇ ಅಳಿಸುವ ಅಥವ ಡಿವೈಸ್ ಅನ್ನು ಲಾಕ್ ಮಾಡುವ ಆಯ್ಕೆ ಇಲ್ಲಿ ಲಭ್ಯವಿಲ್ಲ. ಎಚ್ಚರಿಕೆಯ ಘಂಟೆಯನ್ನು ಬಾರಿಸುವುದಾಗಲಿ ಅಥವ ವೆಬ್ ಕ್ಯಾಮ್ ಮೂಲಕ ನಿಮ್ಮ PC ಅನ್ನು ಬಳಸುತ್ತಿರುವ ವ್ಯಕ್ತಿಯ ಫೋಟೋ ತಗೆಯುವುದಾಗಲಿ ಸಾಧ್ಯವಿಲ್ಲ. ಸಧ್ಯಕ್ಕೆ ನಿಮ್ಮ ಡಿವೈಸ್ ಇರುವ ಸ್ಥಳವನ್ನು ತೋರಿಸುವುದಷ್ಟೇ ಸಾಧ್ಯ. ಭವಿಷ್ಯದಲ್ಲಿ ಈ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಹೆಚ್ಚಿನ ಫೀಚರ್ಗಳನ್ನು ನೀಡಲೂ ಬಹುದು.

ವಿಂಡೋಸ್ ಲ್ಯಾಪ್ಟಾಪ್ ಟ್ರ್ಯಾಕಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸುವುದು ಹೇಗೆ?


ನಿಮ್ಮ ಡಿವೈಸ್ ನ ಸ್ಥಳವನ್ನು ಗುರುತಿಸಿ ಅದನ್ನು ವರದಿಮಾಡಲು ಡಿವೈಸ್ ಇಂಟರ್ನೆಟ್ ಸಂಪರ್ಕ ಹೊಂದಿರಬೇಕಾಗುತ್ತದೆ. ಈ ಫೀಚರ್ ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಡಿವೈಸ್ನಲ್ಲಿ ಮೈಕ್ರೋಸಾಫ್ಟ್ ಅಕೌಂಟ್ ಇರಬೇಕು. ಅಲ್ಲದೆ ಡಿವೈಸ್ GPS ಚಿಪ್ ಮತ್ತು ಸೆಲ್ಯುಲಾರ್ ಸಂಪರ್ಕ ಅಥವಾ ಸ್ಥಳವನ್ನು ಗುರುತಿಸುವ ಬೇರೆ ಯಾವುದಾದರು ಸಾಮರ್ಥ್ಯ ಹೊಂದಿರಬೇಕು.

ಈ ಮೇಲೆ ಹೇಳಿದ ಫೀಚರ್ಗಳು ಹಳೆಯ ಡೆಸ್ಕ್ಟಾಪ್ ಅಥವ ಲ್ಯಾಪ್ಟಾಪ್ಗಳಲ್ಲಿ ಲಭ್ಯವಿರುವುದಿಲ್ಲ.ಆದರೆ ಇತ್ತೀಚಿಗಿನ ಟ್ಯಾಬ್ಲೆಟ್ ಅಥವಾ ಹೈಬ್ರಿಡ್ ಡಿವೈಸ್ಗಳಲ್ಲಿ ಈ ಮೇಲೆ ಹೇಳಿದ ಫೀಚರ್ಗಳಿರುವ ಸಾಧ್ಯತೆಯಿದೆ. ಈ ಮೇಲೆ ಹೇಳಿದ ಮಾಹಿತಿಯನ್ನು ಮನದಲ್ಲಿರಿಸಿಕೊಂಡು, ಈ ಫೀಚರ್ ಅನ್ನು ಸಕ್ರಿಯಗೊಳಿಸಲು ಹೀಗೆ ಮಾಡಿ

ವಿಂಡೋಸ್ ಲ್ಯಾಪ್ಟಾಪ್ ಟ್ರ್ಯಾಕಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸುವುದು ಹೇಗೆ?


ಹಂತ 1 : ಪಿಸಿ ಯ ಸ್ಟಾರ್ಟ್ ಮೆನು ಬಟನ್ ಮೇಲೆ ಕ್ಲಿಕ್ ಮಾಡಿ ಸೆಟ್ಟಿಂಗ್ಸ್ ಅನ್ನು ಆಯ್ಕೆ ಮಾಡಿ

ಹಂತ 2 : ನಂತರ "ಅಪ್ಡೇಟ್ ಆಂಡ್ ಸೆಕ್ಯೂರಿಟಿ" ಮೇಲೆ ಕ್ಲಿಕ್ ಮಾಡಿ "ಫೈಂಡ್ ಮೈ ಡಿವೈಸ್" ಅನ್ನು ಆಯ್ಕೆ ಮಾಡಿ.

ಹಂತ 3 : ಈ ಆಯ್ಕೆಯನ್ನು ಸಕ್ರಿಯಗೊಳಿಸಲು , ಮೊದಲು ನಿಮ್ಮ ಮೈಕ್ರೋಸಾಫ್ಟ್ ಅಕೌಂಟ್ ಗೆ ಲಾಗಿನ್ ಮಾಡಿ.

ವಿಂಡೋಸ್ ಲ್ಯಾಪ್ಟಾಪ್ ಟ್ರ್ಯಾಕಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸುವುದು ಹೇಗೆ?


ಹಂತ 4 : ನಂತರ "ಫೈಂಡ್ ಮೈ ಡಿವೈಸ್" ನ ಮುಂದಿರುವ ಚೇಂಜ್ ಬಟನ್ ಅನ್ನು ಆಫ್ ನಿಂದ ಆನ್ ಗೆ ಬದಲಿಸುವ ಮೂಲಕ ಈ ಫೀಚರನ್ನು ಸಕ್ರಿಯಗೊಳಿಸಿ

ಹಂತ 5 : ನಂತರ ನಿಮ್ಮ ಮುಂದೆ ಬರುವ " ಸೇವ್ ಮೈ ಡಿವೈಸ್ ಲೊಕೇಶನ್ ಪೀರಿಯಾಡಿಕಲಿ" ಎಂಬ ಆಯ್ಕೆಯನ್ನು ಆನ್ ಮಾಡಿ

ಹಂತ 6 : ನಂತರ ನಿಮ್ಮ ಡಿವೈಸ್ ಅನ್ನು ಟ್ರ್ಯಾಕ್ ಮಾಡಬೇಕಾದರೆ, "account.microsoft.com/devices" ಗೆ ಹೋಗಿ ನಿಮ್ಮ ಡಿವೈಸ್ ನ ಸ್ಥಳದ ಮಾಹಿತಿಯನ್ನು ಪಡೆದುಕೊಳ್ಳಿ

ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ಒನ್ ಪ್ಲಸ್ 5 ಮೇಲೆ ಡಿಸ್ಕೌಂಟ್ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ಒನ್ ಪ್ಲಸ್ 5 ಮೇಲೆ ಡಿಸ್ಕೌಂಟ್

Best Mobiles in India

English summary
Two years back Microsoft rolled out a big update for Windows 10 by introducing a couple of features including Find My Device. these are the things you need to keep in mind. Follow the below steps to enable the option.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X